INDIA COVID-19 Statistics

13,714,419
Confirmed Cases
Updated on 13/04/2021 4:06 PM
1,280,101
Total active cases
Updated on 13/04/2021 4:06 PM
171,205
Total deaths
Updated on 13/04/2021 4:06 PM
Tuesday, April 13, 2021

INDIA COVID-19 Statistics

13,714,419
Total confirmed cases
Updated on 13/04/2021 4:06 PM
1,280,101
Total active cases
Updated on 13/04/2021 4:06 PM
171,205
Total deaths
Updated on 13/04/2021 4:06 PM
12,263,113
Total recovered
Updated on 13/04/2021 4:06 PM
Home Editorial ಮಹಾ ಪಯಣ

ಮಹಾ ಪಯಣ

ಸಾರ್ವಜನಿಕರ ಸ್ಮರಣಶಕ್ತಿ ತುಂಬಾ ದುರ್ಬಲ. ಅದಕ್ಕೆಂದೇ ಇತಿಹಾಸದ ಕ್ರೂರ, ಅಮಾನವೀಯ ಘಟ್ಟಗಳನ್ನು ಮತ್ತೆ ಮತ್ತೆ ಅವರಿಗೆ ನೆನಪು ಮಾಡಿಕೊಡಬೇಕಾಗುತ್ತದೆ. ಅಂಥದೊಂದು ಯತ್ನ ‘1232 ಕಿಮೀ’ ಎನ್ನುವ ಸಾಕ್ಷ್ಯಚಿತ್ರ. ಕಳೆದ ವರ್ಷ ಮಾರ್ಚ 24ರಂದು ಕೇವಲ ನಾಲ್ಕು ಗಂಟೆಯ ಸಮಯ ಕೊಟ್ಟು ವಿಧಿಸಿದ ಲಾಕಡೌನ್ ಮತ್ತು ಅದು ಸಡಿಲಗೊಂಡ ಏಪ್ರಿಲ್ 14ರಂದು ಸ್ವತಂತ್ರ ಭಾರತ ಕಂಡರಿಯದ ಮಹಾವಲಸೆ ಆರಂಭ ಆಯಿತು. ಮೂರು ಕೋಟಿಗೂ ಹೆಚ್ಚು ಜನ ಕಾಲ್ನಡಿಗೆಯಲ್ಲಿ, ಸೈಕಲ್, ರಿಕ್ಷಾಗಳ ನೆರವಿನಿಂದ ಸಾವಿರಾರು ಕಿಲೋ ಮೀಟರ್ ದೂರದ ತಮ್ಮ ತಮ್ಮ ಊರುಗಳಿಗೆ ಹೊರಟರು. ಇವರಲ್ಲಿ ಬಹುಪಾಲು ಜನರು ನಡೆದೇ ದಾರಿ ಸಾಗಿದರು. ಮಹಿಳೆಯರ ತಲೆ ಮೇಲೊಂದು ಗಂಟು, ಕಂಕುಳಲ್ಲಿ ಎಳೆಗೂಸು, ಜೊತೆಗೆ ಕೈ ಹಿಡಿದು ನಡೆಯುವ ಇನ್ನೊಂದು ಕೂಸು. ಆದರೂ ಆಕೆ ನಗೆ ಚೆಲ್ಲುತ್ತಾ ಸಾಗಿದ ರೀತಿ ಗಮನಿಸಿದರೆ, ಇಂಥವರು ಎಂಥ ಸಮಸ್ಯೆ ಆದರೂ ಎದುರಿಸಿ ನಗುತ್ತಾ ಬದುಕಬಲ್ಲರು ಎನ್ನಿಸೀತು. ಆದರೆ ಎಲ್ಲರೂ ಹೀಗೆ ಅಲ್ಲ. ರೈಲು ಹಳಿಗಳ ಮೇಲೆ ನಡೆದು ಸಾಗುತ್ತ, ಆಯಾಸಗೊಂಡು, ಅದೇ ಹಳಿಗಳ ಮೇಲೆ ಅನಿವಾರ್ಯ ಮಲಗಿದ ಎಂಟು ಜನ ಗೂಡ್ಸ ರೈಲೊಂದರ ಕೆಳಗೆ ಸಿಕ್ಕಿ ತುಂಡು ತುಂಡಾದರು.

