INDIA COVID-19 Statistics

13,852,712
Confirmed Cases
Updated on 13/04/2021 5:06 PM
1,353,848
Total active cases
Updated on 13/04/2021 5:06 PM
171,929
Total deaths
Updated on 13/04/2021 5:06 PM
Tuesday, April 13, 2021

INDIA COVID-19 Statistics

13,852,712
Total confirmed cases
Updated on 13/04/2021 5:06 PM
1,353,848
Total active cases
Updated on 13/04/2021 5:06 PM
171,929
Total deaths
Updated on 13/04/2021 5:06 PM
12,326,935
Total recovered
Updated on 13/04/2021 5:06 PM
Home Editorial ಎಲ್ಲಿಗೆ ಬಂತು ಸಂಗಯ್ಯ?

ಎಲ್ಲಿಗೆ ಬಂತು ಸಂಗಯ್ಯ?

ಮೇ 3 ಪತ್ರಿಕಾ ಸ್ವಾತಂತ್ರ್ಯ ದಿನ. ಕಳೆದ ಒಂದು ವರ್ಷದಿಂದ ಕಣ್ಣು ಮುಚ್ಚುತ್ತಿರುವ ಪತ್ರಿಕೆಗಳನ್ನು ಗಮನಿಸಿದರೆ, ಇನ್ನು ಮುಂದೆ ಪತ್ರಿಕೆ ಮತ್ತು ಪತ್ರಿಕಾ ಸ್ವಾತಂತ್ರ್ಯ ಕುರಿತು ಮಾತಾಡಲು ಏನೂ ಉಳಿಯುವುದಿಲ್ಲ ಎಂದು ಕಾಣುತ್ತದೆ. ಎಲ್ಲ ಕಾಲದಲ್ಲಿಯೂ ಒಂದಲ್ಲ ಒಂದು ರೀತಿ, ತಮ್ಮ ಇಂಗಿತ ವ್ಯಕ್ತ ಮಾಡುವ ಮತ್ತು ಅವು ಜನರಿಗೆ ತಲುಪುವಂತೆ ಮಾಡುವ ಯತ್ನಗಳು ಚಾಲೂ ಇರುತ್ತವೆ. ಬ್ರಿಟಿಷರ ಆಳ್ವಿಕೆ ಕಾಲಕ್ಕೆ ಮತ್ತು ತುರ್ತು ಪರಿಸ್ಥಿತಿ ಸಮಯಕ್ಕೆ ಭೂಗತ ಪತ್ರಿಕೆಗಳನ್ನು ತಂದ ಜನರ ಸ್ವಾತಂತ್ರ್ಯ ಪ್ರೀತಿ ಕಡಿಮೆ ಏನಲ್ಲ. ಕರ್ಮವೀರ ಮತ್ತು ಸಂಯುಕ್ತ ಕರ್ನಾಟಕ ಹುಟ್ಟು ಹಾಕಿದ ರಂಗನಾಥ ದಿವಾಕರ ಅವರನ್ನು ಸರಪಳಿಗಳಿಂದ ಬಂಧಿಸಿ, ಇಡಲಾಗಿತ್ತು.

