INDIA COVID-19 Statistics

11,046,914
Confirmed Cases
Updated on 25/02/2021 12:29 PM
151,671
Total active cases
Updated on 25/02/2021 12:29 PM
156,742
Total deaths
Updated on 25/02/2021 12:29 PM
Thursday, February 25, 2021

INDIA COVID-19 Statistics

11,046,914
Total confirmed cases
Updated on 25/02/2021 12:29 PM
151,671
Total active cases
Updated on 25/02/2021 12:29 PM
156,742
Total deaths
Updated on 25/02/2021 12:29 PM
10,738,501
Total recovered
Updated on 25/02/2021 12:29 PM
Home State Belagavi ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಬೆಳಗಾವಿ, ಫೆ‌.20: ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬೈಲಹೊಂಗಲ ತಾಲ್ಲೂಕಿನ ಬೈಲವಾಡ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮ ಆರಂಭಿಸಿದರು.

ಪ್ರತಿ ತಿಂಗಳು ಮೂರನೇ ಶನಿವಾರ ಎಲ್ಲ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಬೇಕು ಸರ್ಕಾರದ ಮಾರ್ಗಸೂಚಿಯಂತೆ ಶನಿವಾರ ಮೊದಲ ಗ್ರಾಮ‌ ವಾಸ್ತವ್ಯ ಕಾರ್ಯಕ್ರಮ ಆರಂಭಗೊಂಡಿತು.

ಗ್ರಾಮದ ವರ್ತಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಆರಂಭಿಸಿದ ಜಿಲ್ಲಾಧಿಕಾರಿಗಳು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸರಕಾರ ಪದವಿ ಪೂರ್ವ ಮಹಾವಿದ್ಯಾಲಯದ ನೂತನ‌ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇದಾದ ಬಳಿಕ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು.
ವಸತಿನಿಲಯದ ಊಟದ ಕೋಣೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆಗೆ ಉಪಾಹಾರ ಸೇವಿಸಿದರು.

ಗುಂಡೇಟಿಗೆ ಬಲಿಯಾದ ಸಿ.ಆರ್.ಪಿ.ಎಫ್. ಹುತಾತ್ಮ ಯೋಧ ಮಂಜುನಾಥ ಮುದುಕನಗೌಡರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮಾಲಾರ್ಪಣೆ ಮಾಡಿ ಗ್ರಾಮಕ್ಕೆ ಬರಮಾಡಿಕೊಂಡರು.

ಅಲ್ಲಿಂದ ಗ್ರಾಮ ಪ್ರದಕ್ಷಿಣೆ ಆರಂಭಿಸಿದ ಅವರು ಮೊದಲಿಗೆ ಹರಿಜನಕೇರಿಯ ಮನೆಗಳಿಗೆ ಭೇಟಿ ನೀಡಿದರು.
ಇದೇ ವೇಳೆ ಕರಿಯಮ್ಮ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಜಿಲ್ಲಾಧಿಕಾರಿ ಹಿರೇಮಠ ಅವರು ಭೂಮಿಪೂಜೆ ನೆರವೇರಿಸಿದರು.

ಕೈಬರಹದ ಮನವಿ ನೀಡಿದ ಬಾಲಕ!:

ಶೈಕ್ಷಣಿಕ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ತಂದೆ ಕಳೆದುಕೊಂಡಿರುವ ಮೂರನೇ ತರಗತಿಯ ಬಾಲಕ ಕಿರಣ ಬಸವರಾಜ ಕೋಣಿಣ್ಣವರ ಕೈಬರಹದ ಮನವಿಪತ್ರ ನೀಡಿದನು.

ತಂದೆ ಇಲ್ಲ; ಅನಾರೋಗ್ಯ ಪೀಡಿತ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಅಕ್ಕ ಕೀರ್ತಿ ಸಂಪಗಾಂವ ಗ್ರಾಮದ ಮೊರಾರ್ಜಿ ಶಾಲೆಯಲ್ಲಿ ಓದುತ್ತಿದ್ದಾಳೆ.

