INDIA COVID-19 Statistics

13,714,419
Confirmed Cases
Updated on 13/04/2021 3:06 PM
1,280,101
Total active cases
Updated on 13/04/2021 3:06 PM
171,205
Total deaths
Updated on 13/04/2021 3:06 PM
Tuesday, April 13, 2021

INDIA COVID-19 Statistics

13,714,419
Total confirmed cases
Updated on 13/04/2021 3:06 PM
1,280,101
Total active cases
Updated on 13/04/2021 3:06 PM
171,205
Total deaths
Updated on 13/04/2021 3:06 PM
12,263,113
Total recovered
Updated on 13/04/2021 3:06 PM
Home Editorial ಗಡಿ ಮೀರಿದ ‘ಮಂಗ್ಲಿ’

ಗಡಿ ಮೀರಿದ ‘ಮಂಗ್ಲಿ’

ಯಾರೇ ಆದರೂ ತನ್ನ ಪ್ರಾದೇಶಿಕ, ಸಾಂಸ್ಕøತಿಕ, ಭಾಷೆಯ ಮಿತಿ ದಾಟಿ ದೊಡ್ಡ ಮಟ್ಟ ಮುಟ್ಟುವುದು ಸುಲಭದ ಸಂಗತಿ ಅಲ್ಲ. ನಗರಗಳಲ್ಲಿ ಹುಟ್ಟಿ ಬೆಳೆದವರೇ ಅವಕಾಶ ಪಡೆಯಲು ಒದ್ದಾಡುವಾಗ ಅದು ಹೇಗೋ ಗ್ರಾಮೀಣ ಪ್ರದೇಶದ ಪ್ರತಿಭಾವಂತರು ಗಮನ ಸೆಳೆದು, ಬಹಳ ಬೇಗ ತಮ್ಮ ಸಾಧನೆಯ ಉತ್ತುಂಗ ತಲುಪುತ್ತಾರೆ. ಅಂಥ ಸಾಧನೆಯ ಹಾದಿಯಲ್ಲಿ ಇರುವ ಹುಡುಗಿ ‘ಮಂಗ್ಲಿ’.

ಇದು ಆಕೆಯ ನಿಜ ಹೆಸರಲ್ಲ, ಅದು ಆಕೆಯ ಅಜ್ಜಿಯ ಹೆಸರು. ಮೂಲ ಹೆಸರು ಸತ್ಯವತಿ ರಾಠೋಡ. ಅನಂತಪುರ ಸಮೀಪದ ತಾಂಡಾ ಒಂದರಲ್ಲಿ ಹುಟ್ಟಿ ಬೆಳೆದ ಆಕೆಯದ್ದು ಹೇಳಿಕೊಳ್ಳುವಂಥ ಶ್ರೀಮಂತ ಕುಟುಂಬ ಅಲ್ಲ. ಹೇಗೋ ಎರಡು ಹೊತ್ತಿನ ಊಟ ಸಂಪಾದನೆಗೆ ದಾರಿ ಆಗುವಷ್ಟು ಜಮೀನು ಇತ್ತು. ಅಲ್ಲಿ ಆಕೆಯ ಅಪ್ಪ, ಅಮ್ಮ ಇಬ್ಬರೂ ದುಡಿಯುವಾಗ, ಇನ್ನೂ ಪ್ರಾಥಮಿಕ ಶಾಲೆ ದಾಟಿರದ ಸತ್ಯವತಿಯು ತನ್ನ ತಮ್ಮ, ತಂಗಿಯನ್ನು ಶಾಲೆಗೆ ಅಣಿಗೊಳಿಸಿ ಕಳುಹಿಸಬೇಕಿತ್ತು. ನಂತರ ತಂದೆ ತಾಯಿಗಳಿಗೆ ಹೊಲಕ್ಕೆ ಬುತ್ತಿ ಒಯ್ದು ಕೊಟ್ಟು ನಂತರ ಶಾಲೆಗೆ ಹೋಗಬೇಕಿತ್ತು. ಇನ್ನು ಒಂದೆರಡು ವರ್ಷ ಆಗುತ್ತಿದ್ದಂತೆ ಆಕೆ ಅಡುಗೆ ಮನೆಯ ಹೊಣೆ ಹೊತ್ತು ಅಡುಗೆ ಮಾಡಿ ತಂಗಿ, ತಮ್ಮಂದಿರನ್ನು ಶಾಲೆಗೆ ಕಳುಹಿಸಬೇಕಿತ್ತು. ಅಂಥವಳು ಹೈಸ್ಕೂಲ ಸೇರುವ ಹೊತ್ತಿಗೆ ತಕರಾರು ಕಾಣಿಸಿತು.