ಅದೇಕೋ ಆಳುವ ವರ್ಗಕ್ಕೆ ಮುಕ್ತತೆ, ಮೌಲ್ಯ ಮತ್ತು ಸತ್ಯಗಳನ್ನು ಕುರಿತು ಮಾತಾಡುವ ಜನರನ್ನು ಕಂಡರೆ ಅಂಜಿಕೆ. ಪ್ರತಿ ಆಳುವ ವ್ಯಕ್ತಿಯ ಆಂತರ್ಯದಲ್ಲಿ ಮಡುಗಟ್ಟಿರುವ ಇಂಥ ಅಂಜಿಕೆಯಿಂದಲೇ ನಾನಾ ರೀತಿಯಲ್ಲಿ ಅದನ್ನು ಶಮನ ಮಾಡುವ ಕ್ರಿಯೆಯಲ್ಲಿ ತೊಡಗುತ್ತಾರೆ. ಅದರ ಮೊದಲ ಭಾಗ ಎಂದರೆ ಎದುರಾಡುವವನನ್ನು ಆಸೆ, ಆಮಿಷಗಳಿಂದ ಮಣಿಸುವುದು. ಆತನಿಗೆ ಉನ್ನತ ಸ್ಥಾನ, ಭತ್ಯೆಗಳ ಪ್ರಲೋಭನೆ ಒಡ್ಡುವುದು. ಇದಕ್ಕೆ ಬಹಳಷ್ಟು ಜನ ಬಲಿ ಬೀಳುತ್ತಾರೆ. ಆದರೆ ಪ್ರತಿ ರಂಗದಲ್ಲಿಯೂ ತಮ್ಮದೇ ನಿಲುವು ಹೊಂದಿ, ಅದಕ್ಕಾಗಿ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಲು ಸಿದ್ಧ ಇರುವ ಜನ ಕೆಲವರಾದರೂ ಇರುತ್ತಾರೆ. ಅಂಥವರ ಸಂಖ್ಯೆ ಪತ್ರಿಕಾ ಮತ್ತು ಸಾಹಿತ್ಯ ವಲಯದಲ್ಲಿ ಹೆಚ್ಚಾಗಿ ಇರುತ್ತಿತ್ತು. ಸಾಹಿತಿಗಳನ್ನು ಮಣಿಸುವುದು ಕಷ್ಟ. ಏಕೆಂದರೆ ಅವರಿಗೆ ಹಸಿವು, ನೋವು, ಸಂಕಟ ಎಲ್ಲ ಹಾಸಿ ಹೊದ್ದಿಕೊಳ್ಳುವಷ್ಟು ಇರುತ್ತವೆ. ಅದಕ್ಕಿಂತ ಹೆಚ್ಚಿನದನ್ನು ಆಳುವ ಜನ ಒದಗಿಸಲಾರರು. ಅವರಲ್ಲಿಯೂ ಕೆಲವರು ಬಾಲ ಅಲ್ಲಾಡಿಸಿಕೊಂಡೇ ಇರುತ್ತಾರೆ. ಅವರು ಸದಾ ಹೇಳುವ ‘ಇಂದ್ರ, ಚಂದ್ರ, ದೇವೇಂದ್ರ’ ಎಂಬಂಥ ಹೊಗಳಿಕೆಗಳನ್ನು ಆಲಿಸುತ್ತಾ ತಮ್ಮ ಒಳಗಣ ಅಂಜಿಕೆ ಸ್ವಲ್ಪ ಮರೆಯುವ ಯತ್ನ ಆಳುವವರಲ್ಲಿ ನಡೆಯುತ್ತದೆ.

ಆದರೆ ಪತ್ರಿಕಾರಂಗದ ಮುಕ್ತ ಮಾತಿನ ಜನರಿಗೆ ಸಂಕೋಲೆ ತೊಡಿಸುವುದು ಕಷ್ಟ. ಒಂದು ಕಾಲಕ್ಕಂತೂ ಮನೆ, ಮಠ ಬಿಟ್ಟು, ಎಲ್ಲ ಸೌಖ್ಯ ತೊರೆದವರು ಮಾತ್ರ ಪತ್ರಿಕಾ ರಂಗಕ್ಕೆ ಬರುತ್ತಿದ್ದರು. ಆಗೆಲ್ಲ ಪತ್ರಿಕಾರಂಗದ ವ್ಯಕ್ತಿ ಎಂದರೆ ದೇಶ ಪ್ರೇಮಿ, ಮುಕ್ತ ವಿಚಾರಧಾರೆಯ, ಆಧುನಿಕ ಚಿಂತನೆಗಳ ಪ್ರಗತಿಶೀಲ ಮನುಷ್ಯ ಎಂದು ಮತ್ತೆ ಹೇಳಬೇಕಾದ್ದು ಇರುತ್ತಿರಲಿಲ್ಲ. ಆದರೆ ಪತ್ರಿಕೆಗಳು ಆದರ್ಶ ಬಲಿಗೊಟ್ಟು ಲಾಭದಾಯಕ ವ್ಯಾಪಾರ ಆಗಲು ಹೊರಟಾಗ, ಇವರನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಆಳುವ ಜನರಿಗೆ ಸುಲಭ ಎನ್ನಿಸಿತು. ಈಗಂತೂ ವಾಹಿನಿಗಳು ಬಂದ ಮೇಲೆ ಪತ್ರಿಕಾ ರಂಗದ ಜನ ಎಂದರೆ ಬಡವರು ಎಂದು ಪರಿಗಣಿಸಬೇಕಿಲ್ಲ ಎಂಬಂತಾಗಿದೆ. ಒಮ್ಮೆ ಅವರ ಕೆಲಸ ಹೋದರೆ, ಕೊಡುವ ಪಗಾರ ಕಡಿತ ಮಾಡಿದರೆ ಸಾಕು, ಬಹಳಷ್ಟು ಪತ್ರಿಕೆ ಮತ್ತು ವಾಹಿನಿಗಳ ವಲಯದ ಜನ ಮೆತ್ತಗಾಗುತ್ತಾರೆ. ಅದರಲ್ಲೂ ಸಂಸಾರಸ್ಥರಾಗಿ, ನಡುವಯಸ್ಸು ದಾಟಿದರಂತೂ ಇವರನ್ನು ಬಲಿ ಹಾಕುವುದು ಬಹಳ ಸುಲಭ.

