ಚೆನ್ನೈ: 13- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ದ ದೇಶದಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ಈ ಮಧ್ಯೆ ತಮಿಳುನಾಡು, ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂದಿನ ಕೆಲವೆ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಕೇಂದ್ರದ ಆಡಳಿತ ಪಕ್ಷವಾದ ಬಿಜೆಪಿಯು ತಯಾರಿಯನ್ನು ಮಾಡುತ್ತಿದೆ. ಅದರಂತೆ ಪ್ರಧಾನಿ ನಾಳೆ ಭಾನುವಾರ ತಮಿಳುನಾಡಿಗೆ ತೆರಳುತ್ತಿದ್ದಾರೆ. ಆದರೆ ಎಂದಿನಂತೆ ಟ್ವಿಟ್ಟರ್ನಲ್ಲಿ ತಮಿಳುನಾಡಿನ ಜನರು ಪ್ರಧಾನಿ ಮೋದಿಗೆ “ ವಾಪಸು ಹೋಗು ಮೋದಿ ” ಎಂದು ಎಂದು ಹೇಳಿದ್ದಾರೆ.
ಟ್ವಿಟ್ಟರ್ನಲ್ಲಿ ಈಗಾಗಲೆ #GoBackModi ಟ್ರೆಂಡ್ ಆಗಿದ್ದು, ದೇಶದಾದ್ಯಂತ ಎರಡನೆ ಸ್ಥಾನದಲ್ಲಿದೆ. ತಮಿಳು ನಟಿ ಓವಿಯಾ ಮೋದಿ ವಾಪಾಸು ಹೋಗು ಎಂದು ಟ್ವೀಟ್ ಮಾಡಿದ್ದಾರೆ. ಓವಿಯಾ ಅವರು ಕನ್ನಡದ ಪ್ರಮುಖ ನಟ ಯಶ್ ನಾಯಕ ನಟನಾಗಿ ನಟಿರುವ ಕಿರಾತಕ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೆ ಅವರು ತಮಿಳು, ತೆಲುಗು, ಮಳಯಾಲಂ ಚಿತ್ರಗಳಲ್ಲೂ ನಟಿಸಿದ್ದರು.
ಹೋರಾಟಗಾರ್ತಿ ಮೀನಾ ಕಂದಸ್ವಾಮಿ ಅವರು, “ಮೋದಿ ವಾಪಾಸು ಹೋಗು ಎನ್ನುವುದರಲ್ಲಿ ನಾವು ಒಂದು ದಿನ ಮುಂದಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
ಹೋರಾಟಗಾರ್ತಿ ಮೀನಾ ಕಂದಸ್ವಾಮಿ ಅವರು, “ಮೋದಿ ವಾಪಾಸು ಹೋಗು ಎನ್ನುವುದರಲ್ಲಿ ನಾವು ಒಂದು ದಿನ ಮುಂದಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
ಅಕ್ಷಯ ಮಣಿ ಅವರು ಫೆಬ್ರವರಿ 14 ಪ್ರೇಮಿಗಳ ದಿನವು ತಮಿಳುನಾಡಿನ ಜನರಿಗೆ ಕರಾಳ ದಿನವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅಮಾನುಲ್ಲಾ ಅವರು, 56 ಇಂಚು ಸುಮ್ಮನೆ ಹಾಳು ಎಂದು ಟ್ವೀಟ್ ಮಾಡಿದ್ದಾರೆ.
ಟ್ರೋಲ್ ಮಾಫಿಯಾ ಎಂಬ ಟ್ವಿಟ್ಟರ್ ಹ್ಯಾಂಡಲ್ ತಮಿಳು ಸಿನಿಮಾ ಹಾಸ್ಯ ದೃಶ್ಯಕ್ಕೆ ಮೋದಿಯ ಮುಖವನ್ನು ಎಡಿಟ್ ಮಾಡಿ, ಪ್ರಧಾನಿ ಮೋದಿ ತಮಿಳು ನಾಡಿಗೆ ಬರುವಾಗೆಲ್ಲಾ ಅಲ್ಲಿನ ಜನರು ಹೇಗೆ ಸ್ವಾಗತಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದೆ.