INDIA COVID-19 Statistics

11,124,527
Confirmed Cases
Updated on 02/03/2021 5:37 AM
168,331
Total active cases
Updated on 02/03/2021 5:37 AM
157,275
Total deaths
Updated on 02/03/2021 5:37 AM
Tuesday, March 2, 2021

INDIA COVID-19 Statistics

11,124,527
Total confirmed cases
Updated on 02/03/2021 5:37 AM
168,331
Total active cases
Updated on 02/03/2021 5:37 AM
157,275
Total deaths
Updated on 02/03/2021 5:37 AM
10,798,921
Total recovered
Updated on 02/03/2021 5:37 AM
Home Editorial ಮದನಪಲ್ಲಿ ಪ್ರಕರಣ

ಮದನಪಲ್ಲಿ ಪ್ರಕರಣ

ರಾಜ್ಯದ ನೆರೆಯ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಮದನಪಲ್ಲಿ ಬರುತ್ತದೆ. ಇದೇ ಜಿಲ್ಲೆಯಲ್ಲಿ ಜಗತ್ಪ್ರಸಿದ್ಧ ತಿರುಪತಿ ಬರುತ್ತದೆ. ಮದನಪಲ್ಲಿ ಮತ್ತೊಂದು ಕಾರಣಕ್ಕೆ ಪ್ರಸಿದ್ಧ. ಇಲ್ಲಿ ಜನಿಸಿದ ಜಿಡ್ಡು ಕೃಷ್ಣಮೂರ್ತಿ ವಿಶ್ವ ಖ್ಯಾತಿಯ ಚಿಂತಕ. ಅಲ್ಲಿಯೇ ಅವರು ಮುಕ್ತ ಚಿಂತನೆಗೆ ಪೂರಕವಾದ ಶಿಕ್ಷಣ ನೀಡುವ ಋಷಿವ್ಯಾಲಿ ಶಾಲೆ ಆರಂಭಿಸಿದ್ದಾರೆ. ಅಂಥ ಕಡೆ ಭೀಭತ್ಸಕರ ಸಂಗತಿಯೊಂದು ನಡೆದಿದೆ. ಇಬ್ಬರು ಹೆಣ್ಣು ಮಕ್ಕಳ ದಾರುಣ ಅಂತ್ಯ ಈಚೆಗೆ ಎಲ್ಲೆಡೆ ಚರ್ಚೆಯ ವಿಷಯವಾಗಿತ್ತು. ತಂದೆ ಕಾಲೇಜೊಂದರಲ್ಲಿ ಉಪ ಪ್ರಾಂಶುಪಾಲ, ತಾಯಿ ಕೂಡ ವಿದ್ಯಾವಂತೆ, ಶಿಕ್ಷಕಿ. ಇಬ್ಬರು ಮಕ್ಕಳಾದ ಅಲೇಖ್ಯಾ ಮತ್ತು ಸಾಯಿ ದಿವ್ಯಾ ಸಾಕಷ್ಟು ಶಿಕ್ಷಣ ಪಡೆದವರು. ಕಿರಿಯವಳು ಎ.ಆರ್.ರೆಹಮಾನ್ ಅವರ ಸಂಗೀತ ಶಾಲೆಯಲ್ಲಿ ಕಲಿಯುತ್ತಿದ್ದಳು. ಈಗ ಇಬ್ಬರೂ ದಾರುಣ ಅಂತ್ಯ ಕಂಡಿದ್ದಾರೆ. ಮಾಟ ಮಂತ್ರದಲ್ಲಿ ನಂಬಿಕೆ ಇದ್ದ ತಂದೆ ತಾಯಿ, ಇಬ್ಬರೂ ಮಕ್ಕಳನ್ನು ಕೊಂದು ಮರಳಿ ಅವರಲ್ಲಿ ಜೀವ ತುಂಬಲೆಂದು ಮಾಟ ಮಂತ್ರದಲ್ಲಿ ತೊಡಗಿದ್ದರು. ಮೊದಲಿನಿಂದ ತಾಯಿ ಹೆಚ್ಚಾಗಿ ಪೂಜೆ ವಿಧಿಗಳಲ್ಲಿ ಆಸಕ್ತೆ. ತಂದೆ ತಂತ್ರ, ಮಂತ್ರಗಳಲ್ಲಿ ಆಸಕ್ತನಾಗಿದ್ದ. ಇವರಿಬ್ಬರ ನಂಬಿಕೆ ಒಂದು ಹಂತದಲ್ಲಿ ಮಿತಿ ಮೀರಿ ಭಾರಿ ಅನಾಹುತಕ್ಕೆ ದಾರಿ ಮಾಡಿದೆ.