ಲಂಬಾಣಿ ಜನಾಂಗದಲ್ಲಿ ಹೆಣ್ಣು ಮಕ್ಕಳು ಓದುವುದು, ತಾಂಡಾದ ಹೊರಗೆ ಹೋಗುವುದು ನಿಷಿದ್ಧ. ಅಂಥದರಲ್ಲಿ ಆಕೆಯ ಓದಿಗೆ ಭಂಗ ತರುವ ಯತ್ನವನ್ನು ಸಮುದಾಯದ ಹಿರಿಯರು ಮಾಡಿದರು. ಅದನ್ನು ವಿರೋಧಿಸಿದ ತಂದೆಯು ಮಗಳನ್ನು ದೂರದೂರಿನ ಹೈಸ್ಕೂಲಿಗೆ ಕಳುಹಿಸಿದರು. ಆದರೆ ಆಕೆಯ ಖರ್ಚು ವೆಚ್ಚ ಭರಿಸಲು ಸಾಧ್ಯ ಇಲ್ಲದ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ರೂರಲ್ ಡೆವಲಪಮೆಂಟ್ ಟ್ರಸ್ಟ್. ಆದಿವಾಸಿ ಮತ್ತು ಬುಡಕಟ್ಟು ಮಕ್ಕಳ ವ್ಯಾಸಂಗಕ್ಕೆ ನೆರವಾಗುವ ಈ ಸಂಸ್ಥೆಯು ಸತ್ಯವತಿಯ ಓದಿನ ವೆಚ್ಚ ಭರಿಸಿತು. ಜೊತೆಗೆ ಆಕೆಯಲ್ಲಿದ್ದ ಪ್ರತಿಭೆ ಗುರುತಿಸಿ ಹಾಡು, ಭಾಷಣ ಸ್ಪರ್ಧೆಗಳಿಗೆ ಕಳುಹಿಸಲು ಆರಂಭಿಸಿತು. ತನ್ನ ಇಷ್ಟದ ಸಂಗೀತ ಕಲಿಯಲು ತಿರುಪತಿಯಲ್ಲಿ ಕರ್ನಾಟಕ ಸಂಗೀತ ಡಿಪ್ಲೊಮಾ ಸೇರಿ, ಅಲ್ಲಿಂದ ಮುಂದೆಯೂ ಓದಬೇಕೆಂಬ ಇಚ್ಛೆ ಇತ್ತಾದರೂ ಆರ್ಥಿಕ ತೊಂದರೆ ಅದಕ್ಕೆ ತಡೆ ಹಾಕಿತು. ಆಕೆಗೆ ದುಡಿದು ಕುಟುಂಬದ ನೆರವಿಗೆ ನಿಲ್ಲುವುದು ಅನಿವಾರ್ಯ ಆಯಿತು. ಅದೇ ಸಮಯಕ್ಕೆ ಹೈದರಾಬಾದ್‍ನ ಬಾಚಿ ನಾಯಕ ಎಂಬ ಜಾನಪದ ಹಾಡುಗಾರರ ತಂಡ ಸೇರಲು ಕರೆ ಬಂದಾಗ, ಸಂತೋಷದಿಂದಲೇ ಹೈದರಾಬಾದ್‍ಗೆ ಬಂದ ಆಕೆಯು ಶಾಲೆಯೊಂದರಲ್ಲಿ ಸಂಗೀತ ಶಿಕ್ಷಕಿ ಕೆಲಸಕ್ಕೆ ಸೇರಿದರು.

