INDIA COVID-19 Statistics

11,122,986
Confirmed Cases
Updated on 01/03/2021 9:27 PM
169,565
Total active cases
Updated on 01/03/2021 9:27 PM
157,257
Total deaths
Updated on 01/03/2021 9:27 PM
Tuesday, March 2, 2021

INDIA COVID-19 Statistics

11,122,986
Total confirmed cases
Updated on 01/03/2021 9:27 PM
169,565
Total active cases
Updated on 01/03/2021 9:27 PM
157,257
Total deaths
Updated on 01/03/2021 9:27 PM
10,796,164
Total recovered
Updated on 01/03/2021 9:27 PM
Home State Kagwad ಕನ್ನಡ ಬಳಸಿ, ಕರ್ನಾಟಕ ಉಳಿಸಿ

ಕನ್ನಡ ಬಳಸಿ, ಕರ್ನಾಟಕ ಉಳಿಸಿ

ಕಾಗವಾಡ, 30- ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಶೇಕಡ 50 ರಷ್ಟು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟ್ ಗಳನ್ನು ಮೀಸಲಿಡುವ ಕಾರ್ಯವನ್ನು ಸರ್ಕಾರ ಮಾಡಬೇಕು, ಆಗ ಕನ್ನಡ ಶಾಲೆಗಳಿಗೆ ಜನ ತಾನಾಗಿಯೇ ಬರುತ್ತಾರೆ ಎಂದು ಬೆಳಗಾವಿ ಜಿಲ್ಲಾ ೧೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಕಾಗವಾಡದಲ್ಲಿ ಶನಿವಾರ ಬೆಳಗಾವಿ ಜಿಲ್ಲಾ ೧೪ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಮಕ್ಕಳಿಗೆ ಕನ್ನಡ ಕಲಿಸಿ, ಮನೆಯಲ್ಲಿ ಕನ್ನಡವನ್ನೇ ಬಳಸಿ ವ್ಯವಹಾರದಲ್ಲಿಯೂ ಕನ್ನಡವನ್ನು ಬಳಸುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸಬೇಕು ಆಗ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ ,ಕನ್ನಡ ಭಾಷೆ ಉಳಿದರೆ ಮಾತ್ರ ಕರ್ನಾಟಕ ಉಳಿಯುತ್ತದೆ ಎಂದರು.

ನಾವಿಂದು ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಲು ತಯಾರಿಲ್ಲ. ಕನ್ನಡ ಕಲಿತವರಿಗೆ ಉದ್ಯೋಗವಿಲ್ಲ ದ ಸ್ಥಿತಿ ಇದ್ದು ಇಂಗ್ಲಿಷ್ ಕಲಿತವರಿಗೆ ಉನ್ನತ ಸ್ಥಾನಗಳು ಲಭಿಸುತ್ತಿವೆ. ಹೀಗಾದರೆ ಕನ್ನಡ ಉಳಿಯುವುದು ಹೇಗೆ ಎಂದು ಪ್ರಶ್ನಿಸಿದ ಸರ್ವಾಧ್ಯಕ್ಷರು ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ 50% ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟ್ ಗಳನ್ನು ಮೀಸಲಿಡುವ ಕಾರ್ಯವನ್ನು ಸರ್ಕಾರ ಮಾಡಬೇಕು. ಆಗ ಕನ್ನಡ ಶಾಲೆಗಳಿಗೆ ಜನ ತಾನಾಗಿಯೇ ಬರುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಅಷ್ಟೇ ಅಲ್ಲ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿಗಳನ್ನು ಸರಕಾರ ಉತ್ತಮಪಡಿಸಬೇಕು ,ಕನ್ನಡ ಶಾಲೆಗಳಲ್ಲಿ ಪ್ರಾಥಮಿಕ ಸೌಲಭ್ಯಗಳನ್ನು ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಗಡಿಭಾಗದ ಕನ್ನಡ ಶಾಲೆಗಳ ಸ್ಥಿತಿಗಳಂತೂ ಅವ್ಯವಸ್ಥೆಯ ಆಗರವಾಗಿದ್ದು ಕೆಲವು ಕನ್ನಡ ಶಾಲೆಗಳ ಸ್ಥಿತಿಗತಿ ಗಳಂತೂ ಕನ್ನಡಿಗರಲ್ಲಿ ಮುಜುಗರ ಮೂಡಿಸುವಂತ ಸ್ಥಿತಿಗೆ ಬಂದಿವೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ,ಕನ್ನಡ ಶಾಲೆಗಳಿಗೆ ಎಲ್ಲ ರೀತಿಯ ಸೌಕರ್ಯಗಳು ಸೌಲಭ್ಯಗಳು ಸಿಗುವಂತಾಗಬೇಕು ಎಂದು ಅವರು ಹೇಳಿದರು.

ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಭಾಕರ ಕೋರೆ ಅವರು, ಕನ್ನಡದಲ್ಲಿ ಶಿಕ್ಷಣವನ್ನು ಪಡೆದವರಿಗೆ ಮಾತ್ರ ಸರಕಾರಿ ನೌಕರಿ ಎಂಬ ನಿಯಮ ಜಾರಿಗೆ ಬಂದಾಗ ಮಾತ್ರ ಕನ್ನಡಕ್ಕೆ ಬೇಡಿಕೆ ಬರುತ್ತದೆ, ಕನ್ನಡ ಶಾಲೆಗಳಿಗೆ ಮಕ್ಕಳು ಬರುತ್ತಾರೆ ಎಂದರು.

ಉತ್ತಮ ಗುಣಮಟ್ಟದ ಶಿಕ್ಷಕರು ಬೇಕು ,ಉತ್ತಮ ಗುಣಮಟ್ಟದ ಶಾಲಾ ಕಟ್ಟಡಗಳು ,ಉತ್ತಮ ಗುಣಮಟ್ಟದ ಶಾಲಾ ಆವರಣಗಳು ಬೇಕು ,ಉತ್ತಮ ಗುಣಮಟ್ಟದ ಪೀಠೋಪಕರಣಗಳು ಮತ್ತು ಪಾಠೋಪಕರಣಗಳು ಬೇಕು ಪ್ರಾಮಾಣಿಕ ಮತ್ತು ಮತುವರ್ಜಿಯಿಂದ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ಬೇಕು ಅಂದಾಗ ಮಾತ್ರ ಸರಕಾರಿ ಶಾಲೆಗಳಿಗೆ ಕನ್ನಡ ಶಾಲೆಗಳಿಗೆ ಮಕ್ಕಳು ಬರುತ್ತಾರೆ ಅವರನ್ನು ಕರೆತರುವ ಕಾರ್ಯವನ್ನು ಸರಕಾರ ಮಾಡಬೇಕಿದೆ ಎಂದರು .

ಎಷ್ಟೇ ಕಡಿಮೆ ವಿದ್ಯಾರ್ಥಿಗಳಿದ್ದರೂ ಕನ್ನಡ ಶಾಲೆಗಳನ್ನು ಮುಚ್ಚಬೇಡಿ, ಕನ್ನಡ ಶಾಲೆಗೆ ಮಕ್ಕಳು ಏಕೆ ಬರುತ್ತಿಲ್ಲ ಎಂಬುದನ್ನು ತಿಳಿದುಕೊಂಡು ಶಾಲೆಯ ಸುಧಾರಣೆಗೆ ಪ್ರಯತ್ನಿಸಬೇಕು. ಇತ್ತೀಚೆಗೆ ಕನ್ನಡ ಶಾಲೆಗಳನ್ನು ಶಾಸಕರು ಸಚಿವರು ದತ್ತು ತೆಗೆದುಕೊಳುತ್ತಿರುವುದು ಅಭಿನಂದನೀಯವಾಗಿದೆ ಎಂದರು .

ನಾವು ಅಕ್ಕಪಕ್ಕದ ಭಾಷೆ ಕಲಿಯಬೇಕು, ಕಾಗವಾಡದಲ್ಲಿ ಎರಡು ಭಾಷೆಗಳ ಮಧ್ಯೆ ಸೌಹಾರ್ದತೆ ಇದೆ. ಎಲ್ಲ ಭಾಷಿಕರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ, ಒಂದು ಭಾಷೆಯ ಮೇಲೆ ಮತ್ತೊಂದು ಭಾಷೆಯನ್ನು ತಂದುಬಿಟ್ಟರೆ ಮೊದಲಿದ್ದ ಭಾಷೆ ನಾಶವಾಗುತ್ತದೆ. ಆಂಗ್ಲರು ನಮ್ಮಲ್ಲಿ ಇಂಗ್ಲಿಷ್ ಭಾಷೆಯನ್ನು ತಂದಿದ್ದರ ಪರಿಣಾಮ ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕೃತಿ ಎಲ್ಲವೂ ಹಾಳಾದವು. ಕರ್ನಾಟಕ ಮತ್ತು ಕನ್ನಡ ಭಾಷೆ ಕೂಡ ಇದಕ್ಕೆ ಹೊರತಲ್ಲ. ಇಂಗ್ಲಿಷ್ ಭಾಷೆಯ ಪ್ರಭಾವದಿಂದ ಕನ್ನಡಕ್ಕೆ ಕುತ್ತು ಬಂದಿದೆ, ಕನ್ನಡ ಭಾಷೆ ಅವಸಾನದತ್ತ ಸಾಗುತ್ತಿದೆ, ಅದನ್ನು ನಾವು ತಡೆಯಲೇಬೇಕು ಎಂದು ಸರ್ವಾಧ್ಯಕ್ಷರು ನುಡಿದರು.

ಗಡಿಯಲ್ಲಿ ಕನ್ನಡ ಮರಾಠಿ ಬಾಂಧವರ ಸಂಬಂಧಗಳನ್ನು ಬೆಸೆಯುವಲ್ಲಿ ಸಾಂಸ್ಕೃತಿಕ ಸಾಮರಸ್ಯಕ್ಕೆ ಹೊಸ ಭಾಷ್ಯ ವನ್ನು ಬರೆಯುವಲ್ಲಿ ಕನ್ನಡಿಗರ ಸಾಹಿತ್ಯ ಸಾಧನೆಯನ್ನು ಇತರರಿಗೆ ಪರಿಚಯಿಸುವಲ್ಲಿ ಇಂತಹ ಸಾಹಿತ್ಯ ಸಮ್ಮೇಳನಗಳು ಪೂರಕವಾಗಿ ನಿಲ್ಲುತ್ತವೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರ ಅವಧಿಯಲ್ಲಿ ಬೆಳಗಾವಿ ಜಿಲ್ಲೆ ಅತಿ ಹೆಚ್ಚು ಸಾಹಿತ್ಯ ಸಮ್ಮೇಳನಗಳನ್ನು ಕಂಡಿತು. ನಾಲ್ಕು ಜಿಲ್ಲಾ ಸಮ್ಮೇಳನಗಳು ಸೇರಿದಂತೆ ಒಟ್ಟು ಮೂವತ್ತೇಳು ಸಮ್ಮೇಳನಗಳನ್ನು ಅವರ ಅವಧಿಯಲ್ಲಿ ನಡೆಸಲಾಯಿತು. ಸಕ್ಕರೆ ಜಿಲ್ಲೆ ಕುಂದಾನಗರಿ ಸಾಂಸ್ಕೃತಿಕ ಸಂಗಮ ಕೇಂದ್ರ ಗಂಡುಮೆಟ್ಟಿನ ನಾಡೆಂಬ ವಿವಿಧ ಹೆಸರುಗಳಿಂದ ಖ್ಯಾತಿ ಹೊಂದಿದ ಬೆಳಗಾವಿ ಜಿಲ್ಲೆಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಮಹಾದಾನಿ ಶಿರಸಂಗಿ ಲಿಂಗರಾಜರು ರಾಜಾಲಖಮಗೌಡರು, ಅರಟಾಳ ರುದ್ರಗೌಡರು, ಶಿ ಶಿ ಬಸವನಾಳರು ಡೆಪ್ಯುಟಿ ಚನ್ನಬಸಪ್ಪನವರ ಗಿಲಗಂಚಿ ಗುರುಸಿದ್ದಪ್ಪನವರು, ವೈಜಪ್ಪ ಚಚಡಿಯ ವಿಜಿ ದೇಸಾಯಿಯವರು ರ್ಯಾಂಗ್ಲರ್ ಡಿ ಸಿ ಪಾವಟೆ ಮುಂತಾದವರನ್ನು ನೆನಪಿಸಿಕೊಂಡ ಪ್ರಭಾಕರ ಕೋರೆ ಅವರು ಬೆಳಗಾವಿಯಲ್ಲಿ ಕೆಎಲ್ ಇ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಗಡಿನಾಡಿನಲ್ಲಿ ಕನ್ನಡದ ಬೀಜವನ್ನು ಬಿತ್ತಿ ನಾಡು ನುಡಿಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಸಪ್ತರ್ಷಿಗಳನ್ನು ಕನ್ನಡಕ್ಕೆ ನೆಲೆ ಹಾಗೂ ಬೆಲೆ ಇಲ್ಲದ ದಿನಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದ ಮಹನೀಯರನ್ನು ಅವರು ಸ್ಮರಿಸಿಕೊಂಡರು .

