ಹಾಸನ, 3- ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿದ್ದ ಮಹಿಳಾ ಅಭ್ಯರ್ಥಿಯೊಬ್ಬರನ್ನು ಪ್ರತಿಸ್ಪರ್ಧಿ ಅಭ್ಯರ್ಥಿ ಅಪಹರಿಸಿರುವ ದೂರು ದಾಖಲಾಗಿದೆ.
ಭಾಗ್ಯಶ್ರೀ ಕಾರೆಕಾರ ಗ್ರಾಮ ಪಂಚಾಯತ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದು, ಮಡೇಮಾರ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿದ್ದಾರೆ. ತೀವ್ರ ಪೈಪೋಟಿ ಇರುವದರಿಂದ ಅವರ ಪ್ರತಿಸ್ಪರ್ಧಿ ಲೋಕೇಶ ಎಂಬುವರು ಆಕೆಯನ್ನು ಅಪಹರಿಸಿದ್ದಾರೆಂದು ಭಾಗ್ಯಶ್ರೀ ಮಗ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭಾಗ್ಯಶ್ರೀ ಬೆಂಗಳೂರಿನಿಂದ ಕಳೆದ ತಿಂಗಳು ಗ್ರಾಮಕ್ಕೆ ಹಿಂತಿರುಗಿ ಬರುವಾಗ ಅಪಹರಿಸಲಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ.