INDIA COVID-19 Statistics

13,714,419
Confirmed Cases
Updated on 13/04/2021 4:06 PM
1,280,101
Total active cases
Updated on 13/04/2021 4:06 PM
171,205
Total deaths
Updated on 13/04/2021 4:06 PM
Tuesday, April 13, 2021

INDIA COVID-19 Statistics

13,714,419
Total confirmed cases
Updated on 13/04/2021 4:06 PM
1,280,101
Total active cases
Updated on 13/04/2021 4:06 PM
171,205
Total deaths
Updated on 13/04/2021 4:06 PM
12,263,113
Total recovered
Updated on 13/04/2021 4:06 PM
Home Editorial ಒಳಿತು ಮಾಡು ಮನುಜ!

ಒಳಿತು ಮಾಡು ಮನುಜ!

ಮನುಷ್ಯ ಜನ್ಮ ಪಡೆಯುವುದೇ ಇನ್ನೊಬ್ಬರಿಗೆ ಉಪಕರಿಸಲು ಎಂಬ ನಂಬಿಕೆ ಇತ್ತು. ಈಗ ಸುತ್ತ ಒಮ್ಮೆ ಕಣ್ಣು ಹಾಯಿಸಿದರೆ, ಒಳಿತು ಮಾಡುವ ಜನರಿಗಿಂತ ಕೆಡುಕು ಮಾಡುವವರೇ ಹೆಚ್ಚು ಕಾಣುತ್ತಾರೆ. ನಮ್ಮ ವ್ಯವಸ್ಥೆಯ ವೈಫಲ್ಯ ಇದಕ್ಕೆ ಕಾರಣ. ಜೊತೆಗೆ ಮನುಷ್ಯನ ದುರಾಸೆ ಕೂಡ ಕಾರಣ. ನಮ್ಮ ಪಾಲಿನ ಕರ್ತವ್ಯ ಮಾಡಬೇಕು, ಸಜ್ಜನಿಕೆಯಿಂದ ವರ್ತಿಸಬೇಕು, ಸಕಲ ಪ್ರಾಣಿಗಳಲ್ಲಿ ದಯೆ ಇರಿಸಬೇಕು ಎಂದೆಲ್ಲ ಕೇಳಿಸಿಕೊಂಡಿರುತ್ತೇವೆ. ಆದರೆ ನಮ್ಮ ವೈಯಕ್ತಿಕ ಬದುಕಿನ ಪ್ರಶ್ನೆ ಬಂದಾಗ ಆಯ್ಕೆ ಮಾಡಿಕೊಳ್ಳುವುದು ಅನುಕೂಲಕರ ಮಾರ್ಗವನ್ನು. ಅದರ ಪರಿಣಾಮವಾಗಿ ನಮ್ಮ ವ್ಯವಸ್ಥೆ ಸರಿ ಮಾಡಲಾಗದಷ್ಟು ಕೆಟ್ಟು ಕುಳಿತಿದೆ. ವ್ಯವಸ್ಥೆಯನ್ನು ಜನ, ಜನರನ್ನು ವ್ಯವಸ್ಥೆ ದೂಷಿಸುತ್ತಾ ಕಾಲ ತಳ್ಳಲಾಗುತ್ತಿದೆ.

ಇಲ್ಲಿ ಒಳ್ಳೆಯದು ಮಾಡಲು ಯತ್ನಿಸಿದರೆ ಏನಾದರೊಂದು ತೊಡಕಿನಲ್ಲಿ ಸಿಲುಕಿಕೊಳ್ಳುತ್ತೇವೆ. ಆದರೆ ಕೇಡು ಮಾಡುವವರು ಸಲೀಸಾಗಿ ತಮ್ಮ ಕೆಲಸ ಮುಂದುವರಿಸಿಕೊಂಡು ಹೋಗುತ್ತಾರೆ. ಇಲ್ಲೊಂದು ಘಟನೆ ಹೀಗಿದೆ. ಶಿವಮೊಗ್ಗ ಜಿಲ್ಲೆಯ ಸಾಹಿತಿ, ರೈತ, ಚಳವಳಿಗಾರ, ಪರಿಸರ ಪ್ರೇಮಿಯೊಬ್ಬರು ಕಾರಂತರ ಒಡನಾಟದಿಂದ ಪ್ರೇರಿತರಾಗಿ, ಅವರ ನೆನಪಲ್ಲಿ ಒಂದು ಪ್ರಾಕೃತಿಕ ಉದ್ಯಾನ ಮಾಡಬೇಕು ಎಂದುಕೊಂಡರು. ಅದಕ್ಕೆ ತಮ್ಮ ಊರಿನ ಹತ್ತಿರದ ಹತ್ತು ಎಕರೆ ಜಮೀನು ಮಂಜೂರಾತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಹಲವು ವರ್ಷ ಓಡಾಡಿ, ಅವರಿವರನ್ನು ಕಂಡು, ಒಂದು ಹಂತದಲ್ಲಿ ಅವರಿಗೆ ಜಮೀನು ಮಂಜೂರಾಗುವ ಹಂತ ತಲುಪಿತು. ಇನ್ನೇನು ಜಿಲ್ಲಾಧಿಕಾರಿ ಜಮೀನು ಮಂಜೂರಾತಿಗೆ ಸಹಿ ಮಾಡಬೇಕು ಎನ್ನುವಷ್ಟರಲ್ಲಿ ಸ್ಥಳೀಯ ಪುಢಾರಿಯೊಬ್ಬ ಬಂದು, ಅದೇ ಜಮೀನು ತನ್ನ ಆಪ್ತರೊಬ್ಬರಿಗೆ ಕೊಡುವಂತೆ ಹೇಳಿದ. ತಕ್ಷಣ ಅದು ಮಂಜೂರಾಯಿತು. ಇಷ್ಟೆಲ್ಲ ಆದ ಮೇಲೆ ತಿಳಿದವರು ಹೇಳಿದರು, ಹೇಗೂ ನೀವು ಹೋರಾಟಗಾರರು, ಇಷ್ಟೆಲ್ಲ ಒದ್ದಾಟ ಮಾಡಿ ಜಮೀನು ಮಂಜೂರಾತಿ ಮಾಡಿಸಿಕೊಳ್ಳಲು ಶ್ರಮಿಸಿದಿರಿ. ಕೊನೆ ಘಳಿಗೆಯಲ್ಲಿ ಅದು ಕೈ ತಪ್ಪಿತು. ನೀವು ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಎಂದರು. ಅದಕ್ಕೆ ಅವರು ಹೇಳಿದರು, ನನ್ನ ಜೀವನದಲ್ಲಿ ನಾನಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವವನಲ್ಲ. ಅಲ್ಲಿ ಆಗುವುದೇನು ಅಂತ ಗೊತ್ತಿದೆ. ಕೊನೆಗೆ ಗೋರೂರು ಹೇಳಿದ ಹಾಗೆ ಕೋರ್ಟನಲ್ಲಿ ನ್ಯಾಯ ಗಳಿಸಿ ಗೆದ್ದವನು ಸೋತ, ಸೋತವನು ಸತ್ತ ಅಂತಾಗುತ್ತೆ. ಸ್ಥಳೀಯ ಪುಢಾರಿ ಜಮೀನು ಮಂಜೂರಾತಿಗೆ ಒಂದಿಷ್ಟು ಹಣ ತಿನಿಸಿದ್ದಾನೆ ಅಂತಲೂ ಗೊತ್ತು. ನಾನು ಕೇಸು ಮಾಡಿದರೆ, ಸ್ಥಳೀಯ ಅಧಿಕಾರಿಗಳನ್ನು ಎತ್ತಿ ಕಟ್ಟಿ ಕಿರುಕುಳ ಶುರು ಮಾಡಿಸ್ತಾನೆ, ಅದೆಲ್ಲ ಯಾಕೆ ಅಂದರು.

ಇಂಥ ಸಾಕಷ್ಟು ಉದಾಹರಣೆಗಳನ್ನು ಪ್ರತಿಯೊಬ್ಬರೂ ನಿತ್ಯ ಕಾಣುತ್ತಲೇ ಇರುತ್ತಾರೆ. ನಮ್ಮದೇ ಹತ್ತಿರದ ವ್ಯಕ್ತಿಯನ್ನು ವಿನಾಕಾರಣ ಅಲೆಸುವ, ನ್ಯಾಯಯುತ ಕೋರಿಕೆ ಇದ್ದರೂ ಮನ್ನಿಸದ ಅಧಿಕಾರಿಗಳನ್ನು ನೋಡುತ್ತೇವೆ. ಅದೇ ಒಂದಿಷ್ಟು ಲಂಚ ಕೈ ಸೇರಿದರೆ, ಅನ್ಯಾಯ ಕೂಡ ನ್ಯಾಯ ಆಗಿ ಬಿಡುತ್ತದೆ. ಇಂಥವರನ್ನು ಎದುರಿಸಿ ನಿಲ್ಲುವುದು ಕಷ್ಟ. ಸಾಮಾನ್ಯರಿಗಂತೂ ಅಸಾಧ್ಯ. ಇದರ ಜೊತೆಗೇ ಮೇಲಿನವರು ಅನಿಸಿಕೊಂಡ ಜನ ಮಾಡುವ ತಪ್ಪುಗಳಿಂದ ಜೀವನಪರ್ಯಂತ ನೋವು, ಅನ್ಯಾಯಕ್ಕೆ ಈಡಾಗುವ ಜನರೂ ಇದ್ದಾರೆ. ಮೇಲಿನವ ಎನಿಸಿಕೊಂಡ ಅಧಿಕಾರಿ ತನ್ನ ಲೇಖನಿಯಿಂದ ಬರೆಯುವ ಷರಾ, ವ್ಯಕ್ತಿಗಳ ಬದುಕನ್ನೇ ಹಾಳುಗೆಡವಿದ ಉದಾಹರಣೆಗಳೂ ಇವೆ. ಉತ್ತರ ಭಾರತದಲ್ಲಿ ವಿನೀತ ತಿವಾರಿ ಎಂಬಾತ ಇಪ್ಪತ್ತು ವರ್ಷ ಜೈಲಲ್ಲಿ ಇದ್ದ ಮೇಲೆ, ಆತ ನಿರಪರಾಧಿ ಎಂದು ಸಾಬೀತಾಯಿತು. ಈಗ ಅವನ ಬಿಡುಗಡೆ ಆಗಿದೆ. ಆದರೆ ಆತ ಕಳೆದುಕೊಂಡ ಬದುಕಿನ ಮಹತ್ವದ ಇಪ್ಪತ್ತು ವರ್ಷ ಕೊಡುವವರು ಯಾರು?

ಗುಜರಾತ್‍ನಲ್ಲಿ 127 ಜನರನ್ನು ಸಿಮಿ ಸಂಘಟನೆಯ ಬೆಂಬಲಿಗರು ಎಂದು ಬಂಧಿಸಿ ಮೊಕದ್ದಮೆ ಹಾಕಲಾಯಿತು. ಅವರಲ್ಲಿ ಕೆಲವರು ಹಲವು ವರ್ಷ ಜೈಲಲ್ಲಿ ಇದ್ದು, ಜಾಮೀನು ಪಡೆದು ಹೊರಬಂದರು. ಬಂಧಿತರಲ್ಲಿ ಕೆಲವರು ಸಭೆಯೊಂದರಲ್ಲಿ ಪಾಲ್ಗೊಳ್ಳಲು ಹೊರಗಿನಿಂದ ಬಂದವರಿದ್ದರು. ಅವರ ವಿರುದ್ಧ 20 ವರ್ಷ ವಿಚಾರಣೆ ನಡೆಯಿತು. ಎರಡು ತಿಂಗಳಿಗೊಮ್ಮೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವದು ಕಡ್ಡಾಯ. ಅದಕ್ಕಾಗಿ ಸ್ಥಳೀಯರಲ್ಲದವರಿಗೆ ವಿನಾಯತಿ. ಅವರೆಲ್ಲ ಹಾಜರಾತಿ ಸಮಯಕ್ಕೆ ವಕೀಲರನ್ನು ನೇಮಕ ಮಾಡಿಕೊಳ್ಳಬೇಕು, ಓಡಾಟದ ವೆಚ್ಚ, ಮನೆ ಮಠ ಬಿಟ್ಟು ಈ ಮೊಕದ್ದಮೆ ಹಿಂದೆ ಸುತ್ತಬೇಕು. ಹೀಗಾಗಿ ಕೆಲವರು ತಮ್ಮ ಬದುಕು ಕಳೆದುಕೊಂಡರು. ಬಂಧಿತರಾದ್ದರಿಂದ ಸಮಾಜ ಇವರನ್ನು ದೂರ ಇಟ್ಟಿತು. ಇಪ್ಪತ್ತು ವರ್ಷದ ನಂತರ ಈಗ ತೀರ್ಪು ಹೊರಬಿದ್ದಿದ್ದು ಇವರೆಲ್ಲ ನಿರ್ದೋಷಿಗಳು ಎಂದು ನ್ಯಾಯಾಲಯ ಹೇಳಿದೆ. ಸುಮ್ಮನೆ ಇವರ ಬದುಕಿನ ಇಪ್ಪತ್ತು ವರ್ಷ ನುಂಗಿದ ಈ ನಮ್ಮ ವ್ಯವಸ್ಥೆ ಹೀಗೆಯೇ ಇರಲು ಬಿಡಬೇಕೇ?

