ಸವದತ್ತ: 15- ಪ್ರೇಮಿಗಳ ದಿನವಾದ ನಿನ್ನೆ ಯುವ ಪ್ರೇಮಿಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ.
ಹಂಚಿನಾಳ ಗ್ರಾಮದ ಆಸೀಫ ಜವಳಿ (21) ಹಾಗು ಮಾಸಾಬಿ (19) ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಗ್ರಾಮದ ಟ್ರ್ಯಾಕ್ಟರ್ ಶೆಡ್ನಲ್ಲಿ ಈ ಪ್ರೇಮಿಗಳು ನೇಣು ಹಾಕಿಕೊಂಡಿದ್ದು ನಿನ್ನೆ ಸಂಜೆ ಈ ಘಟನೆ ಬೆಳಕಿಗೆ ಬಂದಿದೆ.
ಆಸೀಫ ಹಾಗು ಮಾಸಾಬಿ ಪ್ರೀತಿಸುತ್ತಿದ್ದರು. ಆದರೆ ಮಾಸಾಬಿ ಮನೆಯವರು ಅವಳ ಮದುವೆಯನ್ನು ಬೇರೆ ಹುಡುಗನ ಜೊತೆ ಮಾಡಲು ನಿರ್ಧರಿಸಿ, ಮಾರ್ಚ 8 ರಂದು ವಿವಾಹಕ್ಕೆ ದಿನಾಂಕವನ್ನೂ ನಿಶ್ಚಯಿಸಿದ್ದರು. ಇದರಿಂದ ಮನನೊಂದು ಆಸೀಫ ಮತ್ತು ಮಾಸಾಬಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.