ನವದೆಹಲಿ: ಫೆ 12 – ಸಾಮಾಜಿಕ ಜಾಲತಾಣಗಳು, ಅದರಲ್ಲೂ ಟ್ವಿಟ್ಟರನಲ್ಲಿ ಪ್ರಸಾರವಾಗುತ್ತಿರುವ ನಕಲಿ ಸುದ್ದಿ ಮತ್ತು ಪ್ರಚೋದಕ ಸಂದೇಶಗಳನ್ನು ಪರಿಶೀಲಿಸಲು ಯಾಂತ್ರಿಕ ವ್ಯವಸ್ಥೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರ ಮತ್ತು ಟ್ವಿಟರ್ಗೆ ಸುಪ್ರೀಮ ಕೋರ್ಟ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಸಾಮಾಜಿಕ ಮಾಧ್ಯಮ ನಿಯಂತ್ರಣ ಕೋರಿ ಭಾರತೀಯ ಜನತಾ ಪಕ್ಷದ ಮುಖಂಡ ವಿನಿತ ಗೋಯೆಂಕಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ , ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಟ್ವಿಟರ್ನಲ್ಲಿ ದ್ವೇಷಪೂರಿತ ಜಾಹೀರಾತುಗಳು ಮತ್ತು ಭಾರತ ವಿರೋಧಿ ವಿಷಯವನ್ನು ಬಿಂಬಿಸಲಾಗುತ್ತಿದೆ. ಪ್ರತ್ಯೇಕತಾವಾದಿಗಳನ್ನು ಒಟ್ಟುಗೂಡಿಸಲು, ಸಮಾಜದ ಕೆಲವು ವರ್ಗಗಳಲ್ಲಿ ಭೀತಿ ಉಂಟುಮಾಡಲು, ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಟ್ವಿಟರ್ ಅನ್ನು ಬಳಸಲಾಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಪ್ರಖ್ಯಾತ ವ್ಯಕ್ತಿಗಳು ಮತ್ತು ಗಣ್ಯರ ಹೆಸರಿನಲ್ಲಿ ನೂರಾರು ನಕಲಿ ಟ್ವಿಟರ್ ಹ್ಯಾಂಡಲ್ಗಳು ಮತ್ತು ಫೇಸ್ಬುಕ್ ಖಾತೆಗಳಿದ್ದು, ಇದರಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.