ಶೈಕ್ಷಣಿಕವಾಗಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕೆಎಲ್ ಇ ವೈದ್ಯಕೀಯ ವಿಶ್ವವಿದ್ಯಾಲಯ ಹೀಗೆ ವಿಶ್ವವಿದ್ಯಾಲಯಗಳ ತ್ರಿವೇಣಿ ಸಂಗಮ ಬೆಳಗಾವಿ ಜಿಲ್ಲೆಯಾಗಿದೆ. ಸಂತರ ಪರಂಪರೆ ಶೈಕ್ಷಣಿಕ ಸೇವೆ ಸಂಗೀತ ಕ್ಷೇತ್ರ ಸಾಹಿತ್ಯ ಕ್ಷೇತ್ರ ಮುಂತಾದ ಕ್ಷೇತ್ರಗಳಲ್ಲಿ ತನ್ನದೇ ಆದ ಹಿರಿಮೆ ಗರಿಮೆಯನ್ನು ಸಾಧಿಸಿದ ಬೆಳಗಾವಿ ಜಿಲ್ಲೆ ಕನ್ನಡದ ಶಕ್ತಿ ಕೇಂದ್ರವೂ ಹೌದು ಎಂದು ಪ್ರಭಾಕರ ಕೋರೆ ನುಡಿದರು.

ಭಾಷಾ ವಾದವೇ ಬೇರೆ ಭಾಷಾ ದ್ವೇಷವೇ ಬೇರೆ ಎಂದ ಸರ್ವಾಧ್ಯಕ್ಷರು ರಾಜಕೀಯ ಕಾರಣಗಳಿಗಾಗಿ ಮತ್ತು ಪ್ರಚಾರಕ್ಕಾಗಿ ಭಾಷಾ ವಿವಾದವನ್ನು ಕೆದಕುತ್ತಿರುವುದು ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆಗಾಗಿ ನಡೆದ ನಾಟಕ. ಇದಕ್ಕಾಗಿ ಮಹತ್ವ ನೀಡುವುದು ಬೇಡ ಎಂದು ಪರೋಕ್ಷವಾಗಿ ಮಹಾರಾಷ್ಟ್ರದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, ಬೆಳಗಾವಿಯಲ್ಲಿರುವ ಮರಾಠಿಗರು ಮೂಲ ಬೆಳಗಾವಿಯವರು ಅಲ್ಲವೇ ಅಲ್ಲ. ಕಾಲ ಕಾಲಕ್ಕೆ ಉದ್ಯೋಗಕ್ಕಾಗಿ ಬೇರೆ ಬೇರೆ ಕಡೆಯಿಂದ ಬಂದು ಬೆಳಗಾವಿಯಲ್ಲಿ ಉಳಿದು ಕೊಂಡವರಿವರು. ಮುಂಬೈ ಪ್ರಾಂತದ ವ್ಯಾಪಾರಸ್ಥರೆಲ್ಲ ವ್ಯಾಪಾರ ವ್ಯವಹಾರಗಳಿಗಾಗ ಭಾಷೆಯನ್ನು ಬಳಸುತ್ತಿದ್ದರು . ಎಲ್ಲಿಂದಲೋ ಬೆಳಗಾವಿಗೆ ಬಂದು ಉಳಿದವರು ಇಂದು ಬೆಳಗಾವಿ ನಮ್ಮದು ಎಂದರೆ ಹೇಗೆ ಎಂದವರು ಪ್ರಶ್ನಿಸಿದರು.

