INDIA COVID-19 Statistics

13,714,419
Confirmed Cases
Updated on 13/04/2021 3:06 PM
1,280,101
Total active cases
Updated on 13/04/2021 3:06 PM
171,205
Total deaths
Updated on 13/04/2021 3:06 PM
Tuesday, April 13, 2021

INDIA COVID-19 Statistics

13,714,419
Total confirmed cases
Updated on 13/04/2021 3:06 PM
1,280,101
Total active cases
Updated on 13/04/2021 3:06 PM
171,205
Total deaths
Updated on 13/04/2021 3:06 PM
12,263,113
Total recovered
Updated on 13/04/2021 3:06 PM
Home State Bengaluru ಸಾರ್ವಜನಿಕ ಹಣ ಹಾಳು ಮಾಡುತ್ತಿರುವ ರಾಜ್ಯ ಸರಕಾರ - ಸಿಪಿಎಂ

ಸಾರ್ವಜನಿಕ ಹಣ ಹಾಳು ಮಾಡುತ್ತಿರುವ ರಾಜ್ಯ ಸರಕಾರ – ಸಿಪಿಎಂ

ಬೆಂಗಳೂರು: ಮಾ 6 – ಅನಗತ್ಯ ಮತ್ತು ಪ್ರಸ್ತುತವಲ್ಲದ ವಿಷಯದ ಮೇಲೆ ಸದನದ ಸಮಯವನ್ನು ಹಾಳು ಮಾಡುತ್ತಿರುವ ಹಾಗೂ ಸಾರ್ವಜನಿಕರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡುತ್ತಿರುವ ರಾಜ್ಯ ಸರಕಾರದ ಬೇಜವಾಬ್ದಾರಿಯುತ ಕ್ರಮ ಅಕ್ಷಮ್ಯ ಎಂದು ಭಾರತ ಕಮ್ಯುನಿಸ್ಟ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.

ರಾಜ್ಯ ತೀವ್ರತರ ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿರುವಾಗ ಮತ್ತು ಅವುಗಳಿಗೆ ಪರಿಹಾರ ಹುಡುಕಲು ವಿನಿಯೋಗವಾಗಬೇಕಾದ ಸದನದ ಸಮಯ ಕಳೆದೆರಡು ದಿನಗಳಿಂದ ರಾಜ್ಯ ಸರಕಾರದ ಹೊಣೆಗೇಡಿತನದಿಂದಾಗಿಯೇ ಪೋಲಾಗುತ್ತಿದೆ ಸಿಪಿಐಎಂ ಕಾರ್ಯದರ್ಶಿ ಯು. ಬಸವರಾಜು ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಜೆಪಿ ಹಾಗೂ ಸಂಘ ಪರಿವಾರವು ತನ್ನ ಜೀವಮಾನದುದ್ದಕ್ಕೂ ಸಮಸ್ಯೆ ಅಲ್ಲದವುಗಳನ್ನೇ, ದೊಡ್ಡ ಸಮಸ್ಯೆಗಳೆಂದು ಮುಂದೆ ಮಾಡಿ ಜನರ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರವನ್ನು ಮಾಡುತ್ತಾ ಬಂದಿವೆ. ಈಗಲೂ ಅದರ ಭಾಗವಾಗಿಯೇ, ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರವನ್ನು ಮುನ್ನೆಲೆಗೆ ತಂದಿದೆ ಎಂದು ಅವರು ಟೀಕಿಸಿದ್ದಾರೆ.

