ಮುಧೋಳ: ತಾಲೂಕಿನ ಲೋಕಾಪುರ ಪಟ್ಟಣದಲ್ಲಿ ಶಿರಡಿ ಸಾಯಿಬಾಬಾರ ರಥೋತ್ಸವ ಆಗಮಿಸುತ್ತಿದ್ದಂತೆ ಭಕ್ತರು ಅದ್ದೂರಿ ಸ್ವಾಗತ ಕೋರಿದರು. ಲೋಕೇಶ್ವರ ದೇವಸ್ಥಾನದಿಂದ ಹೊರಟ ರಥೋತ್ಸವ ಬಸವೇಶ್ವರ ವೃತ್ತದ ಮುಖಾಂತರ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮುಧೋಳಕ್ಕೆ ಬೀಳ್ಕೊಟ್ಟರು.
ಸಾಯಿಬಾಬಾರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮೀಜಿ ಸಾಯಿಬಾಬಾರ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಪ್ರಕಾಶ ಚುಳಕಿ, ಮಹಾವೀರ ಟೋಪಣ್ಣವರ, ಗುರು ಘಾಟಗೆ, ವೆಂಕಣ್ಣ ಹೂಗಾರ, ಸಂತೋಷ ಹೂಗಾರ, ಜಗದೀಶ ಮಾರಂಗಪ್ಪನವರ, ಗೀರೀಶ ಹುಕುಮನವರ, ಕೃಷ್ಣಾ ಹಂಚಾಟೆ, ರವಿ ಹೂಗಾರ ಹಾಗೂ ಶಿರಡಿ ಸಾಯಿಬಾಬಾ ಭಕ್ತ ಸೇವಾ ಸಮಿತಿ ಪದಾಧಿಕಾರಿಗಳು ಇದ್ದರು.