ಮುರಗೋಡ ಮಹಾಂತ ದುರದುಂಡೇಶ್ವರಮಠದ ಶ್ರೀ ನೀಲಕಂಠೇಶ್ವರ ಮಹಾಸ್ವಾಮೀಜಿಯವರು ಮತ್ತು ಉಗಾರ ಖುರ್ದ ಮಲ್ಲಿಕಾರ್ಜುನ ಗುರುದೇವಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನ ಆರಂಭಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯನ್ನು ಸಾಲಂಕೃತ ಸಾರೋಟಿನಲ್ಲಿ ನಡೆಸಲಾಯಿತು. ಅಲಂಕೃತಗೊಂಡ ಆನೆ ಕುದುರೆಗಳು ಮೆರವಣಿಗೆಗೆ ವಿಶೇಷ ಆಕರ್ಷಣೆಗಳಾಗಿದ್ದವು ಮೆರವಣಿಗೆಯಲ್ಲಿ ನೂರಾರು ಮೀಟರ್ ಉದ್ದದ ಕನ್ನಡ ಧ್ವಜ ವನ್ನು ಶಾಲಾಮಕ್ಕಳು ಎತ್ತಿಕೊಂಡು ಮೆರವಣಿಗೆಯಲ್ಲಿ ಹೊರಟಿದ್ದು ಆಕರ್ಷಣೀಯವಾಗಿತ್ತು .ಸಮ್ಮೇಳನದ ಮಂಟಪ ಸಂಪೂರ್ಣ ಕನ್ನಡಮಯವಾಗಿತ್ತು. ಕನ್ನಡ ಧ್ವಜದ ಕೆಂಪು ಮತ್ತು ಹಳದಿ ವರ್ಣಗಳು ಎಲ್ಲ ಕಡೆ ಎದ್ದು ಕಾಣುತ್ತಿತ್ತು .

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನು ಬಳಿಗಾರ, ಪ್ರಭಾಕರ ಕೋರೆ, ಅವರ ಧರ್ಮಪತ್ನಿ ಶ್ರೀಮತಿ ಆಶಾ ಕೋರೆ , ಸಚಿವ ಶ್ರೀಮಂತ ಪಾಟೀಲ, ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲ ಮೆಟಗುಡ್ಡ ಕಳೆದ ಬಾರಿಯ ಜಿಲ್ಲಾ ಕಸಾಪ ಸಮ್ಮೇಳನ ಸರ್ವಾಧ್ಯಕ್ಷೆ ಗುರುದೇವಿ ಹುಲೆಪ್ಪನವರಮಠ, ಜಿಲ್ಲಾ ವೀರಶೈವ ಮಹಾಸಭೆಯ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಡಿಡಿಪಿಐ ಮನ್ನಿಕೇರಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲ, ಸಾಹಿತಿ ಸರಜೂ ಕಾಟ್ಕರ, ಉತ್ತರ ಕರ್ನಾಟಕ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಯ ರು ಪಾಟೀಲ, ಬೆಳಗಾವಿ ಡಿಡಿಪಿಐ ಎ ಬಿ ಪುಂಡಲೀಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ, ಜ್ಯೋತಿ ಬದಾಮಿ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಾಗವಾಡ ತಾಲ್ಲೂಕು ಕಸಾಪ ಅಧ್ಯಕ್ಷ ಸಿದಗೌಡ ಕಾಗೆ ಸ್ವಾಗತಿಸಿದರು. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ಭಾಷಣ ಮಾಡಿದರು .ಪ್ರಧಾನ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ವಂದಿಸಿದರು .

LEAVE A REPLY

Please enter your comment!
Please enter your name here

State

ಮಣ್ಣು ಆಗಿಯುವಾಗ ಗುಡ್ಡ ಕುಸಿದು ಇಬ್ಬರ ಸಾವು

ಯಮಕನಮರಡಿ: 1- ಅಕ್ರಮವಾಗಿ ಮಣ್ಣು ಅಗೆಯುವಾಗ ಗುಡ್ಡ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ ಬಿರನೊಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಕೂಲಿಯವರನ್ನು ಯಲ್ಲಪ್ಪ (27), ಹಾಲಪ್ಪ ಗೂರವ (24) ಎಂದು...

ಗೋಕಾಕ ಫಾಲ್ಸ ಸೇತುವೆ ಕಾಮಗಾರಿ ಜುಲೈ ಒಳಗೆ ಪೂರ್ಣಗೊಳಿಸಲು ಸೂಚನೆ

ಗೋಕಾಕ: ಫೆ.28- ಗೋಕಾಕ ಫಾಲ್ಸ ನಡುವೆ ನಿರ್ಮಾಣ ಹಂತದಲ್ಲಿರುವ 15.54 ಕೋಟಿ ರೂ ವೆಚ್ಚ ದ ಸೇತುವೆ ಕಾಮಗಾರಿಯನ್ನು ಜುಲೈನೊಳಗೆ ಪೂರ್ಣಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದರು. ಜಲಸಂಪನ್ಮೂಲ ಸಚಿವ ರಮೇಶ...