ಅದೇಕೋ ಆಕೆ ಜಾನಪದ ತಂಡದಲ್ಲಿ ಹಾಡುತ್ತಾ ಇದ್ದರೂ ಹೆಚ್ಚಿನ ಒತ್ತು ದೊರಕಿದ್ದು ಆಕೆಯ ಮಾತುಗಾರಿಕೆ ಬಗ್ಗೆ. ಖಾಸಗಿ ವಾಹಿನಿಯೊಂದರಲ್ಲಿ ಲಂಬಾಣಿ ವೇಷ ತೊಟ್ಟು ನಿರೂಪಕಿ ಆಗಲು ಅವಕಾಶ ಸಿಕ್ಕಿತು. ಆ ಸಂದರ್ಭದಲ್ಲಿ ಸತ್ಯವತಿ ಎಂಬ ಹೆಸರು ಬದಲಿಸಲು ಕೋರಿಕೆ ಬಂತು. ಹಾಗಾಗಿ ತಮ್ಮ ಅಜ್ಜಿ ಮಂಗ್ಲಿ ಹೆಸರನ್ನು ಇರಿಸಿಕೊಂಡ ಆಕೆ ನಿರೂಪಕಿಯಾಗಿ ಜನಪ್ರಿಯತೆ ಪಡೆದು ‘ಮಾಟಕಾರಿ ಮಂಗ್ಲಿ’ ಎನಿಸಿಕೊಂಡಿದ್ದರು. ಆದರೆ ಸಂಗೀತ ತನ್ನ ಕ್ಷೇತ್ರ ಆಗಬೇಕು ಎಂದು ಬಯಸಿದ್ದ ಆಕೆಗೆ ಇಲ್ಲಿ ಮುಂದುವರಿಯಲು ಇಷ್ಟ ಇಲ್ಲದಿದ್ದರೂ ಅನಿವಾರ್ಯತೆಯಾಗಿತ್ತು. ಅಂಥ ಹೊತ್ತು ಜಾನಪದ ಗಾಯನ ಸ್ಪರ್ಧೆಯ ಖಾಸಗಿ ವಾಹಿನಿ ವೇದಿಕೆ ‘ರೇಲರೇ ರೇಲಾ’ದಲ್ಲಿ ಹಾಡಿ ಸಿನಿಮಾ ಕ್ಷೇತ್ರದ ಗಮನ ಸೆಳೆದರು.

ಆಮೇಲೆ ಕೆಲವು ಸಿನಿಮಾಗಳಲ್ಲಿ ಆಕೆ ಹಾಡಿದರಾದರೂ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದು ‘ಅಲೋ ವೈಕುಂಠಪುರಂಲೋ’ ಸಿನಿಮಾದಲ್ಲಿ ಹಾಡಿದ ‘ರಾಮುಲೋ ರಾಮುಲ’ ಹಾಡಿನಿಂದ. ಅದಾದ ಮೇಲೆ ಕಳೆದ ವರ್ಷ ‘ಲವ್ ಸ್ಟೋರಿ’ ಸಿನಿಮಾಕ್ಕೆ ಆಕೆ ಹಾಡಿದ ‘ಸಾರಂಗದರಿಯಾ’ ಹಾಡು ಎಲ್ಲರ ಗಮನ ಸೆಳೆಯಿತು. ಸಿನಿಮಾ ರಂಗ ಎಚ್ಚೆತ್ತು ಅವಕಾಶಗಳ ಮಹಾಪುರವನ್ನೇ ಹರಿಸಿತು. ನಟ ಚಿರಂಜೀವಿಯ ಹುಟ್ಟುಹಬ್ಬ ಆಚರಣೆ ವೇದಿಕೆಯಲ್ಲಿ ಹಾಡಲು ಅವಕಾಶ ಪಡೆದಾಗ, ಆಕೆಯ ಹಾಡು ಕೇಳಿ ಚಿರಂಜೀವಿಯ ತಮ್ಮ ಮತ್ತು ನಟ ಪವನ ಕಲ್ಯಾಣ ಕೈಎತ್ತಿ ಮುಗಿದರು.