ಪತ್ರಿಕೆಗಳನ್ನು ತನ್ನ ಮೂಗಿನ ನೇರದ ವಿಷಯ ಮಂಡನೆಗೆ ಮೊದಲು ಬಳಸಿಕೊಂಡಿದ್ದು ಕಮ್ಯುನಿಸ್ಟ ರಾಷ್ಟ್ರಗಳು. ಅಲ್ಲಿ ಭಿನ್ನಾಭಿಪ್ರಾಯಕ್ಕೆ ಜಾಗ ಇರಲೇ ಇಲ್ಲ. ಕಮ್ಯುನಿಸ್ಟರನ್ನು ಬಿಟ್ಟರೆ ತನ್ನ ವಿರುದ್ಧ ನಿಂತ ಎಲ್ಲರನ್ನೂ ಕ್ರೂರವಾಗಿ ಬಲಿ ಪಡೆಯುವ ಕೆಲಸವನ್ನು ಫ್ಯಾಸಿಸ್ಟರು ಮಾಡಿದರು. ಇದರಿಂದಾಗಿ ವಿಜ್ಞಾನಿಗಳು, ಸಾಹಿತಿಗಳು, ಚಿಂತಕರು ದೇಶ ಬಿಟ್ಟು ಪಲಾಯನ ಮಾಡಿ ಬೇರೊಂದು ದೇಶದಲ್ಲಿ ಆಶ್ರಯ ಪಡೆಯುವ ಕ್ರಿಯೆ ಈಗಲೂ ಚಾಲ್ತಿಯಲ್ಲಿ ಇದೆ. ಇಂಥ ಕ್ರೂರ ದಮನ ನೀತಿ ಪ್ರಜಾತಂತ್ರದ ದೇಶಗಳಲ್ಲಿ ಕಡಿಮೆ. ಅದಕ್ಕೆ ಅಪವಾದ ಎನ್ನುವಂತೆ ಪ್ರಜಾಪ್ರಭುತ್ವದ ಕೆಲ ದೇಶಗಳಲ್ಲಿಯೂ ಪತ್ರಿಕೆ ಮತ್ತು ವಾಹಿನಿಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವ ತೆರೆಮರೆಯ ಯತ್ನ ನಡೆಯುತ್ತಾ ಇರುತ್ತದೆ. ಇವೆಲ್ಲ ಬಹಳ ಸೂಕ್ಷ್ಮವಾಗಿ ನಡೆಯುವ ಕಾರ್ಯಾಚರಣೆಗಳು.