ಕಾಂಗ್ರೆಸ್ ನಾಯಕರ ಹೆಸರಲ್ಲಿ ವಂಚಿಸಿದ್ದ ಮಹಿಳಾ ಕಾರ್ಯಕರ್ತೆ ಉಚ್ಛಾಟನೆ

ಹುಬ್ಬಳ್ಳಿ: 1- ಪಕ್ಷದ ಮುಖಂಡರ ಹೆಸರು ಬಳಸಿಕೊಂಡು ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಡಿ.ಕೆ.ಶಿವಕುಮಾರ ಅವರ ಬಳಿ ಕಡಿಮೆ...

ಪ್ರಾಸಂಗಿಕ ಕರಾರಿನ ಮೇಲೆ ಬಸ್ ಸೌಲಭ್ಯ

ಬೆಳಗಾವಿ: ಫೆ.28 : ಚಿಕ್ಕೋಡಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಹಾಗೂ ಮಾನ್ಯತೆ ಪಡೆದ ಶಾಲಾ/ಕಾಲೇಜುಗಳಿಗೆ ಶೈಕ್ಷಣಿಕ ಪ್ರವಾಸಕ್ಕಾಗಿ ವಾಹನಗಳನ್ನು ಪ್ರಾಸಂಗಿಕ ಕರಾರಿನ ಮೇಲೆ ಪಡೆಯಲು...

National

ಕೆಂಪುಕೋಟೆ ಹಿಂಸಾಚಾರಗಳ ಹಿಂದೆ ಕೇಂದ್ರದ ಕೈವಾಡ -ಕೇಜ್ರಿವಾಲ್

ಮೀರತ್: ಫೆ 28- ಕೇಂದ್ರ ಸರ್ಕಾರ ತಂದಿರುವ ಹೊಸ ಕೃಷಿ ಕಾಯ್ದೆಗಳ ವಿರುದ್ಧ ರೈತರು ಮೂರು ತಿಂಗಳುಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ, ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ...

“ಮನ್ ಕಿ ಬಾತ್ ಸಾಕು, ಜಾಬ್ ಕಿ ಬಾತ್” ಮಾತಾಡಿ ಎಂದ ಯುವ ಪೀಳಿಗೆ

ಹೊಸದಿಲ್ಲಿ: 1- ಇಂದು ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಇನ್ನಿಲ್ಲದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯುವಜನರು ಯೂಟ್ಯೂಬ್, ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿಯವರ...

4 ರಾಜ್ಯಗಳ ಚುನಾವಣೆ ಘೋಷಣೆ

ನವದೆಹಲಿ: ಫೆ 26 - ವಿಧಾನಸಭಾ ಅವಧಿ ಪೂರ್ಣಗೊಳ್ಳಲಿರುವ ಐದು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ವೇಳಾಪಟ್ಟಿ ಪ್ರಕಟಿಸಿದೆ. ಅಸ್ಸಾಂ ರಾಜ್ಯವು ಮಾ. 27, ಏ 1 ಮತ್ತು...

ಪತ್ನಿಯು ಪತಿಯ ಆಸ್ತಿಯಲ್ಲ

ಮುಂಬೈ: ಫೆ 26- ಚಹಾ ನೀಡಲು ನಿರಾಕರಿಸುವ ಮೂಲಕ ಪತ್ನಿ ಹಲ್ಲೆ ನಡೆಸಲು ಪ್ರಚೋದನೆ ನೀಡಿದ್ದಳು ಎಂಬುದನ್ನು ಒಪ್ಪಲಾಗದು. ಪತ್ನಿಯನ್ನು ಪ್ರಾಣಿಯಂತೆ ನೋಡುವುದು ಸರಿಯಲ್ಲ, ಆಕೆ ಒಂದು ಪಶು ಅಥವಾ ವಸ್ತುವಲ್ಲ ಎಂದು...

