ಚಾಮರಾಜನಗರ, 30- ದೇಶಾದ್ಯಂತ ಕೊರೋನಾ ಸೋಂಕಿಗೆ ಲಸಿಕೆ ನೀಡುವ ಅಭಿಯಾನ ಪ್ರಾರಂಭವಾಗಿದ್ದು, ಮೊದಲ ಹಂತವಾಗಿ ಕೊರೋನಾ ವಾರಿಯರ್ಸ್ ಗೆ ಲಸಿಕೆ ನೀಡಲಾಗುತ್ತಿದ್ದು ರಾಜ್ಯದಲ್ಲಿ ಲಸಿಕೆ ಪಡೆದ ನಾಲ್ಕು ವೈದ್ಯರಲ್ಲಿ ಸೋಂಕು ಕಂಡು ಬಂದಿದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆದ ನಾಲ್ವರು ವೈದ್ಯರಲ್ಲಿ ಕೊರೊನಾ ಸೋಂಕಿನ ಲಕ್ಷಣ ಪತ್ತೆಯಾಗಿದೆ. ಕೋವಿಡ್ ನೋಡಲ್ ಅಧಿಕಾರಿ ಡಾ.ಮಹೇಶ, ಸಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಹರ್ಷ, ವೈದ್ಯರಾದ ದಮಯಂತಿ, ಗಿರೀಶ, ಶಶಾಂಕ, ನವೀನ ಚಂದ್ರ ಹಾಗೂ ಚೇತನ ಅವರಿಗೆ ಸೋಂಕಿನ ಲಕ್ಷಣಗಳು ಕಂಡುಬಂದಿವೆ.
ಲಸಿಕೆ ಪಡೆದ ಒಂದೇ ವಾರದಲ್ಲಿ ಇವರಲ್ಲಿ ಸೊಂಕಿನ ಲಕ್ಷಣ ಕಂಡು ಬಂದದ್ದು ಆತಂಕಕ್ಕೆ ಕಾರಣವಾಗಿದೆ.