ಸಾಮಾನ್ಯವಾಗಿ ತಂದೆ ತಾಯಿ ಇಬ್ಬರಲ್ಲೂ ಮೌಢ್ಯ ಇಷ್ಟು ವ್ಯಾಪಕವಾಗಿ ಇರುವುದಿಲ್ಲ. ಬಹುಷಃ ಇಬ್ಬರೂ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದರು ಎಂದು ಕಾಣುತ್ತದೆ. ಆದರೆ ಬೇರೆ ಯಾರಿಗೂ ತೊಂದರೆ ಮಾಡದಿದ್ದ ಇವರು ಅದು ಹೇಗೆ ತಮ್ಮ ಮಕ್ಕಳನ್ನೇ ಕೊಂದು ಹಾಕಿದರು ಎನ್ನುವುದಕ್ಕೆ ತಾರ್ಕಿಕ ಉತ್ತರ ದೊರೆಯುವುದಿಲ್ಲ. ಈಗಂತೂ ಬಂಧನದಲ್ಲಿ ಇರುವ ಮೃತರ ತಾಯಿ ಹುಚ್ಚು ಹುಚ್ಚಾಗಿ ಹೇಳಿಕೆ ನೀಡುತ್ತಾ ಇದ್ದಾಳೆ. ಸಾಮಾನ್ಯವಾಗಿ ಹಳ್ಳಿಗಾಡಲ್ಲಿ ಅನಕ್ಷರಸ್ಥರು ಇಂಥ ಮೌಢ್ಯ ಬೆಳೆಸಿಕೊಂಡಿರುತ್ತಾರೆ. ಕೆಲವರು ದುರಾಸೆಯ ಜನ ಕೂಡ ತಂತ್ರ ಮಂತ್ರಗಳಿಂದ ಶ್ರಮ ಇಲ್ಲದೇ ಅದ್ಭುತ ಸಾಧಿಸಬಹುದು ಎಂದು ನಂಬುತ್ತಾರೆ. ಬಹಳಷ್ಟು ಸಂದರ್ಭಗಳಲ್ಲಿ ಧಾರ್ಮಿಕ ಪಂಥಗಳ ನಾಯಕರು ತಮ್ಮ ಭಕ್ತರಲ್ಲಿ ಅತೀವ ವಿಶ್ವಾಸ ಬೆಳೆಸಿ ಅವರನ್ನು ಹಾದಿ ತಪ್ಪಿಸುವುದೂ ಇದೆ. ಒಳಿತು ಮಾಡುವ ಮತ್ತು ನಿಧಿ ವಶ ಮಾಡಿಕೊಡುವ ನೆಪದಲ್ಲಿ ಬಲಿಯಂಥ ಹೇಯ ಕೃತ್ಯಕ್ಕೆ ಜನರನ್ನು ಪ್ರೇರಿಸುವವರೂ ಇರುತ್ತಾರೆ. ಇಂಥವರಿಂದ ಆಗಬಾರದ ಘಟನೆಗಳು ಆಗಿಬಿಡುತ್ತವೆ. ಮದನಪಲ್ಲಿ ಪ್ರಕರಣದಲ್ಲಿ ಇಂಥ ಪ್ರೇರಕ ಇದೆಯಾ ಎಂದು ಪರಿಶೀಲಿಸಬೇಕಿದೆ.