ನೀರು, ಊಟ, ನಿದ್ರೆಗಳಿಲ್ಲದೇ ದಿನ, ವಾರಗಟ್ಟಲೇ ಸಾಗಿದ ಈ ಪಯಣ ಸಾಮಾನ್ಯ ಜನರ ಅದಮ್ಯ ಸಾಹಸದ ಪ್ರತೀಕ ಆಗಿತ್ತು. ಹಾಗೇ ವ್ಯವಸ್ಥೆಯ ಅಮಾನವೀಯ ಮುಖ ತೆರೆದಿಡುವ ಸಂಗತಿಯೂ ಆಗಿತ್ತು. ಹೆದ್ದಾರಿ ಹಿಡಿದು ನಡೆಯುತ್ತಿದ್ದ ಅಮಾಯಕ ಜನರನ್ನು ಹಿಡಿದು ಥಳಿಸಿದ ಪೊಲೀಸರು, ಅವರ್ಯಾರಿಗೂ ಒಂದಿಷ್ಟು ಕನಿಕರ ಸೂಚಿಸದ ಆಡಳಿತ ವರ್ಗದ ಕಾರಣ ಕೊನೆಗೆ ಈ ಜನ ಹೆದ್ದಾರಿ ಬಿಟ್ಟು ಕಾಡು ಹಾದಿ ಹಿಡಿದು ಸಾಗಿ ಮನೆ ಸೇರಿದರು. ನಡೆಯುತ್ತ ನಡೆಯುತ್ತ ನೀರು, ಅನ್ನ ಇಲ್ಲದೇ ಸತ್ತವರು ಎಷ್ಟೋ! ಹೀಗೆ ಹಾದಿಯಲ್ಲಿ ಹೆಣ ಆದವರ ಸಂಖ್ಯೆ ಮುನ್ನೂರಕ್ಕೂ ಹೆಚ್ಚು ಎಂದು ಕೆಲವು ದಾಖಲೆಗಳು ತಿಳಿಸುತ್ತವೆ.

ಆದರೆ ನಮ್ಮ ವರಿಷ್ಠ ನ್ಯಾಯಾಲಯಕ್ಕೆ ಸರ್ಕಾರ ಸಲ್ಲಿಸಿದ ವರದಿಯಲ್ಲಿ ಯಾರಿಗೂ ತೊಂದರೆ ಆಗಿಲ್ಲ, ಅವರ್ಯಾರೂ ನಡೆಯುತ್ತಾ ಮನೆಗೆ ಹೊರಟಿಲ್ಲ ಎಂದು ಹೇಳಲಾಯಿತು ಮತ್ತು ಅದನ್ನು ನ್ಯಾಯಾಲಯ ಒಪ್ಪಿಕೊಂಡಿತು ಕೂಡ. ಅದೇ ಸಮಯಕ್ಕೆ ನಮ್ಮ ವಾಹಿನಿಗಳಲ್ಲಿ ನಿತ್ಯ ಎಂಬಂತೆ ಕಾಲ್ನಡಿಗೆಯಲ್ಲಿ ಸಾಗಿದ ಸಾವಿರ ಸಾವಿರ ವಲಸೆ ಕಾರ್ಮಿಕರ ಚಿತ್ರಗಳನ್ನು, ಅವರ ಬವಣೆಯನ್ನು ತೋರಿಸಲಾಗುತ್ತಿತ್ತು. ಬಿಸಿಲ ಬೇಗೆಯ ನಡುವೆ ಶ್ರಮಿಕ ರೈಲಿನಲ್ಲಿ ಪಯಣಿಸಿದ ಬಡ ಮಹಿಳೆಯೊಬ್ಬರು ನೀರು ಸಿಗದೇ ತಾಪದಿಂದ ಅಸು ನೀಗಿದರು. ಆಕೆಯನ್ನು ಮುಲಾಜೆ ಇಲ್ಲದೇ ಪ್ಲಾಟ್‍ಫಾರ್ಮ್‍ನಲ್ಲಿ ಇಳಿಸಿ ರೈಲು ಮುಂದೆ ಸಾಗಿತು. ತನ್ನ ತಾಯಿ ಮಲಗಿದ್ದಾಳೆ, ಆಕೆಯನ್ನು ಎಬ್ಬಿಸಬೇಕು ಎಂದು ಆಕೆಯ ಎಳೆಯ ಕಂದಮ್ಮ ಪ್ರಯತ್ನಿಸುತ್ತಿದ್ದ ದೃಶ್ಯ ಈಗಲೂ ಅಳಿಸಲಾಗದ ಚಿತ್ರ.

