INDIA COVID-19 Statistics

13,714,419
Confirmed Cases
Updated on 13/04/2021 3:06 PM
1,280,101
Total active cases
Updated on 13/04/2021 3:06 PM
171,205
Total deaths
Updated on 13/04/2021 3:06 PM
Tuesday, April 13, 2021

INDIA COVID-19 Statistics

13,714,419
Total confirmed cases
Updated on 13/04/2021 3:06 PM
1,280,101
Total active cases
Updated on 13/04/2021 3:06 PM
171,205
Total deaths
Updated on 13/04/2021 3:06 PM
12,263,113
Total recovered
Updated on 13/04/2021 3:06 PM
Home State Bengaluru ನ್ಯಾಯಾಲಯಗಳು ಕನ್ನಡದಲ್ಲಿ ತೀರ್ಪು ನೀಡಲು ಮನವಿ

ನ್ಯಾಯಾಲಯಗಳು ಕನ್ನಡದಲ್ಲಿ ತೀರ್ಪು ನೀಡಲು ಮನವಿ

ಬೆಂಗಳೂರು: ಫೆ 26 – ‘ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನ’ ಮಾಡುವಂತೆ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಕ್ಕೊತ್ತಾಯದ ಮನವಿ ಸಲ್ಲಿಸಿದೆ.

ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ನೇತೃತ್ವದಲ್ಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಒಕಾ ಹಾಗೂ ರಿಜಿಸ್ಟ್ರಾರ್ ಜನರಲ್ ಅವರನ್ನು ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಬಾಬು ಜೊತೆ ಭೇಟಿ ಮಾಡಿ ರಾಜ್ಯದ ಎಲ್ಲ ಅಧೀನ ನ್ಯಾಯಲಯಗಳಲ್ಲಿ ವಕಾಲತ್ತು ಮತ್ತು ತೀರ್ಪುಗಳನ್ನು ಕನ್ನಡದಲ್ಲಿ ನೀಡುವಂತೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಪೀಠಾಧಿಕಾರಿಗಳು ತಮ್ಮ ನ್ಯಾಯಾಲಯಗಳ ದೈನಂದಿನ ವ್ಯವಹಾರಗಳಲ್ಲಿ ವಿಶೇಷವಾಗಿ ತೀರ್ಪುಗಳು, ಆದೇಶಗಳು ಜ್ಞಾಪನಾ ಪತ್ರಗಳು, ರಾಜ್ಯ ವ್ಯಾಪ್ತಿಯೊಳಗಿನ ಪತ್ರವ್ಯವಹಾರಗಳಲ್ಲಿ ಕನ್ನಡವನ್ನೇ ಸಂಪೂರ್ಣವಾಗಿ ಬಳಸುವಂತೆ ಕರ್ನಾಟಕದ ಉಚ್ಚನ್ಯಾಯಾಲಯ 2003ರಲ್ಲಿ ಪತ್ರ ಬರೆದಿದೆ. ಆದರೆ ಅಧೀನ ನ್ಯಾಯಾಲಯಗಳಲ್ಲಿ ಇನ್ನೂ ಸಂಪೂರ್ಣವಾಗಿ ಕನ್ನಡೀಕರಣವಾಗಿಲ್ಲ. ಡಿಜಿಟಲ್ ತಂತ್ರಜ್ಞಾನ ಬಂದ ಮೇಲೆ ಸಾಕಷ್ಟು ನಮೂನೆಗಳು ಇಂಗ್ಲಿಷ್ ನಲ್ಲಿಯೇ ಬರುವುದರಿಂದ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕೆಲಸವನ್ನು ಒಂದು ವಿಭಾಗ ಮಾಡುತ್ತಿದ್ದು, ಅದನ್ನು ತುರ್ತಾಗಿ ಮುಗಿಸುವುದಾಗಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮಾನ್ಯ ಮುಖ್ಯ ನ್ಯಾಯಾಧೀಶರು ತಿಳಿಸಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಧೀನ ನ್ಯಾಯಲಯಗಳಲ್ಲಿ ಸಾಕ್ಷಿಗಳನ್ನು ಕನ್ನಡದಲ್ಲಿ ಪಡೆದರೂ ಸಹ ತೀರ್ಪುಗಳು ಮತ್ತು ವಕಾಲತ್ತು ಇನ್ನೂ ಕನ್ನಡೀಕರಣವಾಗಬೇಕಿದೆ. ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಘೋಷಿತವಾಗಿ ಹಲವಾರು ವರ್ಷಗಳೇ ಆಗಿದೆ. ಆಡಳಿತದಲ್ಲಿ ಕನ್ನಡವನ್ನು ಕಟ್ಟುನಿಟ್ಟಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೆ ತರುವುದು ಸರ್ಕಾರದ ಆಶಯವಾಗಿದೆ. ಜನರಾಡುವ ಭಾಷೆಯಲ್ಲಿ ಆಡಳಿತ ನಡೆಸಿದಾಗ ಜನರ ನೋವು-ನಲಿವುಗಳಗೆ ಸ್ಪಂದಿಸಲು ಸಾಧ್ಯ ಎನ್ನುವುದನ್ನು ಮನಗಂಡ ಸರ್ಕಾರ, ಹಲವಾರು ಆದೇಶ ಮತ್ತು ಸುತ್ತೋಲೆಗಳನ್ನು ಹೊರಡಿಸಿದೆ ಎಂದು ಹೇಳಿದ್ದಾರೆ.

