ಮುಂಬೈ: 17- ಮಾನವೀಯತೆ ಮತ್ತೊಮ್ಮೆ ಗೆದ್ದಿದ್ದೆ. 5 ತಿಂಗಳ ಮಗು ತೀವ್ರ ಆರೋಗ್ಯ ಸಮಸ್ಯೆಯಿಂದ ಸಾವು-ಬದುಕಿನ ಅಂಚಿನಲ್ಲಿದೆ, ಚಿಕಿತ್ಸೆಗೆ ಬೇಕಾಗಿದ್ದು 16 ಕೋಟಿ ರೂಪಾಯಿ, ತಂದೆ ತಾಯಿ ಮಧ್ಯಮ ಆದಾಯದವರು. ಆದರೆ ಅವಶ್ಯವಾಗಿದ್ದ ಮೊತ್ತ ಸಂಗ್ರಹವಾಗಿದೆ.
ಥ್ಯಾಂಕ್ಸ್ ಟೂ “ಸೋಶಿಯಲ್ ಮೀಡಿಯಾ” ಸಾಮಾಜಿಕ ಜಾಲತಾಣಗಳಲ್ಲಿ ನೆರವು ಕೋರಿ ಮಾಡಿದ ವಿನಂತಿಯಿಂದ ಮಗುವಿನ ಚಿಕಿತ್ಸೆಗೆ ಬೇಕಾದ ಹಣವನ್ನು ಜನರಿಂದ ಸಂಗ್ರಹವಾಗಿದೆ.
ಅಪರೂಪದ ಮೂಳೆ-ಮಾಂಸದ ಸಮಸ್ಯೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ನೆರವಿನ ಮಹಾಪೂರವೇ ಹರಿದು ಬಂದಿದ್ದರಿಂದ ಚಿಕಿತ್ಸೆಗೆ ಅಗತ್ಯವಾದ 16 ಕೋಟಿ ರೂ. ಬಂದಿವೆ. ಸಹಾಯಹಸ್ತ ಚಾಚಿದ ಮಹನಿಯರಿಗೆ ಪೋಷಕರು ಧನ್ಯವಾದ ಹೇಳಿದ್ದಾರೆ.
5 ತಿಂಗಳ ಹಸುಗೂಸು ಟಿರಾ ಕಾಮತ ಹುಟ್ಟುವಾಗಲೇ ಮಾಂಸ ಖಂಡಗಳ ಸಮಸ್ಯೆಯಿಂದ ಬಳಲುತ್ತಿದ್ದು, ಇದರ ಚಿಕಿತ್ಸೆಗೆ 22 ಕೋಟಿ ರೂಪಾಯಿ ಮೌಲ್ಯದ ಇಂಜೆಕ್ಷನ್ ನೀಡಿದರೆ ಮಾತ್ರ ಬದುಕುಳಿಯುವ ಸಾಧ್ಯತೆ ಇತ್ತು. ಆದರೆ ಮಧ್ಯಮ ವರ್ಗದ ಮಗುವಿನ ತಾಯಿ ತಂದೆ ಪ್ರಿಯಾಂಕ ಮತ್ತು ಮಿಹಿರ್ ದಂಪತಿಗೆ ಇಷ್ಟು ದೊಡ್ಡ ಮೊತ್ತ ಹೊಂದುವದು ಅಸಾಧ್ಯವಾಗಿತ್ತು. ತಂದೆ ತಾಯಿ ನೆರವಿಗಾಗಿ ಮೊರೆ ಹೋದಾಗ ಸಾಮಾಜಿಕ ಜಾಲತಾಣದಲ್ಲಿ ದೇಶ-ವಿದೇಶಗಳಿಂದ 100 ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗೆ ಸಾವಿರಾರು ಮಂದಿ ನೆರವು ನೀಡಿದ್ದಾರೆ. ಕೇಂದ್ರ ಸರಕಾರವು ಔಷಧಿ, ಇಂಜೆಕ್ಷನ್ ಆಮದು ಮೇಲಿನ 6 ಕೋಟಿ ರೂಪಾಯಿ ತೆರಿಗೆ ಮನ್ನಾ ಮಾಡಿ ತನ್ನ ಪಾಲನ್ನೂ ನೀಡಿತ್ತು.
ಭಾರತ ಮಾತ್ರವಲ್ಲದೇ ಕೆನಡಾ, ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ 10 ದೇಶಗಳಿಂದ ಸುಮಾರು 87 ಸಾವಿರ ಜನರು ನೆರವು ನೀಡಿದ್ದಾರೆ. ಕ್ರೌಡ್ ಫಂಡಿಂಗ್ ಇತಿಹಾಸದಲ್ಲೇ ಅತೀ ದೊಡ್ಡ ಅಭಿಯಾನ ಇದಾಗಿದ್ದು, ಮಗು ಆರೋಗ್ಯವಾಗಿರಲಿ ಎಂದು ಹಾರೈಸೋಣ.