ಇಂಥದೊಂದು ಮಹಾ ದುರಂತ ಸಂಭವಿಸುತ್ತಾ ಇರುವಾಗ ನಡೆದು ಸಾಗಿದ ಜನರ ನೆರವಿಗೆ ಬಂದವರು ಸಾಮಾನ್ಯ ಜನತೆ. ನೀರು, ಹಣ್ಣು, ಬಿಸ್ಕೀಟ ಒದಗಿಸುತ್ತಾ ಕೆಲವರಿಗಾದರೂ ಉಪಕಾರ ಮಾಡಿದ ಈ ಜನರ ಸಹೃದಯತೆ ಅಮಾನವೀಯತೆಯ ಮರಳುಗಾಡಲ್ಲಿ ಓಯಸಿಸ್ ಹಾಗೆ ಕಾಣಿಸಿತು. ನಡೆದು ಸಾಗಿದವರ ನೆರವಿಗೆ ನಿಂತ ನೋಯಿಡಾದ ಪತ್ರಕರ್ತ ವಿನೋದ ಕಾಪ್ರಿ ಹೇಗೋ ಟ್ವಿಟರ್ ಮೂಲಕ ಕಾರ್ಮಿಕರ ಒಂದು ಗುಂಪಿನ ಸಂಪರ್ಕ ಪಡೆದು, ಅವರ ಕಷ್ಟದ ದಿನಗಳಲ್ಲಿ ನೆರವಾಗಲು ಯತ್ನಿಸಿದರು. ಆದರೆ ಆತನಿಂದ ದವಸ, ಧಾನ್ಯ, ಹಣಕಾಸು ನೆರವು ಪಡೆಯಲು ನಿರಾಕರಿಸಿದ ಆ ಮಂದಿ, ಹೇಗೋ ಹಳೆಯ ಸೈಕಲ್‍ಗಳನ್ನು ಖರೀದಿಸಿ ಅದರಲ್ಲಿ ಉತ್ತರ ಪ್ರದೇಶದ ಹಾಪುರದಿಂದ 1232 ಕಿಲೋಮೀಟರ್ ದೂರದ ತಮ್ಮ ಊರಿಗೆ ಕೈಗೊಂಡ ಸಾಹಸ ಯಾತ್ರೆಯ ಚಿತ್ರಣ ಅದೇ ಹೆಸರಿನ ಸಾಕ್ಷ್ಯಚಿತ್ರ. ಅದನ್ನು ಈಗ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ.