International

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕೊರೋನ ಲಸಿಕೆಯ ನಂತರ 16 ಜನರ ಸಾವು

ಮಾಸ್ಕೋ: ಫೆ .27 - ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕರೋನ ಲಸಿಕೆ ಹಾಕಿದ ನಂತರ ಪ್ರತಿಕ್ರಿಯೆ ಉಂಟಾಗಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಸ್ವಿಸ್ ಏಜೆನ್ಸಿ ಫಾರ್ ಥೆರಪೂಟಿಕ್ ಪ್ರಾಡಕ್ಟ್ಸ್ (ಸ್ವಿಸ್ಮೆಡಿಕ್) ತಿಳಿಸಿದೆ. ವಾಚ್‌ಡಾಗ್ ವರದಿಯ...

ಅಮೆರಿಕಾದ ಸಾಲವೆಷ್ಟು ?

ವಾಷಿಂಗ್ಟನ್: ಫೆ 27- ಜಗತ್ತಿನ ದೊಡ್ಡಣ್ಣ ಎಂದೇ ಹೆಸರಾಗಿರುವ ಅಮೆರಿಕಾದ ಸಾಲ ದಿನ ದಿನಕ್ಕೂ ಹೆಚ್ಚುತ್ತಿದೆ ಎಂದು ಆ ದೇಶದ ಶಾಸನ ಸಭೆಯ ಪ್ರಮುಖ ಸದಸ್ಯ ಅಲೆಕ್ಸ್ ಮೂನಿ ಅಲ್ಲಿನ ಸರ್ಕಾರವನ್ನು ಎಚ್ಚರಿಸಿದ್ದಾರೆ. ಹೆಚ್ಚಿನ...

ಧ್ವಂಸಗೊಂಡ ಹಿಂದೂ ದೇವಾಲಯ ಕೂಡಲೇ ನಿರ್ಮಾಣಕ್ಕೆ ಪಾಕ್ ಕೋರ್ಟ ಆದೇಶ

ಇಸ್ಲಾಮಾಬಾದ: 9- ದುಷ್ಕರ್ಮಿಗಳಿಂದ ಧ್ವಂಸಗೊಂಡಿರುವ ಶತಮಾನಗಳ ಇತಿಹಾಸ ಹೊಂದಿದ್ದ ಹಿಂದೂ ದೇವಾಲಯವನ್ನು ಕೂಡಲೇ ಪುನರ್ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಪಾಕಿಸ್ತಾನ ಸುಪ್ರೀಮ ಕೋರ್ಟ ಆದೇಶಿಸಿದೆ. ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಸಮಯದ ಬಗ್ಗೆ...

ಕೋವಿಡ್ ರೋಗಿಗಳಿಗೆ ಕ್ಷಯರೋಗದ ಅಪಾಯವಿದೆ : ರಶಿಯಾ

ಮಾಸ್ಕೊ, ಫೆ 08- ಕೊರೋನಾ ವೈರಸ್ ಸೋಂಕಿಗೆ ಒಳಗಾದ ರೋಗಿಗಳಿಗೆ ಕ್ಷಯರೋಗ ಬರುವ ಸಾಧ್ಯತೆ ಹೆಚ್ಚು ಎಂದು ರಷ್ಯಾದ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. "ಕೋವಿಡ್ -19 ನಿಂದ ಬಳಲಿದ ನಂತರ ಅನೇಕ ರೋಗಿಗಳು ಶ್ವಾಸಕೋಶದಲ್ಲಿ...

Entertainment

ಇಂದು ಧಾರವಾಡದಲ್ಲಿ ಬೆಳವಡಿ ಮಲ್ಲಮ್ಮ ನಾಟಕ

ಧಾರವಾಡ: 14- ಹುಬ್ಬಳ್ಳಿಯ ಜೀವಿ ಕಲಾ ಬಳಗದ ಅಧ್ಯಕ್ಷರಾದ ಗದಿಗೆಯ್ಯಾ ಹಿರೇಮಠ ಅವರು ರಚಿಸಿ ನಿರ್ದೇಶಿಸಿದ ಐತಿಹಾಸಿಕ " ಸಮರ ಸಿಂಹಿಣಿ ಬೆಳವಡಿ ಮಲ್ಲಮ್ಮ" ನಾಟಕವು ರವಿವಾರ ದಿ ೧೪- ೨ -೨೦೨೧ ರಂದು ಪ್ರದರ್ಶನಗೊಳ್ಳಲಿದೆ. ಬೆಳವಡಿಯ ನೇತಾಜಿ ತರುಣ...

ಮಾರುಕಟ್ಟೆ ಗಿಜಿಗುಡುವಾಗ ಚಿತ್ರಮಂದಿರವೇಕೆ ಖಾಲಿ?