ಸಮೀಪದ ಕಾನ್ವೆಂಟಿನಲ್ಲಿ ಓದುತ್ತಿದ್ದೇನೆ. ಆದ್ದರಿಂದ ಶೈಕ್ಷಣಿಕ ವೆಚ್ಚ ಭರಿಸುವುದು ಕಷ್ಟವಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ.

ಬಾಡಿಗೆ ಮನೆಯಲ್ಲಿ ಇದ್ದಾರೆ. ಮನೆ ಖರ್ಚು ನಿಭಾಯಿಸಲು ಕಷ್ಟ ಎಂದು ಅಜ್ಜ ಸೋಮನಗೌಡ ದೊಡ್ಡವೀರಪ್ಪನವರ ಅಲವತ್ತುಕೊಂಡರು.

ಬಾಲಕನ ಮನವಿ ಸ್ವೀಕರಿಸಿದ ಬಳಿಕ ತಲೆ ಸವರಿ ಮಾತನಾಡಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು‌ ಭರವಸೆ ನೀಡಿದರು.

ಗೌಡರ ಓಣಿಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದರು. ಸ್ವಾತಂತ್ರ್ಯ ಯೋಧರ ಪಿಂಚಣಿ; ವಿದ್ಯುತ್ ಕಂಬ ತೆರವು; ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನರು ಮನವಿ ಮಾಡಿಕೊಂಡರು.

ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಕಲ್ಪಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಶಾಸಕ ಮಹಾಂತೇಶ ಕೌಜಲಗಿ ಅವರು ಜನರಿಗೆ ತಿಳಿಸಿದರು

ತದನಂತರ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ಜನರ ಅಹವಾಲು ಆಲಿಸಿದರು.
ಗ್ರಾಮದ ವಿವಿಧ ಕಡೆಗಳಲ್ಲಿ ಮತ್ತು ಹೊಲಗಳಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬಗಳು ಹಾಗೂ ಜೋತುಬಿದ್ದಿರುವ ವಿದ್ಯುತ್ ತಂತಿಗಳಿಂದ ಅಪಾಯ ಎದುರಾಗಿದೆ. ಆದ್ದರಿಂದ ತಕ್ಷಣವೇ ಇದನ್ನು ಸರಿಪಡಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.

ಈ ಸಮಸ್ಯೆಯನ್ನು ಒಂದು ವಾರದೊಳಗೆ ಸರಿಪಡಿಸಿ ವರದಿ‌ ಸಲ್ಲಿಸಬೇಕು ಎಂದು ಹೆಸ್ಕಾಂ ಸ್ಥಳೀಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಭೆಯಲ್ಲಿ ಸೂಚನೆ ನೀಡಿದರು.

ನಂತರ ಗಾಡದಾರ ಓಣಿಯಲ್ಲಿ ಸಂಚರಿಸಿ ಸಮಸ್ಯೆಗಳನ್ನು ಪರಿಶೀಲಿಸಿದರು.

ನಾಯಕರ‌ ಓಣಿಯ ಜನರು ಮಳೆಗಾಲದಲ್ಲಿ ನೀರು ಹರಿಯಲು ಜಾಗೆ ಇಲ್ಲದಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಸೆಳೆದರು.

ಸ್ವತಃ ಸಮಸ್ಯೆಗಳ‌ ಪಟ್ಟಿ‌ ಮಾಡಿದ ಡಿಸಿ!:

ಬೈಲವಾಡ ಗ್ರಾಮದ ಗಲ್ಲಿಗಲ್ಲಿಗಳಲ್ಲಿ ಸುಮಾರು ಎರಡು ತಾಸುಗಳ‌ ಕಾಲ ಸುತ್ತಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಜನರು ಹೇಳುವ ಸಮಸ್ಯೆಗಳನ್ನು ಹಾಗೂ ಅವರ ಹೆಸರುಗಳನ್ನು ಸ್ವತಃ ತಮ್ಮ ಡೈರಿಯಲ್ಲಿ ಬರೆದುಕೊಂಡರು.