ನೋಡುವ ಎಂಥವರಿಗಾದರೂ ಹೃದಯ ಕಲಕುವಂಥ ಸನ್ನಿವೇಶಗಳು ಅಲ್ಲಿ ಕಾಣುತ್ತವೆ. ಮಹಿಳೆಯರು, ಮಕ್ಕಳು, ವೃದ್ಧರು ತಮ್ಮ ಮಹಾನ್ ಪಯಣದ ಸಂದರ್ಭದಲ್ಲಿ ಎದುರಿಸಿದ ಕಷ್ಟಗಳ ಸರಮಾಲೆಯ ನಡುವೆಯೂ ಮಾನವೀಯ ಅಂತಃಕರಣ ಮಿಡಿಯುವ ಸನ್ನಿವೇಶಗಳ ಚಿತ್ರಣ ಹೃದಯ ತಟ್ಟುತ್ತದೆ. ಕೊರೋನಾ ಮಹಾಮಾರಿಯಿಂದ ಇನ್ನೇನು ಮುಕ್ತಿ ಪಡೆದೆವು ಎನ್ನುವಷ್ಟರಲ್ಲಿ ಮತ್ತೆ ಅದು ತಟ್ಟನೇ ಎದ್ದು ಕುಳಿತು ಮತ್ತೆ ಆಹುತಿ ಪಡೆಯುತ್ತ ಇರುವ ದಿನಗಳಲ್ಲಿ ಈ ಸಾಕ್ಷ್ಯಚಿತ್ರ ಬಿಡುಗಡೆ ಆಗಿದೆ. ಜನಸಾಮಾನ್ಯರು ಒಂದು ರೀತಿ ಭ್ರಮೆಯಲ್ಲಿ ತೇಲುವಂತೆ ಮಾಡುತ್ತಿರುವ ವ್ಯವಸ್ಥೆ, ಅದೆಲ್ಲ ಭ್ರಮೆ ಇಲ್ಲಿದೆ ನೋಡಿ ವಾಸ್ತವ ಎಂದು ತೋರಿಸುವ ಯತ್ನ ಇಲ್ಲಿದೆ. ಅದಕ್ಕಾಗಿ ಸಾವಿರದಾ ಎರಡು ನೂರಾ ಮೂವತ್ತೆರಡು ಕಿಲೋ ಮೀಟರ್ ನತಭಾಗ್ಯರ ಜೊತೆ ಸಾಗಿ, ಅವರ ಯಾತನೆ ಮತ್ತು ಅದಮ್ಯ ಚೈತನ್ಯಕ್ಕೆ ಕನ್ನಡಿ ಹಿಡಿದ ಯತ್ನ ನಿಜಕ್ಕೂ ಸ್ತುತ್ಯಾರ್ಹ.

ಚರಿತ್ರೆಯನ್ನು ಯಥಾವತ್ತಾಗಿ ದಾಖಲಿಸುವುದು ನಮಗೆ ಒಗ್ಗಿ ಬಂದಿಲ್ಲ. ಆದ್ದರಿಂದಲೇ ಇಡೀ ದೇಶದ ಇತಿಹಾಸವನ್ನು ಯಾರು ಹೇಗೆ ಬೇಕಾದರೂ ಅರ್ಥೈಸಬಹುದಾದ ಸ್ಥಿತಿ ಇಲ್ಲಿದೆ. ಅದರ ನಡುವೆಯೂ ಜರುಗುತ್ತಿರುವ ಯಾತನಾಮಯ ಘಟನೆಗಳನ್ನು ಮತ್ತು ಅಲ್ಲಿ ಹುದುಗಿರುವ ನಿಜ ಪ್ರೇರಣೆ, ಅಂಥದೊಂದು ದುರಂತಕ್ಕೆ ಕಾರಣವಾದ ಎಲ್ಲ ಸಂಗತಿಗಳನ್ನು ಮರುಪರಿಶೀಲನೆಗೆ ಒಡ್ಡಿಕೊಳ್ಳುವ ಕೆಲಸ ಆಗಬೇಕೆಂದು ಪ್ರತಿಪಾದಿಸುವ ಯತ್ನ ಈ ಸಾಕ್ಷ್ಯಚಿತ್ರ. ಇದರಿಂದ ಯಾರು ಏನನ್ನು ಕಲಿಯುತ್ತಾರೆ ಎಂಬುದು ಮುಖ್ಯ ಇರಬಹುದಾದರೂ ಅಂಥ ಕಲಿಕೆಯ ಯಾವ ಸೂಚನೆಯೂ ಇಲ್ಲದ ಈ ಸಮಾಜದಲ್ಲಿ ಉಳ್ಳವರ ಮತ್ತು ಇಲ್ಲದವರ ನಡುವಣ ಅಂತರ ಹಾಗೂ ಇಲ್ಲದ ಜನ ಪಡುವ ಬವಣೆ ಇನ್ನೂ ಏಕಿದೆ ಎಂಬ ಚಿಂತನೆಯನ್ನಾದರೂ ಹುಟ್ಟು ಹಾಕಿದರೆ ಸಾಕು.