ಈಗಂತೂ ಪತ್ರಿಕೆ ಮತ್ತು ವಾಹಿನಿಗಳು ಬಹುಪಾಲು ಉದ್ದಿಮೆದಾರರ ವಶದಲ್ಲಿ ಇವೆ. ಇಂಥ ಉದ್ದಿಮೆದಾರರು ಇತರ ವ್ಯವಹಾರಗಳಲ್ಲಿಯೂ ತೊಡಗಿರುತ್ತಾರೆ. ಇವೆಲ್ಲಕ್ಕೂ ಸರ್ಕಾರದ ಕೃಪಾಕಟಾಕ್ಷ ಬೇಕು. ಇವರ ಪತ್ರಿಕೆ ಅಥವಾ ವಾಹಿನಿಯಲ್ಲಿ ಆಳುವ ಜನರ ನೀತಿ ವಿಮರ್ಶೆ ಮಾಡಿ, ಅವರೆದುರು ನಿಂತು ಕೈ ಚಾಚಿದರೆ ಬರಿಗೈಲಿ ವಾಪಸು ಬರಬೇಕಾಗುತ್ತದೆ. ಈ ರೀತಿಯ ಬಹುಪಾಲು ಮಾಲೀಕರಿಗೆ ಹಣದ ಮುಂದೆ ಯಾವ ಆದರ್ಶವೂ ದೊಡ್ಡದು ಎನಿಸುವುದಿಲ್ಲ. ಇಂಥಲ್ಲಿ ಪರಸ್ಪರ ತಿಳಿವಳಿಕೆ ಮೇರೆಗೆ ಇವರು ಅವರನ್ನು ಹೊಗಳುವ, ಅವರು ಇವರಿಗೆ ಲಾಭದಾಯಕ ಉದ್ದಿಮೆಗಳನ್ನು ನಡೆಸಲು ಅವಕಾಶ ಕಲ್ಪಿಸುವ ಅಲಿಖಿತ ಒಪ್ಪಂದ ಇರುತ್ತದೆ.

ನಮ್ಮದು ದೊಡ್ಡ ದೇಶ. ಇಲ್ಲಿ ಇರುವ ಪತ್ರಿಕೆಗಳ ಸಂಖ್ಯೆ ಕೂಡ ವಿಪರೀತ. ಅವುಗಳಲ್ಲಿ ಕೆಲವಂತೂ ಸರ್ಕಾರದ ಜಾಹೀರಾತು ನಂಬಿಯೇ ಜೀವ ಹಿಡಿದುಕೊಂಡಿವೆ. ಇನ್ನು ಕೆಲವಕ್ಕೆ ಸರ್ಕಾರ ಜಾಹೀರಾತು ಕಡಿಮೆ ಮಾಡಿದರೂ ಸಾಕು, ಕುತ್ತಿಗೆ ಹಿಚುಕಿದಂತೆ, ಉಸಿರು ಕಟ್ಟಿದಂತೆ ಆಗುತ್ತದೆ. ಅಂಥ ಸಮಯದಲ್ಲಿ ಬದುಕಿ ಉಳಿದರೆ ಬೇಡಿಯಾದರೂ ತಿಂದು ಬದುಕಿಯೇನು ಅನ್ನಿಸುವುದು ಸಹಜ. ಯಾವುದೇ ಕಿರುಕುಳ, ತೊಂದರೆ ನೀಡಿದರೂ ಸೆಟೆದು ನಿಲ್ಲುವ ಜನ ಈಗಲೂ ಪತ್ರಿಕಾರಂಗದಲ್ಲಿ ಇದ್ದಾರೆ. ಅಂಥ ಜನರನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನವೋ ಎಂಬಂತೆ ಹಲವಾರು ಉಪಕ್ರಮಗಳು ಈಗಾಗಲೇ ಜಾರಿಯಲ್ಲಿವೆ.