ಮಾಸಾಶನ, ರೇಷನ್, ಕುಡಿಯುವ ನೀರು, ವಸತಿ, ಸ್ವಚ್ಛತೆ, ಗಟಾರು, ಶೌಚಾಲಯ ಮತ್ತಿತರ ಸಮಸ್ಯೆಗಳನ್ನು ಜನರು‌ ಹೇಳಿಕೊಂಡಾಗ ಸಂಪೂರ್ಣ ವಿವರಗಳನ್ನು ಬರೆದುಕೊಂಡ ಜಿಲ್ಲಾಧಿಕಾರಿಗಳು, ಆದಷ್ಟು ಬೇಗನೆ ಬಗೆಹರಿಸುವುದಾಗಿ ತಿಳಿಸಿದರು.

ಕೆಲವು ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೆ ದನಿಗೂಡಿಸಿದ ಶಾಸಕ‌ ಮಹಾಂತೇಶ ಕೌಜಲಗಿ ಅವರು ಕೂಡ ಜನರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದರ ಜತೆಗೆ ಕೂಡಲೇ ಆದ್ಯತೆ ಮೇರೆಗೆ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ಚನ್ನನಸಪ್ಪ ಕೊಡ್ಲಿ, ಕೃಷಿ ಇಲಾಖೆಯ ಜಂಟಿ‌ ನಿರ್ದೇಶಕರಾದ ಶಿವನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಡಾ.ಉಮಾ ಸಾಲಿಗೌಡರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ರವೀಂದ್ರ ಹಕಾಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ವರವಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

State

ತಹಸೀಲ್ದಾರ ಕೊಲೆ ಯತ್ನ : ತಂದೆ, ಮಗ ಬಂಧನ

ಜಮಖಂಡಿ: 25- ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ತಹಶೀಲ್ದಾರ ನಾಗಪ್ಪ ಬಿರಾಡಿಯವರನ್ನು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದ ತಂದೆ ಹಾಗು ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ ಕಿತ್ತೂರು ಹಾಗು ಬಸವರಾಜ ಕಿತ್ತೂರು ಬಂಧಿತರು....

ಬೆಳಗಾವಿಗೆ ಬಂದವು ಮೂರು ಸಿಂಹಗಳು

ಬೆಳಗಾವಿ: 25- ಇಲ್ಲಿನ ಭೂತರಾಮನಹಟ್ಟಿ ಬಳಿಯ ರಾಣಿ ಚನ್ನಮ್ಮಾ ಪ್ರಾಣಿ ಸಂಗ್ರಹಾಲಯಕ್ಕೆ ಗುರುವಾರ ಮೂರು ಸಿಂಹಗಳು ಬಂದಿವೆ. ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಹಿಂದಿನ ಸರ್ಕಾರದಲ್ಲಿ ಅರಣ್ಯ...

ತೈಲ ದರ ಹೆಚ್ಚಳ ವಿರೋಧಿಸಿ ನಾಳೆ ರಾಜ್ಯಾದ್ಯಂತ ಲಾರಿ ಸಂಚಾರ ಬಂದ್

ಬೆಂಗಳೂರು: ಫೆ 25- ಜಿಎಸ್ ಟಿ, ಇಂಧನ ದರ ಏರಿಕೆ, ಇ-ವೇ ಬಿಲ್ ವಿರೋಧಿಸಿ ವರ್ತಕರ ಸಂಘಟನೆ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಲಾರಿ ಸಂಚಾರ ಬಂದ್ ಆಗಲಿದೆ...

11 ತಿಂಗಳಲ್ಲಿ ಮೊದಲ ಬಾರಿಗೆ ಕೊರೋನಾ ಇಲ್ಲ

ಬೆಳಗಾವಿ: 22- ಕಳೆದ ಮಾರ್ಚ ತಿಂಗಳಲ್ಲಿ ದೇಶಕ್ಕೆ ಒಕ್ಕರಿಸಿದ ಕೊರೋನಾ ಮಹಾಮಾರಿ ಬೆಳಗಾವಿ ಜಿಲ್ಲೆಯನ್ನೂ ಇನ್ನಿಲ್ಲದಂತೆ ಕಾಡಿತ್ತು. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ದಿನವೊಂದಕ್ಕೆ ಸರಾಸರಿ 500 ರ ಗಡಿ ದಾಟುತ್ತಿದ್ದ ಸೋಂಕಿತರ...

National

ಇಂಧನ ಬೆಲೆ ಇಳಿಸುವದು ಸೂಕ್ತ : ಆರ್ ಬಿ ಆಯ್

ಮುಂಬಯಿ: 25- ಹೆಚ್ಚುತ್ತಿರುವ ಇಂಧನ ಬೆಲೆಗಳು ಜೀವನ ವೆಚ್ಚ-ಹೆಚ್ಚಿಸುವ ಅಂಶವನ್ನು ಹೊಂದಿವೆ ಮತ್ತು ಇದರಿಂದ ಆರ್ಥಿಕತೆಯ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ ಶಕ್ತಿಕಾಂತ...

“ಮೋದಿ ಉದೋಗ ನೀಡಿ ಇಲ್ಲ ಖುರ್ಚಿ ಬಿಡಿ ” 60 ಲಕ್ಷ ಟ್ವಿಟ್, ವಿಶ್ವದಾಖಲೆ

ಹೊಸದಿಲ್ಲಿ: 25- ಭಾರತದಾದ್ಯಂತ ಯುವಜನರು ನಿರುದ್ಯೋಗದ ವಿರುದ್ಧ ಸಿಡಿದೆದ್ದಿದ್ದು, ಉದ್ಯೋಗಕ್ಕಾಗಿ ದನಿಯೆತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಟ್ವಿಟರ್ ದಾಳಿ ನಡೆಸಿರುವ ಯುವಜನತೆ ಉದ್ಯೋಗ ಕೊಡಿ ಎಂದು ತಾಕೀತು...

ರೈತರಿಗೆ ಬೆಂಬಲ ನೀಡಿದ್ದ ಶಾಸಕನ ಮನೆ ಮೇಲೆ ಐಟಿ ದಾಳಿ

ಹೊಸದಿಲ್ಲಿ, 25- ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದ ಹರಿಯಾಣದ ಪಕ್ಷೇತರ ಶಾಸಕ ಬಲ‌ರಾಜ ಕುಂಡು ಅವರ ಮನೆ, ಕಛೇರಿ ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳ ಮೇಲೆ ಐಟಿ ದಾಳಿ ನಡೆಸಲಾಗಿದೆ. ರೋಹ್ಟಕ್‌ನಲ್ಲಿರುವ ಅವರ ಸಹೋದರರು,...

9, 10, 11ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಉತ್ತೀರ್ಣ

ಚೆನ್ನೈ: ಫೆ 25 - ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಾರ್ಷಿಕ ಪರೀಕ್ಷೆಯಿಲ್ಲದೆಯೇ ರಾಜ್ಯದ 9, 10, 11ನೇ ತರಗತಿ ವಿದ್ಯಾರ್ಥಿಗಳು ಉತ್ತೀರ್ಣರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮತ್ತು...

International

ಧ್ವಂಸಗೊಂಡ ಹಿಂದೂ ದೇವಾಲಯ ಕೂಡಲೇ ನಿರ್ಮಾಣಕ್ಕೆ ಪಾಕ್ ಕೋರ್ಟ ಆದೇಶ

ಇಸ್ಲಾಮಾಬಾದ: 9- ದುಷ್ಕರ್ಮಿಗಳಿಂದ ಧ್ವಂಸಗೊಂಡಿರುವ ಶತಮಾನಗಳ ಇತಿಹಾಸ ಹೊಂದಿದ್ದ ಹಿಂದೂ ದೇವಾಲಯವನ್ನು ಕೂಡಲೇ ಪುನರ್ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಪಾಕಿಸ್ತಾನ ಸುಪ್ರೀಮ ಕೋರ್ಟ ಆದೇಶಿಸಿದೆ. ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಸಮಯದ ಬಗ್ಗೆ...