ಪ್ರಾಥಮಿಕ ಹಂತದಲ್ಲಿ ಸತ್ಯ ಯುಗದ ಆರಂಭಕ್ಕೆ ಹೆಣ್ಣು ಮಕ್ಕಳನ್ನು ಬಲಿಕೊಡುವಂತೆ ಪ್ರೇರಣೆ ನೀಡಲಾಗಿತ್ತು ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಇನ್ನೂ ವಿವರವಾದ ತನಿಖೆ ಬಾಕಿ ಇದೆ. ಇಂಥ ಪ್ರಕರಣಗಳು ಜನರ ನೆಮ್ಮದಿ ಕೆಡಿಸುತ್ತವೆ. ವಿದ್ಯಾವಂತರೇ ಇಂಥ ಹಾದಿ ಹಿಡಿದಿದ್ದಾರೆ ಎಂದ ಮೇಲೆ ತಾವೂ ಈ ಹಾದಿಯಲ್ಲಿ ನಡೆದರೆ ತಪ್ಪೇನೂ ಇಲ್ಲ ಎಂದು ಸಾಧಿಸುವವರು ಹುಟ್ಟಿಕೊಳ್ಳುತ್ತಾರೆ. ಇದು ಅಪಾಯಕಾರಿ ಬೆಳವಣಿಗೆ. ಭಕ್ತಿಯಂಥ ಭಾವ ಕೂಡ ಯಾವಾಗ ಉನ್ಮಾದ ಆಗಿ ಬಿಡುತ್ತದೋ ಹೇಳಲು ಬರುವುದಿಲ್ಲ. ಅದು ಆಯಾ ವ್ಯಕ್ತಿಯ ಮನಃಸ್ಥಿತಿ ಮತ್ತು ಸನ್ನಿವೇಶ, ಪ್ರೇರಣೆಯನ್ನು ಅವಲಂಬಿಸುತ್ತದೆ. ದೇವರ ಹರಕೆ ಹೆಸರಲ್ಲಿ ನಾನಾ ರೀತಿಯ ಹಿಂಸೆಗೆ ಒಡ್ಡಿಕೊಳ್ಳುವ ಜನರನ್ನು ನೀವೂ ನೋಡಿರುತ್ತೀರಿ. ಆಗಿನ ಹಿಂಸೆ ಅವರ ಅರಿವಿಗೆ ಬರದಿರಲು ಕಾರಣ ಅವರ ಉನ್ಮಾದಾವಸ್ಥೆ.

ನಮ್ಮ ದೇಶದಲ್ಲಿಯೇ ಹೀಗೆ ಮಕ್ಕಳನ್ನು, ಅದರಲ್ಲೂ ಮಹಿಳೆಯರನ್ನು ಬಲಿ ಕೊಡುವ ನಾನಾ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ಬಹಳ ಪ್ರಕರಣಗಳು ವರದಿ ಆಗುವುದೇ ಇಲ್ಲ. ಆದರೂ ಪ್ರತಿವರ್ಷ ಸಾಕಷ್ಟು ಸಂಖ್ಯೆಯಲ್ಲಿ ಇಂಥ ಬಲಿ ಪ್ರಕರಣಗಳು ನಡೆಯುತ್ತವೆ. ಅದರಲ್ಲೂ ಬುಡಕಟ್ಟು ಮತ್ತು ಆದಿವಾಸಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು. ನಮ್ಮಲ್ಲಿ ಕೂಡ ಆಗಾಗ ನಿಧಿ ವಶ ಮಾಡಿಕೊಳ್ಳಲೆಂದು ಮಕ್ಕಳನ್ನು ಬಲಿ ಕೊಡುವ ಅಥವಾ ಯತ್ನ ನಡೆಸಿದ ಪ್ರಸಂಗಗಳು ವರದಿ ಆಗುತ್ತಲೇ ಇರುತ್ತವೆ. ಇದಲ್ಲದೇ ತಮ್ಮ ಸಂಸಾರದ ಒಳಿತಿಗಾಗಿ ಮಕ್ಕಳನ್ನು ಬಲಿ ಕೊಡುವ ಯತ್ನಗಳೂ ನಡೆದದ್ದು ವರದಿ ಆಗಿವೆ. ಕೆಲವು ಪ್ರಸಂಗಗಳಲ್ಲಿ ಇದಕ್ಕಾಗಿ ಯಾರದ್ದೋ ಮಗುವನ್ನು ಅಪಹರಿಸಿ ತಂದು ಬಲಿ ಕೊಡುವುದು ಸಾಮಾನ್ಯ.

