ಸಿಡ್ನಿ, ಜ.10- ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಐದನೇ ಮೊದಲಾವಧಿಯ ಆಟವನ್ನು ಎಚ್ಚರಿಕೆಯಿಂದ ಆಡ ಬೇಕಿದೆ ಎಂದು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾನುವಾರ ಹೇಳಿದ್ದಾರೆ.
ಪಂದ್ಯವನ್ನು ಗೆಲ್ಲಲು ಭಾರತಕ್ಕೆ 407 ರನ್ಗಳ ಕಠಿಣ ಗುರಿ ಸಿಕ್ಕಿದೆ ಮತ್ತು ಆಟದ ನಾಲ್ಕನೇ ದಿನದ ಅಂತ್ಯದ ವೇಳೆಗೆ ಟೀಮ್ ಇಂಡಿಯಾ ಎರಡು ವಿಕೆಟ್ಗಳನ್ನು ಕಳೆದುಕೊಂಡು 98 ರನ್ ಗಳಿಸಿದೆ. ಮತ್ತು ಪಂದ್ಯವನ್ನು ಗೆಲ್ಲಲು ಭಾರತ ಇನ್ನೂ 309 ರನ್ ಗಳಿಸಬೇಕಾಗಿದೆ. ಭಾರತವು ಶುಭಮನ್ ಗಿಲ್ ಮತ್ತು ಅರ್ಧಶತಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾಮವರ ವಿಕೆಟ್ ಕಳೆದುಕೊಂಡಿದೆ.
ನಾಲ್ಕನೇ ದಿನದ ಆಟದ ನಂತರ ಅಶ್ವಿನ್, “ಈ ಇಬ್ಬರು ಆಟಗಾರರು ಮೊದಲ ಸೆಷನ್ನಲ್ಲಿ ತಂಡಕ್ಕೆ ಬಲವಾದ ಅಡಿಪಾಯ ಹಾಕುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು. ಮೆಲ್ಬೋರ್ನ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ರಹಾನೆ ಅದ್ಭುತ ಶತಕ ಬಾರಿಸಿದ್ದರೆ, ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಪೂಜಾರ ಅರ್ಧಶತಕವನ್ನು ಗಳಿಸಿದ್ದರು.
“ನಾವು ಮೊದಲಾವಧಿಯನ್ನು ಚೆನ್ನಾಗಿ ಆಡುವುದು ನಮಗೆ ಬಹಳ ಮುಖ್ಯ ಮತ್ತು ಯಾವುದೇ ವಿಕೆಟ್ ಕಳೆದುಕೊಳ್ಳಬಾರದು. ಈ ಸಮಯದಲ್ಲಿ ಕ್ರೀಸ್ನಲ್ಲಿರುವ ಇಬ್ಬರು ಆಟಗಾರರು ಅಪಾರ ಅನುಭವವನ್ನು ಹೊಂದಿದ್ದಾರೆ ಮತ್ತು ಈ ಸ್ವರೂಪವನ್ನು ಹೆಚ್ಚು ಚೆನ್ನಾಗಿ ತಿಳಿದಿದ್ದಾರೆ.