ನಮ್ಮಲ್ಲಿ ಯಾವುದೇ ಕಾನೂನು, ಶಾಸನ ಜಾರಿಗೆ ಬಂದರೆ ಅದನ್ನು ಪಾಲಿಸಬೇಕು ಇಲ್ಲವೇ ದಂಡ ಮತ್ತು ಶಿಕ್ಷೆಗೆ ಒಳಗಾಗತಕ್ಕದ್ದು ಎಂಬ ನಿರ್ಬಂಧ ಇರುತ್ತದೆ. ಆದರೆ ಈ ಕಾನೂನು ಜಾರಿಗೆ ತರುವ ಮಹಾಜನರು ಎಸಗುವ ಪ್ರಮಾದಗಳಿಗೆ ಮಾತ್ರ ದಂಡನೆ, ಶಿಕ್ಷೆ ಇಲ್ಲದಿರುವುದೇ ನಮ್ಮ ಈಗಿನ ದುರಂತಕ್ಕೆ ಕಾರಣ. ಕಸ ವಿಲೇವಾರಿ ಮಾಡದ ಪಾಲಿಕೆ, ಬೀದಿ ದೀಪ ಸರಿಯಾಗಿ ನಿರ್ವಹಿಸದ ಪೌರಾಡಳಿತ, ನೀರು ಒದಗಿಸಲು ವಿಫಲವಾದ ಜಲಮಂಡಳಿ, ಕುಲಗೆಟ್ಟ ರಸ್ತೆ ನಿರ್ಮಿಸಿ ಶ್ರೀಮಂತ ಆಗುವ ಗುತ್ತಿಗೆದಾರರು ಮತ್ತು ಅವರಿಗೆ ನೆರವಾಗಿ ನಿಲ್ಲುವ ಜನಪ್ರತಿನಿಧಿಗಳು, ಅಧಿಕಾರಿಗಳು; ಇವರ್ಯಾರಿಗೂ ದಂಡನೆ ಇಲ್ಲ, ಶಿಕ್ಷೆ ಇಲ್ಲ. ಅಪ್ಪಿ ತಪ್ಪಿ ಮಾಸ್ಕ್ ಧರಿಸದೇ ಸಿಕ್ಕಿ ಬಿದ್ದ ನಾಗರಿಕ ಕೊಲೆಗಡುಕನೇನೋ ಎಂಬಂತೆ ಬೆನ್ನಟ್ಟಿ ದಂಡಿಸುವ ಪರಿ ನಮ್ಮಲ್ಲಿನ ವೈಪರೀತ್ಯ.

LEAVE A REPLY

Please enter your comment!
Please enter your name here

State

ರಮಜಾನ‌ ; ಸರ್ಕಾರದಿಂದ ಹೊಸ ಮಾರ್ಗಸೂಚಿ

ಬೆಂಗಳೂರು, ಏ 13- ಮುಸ್ಲಿಮರ ಪವಿತ್ರ ರಮಜಾನ ಉಪವಾಸ ಮಾಸ ಇಂದಿನಿಂದ ಆರಂಭವಾಗಲಿದ್ದು ಒಂದು ತಿಂಗಳ ಕಾಲ ಈ ಆಚರಣೆ ಇರಲಿದೆ. ಇದಕ್ಕಾಗಿ ಕೊರೊನಾ ಕಾರಣದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಕಂಟೈನ್...

ಕೋವಿಡ್ ಕುರಿತು ಸರ್ವಪಕ್ಷ ಸಭೆ- ಮುಖ್ಯಮಂತ್ರಿ

ಬೀದರ, ಏಪ್ರಿಲ್ 13 - ಕೋವಿಡ್ ಪರಿಸ್ಥಿತಿ ಮತ್ತು ಲಾಕ್‌ಡೌನ್ ಹೇರುವ ಕುರಿತು ಚರ್ಚಿಸಲು ಈ ತಿಂಗಳ 18 ರಂದು ಸರ್ವಪಕ್ಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ...