ರಾಜ್ಯ ಕಳೆದ ಮೂರು – ನಾಲ್ಕು ವರ್ಷಗಳಿಂದ ವ್ಯಾಪಕ ಬರಗಾಲ ಹಾಗೂ ಅತಿವೃಷ್ಟಿಗಳಿಂದ ಮತ್ತು ಕೋವಿಡ್ – 19, ಲಾಕ್ ಡೌನ್ ಗಳಿಂದ ಬಾಧಿತವಾಗಿದೆ. ಇವುಗಳಿಂದ ತೊಂದರೆಗಳಾದ ರೈತರು, ಕೂಲಿಕಾರರು, ಮಹಿಳೆಯರು, ದಲಿತರು, ಕಾರ್ಮಿಕರ ಪರಿಹಾರದ ವಿಚಾರಗಳು ಗಂಭೀರವಾಗಿವೆ. ಅದೇ ರೀತಿ, ರಾಜ್ಯದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಿರುವ ಯಾವುದೇ ರೈತರ ಯಾವುದೇ ಬೆಳೆಗೆ ಡಾ. ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ಕೃಷಿ ಆಯೋಗದ ಸಲಹೆಯಂತೆ ಬೆಂಬಲ ಬೆಲೆ ನಿಗದಿ ಮಾಡುತ್ತಿಲ್ಲ. ಮಾತ್ರವಲ್ಲಾ, ನಿಗದಿಪಡಿಸಿದ ಕಳಪೆ ಬೆಲೆಯೂ ದೊರೆಯುತ್ತಿಲ್ಲ. ರೈತರನ್ನು ದೊಡ್ಡ ವ್ಯಾಪಾರಿಗಳ ಲೂಟಿಗೆ ಬಿಡಲಾಗಿದೆ. ವಿದ್ಯಾವಂತ ನಿರುದ್ಯೋಗ ವ್ಯಾಪಕವಾಗಿ ಬೆಳೆಯುತ್ತಿದೆ. ಯುವಜನರು ಅಪಮಾನದ ಬದುಕು ಬದುಕುತ್ತಿದ್ದಾರೆ ಎಂದು ಹೇಳಿದ್ದಾರೆ.

ವ್ಯವಸಾಯ, ಉಪಕಸುಬುಗಳನ್ನು ಹಾಗೂ ಕೃಷಿ ಭೂಮಿಯನ್ನು ಕಾರ್ಪೋರೇಟ್ ಲೂಟಿಗೆ ತೆರೆಯಲು ಮತ್ತು ನೂರಾರು ವರ್ಷಗಳ ಸಮರ ಶೀಲ ಹೋರಾಟಗಳಿಂದ ಕಾರ್ಮಿಕರು ಪಡೆದುಕೊಂಡಿದ್ದ ಹಕ್ಕುಗಳನ್ನು ಕಸಿದು ಕಾರ್ಪೋರೇಟ್ ಲೂಟಿಗೆ ತೆರೆಯುವ ದೇಶ ದ್ರೋಹಿ ಕಾಯ್ದೆಗಳನ್ನು, ಗ್ರಾಹಕರ ಲೂಟಿಗೆ ಕಾರಣವಾದ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳಂತಹ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕಾಯ್ದೆಗಳನ್ನು ದೇಶದ ಹಾಗೂ ರಾಜ್ಯದ ಜನತೆಯ ಮೇಲೆ ಬಲವಂತವಾಗಿ ಹೇರಲಾಗಿದೆ ಎಂದು ಹೇಳಿದ್ದಾರೆ.

ದೇಶ ಹಾಗೂ ರಾಜ್ಯಗಳಿಗೆ ಅಪಾರ ಲಾಭ ತಂದುಕೊಡುತ್ತಿರುವ ಮತ್ತು ದಮನಿತರ ಜನತೆಗೆ ಮೀಸಲಾತಿಯಡಿ ವ್ಯಾಪಕ ಉದ್ಯೋಗ ನೀಡುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆಗಳಾದ ಬ್ಯಾಂಕ್, ವಿಮೆ, ರೈಲ್ವೇ, ಹಡಗು, ವಿಮಾನ, ಬಿ.ಎಸ್.ಎನ್.ಎಲ್, ವಿದ್ಯುತ್ ಮುಂತಾದ ರಂಗಗಳನ್ಮು ಕಾರ್ಪೋರೇಟ್ ವಲಯಕ್ಕೆ ದಾನ ಮಾಡುತ್ತಿರುವುದರಿಂದ ಇಲ್ಲಿನ ನೌಕರರು ಉದ್ಯೋಗದ ತೀವ್ರ ಅಭದ್ರತೆಯನ್ನು ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರ ಕಳೆದ ಬಜೆಟ್ ನಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ತೆರಿಗೆ ವಿನಾಯಿತಿ ನೀಡಿ, ಜನ ಸಾಮಾನ್ಯರ ಮೇಲೆ ತೆರಿಗೆಯ ಭಾರ ಹೇರಿದ್ದಾರೆ. ಕಾರಣ ಅಗತ್ಯ ವಸ್ತುಗಳ ವ್ಯಾಪಕ ಬೆಲೆ ಏರಿಕೆಗೆ ಕಾರಣವಾಗಿದೆ. ಇಂತಹ ಗಹನವಾದ ಯಾವುದೇ ವಿಷಯಗಳನ್ನು ಚರ್ಚೆಗಳಿಲ್ಲದೇ ಪ್ರಜಾಸತ್ತಾತ್ಮಕ ವಿಧಾನಗಳನ್ನು ಗಾಳಿಗೆ ತೂರಿ, ಪಾರ್ಲಿಮೆಂಟಿನಲ್ಲಿ ಮತ್ತು ವಿಧಾನ ಸಭೆಗಳಲ್ಲಿ ಅಂಗೀಕರಿಸಲು ಕ್ರಮ ವಹಿಸಿದ ಬಿಜೆಪಿ, ಇದೀಗ ಒಂದು ಚುನಾವಣೆಯ ಕುರಿತು ಚರ್ಚಿಸುವ ಮತ್ತು ತಾನು ಭಾರೀ ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳುವ ನಾಟಕವಾಡುತ್ತಿದೆ ಎಂದು ಸಿಪಿಐಎಂ ವಿಮರ್ಶಿಸಿದೆ.