ಇದರ ಇನ್ನೊಂದು ಮುಖವಾಗಿ ಪತ್ರಿಕಾ ರಂಗದಲ್ಲಿ ದುಡಿಯುವ ಜನರ ಮಾಹಿತಿ ಸಂಗ್ರಹಣೆಯ ಕೆಲಸ ರಾಜ್ಯದಲ್ಲಿ ಗುಪ್ತಚರ ಇಲಾಖೆಯಿಂದ ನಡೆದಿದೆ. ಇದನ್ನು ಉತ್ತರ ಕರ್ನಾಟಕದ ಪತ್ರಿಕೆಯೊಂದು ಮೊದಲು ಬಹಿರಂಗ ಮಾಡಿತು. ಗುಪ್ತವಾಗಿ ನಡೆಯಬೇಕಿದ್ದ ಕೆಲಸ ಹೀಗೆ ಬಹಿರಂಗ ಆದ ಕೂಡಲೇ ವಾರ್ತಾಧಿಕಾರಿಯೊಬ್ಬರು ಹೇಳಿಕೆ ನೀಡಿ, ಅಂಥ ಯಾವ ಪ್ರಯತ್ನವೂ ನಡೆದಿಲ್ಲ ಎಂದರು. ಇದು ಕೇವಲ ಮಾಹಿತಿ ಸಂಗ್ರಹದ ಕೆಲಸ ಆಗಿದ್ದರೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಪತ್ರಕರ್ತರ ಭಾವಚಿತ್ರ, ಸೇವಾವಧಿ, ಜಾತಿ, ಸಂಸ್ಥೆಯಲ್ಲಿ ಸ್ಥಾನ ಮುಂತಾದ ವಿವರಗಳ ಜೊತೆಗೆ, ಅವರು ಒಪ್ಪುವ ಸಿದ್ಧಾಂತ ಅಥವಾ ಅವರು ತಳೆದ ನಿಲುವು ಸೇರಿದಂತೆ ಒಟ್ಟು 18 ಬಗೆಯ ವಿವರಗಳನ್ನು ದಾಖಲಿಸುತ್ತಾ ಇರುವುದು ಅಪಾಯದ ಮುನ್ಸೂಚನೆ.

ಜನರಿಂದ ಆಯ್ಕೆಯಾದ ಸರ್ಕಾರವು ತನ್ನನ್ನು ಆಯ್ಕೆ ಮಾಡಿದ ಜನರನ್ನೇ ನಂಬದ ವಿಚಿತ್ರ ಸ್ಥಿತಿ ಇದೆ. ಇದರ ಜೊತೆಗೇ ಒಂದಿಷ್ಟು ಕಾಲ ಇದ್ದು ಹೋಗುವ ರಾಜಕಾರಣಿಗಳನ್ನು ಧರೆಗಿಳಿದು ಬಂದ ದೇವರು ಎಂಬಂತೆ ಹೊಗಳುತ್ತಿರುವ ಸಮೂಹ ಕೂಡ ಇದೆ ಎನ್ನುವುದೇ ನಮ್ಮಲ್ಲಿ ಇರುವ ವಿಚಿತ್ರ ಸ್ಥಿತಿಯ ಸ್ಪಷ್ಟ ಬಿಂಬ.

-ಎ.ಬಿ.ಧಾರವಾಡಕರ
ಸಂಪಾದಕ

LEAVE A REPLY

Please enter your comment!
Please enter your name here

State

ರಮಜಾನ‌ ; ಸರ್ಕಾರದಿಂದ ಹೊಸ ಮಾರ್ಗಸೂಚಿ

ಬೆಂಗಳೂರು, ಏ 13- ಮುಸ್ಲಿಮರ ಪವಿತ್ರ ರಮಜಾನ ಉಪವಾಸ ಮಾಸ ಇಂದಿನಿಂದ ಆರಂಭವಾಗಲಿದ್ದು ಒಂದು ತಿಂಗಳ ಕಾಲ ಈ ಆಚರಣೆ ಇರಲಿದೆ. ಇದಕ್ಕಾಗಿ ಕೊರೊನಾ ಕಾರಣದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಕಂಟೈನ್...

ಕೋವಿಡ್ ಕುರಿತು ಸರ್ವಪಕ್ಷ ಸಭೆ- ಮುಖ್ಯಮಂತ್ರಿ

ಬೀದರ, ಏಪ್ರಿಲ್ 13 - ಕೋವಿಡ್ ಪರಿಸ್ಥಿತಿ ಮತ್ತು ಲಾಕ್‌ಡೌನ್ ಹೇರುವ ಕುರಿತು ಚರ್ಚಿಸಲು ಈ ತಿಂಗಳ 18 ರಂದು ಸರ್ವಪಕ್ಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ...