ಗೋಕಾಕ ತಾಲೂಕಿನಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರ

ಬೆಳಗಾವಿ, 11- ಕಳೆದ ಕೆಲ ದಿನಗಳಿಂದ ಕೆಲಸದ ಒತ್ತಡದ ನಿಮಿತ ಚುನಾವಣೆ ಪ್ರಚಾರ ಮಾಡಲು ಆಗಿರಲಿಲ್ಲ, ನಾಳೆಯಿಂದಲೇ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಪ್ರಚಾರ ಆರಂಭಿಸುವದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ...

ಅಂಗಡಿ ಸಂಸದರಾಗಿ ಅನುದಾನ ತಂದದೆಷ್ಟು, ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಕೊಪ್ಪಳ, 11-ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅನನುಭವಸ್ಥರು, ಸಂಸತ್ ನಲ್ಲಿ ಅವರು ಹೇಗೆ ವಿಷಯ ಪ್ರಸ್ತಾಪಿಸುತ್ತಾರರೆಂದಿದ್ದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ದಿ. ಸುರೇಶ ಅಂಗಡಿ ನಾಲ್ಕು ಅವಧಿಗೆ ಸಂಸದರಾಗಿ ಎಷ್ಟು ಅನುಧಾನ ರಾಜ್ಯಕ್ಕೆ...

National

ಗುಜರಾತ‌ ಹಿಂಸಾಚಾರ; ಮೋದಿಗೆ ಕ್ಲೀನ‌ಚಿಟ್‌ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ, ಏ 13- ಗುಜರಾತ್ ಗಲಭೆ ಪ್ರಕರಣದಲ್ಲಿ 2002ರಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ, ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್‌ ಚಿಟ್‌ ಪ್ರಶ್ನಿಸಿ...

24 ಗಂಟೆಯಲ್ಲಿ 1.61 ಲಕ್ಷ ಜನರಿಗೆ ಕೊರೋನಾ; 879 ಸಾವು

ನವದೆಹಲಿ, ಏ 13 - ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿದ್ದು. ಕಳೆದ 24 ಗಂಟೆಯಲ್ಲಿ 1,61,ಲಕ್ಷ ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಈಗ ಸೋಂಕಿತರ ಸಂಖ್ಯೆ...

ಸತ್ಯಮಂಗಲಂ ಅರಣ್ಯದಲ್ಲಿ ಭಾರಿ ನಿಧಿ; ವೀರಪ್ಪನ್ ಪುತ್ರಿಯ ಹೇಳಿಕೆ

ಚೆನ್ನೈ, ಏ 11- ದಂತ ಚೋರ, ಕಾಡು ಕಳ್ಳ ವೀರಪ್ಪನ್ ನೆಲೆಸಿದ್ದ ಸತ್ಯಮಂಗಲಂ ಅರಣ್ಯ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಹಣ ಅಡಗಿಸಿಟ್ಟಿದ್ದಾನೆ ಎಂದು ಆತನ ಪುತ್ರಿ ವಿಜಯಲಕ್ಷ್ಮಿ ಹೇಳಿರುವುದು ಸಂಚಲನ ಸೃಷ್ಟಿಸಿದೆ. ವಾಲ್ಮುರಿಮಾಯಿ ಕಚ್ಚಿಯಲ್ಲಿ...

ನಟ ಸತೀಶ ಕೌಲ್ ಕೊರೋನಾಗೆ ಬಲಿ

ಚಂಡಿಗಡ, ಏಪ್ರಿಲ್ 10- ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ನಟ ಸತೀಶ ಕೌಲ್ ಶನಿವಾರ ಲುಧಿಯಾನದಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಸೋಂಕು ಪತ್ತೆಯ ನಂತರ ಸತೀಶ ಕೌಲ್ ರನ್ನು ಲುಧಿಯಾನಾದ ಖಾಸಗಿ...