ಈಕೆಗೆ ದಿಢೀರನೆ ಪ್ರಸಿದ್ಧಿ ತಂದುಕೊಟ್ಟ ಇತ್ತೀಚಿನ ತೆಲುಗು ಸಿನಿಮಾ ‘ರಾಬರ್ಟ’. ಕನ್ನಡದಿಂದ ತೆಲುಗು ಮತ್ತು ಇತರ ಭಾಷೆಗಳಲ್ಲಿ ತೆರೆ ಕಂಡ ಈ ಚಿತ್ರದ ತೆಲುಗು ಅವತರಣಿಕೆಯಲ್ಲಿ ಮಂಗ್ಲಿ ಹಾಡಿದ ‘ಕಣ್ಣೇ ಅದಿರಿಂದಿ’ ರಾತ್ರಿ ಕಳೆಯುವುದರೊಳಗೆ ಆಕೆಯನ್ನು ದಕ್ಷಿಣ ಭಾರತವೇ ಗಮನಿಸುವಂತೆ ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿತು. ಅದರ ಬೆನ್ನಿಗೇ ಶಿವರಾತ್ರಿ ದಿನ ಕೋಯಮತ್ತೂರಿನಲ್ಲಿ ಇರುವ ಈಶಾ ಪ್ರತಿಷ್ಠಾನದ ಶಿವರಾತ್ರಿ ಆಚರಣೆ ವೇದಿಕೆಯಲ್ಲಿ ಹಾಡುವ ಅವಕಾಶ ದಕ್ಕಿ, ಆಕೆ ಈಗ ದೇಶ ವಿದೇಶಗಳಲ್ಲೂ ಪರಿಚಿತ.

ಓದುವುದು, ಊರಾಚೆ ಹೋಗುವುದು ಕೂಡ ನಿಷಿದ್ಧ ಎನಿಸಿದ ಸಮುದಾಯದಲ್ಲಿ ಹುಟ್ಟಿ ಬೆಳೆದ ಈ ಹುಡುಗಿ ಮೊದಲಿನಿಂದಲೂ ತನ್ನ ಮಿತಿಗಳನ್ನು ಮೀರುತ್ತಲೇ ಬೆಳವಣಿಗೆ ಸಾಧಿಸಿದವಳು. ತನ್ನ ಬಾಲ್ಯದ ಕನಸಾಗಿದ್ದ ಸಂಗೀತ ಕ್ಷೇತ್ರವನ್ನೇ ಅಂತಿಮವಾಗಿ ಕಾರ್ಯಕ್ಷೇತ್ರ ಮಾಡಿಕೊಂಡ ಈಕೆ ಜನಪ್ರಿಯ ನಿರೂಪಕಿ ಕೂಡ. ಆಕೆ ನಡೆಸಿ ಕೊಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೆಜಿಎಫ್ ಚಿತ್ರದ ನಾಯಕ ನಟನ ಜೊತೆ ನಡೆಸಿದ ಸಂದರ್ಶನದಲ್ಲಿ ‘ನಿಮಗೆ ಪುರಂದರ ದಾಸರು ಗೊತ್ತಾ?’ ಎಂದು ತಬ್ಬಿಬ್ಬು ಮಾಡಿದಳು. ಪುರಂದರ ದಾಸರು ಕರ್ನಾಟಕ ಸಂಗೀತದ ಪಿತಾಮಹರಲ್ಲಿ ಒಬ್ಬರು ಎಂದು ಆಕೆಯೇ ವಿವರಣೆ ನೀಡಿ, ಅವರೇ ರಚಿಸಿದ ‘ದಯಮಾಡೋ ರಂಗ’ ಕೃತಿಯನ್ನು ಹಾಡಿ ತೋರಿಸಿದ್ದಳು.

