ನವದೆಹಲಿ: ಮಾರ್ಚ್ 19 – ದೇಶದಲ್ಲಿ ಮತ್ತೆ ಕೊರೋ ಅಟ್ಟಹಾಸ ಮುಂದುದುವರೆದಿದ್ದು ಕಳೆದ 24 ಗಂಟೆಗಳಲ್ಲಿ 39,726 ಹೊಸಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿ, 154 ಜನರು ಸೊಂಕಿಗೆ ಬಲಿಯಾಗಿದ್ದಾರೆ.
ದೇಶದಲ್ಲಿ ಈವರೆಗೆ ಒಟ್ಟು ಸೋಂಕಿತ ಸಂಖ್ಯೆ 1,15,14,331 ಕ್ಕೆಏರಿಕೆಯಾಗಿದ್ದರೆ ಈವರೆಗೆ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 1,59,370 ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೇಳಿದೆ.
ಸಕ್ರಿಯ ಪ್ರಕರಣಗಳು 18,918 ರಷ್ಟು ಏರಿಕೆಯಾಗಿ 2,71,282 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 20,654 ಜನರು ಮಾರಣಾಂತಿಕ ವೈರಸ್ನಿಂದ ಚೇತರಿಸಿಕೊಂಡಿದ್ದಾರೆ, ಈ ನಡುವೆ ಈವರೆಗೆ ಒಟ್ಟು 23,13,70,546 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಈ ಪೈಕಿ ಕಳೆದ ಒಂದು ದಿನದಲ್ಲಿ 10,57,383 ಪರೀಕ್ಷೆ ನಡೆಸಲಾಗಿದೆ ಈವರೆಗೆ 3,ಕೋಟಿ 89,20,259 ಜನರಿಗೆ ಲಸಿಕೆ ನೀಡಲಾಗಿದೆ.