ಮುಂಬೈ: ಮಾರ್ಚ್ 04 (ಯುಎನ್ಐ) ಹರ್ಷದ ಮೆಹ್ತಾ ನ ಷೇರುಪೇಟೆ ಹಗರಣವನ್ನು ಅದ್ಭುತವಾಗಿ ಚಿತ್ರಿಸಿಕೊಟ್ಟಿದ್ದ ಹನ್ಸಲ್ ಮೆಹ್ತಾ ಹೊಸ ‘ಸ್ಕ್ಯಾಮ್’ ವೆಬ್ ಸರಣಿಯನ್ನು ಘೋಷಿಸಿದ್ದಾರೆ. ಈ ಬಾರಿ ಅಬ್ದುಲ್ ಕರೀಮ ತೇಲಗಿ ಕತೆಯನ್ನು ತೆರೆಗೆ ತರುತ್ತಿದ್ದಾರೆ.
’ಸ್ಕ್ಯಾಮ್ 2003: ದಿ ಕ್ಯೂರಿಯಸ್ ಕೇಸ್ ಆಫ್ ಅಬ್ದುಲ್ ತೆಲಗಿ’ ಎಂದು ಹೆಸರಿಡಲಾಗಿದೆ. ಹನ್ಸಲ್ ಮೆಹ್ತಾ ನಿರ್ದೇಶಿಸುತ್ತಿರುವ ಈ ವೆಬ್ ಸರಣಿಯು ಸೋನಿ ಲಿವ್ನಲ್ಲಿ ಪ್ರಸಾರವಾಗಲಿದೆ.
ಈ ವೆಬ್ ಸರಣಿಗೆ ಮರಾಠಿ ಚಿತ್ರಕತೆಗಾರ ಕಿರಣ ಯಜ್ಞೋಪವಿತ್ ಚಿತ್ರಕತೆ ಬರೆಯುತ್ತಿದ್ದಾರೆ. ವೆಬ್ ಸರಣಿಯು ಲೇಖಕ, ಪತ್ರಕರ್ತ ಸಂಜಯ ಸಿಂಗ್ ಅವರ ‘ರಿಪೋರ್ಟರ್ ಡೈರಿ’ ಪುಸ್ತಕ ಆಧರಿಸಿದೆ. ಸ್ಕ್ಯಾಮ್-1992 ನಲ್ಲಿ ಹರ್ಷದ್ ಮೆಹ್ತಾ ಪಾತ್ರ ನಿರ್ವಹಿಸಿದ್ದ ಪ್ರತಿಭಾವಂತ ನಟ ಪ್ರತೀಕ ಗಾಂಧಿ ಅವರೇ ‘ಸ್ಕ್ಯಾಮ್ 2003’ ನಲ್ಲಿ ಕರೀಂ ತೆಲಗಿಯ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.