ರಾಜ್ಯದ ಜನತೆ ಬಿಜೆಪಿಯ ಇಂತಹ ನಯ ವಂಚನೆಯ ಕುರಿತು ಜಾಗ್ರತೆ ವಹಿಸಿ ತಿರಸ್ಕರಿಸುವಂತೆ ಕರೆ ನೀಡುತ್ತದೆ. ರಾಜ್ಯದ ಲಕ್ಷಾಂತರ ರೈತರು, ಕಾರ್ಮಿಕರು, ಮಹಿಳೆಯರು, ನಾಗರೀಕರು ಈ ಜನ ವಿರೋಧಿ ನೀತಿಗಳು ಹಾಗೂ ಲೂಟಿಕೋರ ಕಾಯ್ದೆಗಳ ವಿರುದ್ದ ತೀರ್ವ ರೀತಿಯ ಚಳುವಳಿಯಲ್ಲಿ ತೊಡಗಿರುವಾಗ ಜನರ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರವೇ ಇದಾಗಿದೆ. ಇಂತಹ ಅಗ್ಗದ ಕುತಂತ್ರಗಳನ್ನು ಕೈಬಿಟ್ಟು ಜನರನ್ನು ಬಾಧಿಸುವ ಜ್ವಲಂತ ಸಮಸ್ಯೆಗಳ ಪರಿಹಾರದ ವಿಚಾರಗಳನ್ನು ಸದನವು ಕೈಗೆತ್ತಿಕೊಳ್ಳುವಂತೆ ರಾಜ್ಯ ಸರಕಾರ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here

State

ರಮಜಾನ‌ ; ಸರ್ಕಾರದಿಂದ ಹೊಸ ಮಾರ್ಗಸೂಚಿ

ಬೆಂಗಳೂರು, ಏ 13- ಮುಸ್ಲಿಮರ ಪವಿತ್ರ ರಮಜಾನ ಉಪವಾಸ ಮಾಸ ಇಂದಿನಿಂದ ಆರಂಭವಾಗಲಿದ್ದು ಒಂದು ತಿಂಗಳ ಕಾಲ ಈ ಆಚರಣೆ ಇರಲಿದೆ. ಇದಕ್ಕಾಗಿ ಕೊರೊನಾ ಕಾರಣದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಕಂಟೈನ್...

ಕೋವಿಡ್ ಕುರಿತು ಸರ್ವಪಕ್ಷ ಸಭೆ- ಮುಖ್ಯಮಂತ್ರಿ

ಬೀದರ, ಏಪ್ರಿಲ್ 13 - ಕೋವಿಡ್ ಪರಿಸ್ಥಿತಿ ಮತ್ತು ಲಾಕ್‌ಡೌನ್ ಹೇರುವ ಕುರಿತು ಚರ್ಚಿಸಲು ಈ ತಿಂಗಳ 18 ರಂದು ಸರ್ವಪಕ್ಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ...

