ಮೈಸೂರು, 4- ವಿವಾಹಿತನಾಗಿದ್ದರೂ ಯುವತಿಯನ್ನು ಪ್ರೀತಿಸುತ್ತಿದ್ದ ಪ್ರಥಮ ದರ್ಜೆ ಗುತ್ತಿಗೆದಾರನೊಬ್ಬ ಲಾಡ್ಜ್ ವೊಂದರಲ್ಲಿ ಅವರನ್ನು ಹತ್ಯೆ ಮಾಡಿ ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ
ಘಟನೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಕೊಪ್ಪಲು ಗ್ರಾಮದ ಎಚ್.ಎಂ.ಲೋಕೇಶ (39) ತನ್ನ ಪ್ರೇಯಸಿ ನಾಗಮಂಗಲದ ಅಮೂಲ್ಯ ಎಂಬಾಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪ್ರಥಮ ದರ್ಜೆ ಗುತ್ತಿಗೆದಾರನಾಗಿದ್ದ ಲೋಕೇಶ ಗೆ ಈಗಾಗಲೇ ಮದುವೆಯಾಗಿ ಓರ್ವ ಮಗಳಿದ್ದಳು. ಆದರೂ ಎಂಎಸ್ ಸಿ ಓದುತ್ತಿದ್ದ ಅಮೂಲ್ಯಳನ್ನು ಪ್ರೀತಿಸಿದ್ದ. ಅಮೂಲ್ಯ ತನ್ನನ್ನು ವಿವಾಹವಾಗುವಂತೆ ಲೋಕೇಶಗೆ ಒತ್ತಾಯಿಸಿದ್ದಳು. ಮೈಸೂರಿನ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿ ಅಮೂಲ್ಯಳನ್ನು ಕರೆತಂದಿದ್ದ ಲೋಕೇಶ ರೂಮ್ ನಲ್ಲೇ ಕತ್ತು ಬಿಗಿದು ಸಾಯಿಸಿದ್ದಾನೆ. ಬಳಿಕ ತನ್ನ ಸ್ನೇಹಿತನಿಗೆ ಕರೆ ಮಾಡಿ ಶವವನ್ನು ಸ್ಥಳಾಂತರಿಸಲು ಸಹಾಯ ಮಾಡುವಂತೆ ಕೇಳಿದ್ದಾನೆ. ಇದಕ್ಕೆ ಸ್ನೇಹಿತ ಒಪ್ಪದಿದ್ದಾಗ ಹೋಟೆಲ್ ರೂಮನಲ್ಲೇ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.