ಅಧೀನ ನ್ಯಾಯಾಲಯಗಳಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಕನ್ನಡದಲ್ಲಿರುವ ಸಮನ್ಸ್ ಹಾಗೂ ವಾರೆಂಟ್ ಹಾಗೂ ಇತರೆ 184 ನಮೂನೆಗಳಲ್ಲಿ ಕನ್ನಡ ಭಾಷೆಯಲ್ಲಿ ಇದ್ದಾಗ್ಯೂ ಆಂಗ್ಲಭಾಷೆಯಲ್ಲಿ ಬರೆಯುತ್ತಿರುವುದು ವಿಷಾದನೀಯ. ಬಹಳಷ್ಟು ನ್ಯಾಯಾಧೀಶರು, ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ತೀರ್ಪುಗಳನ್ನು ನೀಡುತ್ತಿದ್ದಾರೆ. ಕೆಲವರು ನ್ಯಾಯಮೂರ್ತಿಗಳು ಕನ್ನಡ ಅನುಷ್ಠಾನ ಮಾಡುವಲ್ಲಿ ದ್ವಿಮುಖನೀತಿ ಅನುಸರಿಸುತ್ತಿರುವುದು ನೋವುಂಟುಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಅತಿ ಪುರಾತನವಾದ ಕನ್ನಡ ಭಾಷೆ ನಮ್ಮದು. ಈ ಹಿನ್ನೆಲೆಯಲ್ಲಿ ಎಲ್ಲಾ ಅಧೀನ ನ್ಯಾಯಾಲಯಗಳಲ್ಲಿ ದಿನನಿತ್ಯದ ವ್ಯವಹಾರ, ತೀರ್ಪುಗಳು, ಸಮನ್ಸ್ ಗಳು ವಾರೆಂಟ್ ಗಳು, ಮುದ್ರೆಗಳು ಹಾಗೂ ತಂತ್ರಾಂಶದಲ್ಲಿ ಸಂಪೂರ್ಣವಾಗಿ ಕನ್ನಡವನ್ನು ಬಳಸಬೇಕೆಂಬುದು ಪ್ರಾಧಿಕಾರದ ಹಕ್ಕೊತ್ತಾಯವಾಗಿದೆ. ಜೊತೆಗೆ ಸರ್ಕಾರದ ನಿಲುವೂ ಕೂಡ ಆಗಿದ್ದು, ಅಧೀನ ನ್ಯಾಯಾಲಯಗಳಲ್ಲಿ ತಂತ್ರಾಂಶವನ್ನು ಒಳಗೊಂಡಂತೆ ಪೂರ್ಣ ಪ್ರಮಾಣದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಬೇಕಿದೆ ಎಂದರು.