ಕೋವಿಡ್ ರೋಗಿಗಳಿಗೆ ಕ್ಷಯರೋಗದ ಅಪಾಯವಿದೆ : ರಶಿಯಾ

ಮಾಸ್ಕೊ, ಫೆ 08- ಕೊರೋನಾ ವೈರಸ್ ಸೋಂಕಿಗೆ ಒಳಗಾದ ರೋಗಿಗಳಿಗೆ ಕ್ಷಯರೋಗ ಬರುವ ಸಾಧ್ಯತೆ ಹೆಚ್ಚು ಎಂದು ರಷ್ಯಾದ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. "ಕೋವಿಡ್ -19 ನಿಂದ ಬಳಲಿದ ನಂತರ ಅನೇಕ ರೋಗಿಗಳು ಶ್ವಾಸಕೋಶದಲ್ಲಿ...

ಬಂಗಾರದ ನಾಲಿಗೆಯ “ಮಮ್ಮಿ”

ಕೈರೋ, 3- ಸತ್ತ ನಂತರ ಮತ್ತೊಂದು ಜೀವನವಿದೆ ಎಂದು ನಂಬಿದ್ದ ಪುರಾತನ ಕಾಲದ ಈಜಿಪ್ತ ನಾಗರಿಕರು ಕೆಡಬಾರದೆಂದು ಶವಗಳಿಗೆ ದ್ರಾವಣ ಹಚ್ಚಿಡುತ್ತಿದ್ದರು. ಹಾಗೆಯೇ ಅವರ ಮತ್ತೊಂದು ಜೀವನಕ್ಕೆ ಬೇಕಾಗುತ್ತದೆಯೆಂದು ಸಾಕಷ್ಟು ಚಿನ್ನವನ್ನು ಶವ...

ಆಂಗ್ ಸಾನ್ ಸೂಕಿ ಬಂಧನ, ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ

ಮಾಸ್ಕೋ ಫೆಬ್ರವರಿ 1 - ಮ್ಯಾನ್ಮಾರ್‌ನ ರಾಜಕೀಯ ನಾಯಕಿ ಆಂಗ್ ಸಾನ್ ಸೂಕಿ ಹಾಗೂ ಅಧ್ಯಕ್ಷ ವಿನ್ ಮೈಂಟ್ ಅವರನ್ನು ಬಂಧಿಸಲಾಗಿದೆ ಎಂದು ರಾಯಿಟರ್ಸ್ ವರದಿ ಸೋಮವಾರ ಮಾಡಿದೆ. ದೇಶದ ಆಡಳಿತ ಪಕ್ಷದ ಇತರ...

Entertainment

ಇಂದು ಧಾರವಾಡದಲ್ಲಿ ಬೆಳವಡಿ ಮಲ್ಲಮ್ಮ ನಾಟಕ

ಧಾರವಾಡ: 14- ಹುಬ್ಬಳ್ಳಿಯ ಜೀವಿ ಕಲಾ ಬಳಗದ ಅಧ್ಯಕ್ಷರಾದ ಗದಿಗೆಯ್ಯಾ ಹಿರೇಮಠ ಅವರು ರಚಿಸಿ ನಿರ್ದೇಶಿಸಿದ ಐತಿಹಾಸಿಕ " ಸಮರ ಸಿಂಹಿಣಿ ಬೆಳವಡಿ ಮಲ್ಲಮ್ಮ" ನಾಟಕವು ರವಿವಾರ ದಿ ೧೪- ೨ -೨೦೨೧ ರಂದು ಪ್ರದರ್ಶನಗೊಳ್ಳಲಿದೆ. ಬೆಳವಡಿಯ ನೇತಾಜಿ ತರುಣ...

ಮಾರುಕಟ್ಟೆ ಗಿಜಿಗುಡುವಾಗ ಚಿತ್ರಮಂದಿರವೇಕೆ ಖಾಲಿ?

