ನವದೆಹಲಿ: ಫೆ 09- ಸಾರ್ವಜನಿಕವಾಗಿ ಹಾಗೂ ಸಂಸತ್ ಗೆ ಗುಲಾಂ ನಬಿ ಆಜಾದ ನೀಡಿರುವ ಕೊಡುಗೆ ಅಪಾರ ಎಂದು ಪ್ರದಾನಿ ಮೋದಿ ಬಣ್ಣಿಸಿದ್ದಾರೆ.
ರಾಜ್ಯಸಭೆಯಲ್ಲಿ ಗುಲಾಮ ನಬಿ ಆಜಾದ, ಶಂಶರ ಸಿಂಗ್, ಮಿರ್ ಮೊಹಮ್ಮದ ಫಯಾಜ ಮತ್ತು ನಾದಿರ ಅಹ್ಮದ ಅವರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾವುಕರಾಗಿ ವಿದಾಯದ ನುಡಿಗಳನ್ನಾಡಿದ ಪ್ರಧಾನಿ, ‘ಗುಲಾಂ ನಬಿ ಅಜಾದ ನಂತರ, ಈ ಹುದ್ದೆಯನ್ನು ಯಾರು ವಹಿಸಿಕೊಂಡರೂ, ಗುಲಾಂ ನಬಿ ಅವರನ್ನು ಸರಿಗಟ್ಟಲು ಸಾಕಷ್ಟು ಕಷ್ಟವಾಗುತ್ತದೆ ಎಂದು ನಾನು ಕಳವಳ ವ್ಯಕ್ತಪಡಿಸುತ್ತೇನೆ ಎಂದರು.
ಗುಲಾಂ ನಬಿ ಆಜಾದ ಅವರನ್ನು ನಿಜವಾದ ಸ್ನೇಹಿತ ಎಂದು ಪರಿಗಣಿಸಿದ್ದೇನೆ ಎಂದ ಪ್ರಧಾನಿ ಮೋದಿ, “ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾಗುವ ವ್ಯಕ್ತಿಗೆ ಇರುವ ಕಠಿಣ ಸವಾಲೆಂದರೆ ಗುಲಾಮ್ ನಬಿ ಜಿ ಅವರನ್ನು ಹೊಂದಿಸುವುದು. ಏಕೆಂದರೆ ಅವರು ತಮ್ಮ ಪಕ್ಷದ ಬಗ್ಗೆ ಮಾತ್ರವಲ್ಲದೆ ದೇಶ ಮತ್ತು ಸದನದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದರು” ಎಂದು ಅವರು ತಿಳಿಸಿದರು.
“ಅವರು ಆಡಳಿತ ಮತ್ತು ವಿರೋಧ ಪಕ್ಷದ ಅನುಭವವನ್ನು ಹೊಂದಿದ್ದರಿಂದ ನಾನು ಅವರ ಸಲಹೆಯನ್ನು ಅನುಸರಿಸಿದ್ದೇನೆ. ವರ್ಷಗಳ ಹಿಂದೆ, ಒಂದು ದಿನ ನಾನು ಚುನಾವಣಾ ರಾಜಕೀಯದಲ್ಲಿ ಸಕ್ರಿಯನಾಗಿರದಿದ್ದಾಗ ಮತ್ತು ಕೆಲವು ಕೆಲಸಗಳಿಗಾಗಿ ಸಂಸತ್ತಿಗೆ ಬಂದಾಗ, ನಾವು ಲಾಬಿಯಲ್ಲಿ ಸಂಭಾಷಣೆ ನಡೆಸುತ್ತಿದ್ದೆವು, ಅಲ್ಲಿದ್ದ ಪತ್ರಕರ್ತರು ನಮ್ಮ ಮಾತುಕತೆಯ ಬಗ್ಗೆ ಕುತೂಹಲ ವ್ಯಕ್ತಪಡಿಸಿದಾಗ, ‘ನಾವು ಟಿವಿ ಚಾನೆಲ್ಗಳು ಮತ್ತು ಬೀದಿಗಳಲ್ಲಿ ಹೋರಾಡುವುದನ್ನು ನೀವು ನೋಡಿರಬಹುದು ಆದರೆ ಈ ಸಂಕೀರ್ಣದಲ್ಲಿ ನಾವೆಲ್ಲರೂ ಒಂದೇ. ನಾವು ತುಂಬಾ ಆಪ್ತರಾಗಿದ್ದೇವೆ, ನಾವು ಸಂಪರ್ಕದಲ್ಲಿರದ ಸಂದರ್ಭವೂ ಇಲ್ಲ.” ಎಂದು ಗುಲಾಂ ನಬಿ ಆಜಾದ ಉತ್ತರ ನೀಡಿದ್ದರು” ಎಂದು ಪ್ರಧಾನಿ ನೆನಪಿಸಿಕೊಂಡರು.
ಸದಸ್ಯ ಶಂಶರ ಸಿಂಗ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ಪ್ರಧಾನಿ, “ನಾನು ಅವರನ್ನು ದಶಕಗಳಿಂದ ತಿಳಿದಿದ್ದೇನೆ, ನಾವು ಒಟ್ಟಿಗೆ ಸ್ಕೂಟರ್ನಲ್ಲಿ ಪ್ರಯಾಣಿಸಿದ್ದೇವೆ. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ ಯುವಕರಲ್ಲಿ ಶಂಶರ ಕೂಡ ಇದ್ದರು. ರಾಜ್ಯಸಭೆಯಲ್ಲಿ ಅವರ ಹಾಜರಾತಿ ಶೇಕಡಾ 96 ರಷ್ಟಿದೆ ಎಂದು ಹೇಳಿದರು.