ಅಂಬೇಡ್ಕರ ವೀಧಿಯಲ್ಲಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ಮುಂಭಾಗ, ಕಾವೇರಿ ಭವನದ ಹಿಂಭಾಗದ ಕರ್ನಾಟಕ ಸಿವಿಲ್ ನ್ಯಾಯಲಯದ ಮುಂಭಾಗ, ನೃಪತುಂಗ ರಸ್ತೆಯಲ್ಲಿರುವ ಕರ್ನಾಟಕ ಕ್ರಿಮಿನಲ್ ನ್ಯಾಯಾಲಯದ ಮುಂಭಾಗ, ಎಂ.ಜಿ.ರಸ್ತೆಯಲ್ಲಿರುವ ಮೇಯೋಹಾಲ್ ನ್ಯಾಯಾಲಯದ ಮುಂಭಾಗ, ಸಿದ್ದಯ್ಯ ರಸ್ತೆಯಲ್ಲಿರುವ ಕೌಟುಂಬಿಕ ನ್ಯಾಯಾಲಯದ ಮುಂಭಾಗ ಹಾಗೂ ಎಲ್ಲ ಜಿಲ್ಲಾ ನ್ಯಾಯಾಲಯಗಳ ಮುಂಭಾಗದಲ್ಲಿ ಏಕಕಾಲದಲ್ಲಿ ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನ ಕುರಿತಾಗಿ ಜಾಗೃತಿ ಅಭಿಯಾನವನ್ನು ನಡೆಸಲಾಯಿತು.

ಆಯಾ ಜಿಲ್ಲೆಗಳಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳು, ಕನ್ನಡ ಜಾಗೃತಿ ಸಮಿತಿ ಸದಸ್ಯರುಗಳ ಮುಂದಾಳತ್ವದಲ್ಲಿ ಅಭಿಯಾನ ನಡೆಸಲಾಯಿತು.

ಅಭಿಯಾನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಪ್ರೊ.ಅಬ್ದುಲ್ ರೆಹಮಾನ್ ಪಾಷಾ, ಡಾ.ಕಿಶೋರ, ರೋಹಿತ್ ಚಕ್ರತೀರ್ಥ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಮಹಾನಗರ ಪಾಲಿಕೆ ಜಾಗೃತಿ ಸಮಿತಿ ಸದಸ್ಯರು, ಬೆಂಗಳೂರು ಮತಕ್ಷೇತ್ರ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಕಾಯಕಪಡೆ ಸದಸ್ಯರುಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

 

LEAVE A REPLY

Please enter your comment!
Please enter your name here

State

ರಮಜಾನ‌ ; ಸರ್ಕಾರದಿಂದ ಹೊಸ ಮಾರ್ಗಸೂಚಿ

ಬೆಂಗಳೂರು, ಏ 13- ಮುಸ್ಲಿಮರ ಪವಿತ್ರ ರಮಜಾನ ಉಪವಾಸ ಮಾಸ ಇಂದಿನಿಂದ ಆರಂಭವಾಗಲಿದ್ದು ಒಂದು ತಿಂಗಳ ಕಾಲ ಈ ಆಚರಣೆ ಇರಲಿದೆ. ಇದಕ್ಕಾಗಿ ಕೊರೊನಾ ಕಾರಣದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಕಂಟೈನ್...

ಕೋವಿಡ್ ಕುರಿತು ಸರ್ವಪಕ್ಷ ಸಭೆ- ಮುಖ್ಯಮಂತ್ರಿ

ಬೀದರ, ಏಪ್ರಿಲ್ 13 - ಕೋವಿಡ್ ಪರಿಸ್ಥಿತಿ ಮತ್ತು ಲಾಕ್‌ಡೌನ್ ಹೇರುವ ಕುರಿತು ಚರ್ಚಿಸಲು ಈ ತಿಂಗಳ 18 ರಂದು ಸರ್ವಪಕ್ಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ...

