ಬೆಂಗಳೂರು: ಫೆ 17 – ಚಿತ್ರೀಕರಣವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ರಾಘವೇಂದ್ರ ರಾಜಕುಮಾರ ಚೇತರಿಸಿಕೊಂಡಿದ್ದಾರೆ.
ಆರೋಗ್ಯದಲ್ಲಿ ವ್ಯತ್ಯಯವಾದ ಕಾರಣ ಫೆ. 16ರ ಮಂಗಳವಾರ ರಾತ್ರಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಚೇತರಿಸಿಕೊಂಡಿರುವ ಕಾರಣ ಇಂದು ಬಿಡುಗಡೆಯಾಗಲಿದ್ದಾರೆ.
ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ರಾಘವೇಂದ್ರ ರಾಜ್ಕುಮಾರ ಅವರಿಗೆ ತೀವ್ರ ಆಯಾಸ ಉಂಟಾಗಿ, ಅನಾರೋಗ್ಯ ಕಂಡುಬಂದಿತ್ತು, ಆಗ ಕೂಡಲೇ ಅವರು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದರು.
‘ತಂದೆ ಆರಾಮವಾಗಿದ್ದಾರೆ, ಶೂಟಿಂಗ್ ಇತ್ತಲ್ಲ ಅಲ್ಲಿ ತುಸು ಸುಸ್ತಾಗಿದ್ದ ಕಾರಣ. ಮುನ್ನೆಚ್ಚರಿಕೆ ತೆಗೆದುಕೊಂಡು ದಾಖಲು ಮಾಡಿದ್ದೇವೆ. ಸಾಮಾನ್ಯ ತನಿಖೆ ನಡೆದಿವೆ. ಏನೂ ಸಮಸ್ಯೆ ಇಲ್ಲ, ಇಂದು ಬಿಡುಗಡೆ ಮಾಡುತ್ತಾರೆ’ ಎಂದು ರಾಘವೇಂದ್ರ ರಾಜಕುಮಾರ ಪುತ್ರ ವಿನಯ ರಾಜಕುಮಾರ ಹೇಳಿದ್ದಾರೆ.
ನಟ ಶ್ರೀಮುರಳಿ ಸಹ ರಾಘವೇಂದ್ರ ರಾಜ್ಕುಮಾರ ಆರಾಮವಾಗಿದ್ದಾರೆ. ಅವರೊಡನೆ ಮಾತನಾಡಿದೆ. ರಾಜ್ಯದ ಜನರ ಪ್ರೀತಿ ಅವರ ಮೇಲೆ, ಅವರ ಕುಟುಂಬದ ಮೇಲೆ ಇದೆ, ಹೀಗಿದ್ದಾಗ ಅವರಿಗೆ ಏನೂ ಆಗಲು ಸಾಧ್ಯವಿಲ್ಲ’ ಎಂದಿದ್ದಾರೆ.
ರಾಘವೇಂದ್ರ ರಾಜಕುಮಾರ ಅವರಿಗೆ ಕೆಲವು ತಿಂಗಳ ಹಿಂದೆ ತೀವ್ರ ಅನಾರೋಗ್ಯವಾಗಿತ್ತು, ಪಾಶ್ವ೯ ವಾಯುಗೆ ಗುರಿಯಾಗಿದ್ದ ಅವರಿಗೆ ವಿದೇಶದಲ್ಲಿ ಚಿಕಿತ್ಸೆ ನೀಡಲಾಯಿತು. ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ.