ಬೆಳಗಾವಿ: 14- ಮನೆಯಲ್ಲಿ ಜಗಳಾಡಿ ತನ್ನಿಬ್ಬರು ಮಕ್ಕಳೊಂದಿಗೆ ಮೂರು ದಿನಗಳಿಂದ ಕಾಣೆಯಾಗಿದ್ದ ಮಹಿಳೆ ಮಕ್ಕಳೊಂದಿಗೆ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೋಕಾಕ ತಾಲೂಕಿನ ಅರಭಾಂವಿಯ ಸಾವಿತ್ರಿ ರಾಜು ಬನಾಜ (೩೦) ತನ್ನ ಮಕ್ಕಳಾದ ಪೂಜಾ(೪) ಮತ್ತು ಲಕ್ಷ್ಮೀ (೨) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಜಗಳವಾಡಿ, ಜೀವನದಲ್ಲಿ ಜಿಗುಪ್ಸೆಗೊಂಡು ಮೂರು ದಿನಗಳಿಂದ ಕಾಣೆಯಾಗಿದ್ದರು.
ನಾಪತ್ತೆ ಆಗಿರುವ ಬಗ್ಗೆ ಗಂಡನ ಮನೆಯವರು ಶನಿವಾರ ದೂರು ನೀಡಿದ್ದರು. ರವಿವಾರ ಬೆಳಿಗ್ಗೆ ಘಟಪ್ರಭಾ ನದಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಈ ಕುರಿತು ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.