ನವದೆಹಲಿ, ಫೆ 3 – ಬ್ರಿಟಿಷರು ಕೂಡ ತಮ್ಮ ಆಡಳಿತದ ವೇಳೆ ಕೃಷಿ ಕಾನೂನು ಹಿಂಪಡೆದಿದ್ದರು ನೀವು ಪ್ರತಿಷ್ಠೆ ಮಾಡಬೇಡಿ, ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಗುಲಾಮ ನಬಿ ಆಜಾದ ಕೇಂದ್ರವನ್ನು ಒತ್ತಾಯಿಸಿದರು.
ರಾಜ್ಯಸಭೆಯಲ್ಲಿ ಬುಧವಾರ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆಗೆ ಕಾರಣವಾಗಿರುವ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಧ್ವನಿ ಎತ್ತಿದ್ದು, ಬ್ರಿಟಿಷರು ಕೂಡ ರೈತರಿಗೆ ಮಣಿದು ತಮ್ಮ ಆಡಳಿತದ ವೇಳೆ ಕೃಷಿ ಕಾನೂನು ಹಿಂಪಡೆದಿದ್ದರು ಎಂದು ಆಜಾದ ನೆನಪಿಸಿದರು.
ಸಂಸತ್ತಿನಲ್ಲಿ 15 ಗಂಟೆಗಳ ಕಾಲ ಚರ್ಚಿಸಲು ಸರಕಾರವು ವಿಪಕ್ಷಗಳೊಂದಿನ ಮಾತುಕತೆಯ ವೇಳೆ ಸಮ್ಮತಿಸಿದೆ ಇದೀಗ ರಾಜ್ಯಸಭೆಯಲ್ಲಿ ಚರ್ಚೆ ಆರಂಭವಾಗಲಿದ್ದು, ಎರಡು ದಿನ ಪ್ರಶ್ನೋತ್ತರ ಅವಧಿಯನ್ನುಅಮಾನತುಗೊಳಿಸಲಾಗಿದೆ. ಚರ್ಚೆಯ ವೇಳೆ ಮಾತನಾಡಿದ ಆಜಾದ ಇದೇ 26ರ ಬಳಿಕ ನಾಪತ್ತೆಯಾದವರ ಕುರಿತು ಸಮಿತಿ ರಚಿಸಬೇಕೆಂದು ಪ್ರಧಾನಿ ಮೋದಿ ಅವರನ್ನು ಆಗ್ರಹಪಡಿಸಿ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆಯೂ ಪಟ್ಟು ಹಿಡಿದರು.