ಬೆಳಗಾವಿ, 30- ಮಹಾರಾಷ್ಟ್ರ ಕ್ಕೆ ತೆರಳಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಮೇಲೆ ಮಹಾರಾಷ್ಟ್ರ ಪರ ಬರಹವುಳ್ಳ ಪೋಸ್ಟರ್ ಪರ ಭಿತ್ತಿ ಪತ್ರ ಅಂಟಿಸಿದ್ದಕ್ಕೆ ಪ್ರತಿಯಾಗಿ ಕರವೇ ಬಣ ಆ ರಾಜ್ಯದ ಬಸ್ ಮೇಲೆ ರಾಜ್ಯದಲ್ಲಿ ಭಿತ್ತಿ ಪತ್ರ ಅಂಟಿಸಿ ಪ್ರತಿಕ್ರಿಯಿಸಿದ್ದಾರೆ.
ಚಿಕ್ಕೋಡಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಚಿಕ್ಕೋಡಿಯಲ್ಲಿ ಮಹಾರಾಷ್ಟ್ರದ ಬಸ್ ತಡೆದು ಮಹಾರಾಷ್ಟ್ರದ ಕನ್ನಡ ಪ್ರದೇಶಗಳಾದ ಸಾಂಗಲಿ, ಜತ್ತ, ಅಕ್ಕಲಕೋಟೆ ಮುಂತಾದವುಗಳು ಕರ್ನಾಟಕಕ್ಕೆ ಸೇರಬೇಕು ಎನ್ನುವ ಭಿತ್ತಿ ಪತ್ರ ಅಂಟಿಸಿದ್ದಾರೆ. ಅಲ್ಲದೆ ಕಾರ್ಯಕರ್ತರು ಬಸ್ ಟಾಪ್ ಮೇಲೇರಿ ಕನ್ನಡ ಬಾವುಟ ಕೈಯಲ್ಲಿ ಹಿಡಿದು ಮಹಾರಾಷ್ಟ್ರದ ಕನ್ನಡ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕೆಂದು ಘೋಷಣೆ
ಮಾಡಿದರು.