ಮದನಪಲ್ಲಿ ಪ್ರಕರಣದಲ್ಲಿ ತನ್ನ ಸ್ವಂತ ಮಕ್ಕಳನ್ನು ಬಲಿ ಕೊಟ್ಟ ತಂದೆ ತಾಯಿಯನ್ನು ತೀರಾ ಮಾನಸಿಕ ವಿಕೃತಿಗೆ ಒಳಗಾದವರು ಎಂದು ಹೇಳದೇ ವಿಧಿ ಇಲ್ಲ. ಅದರಲ್ಲೂ ಸಾಕಷ್ಟು ವಿದ್ಯಾವಂತರಾಗಿದ್ದ ಇಬ್ಬರೂ ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಬದುಕು ನಡೆಸಬಹುದಿತ್ತು. ಆದರೆ ಅಡ್ಡ ದಾರಿ ಹಿಡಿದ ಪರಿಣಾಮ ಎರಡು ಜೀವಗಳು ಬಲಿಯಾಗಿವೆ. ಈಗಲೂ ಪೊಲೀಸರ ಬಂಧನದಲ್ಲಿ ಇರುವ ಆ ಹೆಣ್ಣು ಮಕ್ಕಳ ತಾಯಿ, ತನ್ನನ್ನು ಬಿಡುಗಡೆ ಮಾಡಿ ಪೂಜೆಗೆ ಅವಕಾಶ ಮಾಡಿಕೊಟ್ಟರೆ ಮಕ್ಕಳು ಬದುಕುತ್ತಾರೆಂದು ಹೇಳುತ್ತಾ ಇರುವುದನ್ನು ಗಮನಿಸಿದರೆ, ಮನೋವಿಕಾರ ಎಷ್ಟು ಗಾಢವಾಗಿದೆ ಎಂಬುದು ತಿಳಿಯುತ್ತದೆ. ಬುದ್ಧಿ ಇಲ್ಲದವರು, ಅನಕ್ಷರಸ್ಥರು ಹೀಗೆ ವರ್ತಿಸುತ್ತಾರೆ ಎಂದರೆ ನಂಬಬಹುದು. ಸುಶಿಕ್ಷಿತ, ಶಿಕ್ಷಕ ವೃತ್ತಿಯಲ್ಲಿ ಇರುವ ಆ ದಂಪತಿ ವರ್ತನೆ ಮಾತ್ರ ಅಕ್ಷಮ್ಯ. ಇದಕ್ಕೆ ಬಹಳ ದೊಡ್ಡ ಪ್ರೇರಣೆಯೇ ಇರಬೇಕು. ಅದನ್ನು ಪತ್ತೆ ಮಾಡಿ ಮೊದಲು ಆ ಪ್ರೇರಕ ಮಹಾಶಯನನ್ನು ಸರಿಯಾಗಿ ತಿದ್ದದೇ ಹೋದಲ್ಲಿ ಇನ್ನೆಷ್ಟು ಇಂಥ ಅನಾಹುತಗಳು ನಡೆಯುತ್ತವೆಯೋ?

