ಬೆಂಗಳೂರು: 12- 6 ರಿಂದ 8 ನೇ ತರಗತಿಗಳನ್ನು ಕೂಡ ಶೀಘ್ರವೇ ಆರಂಭಿಸಲು ಚಿಂತನೆ ನಡೆದಿದ್ದು, ಮಾರ್ಚ 1 ರಿಂದ 1-5 ನೇ ತರಗತಿಯನ್ನು ಕೂಡ ಆರಂಭಿಸಲು ಯೋಜಿಸಲಾಗಿದೆ.
ಫೆಬ್ರವರಿ 12 ರಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಟಾಸ್ಕ್ ಫೋರ್ಸ್ ಸಭೆ ನಡೆಯಲಿದ್ದು, ಸಭೆಯಲ್ಲಿ ಶಾಲೆ ಆರಂಭದ ಕುರಿತಾಗಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಆರರಿಂದ ಎಂಟನೇ ತರಗತಿಗಳನ್ನು ಶೀಘ್ರವೇ ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಇದೇ ವೇಳೆ 1 -5 ನೇ ತರಗತಿಗಳನ್ನು ಆರಂಭಿಸುವ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಒಂದರಿಂದ ಐದನೇ ತರಗತಿ ಗಳನ್ನು ಮಾರ್ಚ್ 1ರಿಂದ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದರೆ, ಮಕ್ಕಳ ಬಹುತೇಕ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರೆಯುತ್ತಿದ್ದಾರೆ. ಮಕ್ಕಳ ವರುಷ ಹಾಳಾದರೂ ಪರವಾಗಿಲ್ಲ, ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ” ಎಂದಿದ್ದರು.