ನವದೆಹಲಿ, ಜ 11- ಲಡಾಖಿನಿಂದ ಚೀನಿ ಪಡೆಗಳನ್ನು ಯಾವುದೇ ವಿದೇಶಿ ಸಹಾಯವಿಲ್ಲದೆ ಕೂಡಲೇ ಹೊರಗಟ್ಟಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
“1962ರ ಸೋಲು ನೆಹರೂ ಅವರ ಸೋಲು, ಭಾರತ ಮಾತೆಯ ಸೋಲಲ್ಲ ಎಂದು ನಾವು ನಮ್ಮ ಕ್ರಮದ ಮೂಲಕ ಸಾಬೀತು ಪಡಿಸಬೇಕು. ಯಾರ, ಯಾವ ವಿದೇಶಿ ಸಹಾಯ, ನೆರವಿಲ್ಲದೇ ಚೀನೀ ಪಡೆಗಳನ್ನು ಲಡಾಖನಿಂದ ಹೊರದೂಡಬೇಕು ಎಂದೂ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಚೀನಾದ ಸೇನೆಯಿಂದ ಯಾವುದೇ ಅತಿಕ್ರಮಣ ನಡೆದಿಲ್ಲ ಎಂದು ಈ ಹಿಂದೆ ಹೇಳಿರುವ ಪ್ರಧಾನಿ ನರೇಂದ್ರ ಮೋದಿಯ ಹೇಳಿಕೆಯನ್ನೂ ಖಂಡಿಸುವ ರೀತಿಯಲ್ಲಿ ಇನ್ನೊಂದು ಪೋಸ್ಟ್ ಮಾಡಿರುವ ಸ್ವಾಮಿ “ಕೋಯಿ ಆಯಾ ನಹೀ ಔರ್ ಕೋಯಿ ಗಯಾ ನಹೀ ಎಂದು ನಾವು ಎಷ್ಟು ಸಮಯ ಅಂದುಕೊಳ್ಳಬಹುದು? ಇದು ಸತ್ಯದ ಕ್ಷಣವಲ್ಲವೇ ?