ಗೋಕಾಕ ತಾಲೂಕಿನಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರ

ಬೆಳಗಾವಿ, 11- ಕಳೆದ ಕೆಲ ದಿನಗಳಿಂದ ಕೆಲಸದ ಒತ್ತಡದ ನಿಮಿತ ಚುನಾವಣೆ ಪ್ರಚಾರ ಮಾಡಲು ಆಗಿರಲಿಲ್ಲ, ನಾಳೆಯಿಂದಲೇ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಪ್ರಚಾರ ಆರಂಭಿಸುವದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ...

ಅಂಗಡಿ ಸಂಸದರಾಗಿ ಅನುದಾನ ತಂದದೆಷ್ಟು, ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಕೊಪ್ಪಳ, 11-ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅನನುಭವಸ್ಥರು, ಸಂಸತ್ ನಲ್ಲಿ ಅವರು ಹೇಗೆ ವಿಷಯ ಪ್ರಸ್ತಾಪಿಸುತ್ತಾರರೆಂದಿದ್ದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ದಿ. ಸುರೇಶ ಅಂಗಡಿ ನಾಲ್ಕು ಅವಧಿಗೆ ಸಂಸದರಾಗಿ ಎಷ್ಟು ಅನುಧಾನ ರಾಜ್ಯಕ್ಕೆ...

National

ಗುಜರಾತ‌ ಹಿಂಸಾಚಾರ; ಮೋದಿಗೆ ಕ್ಲೀನ‌ಚಿಟ್‌ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ, ಏ 13- ಗುಜರಾತ್ ಗಲಭೆ ಪ್ರಕರಣದಲ್ಲಿ 2002ರಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ, ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್‌ ಚಿಟ್‌ ಪ್ರಶ್ನಿಸಿ...

24 ಗಂಟೆಯಲ್ಲಿ 1.61 ಲಕ್ಷ ಜನರಿಗೆ ಕೊರೋನಾ; 879 ಸಾವು

ನವದೆಹಲಿ, ಏ 13 - ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿದ್ದು. ಕಳೆದ 24 ಗಂಟೆಯಲ್ಲಿ 1,61,ಲಕ್ಷ ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಈಗ ಸೋಂಕಿತರ ಸಂಖ್ಯೆ...

ಸತ್ಯಮಂಗಲಂ ಅರಣ್ಯದಲ್ಲಿ ಭಾರಿ ನಿಧಿ; ವೀರಪ್ಪನ್ ಪುತ್ರಿಯ ಹೇಳಿಕೆ

ಚೆನ್ನೈ, ಏ 11- ದಂತ ಚೋರ, ಕಾಡು ಕಳ್ಳ ವೀರಪ್ಪನ್ ನೆಲೆಸಿದ್ದ ಸತ್ಯಮಂಗಲಂ ಅರಣ್ಯ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಹಣ ಅಡಗಿಸಿಟ್ಟಿದ್ದಾನೆ ಎಂದು ಆತನ ಪುತ್ರಿ ವಿಜಯಲಕ್ಷ್ಮಿ ಹೇಳಿರುವುದು ಸಂಚಲನ ಸೃಷ್ಟಿಸಿದೆ. ವಾಲ್ಮುರಿಮಾಯಿ ಕಚ್ಚಿಯಲ್ಲಿ...

ನಟ ಸತೀಶ ಕೌಲ್ ಕೊರೋನಾಗೆ ಬಲಿ

ಚಂಡಿಗಡ, ಏಪ್ರಿಲ್ 10- ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ನಟ ಸತೀಶ ಕೌಲ್ ಶನಿವಾರ ಲುಧಿಯಾನದಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಸೋಂಕು ಪತ್ತೆಯ ನಂತರ ಸತೀಶ ಕೌಲ್ ರನ್ನು ಲುಧಿಯಾನಾದ ಖಾಸಗಿ...