ಗೋಕಾಕ ತಾಲೂಕಿನಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರ

ಬೆಳಗಾವಿ, 11- ಕಳೆದ ಕೆಲ ದಿನಗಳಿಂದ ಕೆಲಸದ ಒತ್ತಡದ ನಿಮಿತ ಚುನಾವಣೆ ಪ್ರಚಾರ ಮಾಡಲು ಆಗಿರಲಿಲ್ಲ, ನಾಳೆಯಿಂದಲೇ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಪ್ರಚಾರ ಆರಂಭಿಸುವದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ...

ಅಂಗಡಿ ಸಂಸದರಾಗಿ ಅನುದಾನ ತಂದದೆಷ್ಟು, ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಕೊಪ್ಪಳ, 11-ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅನನುಭವಸ್ಥರು, ಸಂಸತ್ ನಲ್ಲಿ ಅವರು ಹೇಗೆ ವಿಷಯ ಪ್ರಸ್ತಾಪಿಸುತ್ತಾರರೆಂದಿದ್ದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ದಿ. ಸುರೇಶ ಅಂಗಡಿ ನಾಲ್ಕು ಅವಧಿಗೆ ಸಂಸದರಾಗಿ ಎಷ್ಟು ಅನುಧಾನ ರಾಜ್ಯಕ್ಕೆ...

National

ಗುಜರಾತ‌ ಹಿಂಸಾಚಾರ; ಮೋದಿಗೆ ಕ್ಲೀನ‌ಚಿಟ್‌ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ, ಏ 13- ಗುಜರಾತ್ ಗಲಭೆ ಪ್ರಕರಣದಲ್ಲಿ 2002ರಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ, ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್‌ ಚಿಟ್‌ ಪ್ರಶ್ನಿಸಿ...

24 ಗಂಟೆಯಲ್ಲಿ 1.61 ಲಕ್ಷ ಜನರಿಗೆ ಕೊರೋನಾ; 879 ಸಾವು

ನವದೆಹಲಿ, ಏ 13 - ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿದ್ದು. ಕಳೆದ 24 ಗಂಟೆಯಲ್ಲಿ 1,61,ಲಕ್ಷ ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಈಗ ಸೋಂಕಿತರ ಸಂಖ್ಯೆ...

ಸತ್ಯಮಂಗಲಂ ಅರಣ್ಯದಲ್ಲಿ ಭಾರಿ ನಿಧಿ; ವೀರಪ್ಪನ್ ಪುತ್ರಿಯ ಹೇಳಿಕೆ

ಚೆನ್ನೈ, ಏ 11- ದಂತ ಚೋರ, ಕಾಡು ಕಳ್ಳ ವೀರಪ್ಪನ್ ನೆಲೆಸಿದ್ದ ಸತ್ಯಮಂಗಲಂ ಅರಣ್ಯ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಹಣ ಅಡಗಿಸಿಟ್ಟಿದ್ದಾನೆ ಎಂದು ಆತನ ಪುತ್ರಿ ವಿಜಯಲಕ್ಷ್ಮಿ ಹೇಳಿರುವುದು ಸಂಚಲನ ಸೃಷ್ಟಿಸಿದೆ. ವಾಲ್ಮುರಿಮಾಯಿ ಕಚ್ಚಿಯಲ್ಲಿ...

ನಟ ಸತೀಶ ಕೌಲ್ ಕೊರೋನಾಗೆ ಬಲಿ

ಚಂಡಿಗಡ, ಏಪ್ರಿಲ್ 10- ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ನಟ ಸತೀಶ ಕೌಲ್ ಶನಿವಾರ ಲುಧಿಯಾನದಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಸೋಂಕು ಪತ್ತೆಯ ನಂತರ ಸತೀಶ ಕೌಲ್ ರನ್ನು ಲುಧಿಯಾನಾದ ಖಾಸಗಿ...