ದೇಶದ ಎಂಟು ರಾಜ್ಯಗಳು ಮೌಢ್ಯದ ವಿರುದ್ಧ ಶಾಸನ ಜಾರಿ ಮಾಡಿವೆ. ಅವುಗಳಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಕೂಡ ಸೇರಿವೆ. ಹಾಗೆಂದು ಮೌಢ್ಯವನ್ನು ವಿರೋಧಿಸುವುದು, ಅದು ತಪ್ಪು ಎಂದು ಹೇಳುವುದು ನಮ್ಮಲ್ಲಿ ಸುಲಭದ ಸಂಗತಿ ಅಲ್ಲ. ಮಹಾರಾಷ್ಟ್ರದಲ್ಲಿ ಮೌಢ್ಯದ ವಿರುದ್ಧ ಹೋರಾಡುತ್ತ ಬಂದಿದ್ದ ಧಾಬೋಲ್ಕರ ಅವರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ನಮ್ಮಲ್ಲಿ ಇಂಥ ಕೆಲಸ ಮಾಡುತ್ತಿರುವ ಕರಾವಳಿಯ ನರೇಂದ್ರ ಪೈ ಅವರನ್ನು ಕೊಲ್ಲಲು ಹಂತಕರು ಹಲವಾರು ವಿಫಲ ಯತ್ನ ನಡೆಸಿದ್ದಾರೆ. ಒಳ್ಳೆಯದು ಮಾಡುವುದು ಕೂಡ ಈಗ ಕಷ್ಟ. ಕೆಡುಕು ಮಾಡಲು ಜನ ಒಟ್ಟುಗೂಡುವ ಹಾಗೆ ಒಳ್ಳೆಯ ಕೆಲಸಕ್ಕೆ ಬೆಂಬಲ ಸಿಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಅದಕ್ಕೆ ನಾನಾ ರೀತಿಯ ವಿರೋಧಗಳೂ ಎದುರಾಗುತ್ತವೆ. ಇದರ ಪರಿಣಾಮ ನಮ್ಮಲ್ಲಿ ಮೌಢ್ಯ ನಿವಾರಣೆ ಆಗುವ ಬದಲು ಬೆಳೆಯುತ್ತಾ ಹೋಗುತ್ತಿದೆ. ನಮಗೆ ಆದೇಕೋ ಮುಂದೆ ಹೋಗುವುದಕ್ಕಿಂತ ಹಿಂದಕ್ಕೆ ಹೋಗುವುದೇ ಹೆಚ್ಚು ಪ್ರಿಯ ಎಂದು ಕಾಣುತ್ತದೆ. ಆದರೆ ಇಂಥ ಪ್ರಕರಣಗಳಲ್ಲಿ ಅಮಾಯಕ ಜೀವಗಳು ಬಲಿ ಆಗುವದರಿಂದ ಇಂಥ ಬೆಳವಣಿಗೆಯನ್ನು ಶತಾಯಗತಾಯ ವಿರೋಧಿಸುವುದು, ನಿಲ್ಲಿಸುವುದು ಇಂದು ಅನಿವಾರ್ಯ.

LEAVE A REPLY

Please enter your comment!
Please enter your name here

State

ಮಣ್ಣು ಆಗಿಯುವಾಗ ಗುಡ್ಡ ಕುಸಿದು ಇಬ್ಬರ ಸಾವು

ಯಮಕನಮರಡಿ: 1- ಅಕ್ರಮವಾಗಿ ಮಣ್ಣು ಅಗೆಯುವಾಗ ಗುಡ್ಡ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ ಬಿರನೊಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಕೂಲಿಯವರನ್ನು ಯಲ್ಲಪ್ಪ (27), ಹಾಲಪ್ಪ ಗೂರವ (24) ಎಂದು...

ಗೋಕಾಕ ಫಾಲ್ಸ ಸೇತುವೆ ಕಾಮಗಾರಿ ಜುಲೈ ಒಳಗೆ ಪೂರ್ಣಗೊಳಿಸಲು ಸೂಚನೆ

ಗೋಕಾಕ: ಫೆ.28- ಗೋಕಾಕ ಫಾಲ್ಸ ನಡುವೆ ನಿರ್ಮಾಣ ಹಂತದಲ್ಲಿರುವ 15.54 ಕೋಟಿ ರೂ ವೆಚ್ಚ ದ ಸೇತುವೆ ಕಾಮಗಾರಿಯನ್ನು ಜುಲೈನೊಳಗೆ ಪೂರ್ಣಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದರು. ಜಲಸಂಪನ್ಮೂಲ ಸಚಿವ ರಮೇಶ...

ಕಾಂಗ್ರೆಸ್ ನಾಯಕರ ಹೆಸರಲ್ಲಿ ವಂಚಿಸಿದ್ದ ಮಹಿಳಾ ಕಾರ್ಯಕರ್ತೆ ಉಚ್ಛಾಟನೆ

ಹುಬ್ಬಳ್ಳಿ: 1- ಪಕ್ಷದ ಮುಖಂಡರ ಹೆಸರು ಬಳಸಿಕೊಂಡು ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಡಿ.ಕೆ.ಶಿವಕುಮಾರ ಅವರ ಬಳಿ ಕಡಿಮೆ...