International

30 ವರ್ಷದಿಂದ ಬೆಳೆಸಿದ್ದ ಉಗುರಿಗೆ ಕತ್ತರಿ

ಟೆಕ್ಸಾಸ್, 9- ದಾಖಲೆಗಾಗಿಯೋ ಶೋಕಿಗಾಗಿಯೋ 30 ವರುಷಗಳಿಂದ ಬೆಳೆಸಿಕೊಂಡು ಬಂದಿದ್ದ ತಮ್ಮ ಕೈ ಉಗುರುಗಳನ್ನು ಅಮೆರಿಕಾದ ಅಯನ್ನಾ ವಿಲಿಯಮ್ಸ ಎಂಬವರು‌ ಕತ್ತರಿಸಿಕೊಂಡು ಜಗತ್ತಿನ ಗಮನ ಸೆಳೆದಿದ್ದಾರೆ. ಅಯನ್ನಾ ಅವರು ಕಳೆದ ಮೂವತ್ತು ವರ್ಷಗಳಿಂದ ತಮ್ಮ...

ಕೋವಿಡ್ ಲಸಿಕೆ ನಂತರವೂ 63 ಜನರ ಸಾವು

ವಿಯೆನ್ನಾ ಏಪ್ರಿಲ್ 8 - ಆಸ್ಟ್ರಿಯಾದಲ್ಲಿ ಕರೋನ ಸೋಂಕಿನ ಲಸಿಕೆ ಪಡೆದ ನಂತರವೂ 63 ಜನರು ಮೃತಪಟ್ಟಿದ್ದಾರೆ ಎಂದು ಆಸ್ಟ್ರಿಯನ್ ಸರ್ಕಾರಿ ವಕ್ತಾರರು ಹೇಳಿದ್ದಾರೆ. ಕಳೆದ ವಾರ ಕರೋನ ಸೋಂಕಿನ ವಿರುದ್ಧ ಲಸಿಕೆ ಹಾಕಿದ...

ವಾರದಲ್ಲಿ ಕೋವಿಡ್ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆ

ಮಾಸ್ಕೋ, ಏಪ್ರಿಲ್ 7- ಕಳೆದೊಂದು ವಾರದಲ್ಲಿ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ವಾರದ ವರದಿ ತಿಳಿಸಿದೆ. ‘ಜಾಗತಿಕವಾಗಿ...

ನಾವಿನ್ನೂ ಸಾವು ಬದುಕಿನ ಹೋರಾಟದಲ್ಲಿದ್ದೇವೆ

ವಾಷಿಂಗ್ಟನ್, ಏ 7- ಕೊರೊನಾ ಸಾಂಕ್ರಾಮಿಕ ವಿಷಯದಲ್ಲಿ ಅಮೆರಿಕಾ ಈಗಲೂ ಸಾವು ಬದುಕಿನ ನಡುವಿನ ಸ್ಪರ್ಧೆಯಲ್ಲಿದೆ ಎಂದು ಅಮೇರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಹಾಗಾಗಿ ಕೊರೊನಾ ಸಾಂಕ್ರಾಮಿಕ ಪ್ರಸರಣ ತಡೆಗಟ್ಟಲು ಜನರು ಕಟ್ಟುನಿಟ್ಟಿನ...

Entertainment

ರಜನಿಕಾಂತಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ

ನವದೆಹಲಿ, ಎ 1- ಹೆಸರಾಂತ ಚಿತ್ರನಟ ರಜನಿಕಾಂತ ಅವರಿಗೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ ಈ ಬಗ್ಗೆ ಟ್ವೀಟ್ ಮಾಡಿ...

“90 ಹೊಡಿ ಮನೀಗ್ ನಡಿ” ಚಿತ್ರೀಕರಣ ಮುಕ್ತಾಯ

ಬೆಂಗಳೂರು, ಮಾರ್ಚ 31- ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ ಹಾಸ್ಯ ಪ್ರಧಾನ "90 ಹೊಡಿ ಮನೀಗ್ ನಡಿ" ಚಿತ್ರ ಇತ್ತೀಚೆಗೆ ಚಿತ್ರೀಕರಣ ಮುಕ್ತಾಯಗೊಳಿಸಿ ಕುಂಬಳಕಾಯಿ ಒಡೆಯುವ ಶಾಸ್ತ್ರ ಮುಗಿಸಿಕೊಂಡಿದೆ. "ಅಮ್ಮ ಟಾಕೀಸ ಬಾಗಲಕೋಟ"...