ಕೊರೋನಾ ಸಮಯದಲ್ಲಿ ತಬ್ಲಿಗಿಗಳಿಂದಲೇ ಕೊರೋನಾ ಹರಡುತ್ತಿದೆ ಎಂದು ಮೊಕದ್ದಮೆಗಳನ್ನು ಹಾಕಿ ಅವರನ್ನು ಬಂಧಿಸಿದ್ದು ಒಂದು ಕಡೆಯಾದರೆ, ಅವರೆಲ್ಲ ಮಾನವ ಜನಾಂಗದ ವಿನಾಶಕ್ಕೆಂದೇ ಅವತಾರ ತಾಳಿ ಬಂದವರು ಎಂದು ನಿತ್ಯ ಬೆಳಗಾದರೆ ಹೊಡೆದುಕೊಳ್ಳುತ್ತಿದ್ದ ವಾಹಿನಿಗಳ ಅವಾಂತರ ಎಂಥದ್ದು ಎಂದು ನಾವೆಲ್ಲ ನೋಡಿದ್ದೇವೆ. ಆರೋಪ ಹೊತ್ತ ಯಾರೂ ದೋಷಿಗಳಲ್ಲ ಎಂದು ನ್ಯಾಯಾಲಯ ತೀರ್ಪಿತ್ತ ನಂತರ, ನಮ್ಮಿಂದ ತಪ್ಪಾಯಿತು ಎಂಬ ಸಣ್ಣದೊಂದು ಹೇಳಿಕೆಯನ್ನೂ ವಾಹಿನಿಗಳು ನೀಡಲಿಲ್ಲ.

ಇದೆಲ್ಲ ಗಮನಿಸಿದರೆ, ನಾವು ಎಂಥ ಅಸಹಾಯಕ ಸ್ಥಿತಿಯಲ್ಲಿ ಇದ್ದೇವೆ ಮತ್ತು ಇಡೀ ವ್ಯವಸ್ಥೆಯ ಕೈಗೆ ನಮ್ಮನ್ನು ನಾವು ಅಸಹಾಯಕರಾಗಿ ಒಪ್ಪಿಸಿಕೊಂಡಿದ್ದೇವೆ ಎಂದು ಅರಿವಾದೀತು. ಒಂದು ಸಣ್ಣ ಉದಾಹರಣೆ ನೋಡಿ. ನೀವು ನಿಮ್ಮ ಮನೆ ಮುಂದೆ ನಿಮ್ಮ ವಾಹನ ನಿಲ್ಲಿಸಿರುತ್ತೀರಿ. ಅದನ್ನು ಪೊಲೀಸರು ಎತ್ತಿಕೊಂಡು ಹೋಗುತ್ತಾರೆ. ನೀವು ಪ್ರಭಾವಿಗಳಾದರೆ ಅದೇ ಪೊಲೀಸರು ವಾಹನ ವಾಪಸ್ಸು ತಂದಿಟ್ಟು ಸಲಾಮು ಹೊಡೆದು ಹೋಗುತ್ತಾರೆ. ಇಲ್ಲವಾದಲ್ಲಿ, ಏನಾದರೊಂದು ಕಾನೂನು ಹೇಳಿ ನಿಮ್ಮಿಂದ ದಂಡ ವಸೂಲು ಮಾಡುತ್ತಾರೆ. ಇದು ತೀರಾ ಸಾಮಾನ್ಯ ಉದಾಹರಣೆ. ಪ್ರಭಾವಿಗಳಿಗೆ ಕಾಯ್ದೆ, ಕಾನೂನುಗಳು ಅನ್ವಯವಾಗುವುದೇ ಇಲ್ಲ.

