ನವದೆಹಲಿ, ಫೆ 16 – ದೇಶದಲ್ಲಿ ಪೆಟ್ರೋಲ್ ದರ ಲೀಟರ್ ಗೆ 26-30 ಪೈಸೆ ಹೆಚ್ಚಳವಾಗಿದ್ದು ನಿತ್ಯವೂ ನಾಗರಿಕರ ಜೇಬು ಸುಡುತ್ತಿದೆ. ಜೊತೆಗೆ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತಿದೆ.
ದೇಶಾದ್ಯಂತ ಪೆಟ್ರೋಲ ಮತ್ತು ಡೀಸೆಲ್ ದರ ಗಳು ಸತತ ಎಂಟನೇ ದಿನವೂ ಏರಿಕೆ ಕಂಡಿವೆ. ಕಳೆದ ಎಂಟು ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 2.36 ರೂ., ಡೀಸೆಲ್ ದರ ಲೀಟರ್ ಗೆ 2.91 ರೂ ಹೆಚ್ಚಳವಾಗಿದೆ.
ಕೆಲವು ನಗರಗಳಲ್ಲಿ ನೂರರಗಡಿ ತಲುಪಿದ್ದು, ಜನಸಾಮಾನ್ಯರ ಹಾಹಾಕಾರವೂ ಹೆಚ್ಚಾಗುತ್ತಿದೆ.