for more videos Go Down
ಡೆಹ್ರಾಡೂನ, 7- ಉತ್ತರಾಖಂಡದಲ್ಲಿ ಹಿಮಸ್ಫೋಟ ಉಂಟಾಗಿ ಒಮ್ಮೆಲೆ ನದಿಯಲ್ಲಿ ನೀರಿನ ಪ್ರವಾಹ ಬಂದು ಸುಮಾರು 150 ಜನರು ನಾಪತ್ತೆಯಾಗಿದ್ದು ಸಾವಿಗೀಡಾಗಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ.
ಉತ್ತರಖಂಡದ ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ಹಿಮಸ್ಫೋಟಗೊಂಡಿದ್ದು, ಹಿಮನದಿ ಸ್ಪೋಟದಿಂದಾಗಿ ಧೌಲಿಗಂಗಾ ನದಿಯಲ್ಲಿನ ಹಿಮದ ನೀರು ಒಮ್ಮೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಹರಿದ್ವಾರ ಮತ್ತು ರಿಷಿಕೇಶ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಡಳಿತ ತಂಡ ಸ್ಥಳಕ್ಕೆ ತೆರಳಿದ್ದು, ಪೊಲೀಸರು ನದಿ ಪಕ್ಕದಲ್ಲಿರುವ ಜನರಿಗೆ ಎಚ್ಚರಿಕೆ ಸಂದೇಶವನ್ನು ನೀಡುತ್ತಿದ್ದಾರೆ. ಚಮೋಲಿ, ಕರ್ಣಪ್ರಯಾಗನ ಅಲಕಾನಂದ ನದಿ ತಟದಲ್ಲಿ ವಾಸವಿರುವ ಜನರು ಮನೆ ಖಾಲಿ ಮಾಡುತ್ತಿದ್ದಾರೆ.
ಧೌಲಿಗಂಗಾ ನದಿ ಪ್ರವಾಹದಿಂದ ಹಲವು ಮನೆಗೆ ಹಾನಿಯಾಗಿದೆ. ಋಷಿಗಂಗಾ ವಿದ್ಯುತ್ ಸ್ಥಾವರ ನಾಶವಾಗಿದ್ದು, ಎನ್ ಟಿ ಪಿಸಿಯ ತಪೋವನ ವಿದ್ಯುತ್ ಸ್ಥಾವರಕ್ಕೆ ಕೂಡ ಭಾರಿ ಹಾನಿಯಾಗಿದೆ. ಈ ವರೆಗೆ ಸುಮಾರು 150 ಜನ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಪ್ರವಾಹದಲ್ಲಿ ಹಲವು ಸೇತುವೆಗಳು ಸಹ ಕೊಚ್ಚಿ ಹೋಗಿವೆ. ಹಿಮಪ್ರವಾಹದಲ್ಲಿ ಹಲವು ಕಾರ್ಮಿಕರು ಕೊಚ್ಚಿಹೋಗಿರುವ ಬಗ್ಗೆ ಅನುಮಾನ ಉಂಟಾಗಿದೆ.
ಸ್ಥಳಕ್ಕೆ ಎಸ್ಡಿಆರ್ಎಫ್, ಐಟಿಬಿಪಿ ಸಿಬ್ಬಂದಿ ಧಾವಿಸಿದ್ದಾರೆ.