ಬೆಳಗಾವಿ, 6- ಟಿಳಕವಾಡಿ ಮಸಾಜ್ ಸೆಂಟರೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ ದಾಳಿ ಮಾಡಿರುವ ಸೈಬರ್ ಪೋಲೀಸರು, ಸ್ಪಾ ನಡೆಸುತ್ತಿದ್ದ ಇಬ್ಬರು ಮತ್ತು ಮೂವರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಸ್ಪಾ ನಲ್ಲಿ ಕಾಂಡೋಮ್ ಮುಂತಾದ ಸಾಮಗ್ರಿಗಳು ಕಂಡು ಬಂದಿವೆ.
ಟಿಳಕವಾಡಿಯ ಬಳಿ ಸ್ಪಾ ನಡೆಸಲು ಅನುಮತಿ ಪಡೆದು, ಅಲ್ಲಿಗೆ ಬರುವ ಪುರುಷ ಗ್ರಾಹಕರಿಗೆ ತಮ್ಮಲ್ಲೇ ಇದ್ದ ಯುವತಿಯರಿಂದ ಸೇವೆಗೆ ಮಾಡಿಸುತ್ತಿದ್ದರು. ಕೇದಾರಿ ಶಿಂಧೆ,ಮತ್ತು ಪ್ರಕಾಶ ಯಳ್ಳೂಕರ ಎಂಬವರು “ನ್ಯೂ ಗೇಟ್ ವೇ ಯೂನಿಸೆಕ್ಸ್ ಸ್ಪಾ” ಹೆಸರಿನಲ್ಲಿ ಪಾರ್ಲರ್ ನಡೆಸುತ್ತಿದ್ದರು.
ಈ ಮಸಾಜ್ ಸೆಂಟರ್ ನಲ್ಲಿ ಪುರುಷ ಗ್ರಾಹಕರಿಗೆ ಯುವತಿಯರಿಂದ ಮಸಾಜ್ ಮಾಡಿಸಿ ಆ ಮೂಲಕ ಅನೈತಿಕ ಚಟುವಟಿಕೆಗೆ ಮುನ್ನುಡಿ ಮಾಡುತ್ತಿದರು ಎನ್ನಲಾಗಿದೆ. ಆನಲೈನ್ ಚಾಟಿಂಗ್, ಡೇಟಿಂಗ್ ಮೂಲಕ ಇವರು ಗ್ರಾಹಕರನ್ನು ಸೆಳೆಯುತ್ತಿದ್ದರು ಎನ್ನುವದು ತನಿಖೆಯ ನಂತರ ಗೊತ್ತಾಗಲಿದೆ ಎಂದು ಡಿಸಿಪಿ ವಿಕ್ರಮ ಅಮಟೆ ತಿಳಿಸಿದ್ದಾರೆ
ಬೆಳಗಾವಿ ಸಿ ಇ ಎನ್ ಪೊಲೀಸ್ ಇನೆಸ್ಪೆಕ್ಟರ್ ಗಡ್ಡೇಕರ ನೇತೃತ್ವದಲ್ಲಿ ದಾಳಿ ನಡೆದಿದ್ದು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.