ನಮ್ಮನ್ನು ಇಂದು ಆಳುತ್ತಿರುವ ರಾಜಕಾರಣಿಗಳಲ್ಲಿ ಬಹುಪಾಲು ಜನರು ಒಂದಲ್ಲ ಒಂದು ಅಪರಾಧ ಮಾಡಿಕೊಂಡು ಬಂದವರು. ಅವರು ಹಾಗೆ ಮಾಡಿದ ಮೊದಲ ಹಂತದಲ್ಲಿಯೇ ನಮ್ಮ ವ್ಯವಸ್ಥೆಯು ಅವರನ್ನು ಹಿಡಿದು ಸರಿಯಾದ ಶಿಕ್ಷೆ ಕೊಟ್ಟಿದ್ದರೆ ಇಂಥ ಪಾಪಿಗಳ ಆಡಳಿತ ನೋಡುವ ದೌರ್ಭಾಗ್ಯ ಒದಗುತ್ತಿರಲಿಲ್ಲ. ನಮ್ಮಲ್ಲಿ ಮನುಷ್ಯತ್ವಕ್ಕಿಂತ ಜಾತಿ, ಧರ್ಮ, ಹಣ, ಅಂತಸ್ತುಗಳು ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿವೆ. ಅದೆಲ್ಲ ಹೋಗಿ ಮನುಷ್ಯ ನೆಮ್ಮದಿಯಿಂದ ಬದುಕುವುದು ಯಾವಾಗ?

LEAVE A REPLY

Please enter your comment!
Please enter your name here

State

ರಮಜಾನ‌ ; ಸರ್ಕಾರದಿಂದ ಹೊಸ ಮಾರ್ಗಸೂಚಿ

ಬೆಂಗಳೂರು, ಏ 13- ಮುಸ್ಲಿಮರ ಪವಿತ್ರ ರಮಜಾನ ಉಪವಾಸ ಮಾಸ ಇಂದಿನಿಂದ ಆರಂಭವಾಗಲಿದ್ದು ಒಂದು ತಿಂಗಳ ಕಾಲ ಈ ಆಚರಣೆ ಇರಲಿದೆ. ಇದಕ್ಕಾಗಿ ಕೊರೊನಾ ಕಾರಣದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಕಂಟೈನ್...

ಕೋವಿಡ್ ಕುರಿತು ಸರ್ವಪಕ್ಷ ಸಭೆ- ಮುಖ್ಯಮಂತ್ರಿ

ಬೀದರ, ಏಪ್ರಿಲ್ 13 - ಕೋವಿಡ್ ಪರಿಸ್ಥಿತಿ ಮತ್ತು ಲಾಕ್‌ಡೌನ್ ಹೇರುವ ಕುರಿತು ಚರ್ಚಿಸಲು ಈ ತಿಂಗಳ 18 ರಂದು ಸರ್ವಪಕ್ಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ...

ಗೋಕಾಕ ತಾಲೂಕಿನಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರ

ಬೆಳಗಾವಿ, 11- ಕಳೆದ ಕೆಲ ದಿನಗಳಿಂದ ಕೆಲಸದ ಒತ್ತಡದ ನಿಮಿತ ಚುನಾವಣೆ ಪ್ರಚಾರ ಮಾಡಲು ಆಗಿರಲಿಲ್ಲ, ನಾಳೆಯಿಂದಲೇ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಪ್ರಚಾರ ಆರಂಭಿಸುವದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ...