ನಮ್ಮಲ್ಲಿ ಕೂಡ ರಿಯಾಲಿಟಿ ಶೋಗಳು ನಡೆಯುತ್ತವೆ. ಆದರೆ ಅಲ್ಲಿ ಗೆಲುವು ಸಾಧಿಸಿದ ಯಾರೂ ಮುಂದೆ ಆ ಕ್ಷೇತ್ರದಲ್ಲಿ ಕಾಣುವುದೇ ಇಲ್ಲ. ಬದಲಿಗೆ ಯಾರೋ ಪರಭಾಷಿಕರನ್ನು ಕರೆಸಿ ಹಾಡಿಸಿ, ಭಾರೀ ಮೊತ್ತದ ಸಂಭಾವನೆ ತೆತ್ತು ಧನ್ಯರಾಗುವ ನಾವು ತೆಲುಗು ಭಾಷಿಕರಿಂದ ಕಲಿಯುವುದು ಸಾಕಷ್ಟಿದೆ. ಅಲ್ಲಿ ನಡೆಯುವ ಸಂಗೀತ ಆಧಾರಿತ ರಿಯಾಲಿಟಿ ಶೋಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಶ್ರಾವಣ ಭಾರ್ಗವಿ, ಗೀತ ಮಾಧುರಿ, ಮಲ್ಲಿಕಾರ್ಜುನ, ಗೋಪಿಕಾ, ಶ್ರೀಕೃಷಣ ಮುಂತಾದವರೆಲ್ಲ ರಿಯಾಲಿಟಿ ಶೋಗಳ ಮೂಲಕವೇ ಸಿನಿಮಾ ರಂಗಕ್ಕೆ ಬಂದು ಇಂದು ಮುಂಚೂಣಿ ಗಾಯಕರಾಗಿದ್ದಾರೆ. ಈಗ ಮಂಗ್ಲಿಯ ಸರದಿ. ತನ್ನ ಮಿತಿಗಳನ್ನು ದಾಟುತ್ತಾ ಸಾಗಿದ ಈ ಲಂಬಾಣಿ ಹುಡುಗಿ ಇನ್ನಷ್ಟು ಎತ್ತರ ಮುಟ್ಟಲಿ ಎಂಬುದು ನಮ್ಮ ಹಾರೈಕೆ.

LEAVE A REPLY

Please enter your comment!
Please enter your name here

State

ರಮಜಾನ‌ ; ಸರ್ಕಾರದಿಂದ ಹೊಸ ಮಾರ್ಗಸೂಚಿ

ಬೆಂಗಳೂರು, ಏ 13- ಮುಸ್ಲಿಮರ ಪವಿತ್ರ ರಮಜಾನ ಉಪವಾಸ ಮಾಸ ಇಂದಿನಿಂದ ಆರಂಭವಾಗಲಿದ್ದು ಒಂದು ತಿಂಗಳ ಕಾಲ ಈ ಆಚರಣೆ ಇರಲಿದೆ. ಇದಕ್ಕಾಗಿ ಕೊರೊನಾ ಕಾರಣದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಕಂಟೈನ್...

ಕೋವಿಡ್ ಕುರಿತು ಸರ್ವಪಕ್ಷ ಸಭೆ- ಮುಖ್ಯಮಂತ್ರಿ

ಬೀದರ, ಏಪ್ರಿಲ್ 13 - ಕೋವಿಡ್ ಪರಿಸ್ಥಿತಿ ಮತ್ತು ಲಾಕ್‌ಡೌನ್ ಹೇರುವ ಕುರಿತು ಚರ್ಚಿಸಲು ಈ ತಿಂಗಳ 18 ರಂದು ಸರ್ವಪಕ್ಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ...

ಗೋಕಾಕ ತಾಲೂಕಿನಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರ

ಬೆಳಗಾವಿ, 11- ಕಳೆದ ಕೆಲ ದಿನಗಳಿಂದ ಕೆಲಸದ ಒತ್ತಡದ ನಿಮಿತ ಚುನಾವಣೆ ಪ್ರಚಾರ ಮಾಡಲು ಆಗಿರಲಿಲ್ಲ, ನಾಳೆಯಿಂದಲೇ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಪ್ರಚಾರ ಆರಂಭಿಸುವದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ...