ಗೋಕಾಕ ತಾಲೂಕಿನಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರ

ಬೆಳಗಾವಿ, 11- ಕಳೆದ ಕೆಲ ದಿನಗಳಿಂದ ಕೆಲಸದ ಒತ್ತಡದ ನಿಮಿತ ಚುನಾವಣೆ ಪ್ರಚಾರ ಮಾಡಲು ಆಗಿರಲಿಲ್ಲ, ನಾಳೆಯಿಂದಲೇ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಪ್ರಚಾರ ಆರಂಭಿಸುವದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ...

ಅಂಗಡಿ ಸಂಸದರಾಗಿ ಅನುದಾನ ತಂದದೆಷ್ಟು, ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಕೊಪ್ಪಳ, 11-ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅನನುಭವಸ್ಥರು, ಸಂಸತ್ ನಲ್ಲಿ ಅವರು ಹೇಗೆ ವಿಷಯ ಪ್ರಸ್ತಾಪಿಸುತ್ತಾರರೆಂದಿದ್ದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ದಿ. ಸುರೇಶ ಅಂಗಡಿ ನಾಲ್ಕು ಅವಧಿಗೆ ಸಂಸದರಾಗಿ ಎಷ್ಟು ಅನುಧಾನ ರಾಜ್ಯಕ್ಕೆ...

National

ಗುಜರಾತ‌ ಹಿಂಸಾಚಾರ; ಮೋದಿಗೆ ಕ್ಲೀನ‌ಚಿಟ್‌ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ, ಏ 13- ಗುಜರಾತ್ ಗಲಭೆ ಪ್ರಕರಣದಲ್ಲಿ 2002ರಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ, ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್‌ ಚಿಟ್‌ ಪ್ರಶ್ನಿಸಿ...

24 ಗಂಟೆಯಲ್ಲಿ 1.61 ಲಕ್ಷ ಜನರಿಗೆ ಕೊರೋನಾ; 879 ಸಾವು

ನವದೆಹಲಿ, ಏ 13 - ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿದ್ದು. ಕಳೆದ 24 ಗಂಟೆಯಲ್ಲಿ 1,61,ಲಕ್ಷ ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಈಗ ಸೋಂಕಿತರ ಸಂಖ್ಯೆ...

ಸತ್ಯಮಂಗಲಂ ಅರಣ್ಯದಲ್ಲಿ ಭಾರಿ ನಿಧಿ; ವೀರಪ್ಪನ್ ಪುತ್ರಿಯ ಹೇಳಿಕೆ

ಚೆನ್ನೈ, ಏ 11- ದಂತ ಚೋರ, ಕಾಡು ಕಳ್ಳ ವೀರಪ್ಪನ್ ನೆಲೆಸಿದ್ದ ಸತ್ಯಮಂಗಲಂ ಅರಣ್ಯ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಹಣ ಅಡಗಿಸಿಟ್ಟಿದ್ದಾನೆ ಎಂದು ಆತನ ಪುತ್ರಿ ವಿಜಯಲಕ್ಷ್ಮಿ ಹೇಳಿರುವುದು ಸಂಚಲನ ಸೃಷ್ಟಿಸಿದೆ. ವಾಲ್ಮುರಿಮಾಯಿ ಕಚ್ಚಿಯಲ್ಲಿ...

ನಟ ಸತೀಶ ಕೌಲ್ ಕೊರೋನಾಗೆ ಬಲಿ

ಚಂಡಿಗಡ, ಏಪ್ರಿಲ್ 10- ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ನಟ ಸತೀಶ ಕೌಲ್ ಶನಿವಾರ ಲುಧಿಯಾನದಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಸೋಂಕು ಪತ್ತೆಯ ನಂತರ ಸತೀಶ ಕೌಲ್ ರನ್ನು ಲುಧಿಯಾನಾದ ಖಾಸಗಿ...