ಅಂಗಡಿ ಸಂಸದರಾಗಿ ಅನುದಾನ ತಂದದೆಷ್ಟು, ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಕೊಪ್ಪಳ, 11-ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅನನುಭವಸ್ಥರು, ಸಂಸತ್ ನಲ್ಲಿ ಅವರು ಹೇಗೆ ವಿಷಯ ಪ್ರಸ್ತಾಪಿಸುತ್ತಾರರೆಂದಿದ್ದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ದಿ. ಸುರೇಶ ಅಂಗಡಿ ನಾಲ್ಕು ಅವಧಿಗೆ ಸಂಸದರಾಗಿ ಎಷ್ಟು ಅನುಧಾನ ರಾಜ್ಯಕ್ಕೆ...

National

ಗುಜರಾತ‌ ಹಿಂಸಾಚಾರ; ಮೋದಿಗೆ ಕ್ಲೀನ‌ಚಿಟ್‌ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ, ಏ 13- ಗುಜರಾತ್ ಗಲಭೆ ಪ್ರಕರಣದಲ್ಲಿ 2002ರಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ, ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್‌ ಚಿಟ್‌ ಪ್ರಶ್ನಿಸಿ...

24 ಗಂಟೆಯಲ್ಲಿ 1.61 ಲಕ್ಷ ಜನರಿಗೆ ಕೊರೋನಾ; 879 ಸಾವು

ನವದೆಹಲಿ, ಏ 13 - ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿದ್ದು. ಕಳೆದ 24 ಗಂಟೆಯಲ್ಲಿ 1,61,ಲಕ್ಷ ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಈಗ ಸೋಂಕಿತರ ಸಂಖ್ಯೆ...

ಸತ್ಯಮಂಗಲಂ ಅರಣ್ಯದಲ್ಲಿ ಭಾರಿ ನಿಧಿ; ವೀರಪ್ಪನ್ ಪುತ್ರಿಯ ಹೇಳಿಕೆ

ಚೆನ್ನೈ, ಏ 11- ದಂತ ಚೋರ, ಕಾಡು ಕಳ್ಳ ವೀರಪ್ಪನ್ ನೆಲೆಸಿದ್ದ ಸತ್ಯಮಂಗಲಂ ಅರಣ್ಯ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಹಣ ಅಡಗಿಸಿಟ್ಟಿದ್ದಾನೆ ಎಂದು ಆತನ ಪುತ್ರಿ ವಿಜಯಲಕ್ಷ್ಮಿ ಹೇಳಿರುವುದು ಸಂಚಲನ ಸೃಷ್ಟಿಸಿದೆ. ವಾಲ್ಮುರಿಮಾಯಿ ಕಚ್ಚಿಯಲ್ಲಿ...

ನಟ ಸತೀಶ ಕೌಲ್ ಕೊರೋನಾಗೆ ಬಲಿ

ಚಂಡಿಗಡ, ಏಪ್ರಿಲ್ 10- ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ನಟ ಸತೀಶ ಕೌಲ್ ಶನಿವಾರ ಲುಧಿಯಾನದಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಸೋಂಕು ಪತ್ತೆಯ ನಂತರ ಸತೀಶ ಕೌಲ್ ರನ್ನು ಲುಧಿಯಾನಾದ ಖಾಸಗಿ...

International

30 ವರ್ಷದಿಂದ ಬೆಳೆಸಿದ್ದ ಉಗುರಿಗೆ ಕತ್ತರಿ

ಟೆಕ್ಸಾಸ್, 9- ದಾಖಲೆಗಾಗಿಯೋ ಶೋಕಿಗಾಗಿಯೋ 30 ವರುಷಗಳಿಂದ ಬೆಳೆಸಿಕೊಂಡು ಬಂದಿದ್ದ ತಮ್ಮ ಕೈ ಉಗುರುಗಳನ್ನು ಅಮೆರಿಕಾದ ಅಯನ್ನಾ ವಿಲಿಯಮ್ಸ ಎಂಬವರು‌ ಕತ್ತರಿಸಿಕೊಂಡು ಜಗತ್ತಿನ ಗಮನ ಸೆಳೆದಿದ್ದಾರೆ. ಅಯನ್ನಾ ಅವರು ಕಳೆದ ಮೂವತ್ತು ವರ್ಷಗಳಿಂದ ತಮ್ಮ...