ಅಂಗಡಿ ಸಂಸದರಾಗಿ ಅನುದಾನ ತಂದದೆಷ್ಟು, ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಕೊಪ್ಪಳ, 11-ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅನನುಭವಸ್ಥರು, ಸಂಸತ್ ನಲ್ಲಿ ಅವರು ಹೇಗೆ ವಿಷಯ ಪ್ರಸ್ತಾಪಿಸುತ್ತಾರರೆಂದಿದ್ದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ದಿ. ಸುರೇಶ ಅಂಗಡಿ ನಾಲ್ಕು ಅವಧಿಗೆ ಸಂಸದರಾಗಿ ಎಷ್ಟು ಅನುಧಾನ ರಾಜ್ಯಕ್ಕೆ...

National

ಗುಜರಾತ‌ ಹಿಂಸಾಚಾರ; ಮೋದಿಗೆ ಕ್ಲೀನ‌ಚಿಟ್‌ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ, ಏ 13- ಗುಜರಾತ್ ಗಲಭೆ ಪ್ರಕರಣದಲ್ಲಿ 2002ರಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ, ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್‌ ಚಿಟ್‌ ಪ್ರಶ್ನಿಸಿ...

24 ಗಂಟೆಯಲ್ಲಿ 1.61 ಲಕ್ಷ ಜನರಿಗೆ ಕೊರೋನಾ; 879 ಸಾವು

ನವದೆಹಲಿ, ಏ 13 - ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿದ್ದು. ಕಳೆದ 24 ಗಂಟೆಯಲ್ಲಿ 1,61,ಲಕ್ಷ ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಈಗ ಸೋಂಕಿತರ ಸಂಖ್ಯೆ...

ಸತ್ಯಮಂಗಲಂ ಅರಣ್ಯದಲ್ಲಿ ಭಾರಿ ನಿಧಿ; ವೀರಪ್ಪನ್ ಪುತ್ರಿಯ ಹೇಳಿಕೆ

ಚೆನ್ನೈ, ಏ 11- ದಂತ ಚೋರ, ಕಾಡು ಕಳ್ಳ ವೀರಪ್ಪನ್ ನೆಲೆಸಿದ್ದ ಸತ್ಯಮಂಗಲಂ ಅರಣ್ಯ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಹಣ ಅಡಗಿಸಿಟ್ಟಿದ್ದಾನೆ ಎಂದು ಆತನ ಪುತ್ರಿ ವಿಜಯಲಕ್ಷ್ಮಿ ಹೇಳಿರುವುದು ಸಂಚಲನ ಸೃಷ್ಟಿಸಿದೆ. ವಾಲ್ಮುರಿಮಾಯಿ ಕಚ್ಚಿಯಲ್ಲಿ...

ನಟ ಸತೀಶ ಕೌಲ್ ಕೊರೋನಾಗೆ ಬಲಿ

ಚಂಡಿಗಡ, ಏಪ್ರಿಲ್ 10- ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ನಟ ಸತೀಶ ಕೌಲ್ ಶನಿವಾರ ಲುಧಿಯಾನದಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಸೋಂಕು ಪತ್ತೆಯ ನಂತರ ಸತೀಶ ಕೌಲ್ ರನ್ನು ಲುಧಿಯಾನಾದ ಖಾಸಗಿ...

International

30 ವರ್ಷದಿಂದ ಬೆಳೆಸಿದ್ದ ಉಗುರಿಗೆ ಕತ್ತರಿ

ಟೆಕ್ಸಾಸ್, 9- ದಾಖಲೆಗಾಗಿಯೋ ಶೋಕಿಗಾಗಿಯೋ 30 ವರುಷಗಳಿಂದ ಬೆಳೆಸಿಕೊಂಡು ಬಂದಿದ್ದ ತಮ್ಮ ಕೈ ಉಗುರುಗಳನ್ನು ಅಮೆರಿಕಾದ ಅಯನ್ನಾ ವಿಲಿಯಮ್ಸ ಎಂಬವರು‌ ಕತ್ತರಿಸಿಕೊಂಡು ಜಗತ್ತಿನ ಗಮನ ಸೆಳೆದಿದ್ದಾರೆ. ಅಯನ್ನಾ ಅವರು ಕಳೆದ ಮೂವತ್ತು ವರ್ಷಗಳಿಂದ ತಮ್ಮ...

