ವಿಜಯಪುರ, ೧- ಕಾರೊಂದು ರಸ್ತೆ ಬದಿಯ ಮರವೊಂದಕ್ಕೆ ಢಿಕ್ಕಿ ಹೊಡೆದು, ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ತಡರಾತ್ರಿ ವಿಜಯಪುರ ಜಿಲ್ಲೆಯ ಬಬಲೇಶ್ವರ ಹಾಗೂ ನಿಡೋಣಿ ಗ್ರಾಮದ ಮಧ್ಯೆ ನಡೆದಿದೆ.
ಬಬಲೇಶ್ವರದಿಂದ ನಿಡೋಣಿಗೆ ಕಾರಿನಲ್ಲಿ ಆರು ಜನ ಪ್ರಯಾಣಿಸುತ್ತಿದ್ದರು. ಆಗ ಈ ಅಪಘಾತ ಸಂಭವಿಸಿ ಬಬಲೇಶ್ವರದ ಗುರುರಾಜ ಪಾಟೀಲ (27), ಅತಾಲಟ್ಟಿಯ ಅಪ್ಪು ಕಾರಿ(29) ಸ್ಥಳದಲ್ಲಿಯೇ ಅಸುನೀಗಿದರು. ಇತರ ನಾಲ್ವರು ತೀವ್ರ ಗಾಯಗೊಂಡಿದ್ದು
ವಿಜಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.