ಕೋವಿಡ್ ಲಸಿಕೆ ನಂತರವೂ 63 ಜನರ ಸಾವು

ವಿಯೆನ್ನಾ ಏಪ್ರಿಲ್ 8 - ಆಸ್ಟ್ರಿಯಾದಲ್ಲಿ ಕರೋನ ಸೋಂಕಿನ ಲಸಿಕೆ ಪಡೆದ ನಂತರವೂ 63 ಜನರು ಮೃತಪಟ್ಟಿದ್ದಾರೆ ಎಂದು ಆಸ್ಟ್ರಿಯನ್ ಸರ್ಕಾರಿ ವಕ್ತಾರರು ಹೇಳಿದ್ದಾರೆ. ಕಳೆದ ವಾರ ಕರೋನ ಸೋಂಕಿನ ವಿರುದ್ಧ ಲಸಿಕೆ ಹಾಕಿದ...

ವಾರದಲ್ಲಿ ಕೋವಿಡ್ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆ

ಮಾಸ್ಕೋ, ಏಪ್ರಿಲ್ 7- ಕಳೆದೊಂದು ವಾರದಲ್ಲಿ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ವಾರದ ವರದಿ ತಿಳಿಸಿದೆ. ‘ಜಾಗತಿಕವಾಗಿ...

ನಾವಿನ್ನೂ ಸಾವು ಬದುಕಿನ ಹೋರಾಟದಲ್ಲಿದ್ದೇವೆ

ವಾಷಿಂಗ್ಟನ್, ಏ 7- ಕೊರೊನಾ ಸಾಂಕ್ರಾಮಿಕ ವಿಷಯದಲ್ಲಿ ಅಮೆರಿಕಾ ಈಗಲೂ ಸಾವು ಬದುಕಿನ ನಡುವಿನ ಸ್ಪರ್ಧೆಯಲ್ಲಿದೆ ಎಂದು ಅಮೇರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಹಾಗಾಗಿ ಕೊರೊನಾ ಸಾಂಕ್ರಾಮಿಕ ಪ್ರಸರಣ ತಡೆಗಟ್ಟಲು ಜನರು ಕಟ್ಟುನಿಟ್ಟಿನ...

Entertainment

ರಜನಿಕಾಂತಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ

ನವದೆಹಲಿ, ಎ 1- ಹೆಸರಾಂತ ಚಿತ್ರನಟ ರಜನಿಕಾಂತ ಅವರಿಗೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ ಈ ಬಗ್ಗೆ ಟ್ವೀಟ್ ಮಾಡಿ...

“90 ಹೊಡಿ ಮನೀಗ್ ನಡಿ” ಚಿತ್ರೀಕರಣ ಮುಕ್ತಾಯ

ಬೆಂಗಳೂರು, ಮಾರ್ಚ 31- ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ ಹಾಸ್ಯ ಪ್ರಧಾನ "90 ಹೊಡಿ ಮನೀಗ್ ನಡಿ" ಚಿತ್ರ ಇತ್ತೀಚೆಗೆ ಚಿತ್ರೀಕರಣ ಮುಕ್ತಾಯಗೊಳಿಸಿ ಕುಂಬಳಕಾಯಿ ಒಡೆಯುವ ಶಾಸ್ತ್ರ ಮುಗಿಸಿಕೊಂಡಿದೆ. "ಅಮ್ಮ ಟಾಕೀಸ ಬಾಗಲಕೋಟ"...