International

30 ವರ್ಷದಿಂದ ಬೆಳೆಸಿದ್ದ ಉಗುರಿಗೆ ಕತ್ತರಿ

ಟೆಕ್ಸಾಸ್, 9- ದಾಖಲೆಗಾಗಿಯೋ ಶೋಕಿಗಾಗಿಯೋ 30 ವರುಷಗಳಿಂದ ಬೆಳೆಸಿಕೊಂಡು ಬಂದಿದ್ದ ತಮ್ಮ ಕೈ ಉಗುರುಗಳನ್ನು ಅಮೆರಿಕಾದ ಅಯನ್ನಾ ವಿಲಿಯಮ್ಸ ಎಂಬವರು‌ ಕತ್ತರಿಸಿಕೊಂಡು ಜಗತ್ತಿನ ಗಮನ ಸೆಳೆದಿದ್ದಾರೆ. ಅಯನ್ನಾ ಅವರು ಕಳೆದ ಮೂವತ್ತು ವರ್ಷಗಳಿಂದ ತಮ್ಮ...

ಕೋವಿಡ್ ಲಸಿಕೆ ನಂತರವೂ 63 ಜನರ ಸಾವು

ವಿಯೆನ್ನಾ ಏಪ್ರಿಲ್ 8 - ಆಸ್ಟ್ರಿಯಾದಲ್ಲಿ ಕರೋನ ಸೋಂಕಿನ ಲಸಿಕೆ ಪಡೆದ ನಂತರವೂ 63 ಜನರು ಮೃತಪಟ್ಟಿದ್ದಾರೆ ಎಂದು ಆಸ್ಟ್ರಿಯನ್ ಸರ್ಕಾರಿ ವಕ್ತಾರರು ಹೇಳಿದ್ದಾರೆ. ಕಳೆದ ವಾರ ಕರೋನ ಸೋಂಕಿನ ವಿರುದ್ಧ ಲಸಿಕೆ ಹಾಕಿದ...

ವಾರದಲ್ಲಿ ಕೋವಿಡ್ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆ

ಮಾಸ್ಕೋ, ಏಪ್ರಿಲ್ 7- ಕಳೆದೊಂದು ವಾರದಲ್ಲಿ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ವಾರದ ವರದಿ ತಿಳಿಸಿದೆ. ‘ಜಾಗತಿಕವಾಗಿ...

ನಾವಿನ್ನೂ ಸಾವು ಬದುಕಿನ ಹೋರಾಟದಲ್ಲಿದ್ದೇವೆ

ವಾಷಿಂಗ್ಟನ್, ಏ 7- ಕೊರೊನಾ ಸಾಂಕ್ರಾಮಿಕ ವಿಷಯದಲ್ಲಿ ಅಮೆರಿಕಾ ಈಗಲೂ ಸಾವು ಬದುಕಿನ ನಡುವಿನ ಸ್ಪರ್ಧೆಯಲ್ಲಿದೆ ಎಂದು ಅಮೇರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಹಾಗಾಗಿ ಕೊರೊನಾ ಸಾಂಕ್ರಾಮಿಕ ಪ್ರಸರಣ ತಡೆಗಟ್ಟಲು ಜನರು ಕಟ್ಟುನಿಟ್ಟಿನ...

Entertainment

ರಜನಿಕಾಂತಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ

ನವದೆಹಲಿ, ಎ 1- ಹೆಸರಾಂತ ಚಿತ್ರನಟ ರಜನಿಕಾಂತ ಅವರಿಗೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ ಈ ಬಗ್ಗೆ ಟ್ವೀಟ್ ಮಾಡಿ...

“90 ಹೊಡಿ ಮನೀಗ್ ನಡಿ” ಚಿತ್ರೀಕರಣ ಮುಕ್ತಾಯ

ಬೆಂಗಳೂರು, ಮಾರ್ಚ 31- ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ ಹಾಸ್ಯ ಪ್ರಧಾನ "90 ಹೊಡಿ ಮನೀಗ್ ನಡಿ" ಚಿತ್ರ ಇತ್ತೀಚೆಗೆ ಚಿತ್ರೀಕರಣ ಮುಕ್ತಾಯಗೊಳಿಸಿ ಕುಂಬಳಕಾಯಿ ಒಡೆಯುವ ಶಾಸ್ತ್ರ ಮುಗಿಸಿಕೊಂಡಿದೆ. "ಅಮ್ಮ ಟಾಕೀಸ ಬಾಗಲಕೋಟ"...