“ದಂಡಿ” ಚಿತ್ರಕ್ಕೆ ಚಾಲನೆ

ಕಾರವಾರ: ಮಾರ್ಚ 23 -ಸ್ವತಂತ್ರ ಪೂರ್ವದಲ್ಲಿ ನಡೆದ‌ ದಂಡಿ-ಉಪ್ಪಿನ ಸತ್ಯಾಗ್ರಹದ ಬಗ್ಗೆ ಸಿನಿಮಾವೊಂದು ಮೂಡಿ‌ಬರುತ್ತಿದೆ. ತಾರಾ, ಸುಚೇಂದ್ರ ಪ್ರಸಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ವಿಶಾಲ ರಾಜ್ ನಿರ್ದೇಶನವಿದ್ದು, ಹೊನ್ನಾವರದಲ್ಲಿ ಚಾಲನೆ...

“ತಾಜಮಹಲ್-2” ಚಿತ್ರೀಕರಣ ಮುಕ್ತಾಯ

ಬೆಂಗಳೂರು: ಮಾರ್ಚ 23- ಈ ಹಿಂದೆ ಡೇಂಜರ್‌ಜೋನ್, ನಿಶ್ಯಬ್ದ 2, ಅನುಷ್ಕದಂಥ ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜಕುಮಾರ ಅವರ ಸಾರಥ್ಯದ "ತಾಜ್‌ಮಹಲ್-2" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನ ಎಚ್‌ಎಂಟಿ ಏರಿಯಾದಲ್ಲಿ ಸೆಟ್ ಹಾಕಿ ಜೀವ ಬಿಡುವೆ...

Sports

ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೃನಾಲ್, ಕನ್ನಡಿಗ ಪ್ರಸಿದ್ಧ

ಪುಣೆ, ಮಾ.23 - ಆಲ್‌ರೌಂಡರ್ ಕೃನಾಲ್ ಪಾಂಡ್ಯ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಮಂಗಳವಾರ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಭಾರತಕ್ಕಾಗಿ 18...

ಸ್ಪಿನ್ ದಾಳಿಗೆ ಇಂಗ್ಲೆಂಡ ಪತನ; ಐಸಿಸಿ ಫೈನಲ್ ಗೆ ಭಾರತ

ಅಹಮದಾಬಾದ್, ಮಾ.6 - ಅನುಭವಿ ಸ್ಪಿನ್ ಬೌಲರ್ ಆರ್.ಅಶ್ವಿನ್ ಹಾಗೂ ಅಕ್ಷರ ಪಟೇಲ್ ಅವರ ಕರಾರುವಾಕ್ ದಾಳಿಗೆ ನಲುಗಿದ ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 25 ರನ್ ಗಳಿಂದ ಸೋಲು...

ರಿಷಭ ಪಂತ್ ಶತಕ; ಭಾರತದ ಮುನ್ನಡೆ

ಅಹಮದಾಬಾದ್, ಮಾ.5- ರಿಷಭ ಪಂತ್ (101) ಬಾರಿಸಿದ ಶತಕ ಹಾಗೂ ಆಲ್ ರೌಂಡರ್ ವಾಶಿಂಗ್ಟನ್ ಸುಂದರ್ (ಅಜೇಯ 60) ಅವರ ಅರ್ಧಶತಕದ ಬಲದಿಂದ ಭಾರತ ಕ್ರಿಕೆಟ್ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್...

ಭಾರತದ ಸ್ಪಿನ್ ಬಲೆಗೆ ಬಿದ್ದ ಇಂಗ್ಲೆಂಡ್

ಅಹಮದಾಬಾದ್, ಮಾ.4 - ಸ್ಪಿನ್ ಬೌಲರ್ ಗಳಾದ ಅಕ್ಷರ ಪಟೇಲ (68ಕ್ಕೆ 4) ಹಾಗೂ ಆರ್.ಅಶ್ವಿನ್ (47ಕ್ಕೆ 3) ಅವರ ಬಿಗುವಿನ ದಾಳಿಗೆ ಪ್ರವಾಸಿ ಇಂಗ್ಲೆಂಡ್ ತಂಡ ನಲುಗಿದ್ದು, ಭಾರತ ನಾಲ್ಕನೇ ಟೆಸ್ಟ್...