ಪ್ರಾಸಂಗಿಕ ಕರಾರಿನ ಮೇಲೆ ಬಸ್ ಸೌಲಭ್ಯ

ಬೆಳಗಾವಿ: ಫೆ.28 : ಚಿಕ್ಕೋಡಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಹಾಗೂ ಮಾನ್ಯತೆ ಪಡೆದ ಶಾಲಾ/ಕಾಲೇಜುಗಳಿಗೆ ಶೈಕ್ಷಣಿಕ ಪ್ರವಾಸಕ್ಕಾಗಿ ವಾಹನಗಳನ್ನು ಪ್ರಾಸಂಗಿಕ ಕರಾರಿನ ಮೇಲೆ ಪಡೆಯಲು...

National

ಕೆಂಪುಕೋಟೆ ಹಿಂಸಾಚಾರಗಳ ಹಿಂದೆ ಕೇಂದ್ರದ ಕೈವಾಡ -ಕೇಜ್ರಿವಾಲ್

ಮೀರತ್: ಫೆ 28- ಕೇಂದ್ರ ಸರ್ಕಾರ ತಂದಿರುವ ಹೊಸ ಕೃಷಿ ಕಾಯ್ದೆಗಳ ವಿರುದ್ಧ ರೈತರು ಮೂರು ತಿಂಗಳುಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ, ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ...

“ಮನ್ ಕಿ ಬಾತ್ ಸಾಕು, ಜಾಬ್ ಕಿ ಬಾತ್” ಮಾತಾಡಿ ಎಂದ ಯುವ ಪೀಳಿಗೆ

ಹೊಸದಿಲ್ಲಿ: 1- ಇಂದು ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಇನ್ನಿಲ್ಲದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯುವಜನರು ಯೂಟ್ಯೂಬ್, ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿಯವರ...

4 ರಾಜ್ಯಗಳ ಚುನಾವಣೆ ಘೋಷಣೆ

ನವದೆಹಲಿ: ಫೆ 26 - ವಿಧಾನಸಭಾ ಅವಧಿ ಪೂರ್ಣಗೊಳ್ಳಲಿರುವ ಐದು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ವೇಳಾಪಟ್ಟಿ ಪ್ರಕಟಿಸಿದೆ. ಅಸ್ಸಾಂ ರಾಜ್ಯವು ಮಾ. 27, ಏ 1 ಮತ್ತು...

ಪತ್ನಿಯು ಪತಿಯ ಆಸ್ತಿಯಲ್ಲ

ಮುಂಬೈ: ಫೆ 26- ಚಹಾ ನೀಡಲು ನಿರಾಕರಿಸುವ ಮೂಲಕ ಪತ್ನಿ ಹಲ್ಲೆ ನಡೆಸಲು ಪ್ರಚೋದನೆ ನೀಡಿದ್ದಳು ಎಂಬುದನ್ನು ಒಪ್ಪಲಾಗದು. ಪತ್ನಿಯನ್ನು ಪ್ರಾಣಿಯಂತೆ ನೋಡುವುದು ಸರಿಯಲ್ಲ, ಆಕೆ ಒಂದು ಪಶು ಅಥವಾ ವಸ್ತುವಲ್ಲ ಎಂದು...

International

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕೊರೋನ ಲಸಿಕೆಯ ನಂತರ 16 ಜನರ ಸಾವು

ಮಾಸ್ಕೋ: ಫೆ .27 - ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕರೋನ ಲಸಿಕೆ ಹಾಕಿದ ನಂತರ ಪ್ರತಿಕ್ರಿಯೆ ಉಂಟಾಗಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಸ್ವಿಸ್ ಏಜೆನ್ಸಿ ಫಾರ್ ಥೆರಪೂಟಿಕ್ ಪ್ರಾಡಕ್ಟ್ಸ್ (ಸ್ವಿಸ್ಮೆಡಿಕ್) ತಿಳಿಸಿದೆ. ವಾಚ್‌ಡಾಗ್ ವರದಿಯ...