ಕೋವಿಡ್ ಲಸಿಕೆ ನಂತರವೂ 63 ಜನರ ಸಾವು

ವಿಯೆನ್ನಾ ಏಪ್ರಿಲ್ 8 - ಆಸ್ಟ್ರಿಯಾದಲ್ಲಿ ಕರೋನ ಸೋಂಕಿನ ಲಸಿಕೆ ಪಡೆದ ನಂತರವೂ 63 ಜನರು ಮೃತಪಟ್ಟಿದ್ದಾರೆ ಎಂದು ಆಸ್ಟ್ರಿಯನ್ ಸರ್ಕಾರಿ ವಕ್ತಾರರು ಹೇಳಿದ್ದಾರೆ. ಕಳೆದ ವಾರ ಕರೋನ ಸೋಂಕಿನ ವಿರುದ್ಧ ಲಸಿಕೆ ಹಾಕಿದ...

ವಾರದಲ್ಲಿ ಕೋವಿಡ್ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆ

ಮಾಸ್ಕೋ, ಏಪ್ರಿಲ್ 7- ಕಳೆದೊಂದು ವಾರದಲ್ಲಿ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ವಾರದ ವರದಿ ತಿಳಿಸಿದೆ. ‘ಜಾಗತಿಕವಾಗಿ...

ನಾವಿನ್ನೂ ಸಾವು ಬದುಕಿನ ಹೋರಾಟದಲ್ಲಿದ್ದೇವೆ

ವಾಷಿಂಗ್ಟನ್, ಏ 7- ಕೊರೊನಾ ಸಾಂಕ್ರಾಮಿಕ ವಿಷಯದಲ್ಲಿ ಅಮೆರಿಕಾ ಈಗಲೂ ಸಾವು ಬದುಕಿನ ನಡುವಿನ ಸ್ಪರ್ಧೆಯಲ್ಲಿದೆ ಎಂದು ಅಮೇರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಹಾಗಾಗಿ ಕೊರೊನಾ ಸಾಂಕ್ರಾಮಿಕ ಪ್ರಸರಣ ತಡೆಗಟ್ಟಲು ಜನರು ಕಟ್ಟುನಿಟ್ಟಿನ...

Entertainment

ರಜನಿಕಾಂತಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ

ನವದೆಹಲಿ, ಎ 1- ಹೆಸರಾಂತ ಚಿತ್ರನಟ ರಜನಿಕಾಂತ ಅವರಿಗೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ ಈ ಬಗ್ಗೆ ಟ್ವೀಟ್ ಮಾಡಿ...

“90 ಹೊಡಿ ಮನೀಗ್ ನಡಿ” ಚಿತ್ರೀಕರಣ ಮುಕ್ತಾಯ

ಬೆಂಗಳೂರು, ಮಾರ್ಚ 31- ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ ಹಾಸ್ಯ ಪ್ರಧಾನ "90 ಹೊಡಿ ಮನೀಗ್ ನಡಿ" ಚಿತ್ರ ಇತ್ತೀಚೆಗೆ ಚಿತ್ರೀಕರಣ ಮುಕ್ತಾಯಗೊಳಿಸಿ ಕುಂಬಳಕಾಯಿ ಒಡೆಯುವ ಶಾಸ್ತ್ರ ಮುಗಿಸಿಕೊಂಡಿದೆ. "ಅಮ್ಮ ಟಾಕೀಸ ಬಾಗಲಕೋಟ"...