International

30 ವರ್ಷದಿಂದ ಬೆಳೆಸಿದ್ದ ಉಗುರಿಗೆ ಕತ್ತರಿ

ಟೆಕ್ಸಾಸ್, 9- ದಾಖಲೆಗಾಗಿಯೋ ಶೋಕಿಗಾಗಿಯೋ 30 ವರುಷಗಳಿಂದ ಬೆಳೆಸಿಕೊಂಡು ಬಂದಿದ್ದ ತಮ್ಮ ಕೈ ಉಗುರುಗಳನ್ನು ಅಮೆರಿಕಾದ ಅಯನ್ನಾ ವಿಲಿಯಮ್ಸ ಎಂಬವರು‌ ಕತ್ತರಿಸಿಕೊಂಡು ಜಗತ್ತಿನ ಗಮನ ಸೆಳೆದಿದ್ದಾರೆ. ಅಯನ್ನಾ ಅವರು ಕಳೆದ ಮೂವತ್ತು ವರ್ಷಗಳಿಂದ ತಮ್ಮ...

ಕೋವಿಡ್ ಲಸಿಕೆ ನಂತರವೂ 63 ಜನರ ಸಾವು

ವಿಯೆನ್ನಾ ಏಪ್ರಿಲ್ 8 - ಆಸ್ಟ್ರಿಯಾದಲ್ಲಿ ಕರೋನ ಸೋಂಕಿನ ಲಸಿಕೆ ಪಡೆದ ನಂತರವೂ 63 ಜನರು ಮೃತಪಟ್ಟಿದ್ದಾರೆ ಎಂದು ಆಸ್ಟ್ರಿಯನ್ ಸರ್ಕಾರಿ ವಕ್ತಾರರು ಹೇಳಿದ್ದಾರೆ. ಕಳೆದ ವಾರ ಕರೋನ ಸೋಂಕಿನ ವಿರುದ್ಧ ಲಸಿಕೆ ಹಾಕಿದ...

ವಾರದಲ್ಲಿ ಕೋವಿಡ್ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆ

ಮಾಸ್ಕೋ, ಏಪ್ರಿಲ್ 7- ಕಳೆದೊಂದು ವಾರದಲ್ಲಿ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ವಾರದ ವರದಿ ತಿಳಿಸಿದೆ. ‘ಜಾಗತಿಕವಾಗಿ...

ನಾವಿನ್ನೂ ಸಾವು ಬದುಕಿನ ಹೋರಾಟದಲ್ಲಿದ್ದೇವೆ

ವಾಷಿಂಗ್ಟನ್, ಏ 7- ಕೊರೊನಾ ಸಾಂಕ್ರಾಮಿಕ ವಿಷಯದಲ್ಲಿ ಅಮೆರಿಕಾ ಈಗಲೂ ಸಾವು ಬದುಕಿನ ನಡುವಿನ ಸ್ಪರ್ಧೆಯಲ್ಲಿದೆ ಎಂದು ಅಮೇರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಹಾಗಾಗಿ ಕೊರೊನಾ ಸಾಂಕ್ರಾಮಿಕ ಪ್ರಸರಣ ತಡೆಗಟ್ಟಲು ಜನರು ಕಟ್ಟುನಿಟ್ಟಿನ...

Entertainment

ರಜನಿಕಾಂತಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ

ನವದೆಹಲಿ, ಎ 1- ಹೆಸರಾಂತ ಚಿತ್ರನಟ ರಜನಿಕಾಂತ ಅವರಿಗೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ ಈ ಬಗ್ಗೆ ಟ್ವೀಟ್ ಮಾಡಿ...

“90 ಹೊಡಿ ಮನೀಗ್ ನಡಿ” ಚಿತ್ರೀಕರಣ ಮುಕ್ತಾಯ

ಬೆಂಗಳೂರು, ಮಾರ್ಚ 31- ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ ಹಾಸ್ಯ ಪ್ರಧಾನ "90 ಹೊಡಿ ಮನೀಗ್ ನಡಿ" ಚಿತ್ರ ಇತ್ತೀಚೆಗೆ ಚಿತ್ರೀಕರಣ ಮುಕ್ತಾಯಗೊಳಿಸಿ ಕುಂಬಳಕಾಯಿ ಒಡೆಯುವ ಶಾಸ್ತ್ರ ಮುಗಿಸಿಕೊಂಡಿದೆ. "ಅಮ್ಮ ಟಾಕೀಸ ಬಾಗಲಕೋಟ"...