“ದಂಡಿ” ಚಿತ್ರಕ್ಕೆ ಚಾಲನೆ

ಕಾರವಾರ: ಮಾರ್ಚ 23 -ಸ್ವತಂತ್ರ ಪೂರ್ವದಲ್ಲಿ ನಡೆದ‌ ದಂಡಿ-ಉಪ್ಪಿನ ಸತ್ಯಾಗ್ರಹದ ಬಗ್ಗೆ ಸಿನಿಮಾವೊಂದು ಮೂಡಿ‌ಬರುತ್ತಿದೆ. ತಾರಾ, ಸುಚೇಂದ್ರ ಪ್ರಸಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ವಿಶಾಲ ರಾಜ್ ನಿರ್ದೇಶನವಿದ್ದು, ಹೊನ್ನಾವರದಲ್ಲಿ ಚಾಲನೆ...

“ತಾಜಮಹಲ್-2” ಚಿತ್ರೀಕರಣ ಮುಕ್ತಾಯ

ಬೆಂಗಳೂರು: ಮಾರ್ಚ 23- ಈ ಹಿಂದೆ ಡೇಂಜರ್‌ಜೋನ್, ನಿಶ್ಯಬ್ದ 2, ಅನುಷ್ಕದಂಥ ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜಕುಮಾರ ಅವರ ಸಾರಥ್ಯದ "ತಾಜ್‌ಮಹಲ್-2" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನ ಎಚ್‌ಎಂಟಿ ಏರಿಯಾದಲ್ಲಿ ಸೆಟ್ ಹಾಕಿ ಜೀವ ಬಿಡುವೆ...

Sports

ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೃನಾಲ್, ಕನ್ನಡಿಗ ಪ್ರಸಿದ್ಧ

ಪುಣೆ, ಮಾ.23 - ಆಲ್‌ರೌಂಡರ್ ಕೃನಾಲ್ ಪಾಂಡ್ಯ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಮಂಗಳವಾರ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಭಾರತಕ್ಕಾಗಿ 18...

ಸ್ಪಿನ್ ದಾಳಿಗೆ ಇಂಗ್ಲೆಂಡ ಪತನ; ಐಸಿಸಿ ಫೈನಲ್ ಗೆ ಭಾರತ

ಅಹಮದಾಬಾದ್, ಮಾ.6 - ಅನುಭವಿ ಸ್ಪಿನ್ ಬೌಲರ್ ಆರ್.ಅಶ್ವಿನ್ ಹಾಗೂ ಅಕ್ಷರ ಪಟೇಲ್ ಅವರ ಕರಾರುವಾಕ್ ದಾಳಿಗೆ ನಲುಗಿದ ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 25 ರನ್ ಗಳಿಂದ ಸೋಲು...

ರಿಷಭ ಪಂತ್ ಶತಕ; ಭಾರತದ ಮುನ್ನಡೆ

ಅಹಮದಾಬಾದ್, ಮಾ.5- ರಿಷಭ ಪಂತ್ (101) ಬಾರಿಸಿದ ಶತಕ ಹಾಗೂ ಆಲ್ ರೌಂಡರ್ ವಾಶಿಂಗ್ಟನ್ ಸುಂದರ್ (ಅಜೇಯ 60) ಅವರ ಅರ್ಧಶತಕದ ಬಲದಿಂದ ಭಾರತ ಕ್ರಿಕೆಟ್ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್...

ಭಾರತದ ಸ್ಪಿನ್ ಬಲೆಗೆ ಬಿದ್ದ ಇಂಗ್ಲೆಂಡ್

ಅಹಮದಾಬಾದ್, ಮಾ.4 - ಸ್ಪಿನ್ ಬೌಲರ್ ಗಳಾದ ಅಕ್ಷರ ಪಟೇಲ (68ಕ್ಕೆ 4) ಹಾಗೂ ಆರ್.ಅಶ್ವಿನ್ (47ಕ್ಕೆ 3) ಅವರ ಬಿಗುವಿನ ದಾಳಿಗೆ ಪ್ರವಾಸಿ ಇಂಗ್ಲೆಂಡ್ ತಂಡ ನಲುಗಿದ್ದು, ಭಾರತ ನಾಲ್ಕನೇ ಟೆಸ್ಟ್...