International

30 ವರ್ಷದಿಂದ ಬೆಳೆಸಿದ್ದ ಉಗುರಿಗೆ ಕತ್ತರಿ

ಟೆಕ್ಸಾಸ್, 9- ದಾಖಲೆಗಾಗಿಯೋ ಶೋಕಿಗಾಗಿಯೋ 30 ವರುಷಗಳಿಂದ ಬೆಳೆಸಿಕೊಂಡು ಬಂದಿದ್ದ ತಮ್ಮ ಕೈ ಉಗುರುಗಳನ್ನು ಅಮೆರಿಕಾದ ಅಯನ್ನಾ ವಿಲಿಯಮ್ಸ ಎಂಬವರು‌ ಕತ್ತರಿಸಿಕೊಂಡು ಜಗತ್ತಿನ ಗಮನ ಸೆಳೆದಿದ್ದಾರೆ. ಅಯನ್ನಾ ಅವರು ಕಳೆದ ಮೂವತ್ತು ವರ್ಷಗಳಿಂದ ತಮ್ಮ...

ಕೋವಿಡ್ ಲಸಿಕೆ ನಂತರವೂ 63 ಜನರ ಸಾವು

ವಿಯೆನ್ನಾ ಏಪ್ರಿಲ್ 8 - ಆಸ್ಟ್ರಿಯಾದಲ್ಲಿ ಕರೋನ ಸೋಂಕಿನ ಲಸಿಕೆ ಪಡೆದ ನಂತರವೂ 63 ಜನರು ಮೃತಪಟ್ಟಿದ್ದಾರೆ ಎಂದು ಆಸ್ಟ್ರಿಯನ್ ಸರ್ಕಾರಿ ವಕ್ತಾರರು ಹೇಳಿದ್ದಾರೆ. ಕಳೆದ ವಾರ ಕರೋನ ಸೋಂಕಿನ ವಿರುದ್ಧ ಲಸಿಕೆ ಹಾಕಿದ...

ವಾರದಲ್ಲಿ ಕೋವಿಡ್ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆ

ಮಾಸ್ಕೋ, ಏಪ್ರಿಲ್ 7- ಕಳೆದೊಂದು ವಾರದಲ್ಲಿ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ವಾರದ ವರದಿ ತಿಳಿಸಿದೆ. ‘ಜಾಗತಿಕವಾಗಿ...

ನಾವಿನ್ನೂ ಸಾವು ಬದುಕಿನ ಹೋರಾಟದಲ್ಲಿದ್ದೇವೆ

ವಾಷಿಂಗ್ಟನ್, ಏ 7- ಕೊರೊನಾ ಸಾಂಕ್ರಾಮಿಕ ವಿಷಯದಲ್ಲಿ ಅಮೆರಿಕಾ ಈಗಲೂ ಸಾವು ಬದುಕಿನ ನಡುವಿನ ಸ್ಪರ್ಧೆಯಲ್ಲಿದೆ ಎಂದು ಅಮೇರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಹಾಗಾಗಿ ಕೊರೊನಾ ಸಾಂಕ್ರಾಮಿಕ ಪ್ರಸರಣ ತಡೆಗಟ್ಟಲು ಜನರು ಕಟ್ಟುನಿಟ್ಟಿನ...

Entertainment

ರಜನಿಕಾಂತಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ

ನವದೆಹಲಿ, ಎ 1- ಹೆಸರಾಂತ ಚಿತ್ರನಟ ರಜನಿಕಾಂತ ಅವರಿಗೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ ಈ ಬಗ್ಗೆ ಟ್ವೀಟ್ ಮಾಡಿ...

“90 ಹೊಡಿ ಮನೀಗ್ ನಡಿ” ಚಿತ್ರೀಕರಣ ಮುಕ್ತಾಯ

ಬೆಂಗಳೂರು, ಮಾರ್ಚ 31- ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ ಹಾಸ್ಯ ಪ್ರಧಾನ "90 ಹೊಡಿ ಮನೀಗ್ ನಡಿ" ಚಿತ್ರ ಇತ್ತೀಚೆಗೆ ಚಿತ್ರೀಕರಣ ಮುಕ್ತಾಯಗೊಳಿಸಿ ಕುಂಬಳಕಾಯಿ ಒಡೆಯುವ ಶಾಸ್ತ್ರ ಮುಗಿಸಿಕೊಂಡಿದೆ. "ಅಮ್ಮ ಟಾಕೀಸ ಬಾಗಲಕೋಟ"...