“ದಂಡಿ” ಚಿತ್ರಕ್ಕೆ ಚಾಲನೆ

ಕಾರವಾರ: ಮಾರ್ಚ 23 -ಸ್ವತಂತ್ರ ಪೂರ್ವದಲ್ಲಿ ನಡೆದ‌ ದಂಡಿ-ಉಪ್ಪಿನ ಸತ್ಯಾಗ್ರಹದ ಬಗ್ಗೆ ಸಿನಿಮಾವೊಂದು ಮೂಡಿ‌ಬರುತ್ತಿದೆ. ತಾರಾ, ಸುಚೇಂದ್ರ ಪ್ರಸಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ವಿಶಾಲ ರಾಜ್ ನಿರ್ದೇಶನವಿದ್ದು, ಹೊನ್ನಾವರದಲ್ಲಿ ಚಾಲನೆ...

“ತಾಜಮಹಲ್-2” ಚಿತ್ರೀಕರಣ ಮುಕ್ತಾಯ

ಬೆಂಗಳೂರು: ಮಾರ್ಚ 23- ಈ ಹಿಂದೆ ಡೇಂಜರ್‌ಜೋನ್, ನಿಶ್ಯಬ್ದ 2, ಅನುಷ್ಕದಂಥ ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜಕುಮಾರ ಅವರ ಸಾರಥ್ಯದ "ತಾಜ್‌ಮಹಲ್-2" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನ ಎಚ್‌ಎಂಟಿ ಏರಿಯಾದಲ್ಲಿ ಸೆಟ್ ಹಾಕಿ ಜೀವ ಬಿಡುವೆ...

Sports

ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೃನಾಲ್, ಕನ್ನಡಿಗ ಪ್ರಸಿದ್ಧ

ಪುಣೆ, ಮಾ.23 - ಆಲ್‌ರೌಂಡರ್ ಕೃನಾಲ್ ಪಾಂಡ್ಯ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಮಂಗಳವಾರ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಭಾರತಕ್ಕಾಗಿ 18...

ಸ್ಪಿನ್ ದಾಳಿಗೆ ಇಂಗ್ಲೆಂಡ ಪತನ; ಐಸಿಸಿ ಫೈನಲ್ ಗೆ ಭಾರತ

ಅಹಮದಾಬಾದ್, ಮಾ.6 - ಅನುಭವಿ ಸ್ಪಿನ್ ಬೌಲರ್ ಆರ್.ಅಶ್ವಿನ್ ಹಾಗೂ ಅಕ್ಷರ ಪಟೇಲ್ ಅವರ ಕರಾರುವಾಕ್ ದಾಳಿಗೆ ನಲುಗಿದ ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 25 ರನ್ ಗಳಿಂದ ಸೋಲು...

ರಿಷಭ ಪಂತ್ ಶತಕ; ಭಾರತದ ಮುನ್ನಡೆ

ಅಹಮದಾಬಾದ್, ಮಾ.5- ರಿಷಭ ಪಂತ್ (101) ಬಾರಿಸಿದ ಶತಕ ಹಾಗೂ ಆಲ್ ರೌಂಡರ್ ವಾಶಿಂಗ್ಟನ್ ಸುಂದರ್ (ಅಜೇಯ 60) ಅವರ ಅರ್ಧಶತಕದ ಬಲದಿಂದ ಭಾರತ ಕ್ರಿಕೆಟ್ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್...

ಭಾರತದ ಸ್ಪಿನ್ ಬಲೆಗೆ ಬಿದ್ದ ಇಂಗ್ಲೆಂಡ್

ಅಹಮದಾಬಾದ್, ಮಾ.4 - ಸ್ಪಿನ್ ಬೌಲರ್ ಗಳಾದ ಅಕ್ಷರ ಪಟೇಲ (68ಕ್ಕೆ 4) ಹಾಗೂ ಆರ್.ಅಶ್ವಿನ್ (47ಕ್ಕೆ 3) ಅವರ ಬಿಗುವಿನ ದಾಳಿಗೆ ಪ್ರವಾಸಿ ಇಂಗ್ಲೆಂಡ್ ತಂಡ ನಲುಗಿದ್ದು, ಭಾರತ ನಾಲ್ಕನೇ ಟೆಸ್ಟ್...