ಅಮೆರಿಕಾದ ಸಾಲವೆಷ್ಟು ?

ವಾಷಿಂಗ್ಟನ್: ಫೆ 27- ಜಗತ್ತಿನ ದೊಡ್ಡಣ್ಣ ಎಂದೇ ಹೆಸರಾಗಿರುವ ಅಮೆರಿಕಾದ ಸಾಲ ದಿನ ದಿನಕ್ಕೂ ಹೆಚ್ಚುತ್ತಿದೆ ಎಂದು ಆ ದೇಶದ ಶಾಸನ ಸಭೆಯ ಪ್ರಮುಖ ಸದಸ್ಯ ಅಲೆಕ್ಸ್ ಮೂನಿ ಅಲ್ಲಿನ ಸರ್ಕಾರವನ್ನು ಎಚ್ಚರಿಸಿದ್ದಾರೆ. ಹೆಚ್ಚಿನ...

ಧ್ವಂಸಗೊಂಡ ಹಿಂದೂ ದೇವಾಲಯ ಕೂಡಲೇ ನಿರ್ಮಾಣಕ್ಕೆ ಪಾಕ್ ಕೋರ್ಟ ಆದೇಶ

ಇಸ್ಲಾಮಾಬಾದ: 9- ದುಷ್ಕರ್ಮಿಗಳಿಂದ ಧ್ವಂಸಗೊಂಡಿರುವ ಶತಮಾನಗಳ ಇತಿಹಾಸ ಹೊಂದಿದ್ದ ಹಿಂದೂ ದೇವಾಲಯವನ್ನು ಕೂಡಲೇ ಪುನರ್ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಪಾಕಿಸ್ತಾನ ಸುಪ್ರೀಮ ಕೋರ್ಟ ಆದೇಶಿಸಿದೆ. ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಸಮಯದ ಬಗ್ಗೆ...

ಕೋವಿಡ್ ರೋಗಿಗಳಿಗೆ ಕ್ಷಯರೋಗದ ಅಪಾಯವಿದೆ : ರಶಿಯಾ

ಮಾಸ್ಕೊ, ಫೆ 08- ಕೊರೋನಾ ವೈರಸ್ ಸೋಂಕಿಗೆ ಒಳಗಾದ ರೋಗಿಗಳಿಗೆ ಕ್ಷಯರೋಗ ಬರುವ ಸಾಧ್ಯತೆ ಹೆಚ್ಚು ಎಂದು ರಷ್ಯಾದ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. "ಕೋವಿಡ್ -19 ನಿಂದ ಬಳಲಿದ ನಂತರ ಅನೇಕ ರೋಗಿಗಳು ಶ್ವಾಸಕೋಶದಲ್ಲಿ...

Entertainment

ಇಂದು ಧಾರವಾಡದಲ್ಲಿ ಬೆಳವಡಿ ಮಲ್ಲಮ್ಮ ನಾಟಕ

ಧಾರವಾಡ: 14- ಹುಬ್ಬಳ್ಳಿಯ ಜೀವಿ ಕಲಾ ಬಳಗದ ಅಧ್ಯಕ್ಷರಾದ ಗದಿಗೆಯ್ಯಾ ಹಿರೇಮಠ ಅವರು ರಚಿಸಿ ನಿರ್ದೇಶಿಸಿದ ಐತಿಹಾಸಿಕ " ಸಮರ ಸಿಂಹಿಣಿ ಬೆಳವಡಿ ಮಲ್ಲಮ್ಮ" ನಾಟಕವು ರವಿವಾರ ದಿ ೧೪- ೨ -೨೦೨೧ ರಂದು ಪ್ರದರ್ಶನಗೊಳ್ಳಲಿದೆ. ಬೆಳವಡಿಯ ನೇತಾಜಿ ತರುಣ...

ಮಾರುಕಟ್ಟೆ ಗಿಜಿಗುಡುವಾಗ ಚಿತ್ರಮಂದಿರವೇಕೆ ಖಾಲಿ?

