ಬೆಳಗಾವಿ: 19- ಬೆಳಗಾವಿಯ ಸೈಬರ್ ಕ್ರೈಂ ಪೊಲೀಸರು ಎರಡು ಪ್ರದೇಶಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿ ಸುಮಾರು ಒಂದು ಕೆಜಿ ಆಫೀಮು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.
ವಶಪಡಿಸಿಕೊಂಡಿರುವ ಮಾದಕ ವಸ್ತುವಿನ ಮೌಲ್ಯ ಅಂತಾರರಾಷ್ಟ್ರೀಯ ಮಟ್ಟದಲ್ಲಿ 20 ಲಕ್ಷ ರೂಪಾಯಿಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಬೆಳಗಾವಿಯ ಹೊನಗಾ ಮತ್ತು ಚನ್ನಮ್ಮ ನಗರಗಳಲ್ಲಿ ದಾಳಿ ಮಾಡಿ ಒಂದು ಕೆ.ಜಿಗೂ ಹೆಚ್ವು ಆಫೀಮು ವಶಪಡಿಸಿಕೊಳ್ಳಲಾಗಿದ್ದು,ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ವಿಕ್ರಂ ಆಮ್ಟೆ ತಿಳಿಸಿದರು.
ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಬಿ.ಆರ್. ಗಡ್ಡೇಕರ ನೇತ್ರತ್ವದ ತಂಡವು, ಖಚಿತ ಮಾಹಿತಿ ಆಧಾರದ ಮೇಲೆ ಹೊನಗಾ ಗ್ರಾಮದ
ಪಕ್ಕದಲ್ಲಿರುವ ರಾಜಸ್ತಾನ ದಾಬಾದಲ್ಲಿ ಇರುವ ಪಾನಶಾಪ್ದಲ್ಲಿ ಹಾಗೂ ಬೆಳಗಾವಿ ಚನ್ನಮ್ಮ ನಗರ ದಲ್ಲಿ ದಾಳಿ ಮಾಡಿ ಆರೋಪಿತರಾದ ಬರಕತಖಾನ್ ಎಲ್ಲಾಖಾನ, 30 ವರ್ಷ, ಗೋಕುಲ ರೋಡ ಮುರಾರ್ಜಿ ನಗರ ಹುಬ್ಬಳ್ಳಿಯ 25 ವರುಷದ ಕಮಲೇಶ ಸುರಜನರಾಮ ಬೆನಿವಾಲಾ ಹಾಗು ರಾಣಿ ಚನ್ನಮ್ಮ ನಗರದ, 21 ವರುಷದ ಸರವನ ಅಲಿಯಾಸ್ ಸಾವರಾರಾಮ ಅಶುರಾಮ ಅಸನೊಣ, ಇವರನ್ನು ಬಂಧಿಸಿ ಇವರಿಂದ 1 ಕೆ.ಜಿ 15 ಗ್ರಾಂ ತೂಕದ ಅಫಿಮು ವಶಪಡಿಸಿಕೊಳಲಾಗಿದೆ.
ಈ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು ಶ್ಲಾಘಿಸಿ ತಂಡಕ್ಕೆ ಬಹುಮಾನವನ್ನು ಘೋಷಿಸಿರುತ್ತಾರೆ.