“ದಂಡಿ” ಚಿತ್ರಕ್ಕೆ ಚಾಲನೆ

ಕಾರವಾರ: ಮಾರ್ಚ 23 -ಸ್ವತಂತ್ರ ಪೂರ್ವದಲ್ಲಿ ನಡೆದ‌ ದಂಡಿ-ಉಪ್ಪಿನ ಸತ್ಯಾಗ್ರಹದ ಬಗ್ಗೆ ಸಿನಿಮಾವೊಂದು ಮೂಡಿ‌ಬರುತ್ತಿದೆ. ತಾರಾ, ಸುಚೇಂದ್ರ ಪ್ರಸಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ವಿಶಾಲ ರಾಜ್ ನಿರ್ದೇಶನವಿದ್ದು, ಹೊನ್ನಾವರದಲ್ಲಿ ಚಾಲನೆ...

“ತಾಜಮಹಲ್-2” ಚಿತ್ರೀಕರಣ ಮುಕ್ತಾಯ

ಬೆಂಗಳೂರು: ಮಾರ್ಚ 23- ಈ ಹಿಂದೆ ಡೇಂಜರ್‌ಜೋನ್, ನಿಶ್ಯಬ್ದ 2, ಅನುಷ್ಕದಂಥ ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜಕುಮಾರ ಅವರ ಸಾರಥ್ಯದ "ತಾಜ್‌ಮಹಲ್-2" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನ ಎಚ್‌ಎಂಟಿ ಏರಿಯಾದಲ್ಲಿ ಸೆಟ್ ಹಾಕಿ ಜೀವ ಬಿಡುವೆ...

Sports

ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೃನಾಲ್, ಕನ್ನಡಿಗ ಪ್ರಸಿದ್ಧ

ಪುಣೆ, ಮಾ.23 - ಆಲ್‌ರೌಂಡರ್ ಕೃನಾಲ್ ಪಾಂಡ್ಯ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಮಂಗಳವಾರ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಭಾರತಕ್ಕಾಗಿ 18...

ಸ್ಪಿನ್ ದಾಳಿಗೆ ಇಂಗ್ಲೆಂಡ ಪತನ; ಐಸಿಸಿ ಫೈನಲ್ ಗೆ ಭಾರತ

ಅಹಮದಾಬಾದ್, ಮಾ.6 - ಅನುಭವಿ ಸ್ಪಿನ್ ಬೌಲರ್ ಆರ್.ಅಶ್ವಿನ್ ಹಾಗೂ ಅಕ್ಷರ ಪಟೇಲ್ ಅವರ ಕರಾರುವಾಕ್ ದಾಳಿಗೆ ನಲುಗಿದ ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 25 ರನ್ ಗಳಿಂದ ಸೋಲು...

ರಿಷಭ ಪಂತ್ ಶತಕ; ಭಾರತದ ಮುನ್ನಡೆ

ಅಹಮದಾಬಾದ್, ಮಾ.5- ರಿಷಭ ಪಂತ್ (101) ಬಾರಿಸಿದ ಶತಕ ಹಾಗೂ ಆಲ್ ರೌಂಡರ್ ವಾಶಿಂಗ್ಟನ್ ಸುಂದರ್ (ಅಜೇಯ 60) ಅವರ ಅರ್ಧಶತಕದ ಬಲದಿಂದ ಭಾರತ ಕ್ರಿಕೆಟ್ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್...

ಭಾರತದ ಸ್ಪಿನ್ ಬಲೆಗೆ ಬಿದ್ದ ಇಂಗ್ಲೆಂಡ್

ಅಹಮದಾಬಾದ್, ಮಾ.4 - ಸ್ಪಿನ್ ಬೌಲರ್ ಗಳಾದ ಅಕ್ಷರ ಪಟೇಲ (68ಕ್ಕೆ 4) ಹಾಗೂ ಆರ್.ಅಶ್ವಿನ್ (47ಕ್ಕೆ 3) ಅವರ ಬಿಗುವಿನ ದಾಳಿಗೆ ಪ್ರವಾಸಿ ಇಂಗ್ಲೆಂಡ್ ತಂಡ ನಲುಗಿದ್ದು, ಭಾರತ ನಾಲ್ಕನೇ ಟೆಸ್ಟ್...