ಬೆಂಗಳೂರು, ಫೆ 03- “ಬಸ್ ಫುಲ್, ಮಾರ್ಕೆಟ್ ಗಿಜಿ ಗಿಜಿ ಆದರೆ ಚಿತ್ರ ಮಂದಿರಗಳೇಕೆ ಭಣಗುಡಬೇಕು” ಎಂದು ನಟ ಧ್ರುವ ಸರ್ಜಾ ಮಾಡಿರುವ ಟ್ವೀಟ್ ಗೆ ಕನ್ನಡ ಚಿತ್ರರಂಗದ ಬಹುತೇಕ ನಟ, ನಿರ್ದೇಶಕರು...

ಜ. 24ರಂದು ವರುಣ ಧವನ್-ನತಾಶಾ ಮದುವೆ

ಮುಂಬೈ, ಜ 15 - ಖ್ಯಾತ ನಿರ್ಮಾಪಕ, ನಿರ್ದೇಶಕ ಡೇವಿಡ್ ಧವನ ಪುತ್ರ ನಟ ವರುಣ ಧವನ್ ಅವರು ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ...

‘ಲಂಕಾಸುರ’ ಚಿತ್ರಕ್ಕೆ ಚಾಲನೆ

ಬೆಂಗಳೂರು, ಜ 15 - ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮದಂದು ವಿನೋದ ಪ್ರಭಾಕರ ಹಾಗೂ ಲೂಸ್ ಮಾದ ಅಭಿನಯದ ‘ಲಂಕಾಸುರ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ...

Sports

ಭಾರತಕ್ಕೆ 317 ರನ್ ಜಯ

ಚೆನ್ನೈ, ಫೆ 16- ಭಾರತದ ಬಲಿಷ್ಠ ಸ್ಪಿನ್ ಕೋಟೆಯನ್ನು ಭೇದಿಸುವಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ವಿಫಲವಾಗಿದ್ದು, ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಪಡೆ 1-1 ರಿಂದ ಸಮಬಲ ಸಾಧಿಸಿದೆ. ನಿರೀಕ್ಷೆಯಂತೆ ಮಂಗಳವಾರ ಭಾರತ...

ಗೆಲುವಿನ ಹೊಸ್ತಿಲಲ್ಲಿ ಭಾರತ

ಚೆನ್ನೈ: ಫೆ 15 - ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರ ಶತಕ ಹಾಗೂ ನಾಯಕ ವಿರಾಟ ಕೊಹ್ಲಿ ಅವರ ಅರ್ಧ ಶತಕದ ನೆರವಿನಿಂದ ಭಾರತ ನೀಡಿದ 482 ರನ್ ಗೆಲುವಿನ ಗುರಿ...

ಚೆನ್ನೈ ತಲುಪಿದ ಇಂಗ್ಲೆಂಡ್ ಕ್ರಿಕೆಟ್ ತಂಡ

ನವದೆಹಲಿ, ಜ.24 - ಫೆಬ್ರವರಿ 5 ರಿಂದ ಭಾರತ ವಿರುದ್ಧದ ಟೆಸ್ಟ್ ಸರಣಿಗಾಗಿ ವೇಗದ ಬೌಲರ್ ಜೋಫ್ರಾ ಆರ್ಚರ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಬ್ಯಾಟ್ಸ್‌ಮನ್ ರೋರಿ ಬರ್ನ್ಸ್ ಮತ್ತು ಜೊನಾಥನ್ ಟ್ರಾಟ್ ಸೇರಿದಂತೆ...

ರಹಾನೆ ಮತ್ತು ಇತರ ಆಟಗಾರರಿಗೆ ಕ್ವಾರಂಟೈನ್ ವಿನಾಯಿತಿ

ನವದೆಹಲಿ, ಜ.21- ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಗೆದ್ದು ಗುರುವಾರ ಬೆಳಿಗ್ಗೆ ಮುಂಬೈಗೆ ಮರಳಿದ ನಾಯಕ ಅಜಿಂಕ್ಯ ರಹಾನೆ ಮತ್ತು ಇತರ ನಾಲ್ಕು ಭಾರತೀಯ ಆಟಗಾರರಿಗೆ ಮಹಾರಾಷ್ಟ್ರ ಸರ್ಕಾರ ಕ್ವಾರಂಟೈನ್ ನಿಂದ ವಿನಾಯಿತಿ...