ಮುಧೋಳ, 30- ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಹಾಗೂ ಸೌಲಭ್ಯ ದೊರೆಯಲಿ ಎಂಬ ಆಶಯದೊಂದಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಹಾಗೂ ಕ್ಷೇಮಾಭಿವೃದ್ಧಿ ಸಂಸ್ಥೆಯು ಸಮೀಪದ ಮಲ್ಲಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 70 ಸಾವಿರ ರೂಪಾಯಿ ಮೊತ್ತದ ಡೆಸ್ಕ್(ಬೆಂಚ್) ದೇಣಿಗೆಯಾಗಿ ನೀಡಿದೆ.
ಇದೇ ವೇಳೆ ಶ್ರೀ ಪರಮಪೂಜ್ಯ ಸದಾನಂದ ಸ್ವಾಮಿಜಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಲಯ ಮೇಲ್ವಿಚಾರಕ ಮಂಜುನಾಥ ಕಡತಾಳ, ಗ್ರಾಮಸೇವಕಿ ದೀಪಾ ಬೂದಿಹಾಳ, ಹಾಗೂ ಗ್ರಾಪಂ ವಾಟರಮನ್ ವಿಷ್ಣು ಪಡೆಪ್ಪನವರ ಅವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು.
ಮಲ್ಲಾಪೂರದ ಪರಮಪೂಜ್ಯ ಸದಾನಂದ ಸ್ವಾಮಿಜಿ ಹಾಗೂ ಮುಗಳಿಹಾಳದ ಸೋಮನಿಂಗ ಶಾಸ್ತ್ರಿಗಳು ಸಾನಿಧ್ಯ ವಹಿಸಿದ್ದರು. ತಾಪಂ ಸದಸ್ಯ ಹನಮಂತ ದುರಗನ್ನವರ, ಎಸ್ಡಿಎಂಸಿ ಅಧ್ಯಕ್ಷ ಹನಮಂತ ಪರಪ್ಪನವರ, ಮುತ್ತಪ್ಪ ಶಿರೂರ, ಮುಖ್ಯ ಗುರು ಎಸ್. ಬಿ. ತಿರಕನ್ನವರ, ಎಸ್ಡಿಎಂಸಿ ಉಪಾಧ್ಯಕ್ಷರು, ಸದಸ್ಯರು, ಮತ್ತು ಶಿಕ್ಷಕವೃಂದ, ಸಿಬ್ಬಂದಿ ವರ್ಗ, ಗ್ರಾಮಸ್ಥರು ಇದ್ದರು.