“ದಂಡಿ” ಚಿತ್ರಕ್ಕೆ ಚಾಲನೆ

ಕಾರವಾರ: ಮಾರ್ಚ 23 -ಸ್ವತಂತ್ರ ಪೂರ್ವದಲ್ಲಿ ನಡೆದ‌ ದಂಡಿ-ಉಪ್ಪಿನ ಸತ್ಯಾಗ್ರಹದ ಬಗ್ಗೆ ಸಿನಿಮಾವೊಂದು ಮೂಡಿ‌ಬರುತ್ತಿದೆ. ತಾರಾ, ಸುಚೇಂದ್ರ ಪ್ರಸಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ವಿಶಾಲ ರಾಜ್ ನಿರ್ದೇಶನವಿದ್ದು, ಹೊನ್ನಾವರದಲ್ಲಿ ಚಾಲನೆ...

“ತಾಜಮಹಲ್-2” ಚಿತ್ರೀಕರಣ ಮುಕ್ತಾಯ

ಬೆಂಗಳೂರು: ಮಾರ್ಚ 23- ಈ ಹಿಂದೆ ಡೇಂಜರ್‌ಜೋನ್, ನಿಶ್ಯಬ್ದ 2, ಅನುಷ್ಕದಂಥ ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜಕುಮಾರ ಅವರ ಸಾರಥ್ಯದ "ತಾಜ್‌ಮಹಲ್-2" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನ ಎಚ್‌ಎಂಟಿ ಏರಿಯಾದಲ್ಲಿ ಸೆಟ್ ಹಾಕಿ ಜೀವ ಬಿಡುವೆ...

Sports

ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೃನಾಲ್, ಕನ್ನಡಿಗ ಪ್ರಸಿದ್ಧ

ಪುಣೆ, ಮಾ.23 - ಆಲ್‌ರೌಂಡರ್ ಕೃನಾಲ್ ಪಾಂಡ್ಯ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಮಂಗಳವಾರ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಭಾರತಕ್ಕಾಗಿ 18...

ಸ್ಪಿನ್ ದಾಳಿಗೆ ಇಂಗ್ಲೆಂಡ ಪತನ; ಐಸಿಸಿ ಫೈನಲ್ ಗೆ ಭಾರತ

ಅಹಮದಾಬಾದ್, ಮಾ.6 - ಅನುಭವಿ ಸ್ಪಿನ್ ಬೌಲರ್ ಆರ್.ಅಶ್ವಿನ್ ಹಾಗೂ ಅಕ್ಷರ ಪಟೇಲ್ ಅವರ ಕರಾರುವಾಕ್ ದಾಳಿಗೆ ನಲುಗಿದ ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 25 ರನ್ ಗಳಿಂದ ಸೋಲು...

ರಿಷಭ ಪಂತ್ ಶತಕ; ಭಾರತದ ಮುನ್ನಡೆ

ಅಹಮದಾಬಾದ್, ಮಾ.5- ರಿಷಭ ಪಂತ್ (101) ಬಾರಿಸಿದ ಶತಕ ಹಾಗೂ ಆಲ್ ರೌಂಡರ್ ವಾಶಿಂಗ್ಟನ್ ಸುಂದರ್ (ಅಜೇಯ 60) ಅವರ ಅರ್ಧಶತಕದ ಬಲದಿಂದ ಭಾರತ ಕ್ರಿಕೆಟ್ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್...

ಭಾರತದ ಸ್ಪಿನ್ ಬಲೆಗೆ ಬಿದ್ದ ಇಂಗ್ಲೆಂಡ್

ಅಹಮದಾಬಾದ್, ಮಾ.4 - ಸ್ಪಿನ್ ಬೌಲರ್ ಗಳಾದ ಅಕ್ಷರ ಪಟೇಲ (68ಕ್ಕೆ 4) ಹಾಗೂ ಆರ್.ಅಶ್ವಿನ್ (47ಕ್ಕೆ 3) ಅವರ ಬಿಗುವಿನ ದಾಳಿಗೆ ಪ್ರವಾಸಿ ಇಂಗ್ಲೆಂಡ್ ತಂಡ ನಲುಗಿದ್ದು, ಭಾರತ ನಾಲ್ಕನೇ ಟೆಸ್ಟ್...