ಬೆಂಗಳೂರು: ಮಾ 5 – ಒನ್ ನೇಷನ್ ಒನ್ ಎಲೆಕ್ಷನ್ (ಒಂದು ದೇಶ ಒಂದು ಚುನಾವಣೆ) ವಿರೋಧಿಸಿ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಎರಡನೇ ದಿನವಾದ ಇಂದು ಆಡಳಿತ ಮತ್ತು ವಿರೋಧಿ ಸದಸ್ಯರ ಗದ್ದಲ, ಆರೋಪ –ಪ್ರತ್ಯಾರೋಪ, ಮತ್ತು ಮುಂದುವರೆದ ವಿರೋಧಿ ಸದಸ್ಯರ ಧರಣಿ ,ಧಿಕ್ಕಾರದ ಘೋಷಣೆ ಕಾರಣ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.
ನಿನ್ನೆ ದಿನ ಇದೇ ವಿಚಾರಕ್ಕೆ ಕಲಾಪ ಬಲಿಯಾಗಿತ್ತು . ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ತಮ್ಮ ಅಂಗಿಬಿಚ್ಚಿ ಪ್ರತಿಭಟಿಸಿದ್ದು ಟೀಕೆಗೆ ಗುರಿಯಾಗಿದೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಪ್ರತಿಭಟನೆ ಮುಂದುವರೆಸಿದರು. ಆಗ ಆಡಳಿತ ಮತ್ತು ವಿರೋಧಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲದ ವಾತವರಣದ ಕಾರಣ ಸಬಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು ಕೆಲ ಕಾಲ ಮುಂದೂಡಿದರು. ವಿಧಾನಸಭೆಯ ಇಂದಿನ ಕಾರ್ಯಕಲಾಪಗಳ ಪಟ್ಟಿಯಲ್ಲಿ ಒಂದು ದೇಶ ಒಂದು ಚುನಾವಣೆ ಬಿಟ್ಟು ಬೇರಾವುದೇ ವಿಷಯದ ಉಲ್ಲೇಖವಿರಲಿಲ್ಲ .