ನವದೆಹಲಿ, ಎ. 5 – ದೇಶದಲ್ಲಿ ದಿನದಿಂದ ದಿನಕ್ಕೆ ಮತ್ತೆ ಕೊರೋನಾ ವೈರಸ್ ಅಬ್ಬರ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ 1,03,794 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.
ಕಳೆದ ವರ್ಷ ಸೊಂಕು ಆರಂಭವಾದ ನಂತರ ದೇಶಕಂಡ ಅತಿ ದೊಡ್ಡ ಪ್ರಮಾಣದ ಕೊರೊನಾ ಪ್ರಕರಣಗಳು ಇದಾಗಿದೆ. ಇದಕ್ಕೆ ಮೊದಲು 2020ರ ಸೆಪ್ಟೆಂಬರ್ 16ರಂದು ಭಾರತದಲ್ಲಿ ಅತ್ಯಧಿಕ ಏರಿಕೆ ದಾಖಲಿಸಿದ್ದು, ಒಂದು ದಿನದಲ್ಲಿ 97,894 ಪ್ರಕರಣಗಳು ದಾಖಲಾಗಿವೆ.
ಭಾರತದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ1,25,87,921 ಕ್ಕೆ ಏರಿಕೆಯಾಗಿದ್ದು, ದೇಶಾದ್ಯಂತ ಸದ್ಯ ಸಕ್ರಿಯ ಪ್ರಕರಣಗಳು 7,37,870 ಕ್ಕೆ ಏರಿಕೆಯಾಗಿವೆ.
ಕಳೆದ 24 ಗಂಟೆಗಳಲ್ಲಿ 477 ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ದೇಶದಲ್ಲಿ ಲ್ಲಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 1,65,132 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.