ಬೆಳಗಾವಿ: 19- ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷ ನೀಡಿ ಮೋಸ ಮಾಡುತ್ತಿದ್ದ ಬೆಳಗಾವಿಯ ಎರಡು ನೋಂದಣಿಯಾಗದಿರುವ ಏಜೆನ್ಸಿಗಳ ಮೇಲೆ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ, ಓರ್ವನನ್ನು ಬಂಧಿಸಿದ್ದು ಮತ್ತೋರ್ವ ಫರಾರಿಯಾಗಿದ್ದಾರೆ.
ಅದರಂತೆ
ಹಲವು ಜನರ ಪಾಸ್ಪೋರ್ಟ ದಾಖಲೆ ಸಮೇತ ವಿವಿಧ ವಸ್ತುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಹೊರದೇಶಗಳಲ್ಲಿ ನೌಕರಿ ಆಮಿಷ ಒಡ್ಡಿ ಲಕ್ಷಾಂತರ ರೂ. ವಸೂಲಿ ಮಾಡಿ ಮೋಸ ಮಾಡುತ್ತಿದ್ದ ಬೆಳಗಾವಿ ದರಬಾರ ಗಲ್ಲಿಯ “ಟ್ರಾವೆಲ್ ವರ್ಲ್ಡ್ “ಮತ್ತು ಶೆಟ್ಟಿ ಗಲ್ಲಿಯ ” ಸ್ಟ್ಯಾಂಡರ್ಡ್ ಗ್ರೂಪ್ ಆಫ್ ಎಂಟರ್ಪ್ರೈಸಸ್” ಕಚೇರಿಗಳ ಮೇಲೆ ದಾಳಿ ಮಾಡಿದ ಪೊಲೀಸರು, ಪಾಸ್ಪೋರ್ಟ, ಲ್ಯಾಪಟಾಪ್ ದಾಖಲೆ ಸಹಿತ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ದರಬಾರಗಲ್ಲಿಯ ಟ್ರಾವೆಲ್ ವರ್ಲ್ಡ್ ಮತ್ತು ಶಾಹುನಗರ ನಿವಾಸಿ ಇಮ್ತಿಯಾಜ ಅಸ್ತು ಪಟೇಲ ಯರಗಟ್ಟಿ ಎಂಬುವವನ್ನು ಬಂಧಿಸಿದ್ದಾರೆ. ಶೆಟ್ಟಿ ಗಲ್ಲಿಯ ಸ್ಟ್ಯಾಂಡರ್ಡ್ ಗ್ರೂಪ್ ಆಫ್ ಎಂಟರ್ಪ್ರೈಸಸ್ ನ ಫಾರೂಕ ಪರಾರಿಯಾಗಿದ್ದು, ಶೋಧ ನಡೆಸಿದ್ದಾರೆ.
ಈ ಕುರಿತು ಬೆಳಗಾವಿ ಡಿಸಿಪಿ ವಿಕ್ರಮ ಆಮ್ಟೆ ಅವರು ಮಾಹಿತಿ ನೀಡಿದ್ದು, ಹೊರದೇಶಗಳಲ್ಲಿ ನೌಕರಿ ಆಮಿಷ ಒಡ್ಡಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ಮೋಸ ಮಾಡುತ್ತಿದ್ದ ಈ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಈ ಏಜೆನ್ಸಿಗಳು ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ. ಏಜನ್ಸಿಗಳು ಜನರಿಂದ ಸಂಗ್ರಹಿಸಿದ 314 ಪಾಸ್ಪೋರ್ಟ್ ಸಿಕ್ಕಿವೆ.
ಇಮ್ತಿಯಾಜ ಯರಗಟ್ಟಿ ಎಂಬುವವನನ್ನು ಬಂಧಿಸಿ ಅವನ ಕಚೇರಿಯಿಂದ 1 ಲಕ್ಷ 13,000 ರೂಪಾಯಿ, ಪಾಸಪೋರ್ಟಗಳು, ಕಂಪ್ಯೂಟರ್, ಲ್ಯಾಪ್ಟಾಪ್, ಪ್ಯಾಂಪ್ಲೆಟ್ಸ್, ವಿಸಿಟಿಂಗ್ ಕಾರ್ಡಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಬ್ಬ ಆರೋಪಿ ಕುಂದಾಪುರ ಮೂಲದ ಉಮರ ಫಾರುಕ ಅಬ್ದುಲ ಹಮೀದ ಪರಾರಿಯಾಗಿದ್ದಾನೆ ಎಂದು ಅವರು ಮಾಹಿತಿ ನೀಡಿದರು. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.