ವಾಷಿಂಗ್ಟನ್: ಫೆ 27- ಜಗತ್ತಿನ ದೊಡ್ಡಣ್ಣ ಎಂದೇ ಹೆಸರಾಗಿರುವ ಅಮೆರಿಕಾದ ಸಾಲ ದಿನ ದಿನಕ್ಕೂ ಹೆಚ್ಚುತ್ತಿದೆ ಎಂದು ಆ ದೇಶದ ಶಾಸನ ಸಭೆಯ ಪ್ರಮುಖ ಸದಸ್ಯ ಅಲೆಕ್ಸ್ ಮೂನಿ ಅಲ್ಲಿನ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಹೆಚ್ಚಿನ ಸಾಲ ಅಮೆರಿಕಾದ ಎಲ್ಲಾ ವಲಯಗಳ ಮೇಲೂ ಸವಾಲು ಹಾಕುತ್ತಿರುವ ಚೀನಾದಿಂದ ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತಕ್ಕೂ ಕೂಡಾ 216 ಬಿಲಿಯನ್ ಡಾಲರ್ ಸಾಲ ಬಾಕಿ ಇದೆ ಎಂದು ಹೇಳಿದ್ದಾರೆ. ಪ್ರಸ್ತುತ, ಅಮೆರಿಕಾದ ಸಾಲ 29 ಟ್ರಿಲಿಯನ್ ಡಾಲರ್ ತಲುಪಿದೆ ಎಂದು ಅವರು ವಿವರಿಸಿದ್ದಾರೆ.
2020 ರ ಹೊತ್ತಿಗೆ, ಅಮೆರಿಕಾದ ರಾಷ್ಟ್ರೀಯ ಸಾಲ 23.4 ಟ್ರಿಲಿಯನ್ ತಲುಪಿದೆ ಎಂದು ಮೂನಿ ವಿವರಿಸಿದ್ದು, ದೇಶದ ಪ್ರತಿ ವ್ಯಕ್ತಿಗೆ ಸರಾಸರಿ, 72,309 ಡಾಲರ್ ಸಾಲ ಬೀಳಲಿದೆ ಎಂದು ವಿವರಿಸಿದ್ದಾರೆ. ಕಳೆದ ವರ್ಷ ತೆಗೆದುಕೊಂಡ ಸಾಲವನ್ನು ಪ್ರತಿಯೊಬ್ಬ ವ್ಯಕ್ತಿಗೆ ವಿತರಿಸಿದರೆ ಅದು 10,000 ಡಾಲರ್ ಆಗಲಿದೆ ಎಂದು ಹೇಳಿದರು. ಈ ರೀತಿ ಪಡೆದ ಎಲ್ಲ ಸಾಲಗಳು ಎಲ್ಲಿಗೆ ಹೋಗುತ್ತವೆ ಎಂಬ ವಿವರಗಳಲ್ಲಿ ಸುಳ್ಳು ಮಾಹಿತಿ ಇದೆ ಎಂದು ಅವರು ಆರೋಪಿಸಿದ್ದಾರೆ.
ಅಮೆರಿಕ ಮಿತ್ರ ದೇಶಗಳಾದರೂ ಚೀನಾ ಹಾಗೂ ಜಪಾನ್ ನಿಂದ ಹೆಚ್ಚು ಸಾಲಪಡೆದುಕೊಂಡಿದ್ದೇವೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ. ಅಮೆರಿಕಾ ಎರಡು ದೇಶಗಳಲ್ಲಿ ಒಂದು ದೇಶಕ್ಕೆ 1 ಟ್ರಿಲಿಯನ್ ಗಿಂತಲೂ ಹೆಚ್ಚಿನ ಹಣ ನೀಡಬೇಕಿದೆ ಎಂದು ಅವರು ಹೇಳಿದರು. 2 ಟ್ರಿಲಿಯನ್ ಡಾಲರ್ ವೆಚ್ಚದಲ್ಲಿ ಕೊರೊನಾ ಪ್ಯಾಕೇಜ್ ಯೋಜನೆಯನ್ನು ವಿರೋಧಿಸಿ ಅಲ್ಲಿನ ಶಾಸನ ಸಭೆಯಲ್ಲಿ ಮೂನಿ ಈ ಹೇಳಿಕೆ ನೀಡಿದ್ದಾರೆ.
2000 ಇಸವಿಯಲ್ಲಿ 5.6 ಟ್ರಿಲಿಯನ್ ಇದ್ದ ಅಮೆರಿಕಾದ ಸಾಲ, ಬರಾಕ್ ಒಬಾಮಾ ಅವಧಿಯಲ್ಲಿ ದ್ವಿಗುಣಗೊಂಡಿತು ಎಂದು ಮೂನಿ ಹೇಳಿದ್ದಾರೆ. ನಾವು ಸಾಲವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದ್ದೇವೆ .. ಇದರೊಂದಿಗೆ ಜಿಡಿಪಿಯಲ್ಲಿನ ಸಾಲದ ಪ್ರಮಾಣ ನಿಯಂತ್ರಣವಿಲ್ಲದಂತಾಗಿದೆ ಎಂದು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಹೊಸ ಪ್ರೋತ್ಸಾಹಕ ಯೋಜನೆ ಅನುಮೋದಿಸುವ ಮೊದಲು ಈ ಎಲ್ಲ ಅಂಶಗಳನ್ನು ಪರಿಗಣನೆಗೆ ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಸಹ ಶಾಸನ ಸಭಾ ಒತ್ತಾಯಿಸಿದರು. ಈ ಯೋಜನೆಯ ಹೆಚ್ಚಿನ ಹಣ ಕರೋನಾ ಪರಿಹಾರ ಯೋಜನೆಗಳಿಗೆ ಹೋಗುವುದಿಲ್ಲ ಎಂದು ಅವರು ಆರೋಪಿಸಿದರು.