“ದಂಡಿ” ಚಿತ್ರಕ್ಕೆ ಚಾಲನೆ

ಕಾರವಾರ: ಮಾರ್ಚ 23 -ಸ್ವತಂತ್ರ ಪೂರ್ವದಲ್ಲಿ ನಡೆದ‌ ದಂಡಿ-ಉಪ್ಪಿನ ಸತ್ಯಾಗ್ರಹದ ಬಗ್ಗೆ ಸಿನಿಮಾವೊಂದು ಮೂಡಿ‌ಬರುತ್ತಿದೆ. ತಾರಾ, ಸುಚೇಂದ್ರ ಪ್ರಸಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ವಿಶಾಲ ರಾಜ್ ನಿರ್ದೇಶನವಿದ್ದು, ಹೊನ್ನಾವರದಲ್ಲಿ ಚಾಲನೆ...

“ತಾಜಮಹಲ್-2” ಚಿತ್ರೀಕರಣ ಮುಕ್ತಾಯ

ಬೆಂಗಳೂರು: ಮಾರ್ಚ 23- ಈ ಹಿಂದೆ ಡೇಂಜರ್‌ಜೋನ್, ನಿಶ್ಯಬ್ದ 2, ಅನುಷ್ಕದಂಥ ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜಕುಮಾರ ಅವರ ಸಾರಥ್ಯದ "ತಾಜ್‌ಮಹಲ್-2" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನ ಎಚ್‌ಎಂಟಿ ಏರಿಯಾದಲ್ಲಿ ಸೆಟ್ ಹಾಕಿ ಜೀವ ಬಿಡುವೆ...

Sports

ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೃನಾಲ್, ಕನ್ನಡಿಗ ಪ್ರಸಿದ್ಧ

ಪುಣೆ, ಮಾ.23 - ಆಲ್‌ರೌಂಡರ್ ಕೃನಾಲ್ ಪಾಂಡ್ಯ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಮಂಗಳವಾರ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಭಾರತಕ್ಕಾಗಿ 18...

ಸ್ಪಿನ್ ದಾಳಿಗೆ ಇಂಗ್ಲೆಂಡ ಪತನ; ಐಸಿಸಿ ಫೈನಲ್ ಗೆ ಭಾರತ

ಅಹಮದಾಬಾದ್, ಮಾ.6 - ಅನುಭವಿ ಸ್ಪಿನ್ ಬೌಲರ್ ಆರ್.ಅಶ್ವಿನ್ ಹಾಗೂ ಅಕ್ಷರ ಪಟೇಲ್ ಅವರ ಕರಾರುವಾಕ್ ದಾಳಿಗೆ ನಲುಗಿದ ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 25 ರನ್ ಗಳಿಂದ ಸೋಲು...

ರಿಷಭ ಪಂತ್ ಶತಕ; ಭಾರತದ ಮುನ್ನಡೆ

ಅಹಮದಾಬಾದ್, ಮಾ.5- ರಿಷಭ ಪಂತ್ (101) ಬಾರಿಸಿದ ಶತಕ ಹಾಗೂ ಆಲ್ ರೌಂಡರ್ ವಾಶಿಂಗ್ಟನ್ ಸುಂದರ್ (ಅಜೇಯ 60) ಅವರ ಅರ್ಧಶತಕದ ಬಲದಿಂದ ಭಾರತ ಕ್ರಿಕೆಟ್ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್...

ಭಾರತದ ಸ್ಪಿನ್ ಬಲೆಗೆ ಬಿದ್ದ ಇಂಗ್ಲೆಂಡ್

ಅಹಮದಾಬಾದ್, ಮಾ.4 - ಸ್ಪಿನ್ ಬೌಲರ್ ಗಳಾದ ಅಕ್ಷರ ಪಟೇಲ (68ಕ್ಕೆ 4) ಹಾಗೂ ಆರ್.ಅಶ್ವಿನ್ (47ಕ್ಕೆ 3) ಅವರ ಬಿಗುವಿನ ದಾಳಿಗೆ ಪ್ರವಾಸಿ ಇಂಗ್ಲೆಂಡ್ ತಂಡ ನಲುಗಿದ್ದು, ಭಾರತ ನಾಲ್ಕನೇ ಟೆಸ್ಟ್...