ಪ್ಯಾಂಗ್ಯಾಂಗ, ಜ 10- ಅಮೆರಿಕಾ ವಿರುದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೊಂಗ್ ಉನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಪರಮಾಣು ಅಸ್ತ್ರಗಳ ಸಾಮರ್ಥ್ಯ ಹೆಚ್ಚಿಸಿಕೊಳ್ಳಲ್ಲಿದ್ದೇವೆ. ಜಲಾಂತರ್ಗಾಮಿ ನೌಕೆ ಗಳನ್ನು ಸಹ ಪರಮಾಣು ವಿದ್ಯುತ್ ವ್ಯವಸ್ಥೆಗಳನ್ನಾಗಿ ಬದಲಾಯಿಸಿಕೊಳ್ಳುತ್ತೇವೆ. ಭವಿಷ್ಯದಲ್ಲಿ ನಾವು ಅವರ ವಿರುದ್ದ ವಾಗಿರಲಿದ್ದೇವೆ ಎಂದು ಅವರು ಅಮೆರಿಕಾಗೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದಲ್ಲಿ ಯಾರು ಅಧಿಕಾರಕ್ಕೆ ಬಂದರೂ, ತಮಗೆ ಯಾವುದೇ ಸಂಬಂಧವಿಲ್ಲ, ಅದು ನಮಗೆ ಶತ್ರು ದೇಶ ಎಂದು ಅವರು ಹೇಳಿದ್ದಾರೆ.
ಸಮಯ ಬಂದರೆ ಆ ದೇಶದ ಮೇಲೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಎಂದು ಕಿಮ್ ಹೇಳಿದ್ದಾರೆ. ಈ ಹಿಂದೆ ಅಮೆರಿಕಾ ಅಧ್ಯಕ್ಷ ಡೋನಾಲ್ಡ ಟ್ರಂಪ್ , ಕಿಮ್ ನಡುವೆ ಎರಡು ಬಾರಿ ಶಾಂತಿ ಮಾತುಕತೆ ನಡೆಸಿದ್ದರೂ ಯಾವುದೇ ಸಫಲತೆ ಕಂಡುಬಂದಿರಲಿಲ್ಲ. ಅಮೆರಿಕಾದ ಹೊಸ ಅಧ್ಯಕ್ಷ ಜೋ ಬೈಡನ್ ಅವರನ್ನು ಸೌಜನ್ಯಕ್ಕೂ ಅಭಿನಂದಿಸಲು ಕಿಮ್ ಈವರೆಗೆ ಮುಂದಾಗಿಲ್ಲ.
ಕಿಮ್ ಇತ್ತೀಚೆಗೆ ತಮ್ಮ ದೇಶದ ಆಡಳಿತಾರೂಢ ವರ್ಕರ್ಸ್ ಪಾರ್ಟಿ ಸಮಾವೇಶದಲ್ಲಿ, ದೇಶದ ಆರ್ಥಿಕ ಅಭಿವೃದ್ಧಿಗೆ ಏನನ್ನೂ ಮಾಡಲು ಸಾಧ್ಯವಾಗಿಲ್ಲ, ಕೆಲವು ತಪ್ಪುಗಳನ್ನು ಮಾಡಿದ್ದೇನೆ ಎಂದು ಕಿಮ್ ನೋವು ವ್ಯಕ್ತಪಡಿಸಿದ್ದರು.
ಅಮೆರಿಕಾ ಶ್ವೇತ ಭವನವನ್ನು ಇನ್ನೂ ಕೆಲವೇ ದಿನಗಳಲ್ಲಿ ಹೊಸ ಅಧ್ಯಕ್ಷ ಜೋ ಬೈಡನ್ ಪ್ರವೇಶಿಸುವ ಹಿನ್ನಲೆಯಲ್ಲಿ ಕಿಮ್ ಈ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.