ಬೆಂಗಳೂರು: ಮಾ 9 – ರಮೇಶ ಜಾರಕಿಹೊಳಿ ಅವರದೆನ್ನಲಾದ ಸಿಡಿ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದ್ದಾರೆ.
ಸಿಡಿ ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಇದು ಸುಳ್ಳು ದಾಖಲೆ ರೀತಿಯಲ್ಲಿದೆ ಎಂದರು.
ಒಕ್ಕಲಿಗರ ನಿಗಮಮಕ್ಕೆ ಬಜೆಟ್ನಲ್ಲಿ 500 ಕೋಟಿ ಮೀಸಲಿಟ್ಟಿದ್ದಾರೆ. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಜೊತೆ ಫೋನ್ ಮೂಲಕ ಮುಖ್ಯಮಂತ್ರಿ ಅವರು ಮಾತನಾಡಿದ್ದಾರೆ. ಒಕ್ಕಲಿಗರ ಸಮುದಾಯದಲ್ಲಿ ಬಡ ರೈತಾಪಿ ವರ್ಗದವರಿದ್ದಾರೆ. ಅವರಿಗೆ ಅನುಕೂಲ ಮಾಡುವಂತೆ ಮನವಿ ಮಾಡಿದ್ದೆವು. ಅದನ್ನು ಯಡಿಯೂರಪ್ಪ ಪುರಸ್ಕರಿಸಿದ್ದಾರೆ. ಬ್ರಾಹ್ಮಣ ನಿಗಮಕ್ಕೂ ಹಣ ಮೀಸಲಿಟ್ಟು ಮುಖ್ಯ ವಾಹಿನಿಗೆ ಬರಲು ಸಹಾಯ ಮಾಡಿದ್ದಾರೆ ಎಂದರು.
ಹಿಂದಿನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಒನ್ ನೇಷನ್,ಒನ್ ಎಲೆಕ್ಷನ್ ವಿಚಾರದ ಬಗ್ಗೆ ಪ್ರಸ್ತಾಪವಾಗಿತ್ತು. ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡಲು ಸಿದ್ದರಾಮಯ್ಯ ಒಪ್ಪಿದ್ದರು. ಪ್ಯಾನಲ್ನಲ್ಲಿ ಇಂತಿಷ್ಟು ಜನ ಮಾತನಾಡುತ್ತಾರೆ ಎಂದು ಪಟ್ಟಿ ನೀಡಿದ್ದರು. ಈಗ ಯೂ ಟರ್ನ್ ಹೊಡೆದಿದ್ದಾರೆ ಎಂದು ಆರೋಪಿಸಿದರು.