ಬೆಂಗಳೂರು, ಫೆ 6 – ರಾಜ್ಯದಲ್ಲಿ 1 ರಿಂದ 10 ನೇ ತರಗತಿವರೆಗೆ ಶಾಲೆಗಳನ್ನು ತೆರೆಯಬೇಕು ಎಂದು ಸಾಹಿತಿಗಳು ಮತ್ತು ಪ್ರಗತಿಪರ ಚಿಂತಕರು ಒತ್ತಾಯಿಸಿದ್ದಾರೆ.
ಜನಸಾಮಾನ್ಯರ ಒತ್ತಾಸೆಯ ಫಲವಾಗಿ ರಾಜ್ಯ ಸರ್ಕಾರ ಅರೆಮನಸ್ಸಿನಿಂದಲೇ 6 ರಿಂದ 9ನೇ ತರಗತಿಯವರೆಗೆ ವಿದ್ಯಾಗಮ ಹಾಗು 10 ಮತ್ತು 12ನೇ ತರಗತಿಗಳಿಗೆ ಅರ್ಧ ದಿನದವರೆಗೆ ತರಗತಿಗಳನ್ನು ಜನವರಿ, 1ರಿಂದ ಪಾರಂಭಿಸಿದೆ. ಶಾಲೆಗಳನ್ನು ತೆರೆಯುವುದರಿಂದ ಯಾವುದೇ ಸಮಸ್ಯೆಯೂ ಆಗುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿರುವ ನ್ಯಾಯಮೂರ್ತಿ ನಾಗಮೋಹನ ದಾಸ್, ಡಾ.ಜಿ.ರಾಮಕೃಷ್ಣ, ಡಾ.ಕೆ.ಮರಳುಸಿದ್ಧಪ್ಪ ಪ್ರೊ: ಎಸ್.ಜಿ. ಸಿದ್ಧರಾಮಯ್ಯ, ಡಾ.ವಸುಂಧರಾ ಭೂಪತಿ, ಡಾ.ವಿಜಯಮ್ಮ, ಡಾ.ಮಲ್ಲಿಕಾ ಘಂಟಿ, ಮಾವಳ್ಳಿ ಶಂಕರ, ಡಾ.ಕೆ. ಷರೀಫ, ಶಂಕರ ಹಲಗತ್ತಿ ಹಾಗೂ ಡಾ.ಸಿದ್ಧನಗೌಡ ಪಾಟೀಲ ಪತ್ರಿಕಾ ಹೇಳಿಕೆಗೆ ಸಹಿ ಮಾಡಿದ್ದಾರೆ.
ಶಾಲೆಗಳು ತೆರೆದು 5 ವಾರಗಳು ಕಳೆಯುತ್ತಾ ಬಂದರೂ ಮಕ್ಕಳಿಗೆ, ಪಾಲಕರಿಗೆ ಮತ್ತು ಶಿಕ್ಷಕರಿಗೆ ಯಾವುದೇ ಅಡ್ಡಪರಿಣಾಮಗಳು ಆಗದಿರುವುದರಿಂದ ತಜ್ಞರ ಸಲಹೆ ವೈಜ್ಞಾನಿಕವಾಗಿತ್ತೆಂಬುದು ಸ್ಪಷ್ಟವಾಗಿದೆ. ಇವೆಲ್ಲವೂ ತರಗತಿಗಳು ಸುಸೂತ್ರವಾಗಿ ನಡೆಯುತ್ತಿರುವುದು ಸಾಬೀತಾಗಿದೆ. ಕೊರೋನಾದ ಬಗ್ಗೆ ಅನಗತ್ಯ ಭಯವನ್ನು ಸೃಷ್ಟಿಸಿ ಶಾಲೆಗಳನ್ನು ನಿರಂತರವಾಗಿ ಮುಚ್ಚಿದ ಪರಿಣಾಮ ರಾಜ್ಯದಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಸಾಗಾಣಿಕೆ, ಭಿಕ್ಷಾಟನೆಯಂತಹ ಸಾಮಾಜಿಕ ಸಮಸ್ಯೆಗಳು ಹತ್ತಾರುಪಟ್ಟು ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಕಳೆದ ಎರಡು-ಮೂರು ದಶಕಗಳಿಂದ ಸಾಧಿಸಿದ ಪಗತಿ ಅಪಾಯಕ್ಕೆ ಸಿಲುಕಿದೆ. ಈ ಎಲ್ಲಾ ಸಮಸ್ಯೆಗಳನ್ನು ಮಾಧ್ಯಮಗಳು ಅಂಕಿ-ಅಂಶಗಳ ಸಮೇತ ಮನಮುಟ್ಟುವಂತೆ ವರದಿ ಮಾಡಿವೆ. ಇದಲ್ಲದೆ, ಕೂಲಿ ಕಾರ್ಮಿಕರು ಮತ್ತು ಅತ್ಯಂತ ಬಡವರ್ಗದ ಜನರು ಕೂಲಿಗೆ ಹೋದ ಸಂದರ್ಭದಲ್ಲಿ ತಮ್ಮ ಮಕ್ಕಳ ರಕ್ಷಣೆ ಮತ್ತು ಆರೈಕೆಗೆ ಪರ್ಯಾಯ ವ್ಯವಸ್ಥೆಗಳಿಲ್ಲದ ಕಾರಣ ಪರಿತಪಿಸುವಂತಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಕೊರೊನಾದಿಂದ ಬದುಕು, ಜೀವನಾಧಾರ ಮತ್ತು ನೆಮ್ಮದಿಯನ್ನು ಕಳೆದುಕೊಂಡಿರುವ ಲಕ್ಷಾಂತರ ಬಡ ಕೃಷಿ ಕೂಲಿ ಕಾರ್ಮಿಕ ಕುಟುಂಬಗಳು ಹಿಂದೆಂದೂ ಕಾಣದಂತಹ ಸಂಕಷ್ಟಕ್ಕೆ ಗುರಿಯಾಗಿವೆ ಎಂದು ಹೇಳಿದ್ದಾರೆ.
ದಿನನಿತ್ಯದ ಬದುಕು ಮತ್ತು ಜೀವನಾಧಾರಕ್ಕಾಗಿ ಹೋರಾಡುತ್ತಿವೆ. ಇಂತಹ ಸಂದರ್ಭದಲ್ಲಿ ಪೂರಕ ವ್ಯವಸ್ಥೆಗಳಾದ ಶಾಲೆ, ಆರೋಗ್ಯ ಕೇಂದ, ಪಡಿತರ ವ್ಯವಸ್ಥೆ ಎಲ್ಲವನ್ನೂ ಸಮರ್ಪಕವಾಗಿ ಮತ್ತು ಸುರಕ್ಷಿತವಾಗಿ ನಡೆಯುವಂತೆ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ತನ್ನ ಜವಾಬ್ದಾರಿ ಮೆರೆಯಬೇಕಾಗಿದೆ.
ಈ ಮಧ್ಯೆ, ಅಂಗನವಾಡಿಗಳನ್ನು ದೀರ್ಘಕಾಲದಿಂದ ಮುಚ್ಚಿರುವುದನ್ನು ಪಶ್ನಿಸಿ ಸುಪ್ರೀಮ ಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ಹೂಡಲಾಯಿತು. ಕಳೆದ ಎರಡು ತಿಂಗಳುಗಳಿಂದ ಮಕ್ಕಳು, ಪಾಲಕರು, ಎಸ್ ಡಿ ಎಮ್ ಸಿ ಹಾಗು ಹಲವಾರು ಸಾಮಾಜಿಕ ಸಂಘಟನೆಗಳು 1ರಿಂದ 12ನೇ ತರಗತಿಯವರೆಗೆ ಎಲ್ಲಾ ತರಗತಿಗಳನ್ನು ಪೂರ್ಣ ಪಮಾಣದಲ್ಲಿ ತೆರೆಯುವಂತೆ ನಿರಂತರವಾಗಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಈ ಅಂಶಗಳ ಹಿನ್ನೆಲೆಯಲ್ಲಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮುಂಬರುವ ಸೋಮುವಾರದಿಂದಲೇ 1ರಿಂದ 12ನೇ ತರಗತಿಯವರೆಗೆ ಎಲ್ಲಾ ತರಗತಿಗಳನ್ನು ಅಗತ್ಯ ಮುನ್ನೆಚ್ಚರಿಕೆ ಕಮಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಮಕ್ಕಳಿಗೆ ಕಲಿಕೆಯ ಜೊತೆಗೆ ಬಿಸಿಯೂಟ ಮತ್ತು ಪೂರಕ ರೋಗನಿರೋಧಕ ಮಾತೆಗಳನ್ನು ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.