ಬೆಂಗಳೂರು, ಫೆ 03- “ಬಸ್ ಫುಲ್, ಮಾರ್ಕೆಟ್ ಗಿಜಿ ಗಿಜಿ ಆದರೆ ಚಿತ್ರ ಮಂದಿರಗಳೇಕೆ ಭಣಗುಡಬೇಕು” ಎಂದು ನಟ ಧ್ರುವ ಸರ್ಜಾ ಮಾಡಿರುವ ಟ್ವೀಟ್ ಗೆ ಕನ್ನಡ ಚಿತ್ರರಂಗದ ಬಹುತೇಕ ನಟ, ನಿರ್ದೇಶಕರು...

ಜ. 24ರಂದು ವರುಣ ಧವನ್-ನತಾಶಾ ಮದುವೆ

ಮುಂಬೈ, ಜ 15 - ಖ್ಯಾತ ನಿರ್ಮಾಪಕ, ನಿರ್ದೇಶಕ ಡೇವಿಡ್ ಧವನ ಪುತ್ರ ನಟ ವರುಣ ಧವನ್ ಅವರು ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ...

‘ಲಂಕಾಸುರ’ ಚಿತ್ರಕ್ಕೆ ಚಾಲನೆ

ಬೆಂಗಳೂರು, ಜ 15 - ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮದಂದು ವಿನೋದ ಪ್ರಭಾಕರ ಹಾಗೂ ಲೂಸ್ ಮಾದ ಅಭಿನಯದ ‘ಲಂಕಾಸುರ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ...

Sports

ಭಾರತಕ್ಕೆ 317 ರನ್ ಜಯ

ಚೆನ್ನೈ, ಫೆ 16- ಭಾರತದ ಬಲಿಷ್ಠ ಸ್ಪಿನ್ ಕೋಟೆಯನ್ನು ಭೇದಿಸುವಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ವಿಫಲವಾಗಿದ್ದು, ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಪಡೆ 1-1 ರಿಂದ ಸಮಬಲ ಸಾಧಿಸಿದೆ. ನಿರೀಕ್ಷೆಯಂತೆ ಮಂಗಳವಾರ ಭಾರತ...

ಗೆಲುವಿನ ಹೊಸ್ತಿಲಲ್ಲಿ ಭಾರತ

ಚೆನ್ನೈ: ಫೆ 15 - ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರ ಶತಕ ಹಾಗೂ ನಾಯಕ ವಿರಾಟ ಕೊಹ್ಲಿ ಅವರ ಅರ್ಧ ಶತಕದ ನೆರವಿನಿಂದ ಭಾರತ ನೀಡಿದ 482 ರನ್ ಗೆಲುವಿನ ಗುರಿ...

ಚೆನ್ನೈ ತಲುಪಿದ ಇಂಗ್ಲೆಂಡ್ ಕ್ರಿಕೆಟ್ ತಂಡ

ನವದೆಹಲಿ, ಜ.24 - ಫೆಬ್ರವರಿ 5 ರಿಂದ ಭಾರತ ವಿರುದ್ಧದ ಟೆಸ್ಟ್ ಸರಣಿಗಾಗಿ ವೇಗದ ಬೌಲರ್ ಜೋಫ್ರಾ ಆರ್ಚರ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಬ್ಯಾಟ್ಸ್‌ಮನ್ ರೋರಿ ಬರ್ನ್ಸ್ ಮತ್ತು ಜೊನಾಥನ್ ಟ್ರಾಟ್ ಸೇರಿದಂತೆ...

ರಹಾನೆ ಮತ್ತು ಇತರ ಆಟಗಾರರಿಗೆ ಕ್ವಾರಂಟೈನ್ ವಿನಾಯಿತಿ

ನವದೆಹಲಿ, ಜ.21- ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಗೆದ್ದು ಗುರುವಾರ ಬೆಳಿಗ್ಗೆ ಮುಂಬೈಗೆ ಮರಳಿದ ನಾಯಕ ಅಜಿಂಕ್ಯ ರಹಾನೆ ಮತ್ತು ಇತರ ನಾಲ್ಕು ಭಾರತೀಯ ಆಟಗಾರರಿಗೆ ಮಹಾರಾಷ್ಟ್ರ ಸರ್ಕಾರ ಕ್ವಾರಂಟೈನ್ ನಿಂದ ವಿನಾಯಿತಿ...