ಬೆಂಗಳೂರು, ಫೆ 03- “ಬಸ್ ಫುಲ್, ಮಾರ್ಕೆಟ್ ಗಿಜಿ ಗಿಜಿ ಆದರೆ ಚಿತ್ರ ಮಂದಿರಗಳೇಕೆ ಭಣಗುಡಬೇಕು” ಎಂದು ನಟ ಧ್ರುವ ಸರ್ಜಾ ಮಾಡಿರುವ ಟ್ವೀಟ್ ಗೆ ಕನ್ನಡ ಚಿತ್ರರಂಗದ ಬಹುತೇಕ ನಟ, ನಿರ್ದೇಶಕರು...

ಜ. 24ರಂದು ವರುಣ ಧವನ್-ನತಾಶಾ ಮದುವೆ

ಮುಂಬೈ, ಜ 15 - ಖ್ಯಾತ ನಿರ್ಮಾಪಕ, ನಿರ್ದೇಶಕ ಡೇವಿಡ್ ಧವನ ಪುತ್ರ ನಟ ವರುಣ ಧವನ್ ಅವರು ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ...

‘ಲಂಕಾಸುರ’ ಚಿತ್ರಕ್ಕೆ ಚಾಲನೆ

ಬೆಂಗಳೂರು, ಜ 15 - ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮದಂದು ವಿನೋದ ಪ್ರಭಾಕರ ಹಾಗೂ ಲೂಸ್ ಮಾದ ಅಭಿನಯದ ‘ಲಂಕಾಸುರ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ...

Sports

ಭಾರತಕ್ಕೆ 317 ರನ್ ಜಯ

ಚೆನ್ನೈ, ಫೆ 16- ಭಾರತದ ಬಲಿಷ್ಠ ಸ್ಪಿನ್ ಕೋಟೆಯನ್ನು ಭೇದಿಸುವಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ವಿಫಲವಾಗಿದ್ದು, ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಪಡೆ 1-1 ರಿಂದ ಸಮಬಲ ಸಾಧಿಸಿದೆ. ನಿರೀಕ್ಷೆಯಂತೆ ಮಂಗಳವಾರ ಭಾರತ...

ಗೆಲುವಿನ ಹೊಸ್ತಿಲಲ್ಲಿ ಭಾರತ

ಚೆನ್ನೈ: ಫೆ 15 - ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರ ಶತಕ ಹಾಗೂ ನಾಯಕ ವಿರಾಟ ಕೊಹ್ಲಿ ಅವರ ಅರ್ಧ ಶತಕದ ನೆರವಿನಿಂದ ಭಾರತ ನೀಡಿದ 482 ರನ್ ಗೆಲುವಿನ ಗುರಿ...

ಚೆನ್ನೈ ತಲುಪಿದ ಇಂಗ್ಲೆಂಡ್ ಕ್ರಿಕೆಟ್ ತಂಡ

ನವದೆಹಲಿ, ಜ.24 - ಫೆಬ್ರವರಿ 5 ರಿಂದ ಭಾರತ ವಿರುದ್ಧದ ಟೆಸ್ಟ್ ಸರಣಿಗಾಗಿ ವೇಗದ ಬೌಲರ್ ಜೋಫ್ರಾ ಆರ್ಚರ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಬ್ಯಾಟ್ಸ್‌ಮನ್ ರೋರಿ ಬರ್ನ್ಸ್ ಮತ್ತು ಜೊನಾಥನ್ ಟ್ರಾಟ್ ಸೇರಿದಂತೆ...

ರಹಾನೆ ಮತ್ತು ಇತರ ಆಟಗಾರರಿಗೆ ಕ್ವಾರಂಟೈನ್ ವಿನಾಯಿತಿ

ನವದೆಹಲಿ, ಜ.21- ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಗೆದ್ದು ಗುರುವಾರ ಬೆಳಿಗ್ಗೆ ಮುಂಬೈಗೆ ಮರಳಿದ ನಾಯಕ ಅಜಿಂಕ್ಯ ರಹಾನೆ ಮತ್ತು ಇತರ ನಾಲ್ಕು ಭಾರತೀಯ ಆಟಗಾರರಿಗೆ ಮಹಾರಾಷ್ಟ್ರ ಸರ್ಕಾರ ಕ್ವಾರಂಟೈನ್ ನಿಂದ ವಿನಾಯಿತಿ...