INDIA COVID-19 Statistics

10,640,544
Confirmed Cases
Updated on 23/01/2021 3:17 AM
187,260
Total active cases
Updated on 23/01/2021 3:17 AM
153,221
Total deaths
Updated on 23/01/2021 3:17 AM
Saturday, January 23, 2021

INDIA COVID-19 Statistics

10,640,544
Total confirmed cases
Updated on 23/01/2021 3:17 AM
187,260
Total active cases
Updated on 23/01/2021 3:17 AM
153,221
Total deaths
Updated on 23/01/2021 3:17 AM
10,300,063
Total recovered
Updated on 23/01/2021 3:17 AM
Home State Bengaluru ಜ 15ರಿಂದ‌ ತರಗತಿ, ಹಾಸ್ಟೆಲ್‌ ಆರಂಭ

ಜ 15ರಿಂದ‌ ತರಗತಿ, ಹಾಸ್ಟೆಲ್‌ ಆರಂಭ

ಬೆಂಗಳೂರು, ಜ 11- ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮೋ ತರಗತಿಗಳ ಎಲ್ಲ ವರ್ಷಗಳ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿಗಳನ್ನು ಇದೇ 15ರಿಂದ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಜವಾಬ್ದಾರಿ ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ನಗರದಲ್ಲಿಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಡಿಸಿಎಂ ಅವರು, ಅಂತಿಮ ವರ್ಷದ ಆಫ್‌ಲೈನ್‌ ತರಗತಿಗಳು ಈಗಾಗಲೇ ಆರಂಭವಾಗಿ ಯಶಸ್ವಿಯಾಗಿ ನಡೆಯುತ್ತಿವೆ. ಉಳಿದಂತೆ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಕೂಡ ತಮಗೂ ನೇರ ತರಗತಿಗಳನ್ನು ಆರಂಭಿಸುವಂತೆ ಒತ್ತಾಯ ಮಾಡುತ್ತಿದ್ದರು. ಅದರಂತೆ, ಈ ತಿಂಗಳಿನಿಂದಲೇ ತರಗತಿಗಳನ್ನು ಆರಂಭ ಮಾಡುತ್ತಿದ್ದೇವೆ ಎಂದರು.

ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಪ್ರಥಮ, ದ್ವಿತೀಯ ಹಾಗೂ ಮೂರನೇ ವರ್ಷದ ಆಫ್‌ಲೈನ್‌ ತರಗತಿಗಳು ಕೂಡ ಇದೇ ದಿನ ಶುರುವಾಗುತ್ತಿವೆ. ಇದರ ಜತೆಗೆ, ತರಗತಿಗಳು ಆರಂಭವಾಗುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳನ್ನು ತೆರೆಯಲಾಗುತ್ತಿದೆ. ಕಾಲೇಜುಗಳ ಬಸ್‌ ವ್ಯವಸ್ಥೆಯೂ ಪುನಾರಂಭವಾಗುತ್ತಿದೆ ಎಂದ ಅವರು, ಕೋವಿಡ್‌ ಮಾರ್ಗಸೂಚಿಯಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕಾಲೇಜುಗಳಲ್ಲಿ ಕೋವಿಡ್‌ ತಪಾಸಣೆ, ಸ್ಯಾನಿಟೈಸ್ ವ್ಯವಸ್ಥೆ, ದೈಹಿಕ ಅಂತರ ಪಾಲನೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳು ಇರುತ್ತವೆ ಎಂದರು.

ಈಗಾಗಲೇ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಬಸ್‌ ಪಾಸ್‌ಗಳನ್ನು ತ್ವರಿತವಾಗಿ ವಿತರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆಯು ಒಪ್ಪಿದ್ದು, ಆಯಾ ಕಾಲೇಜುಗಳು ತಮ್ಮ ವ್ಯಾಪ್ತಿಯಲ್ಲಿರುವ ಸಾರಿಗೆ ವಿಭಾಗೀಯ ಕಚೇರಿಗಳ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ ಆದಷ್ಟು ಬೇಗ ಬಸ್‌ಪಾಸ್‌ಗಳ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಎನ್ ಸಿ ಸಿ ಮತ್ತು ‌ಎನ್ ಎಸ್ ಎಸ್ ತರಬೇತಿಗೂ ಅವಕಾಶ ನೀಡಲಾಗಿದೆ. ಎನ್ ಸಿ ಸಿ ಕೂಡ ಪರೀಕ್ಷೆ ಗಳನ್ನು ಆಯೋಜಿಸಬೇಕಾಗಿದ್ದು ಇದಕ್ಕಾಗಿ ಅಲ್ಪಾವಧಿಯ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಬಿ- ಸರ್ಟಿಫಿಕೇಟ್ ಪರೀಕ್ಷೆಗೆ ಮೂರು ದಿನಗಳ ಹಾಗೂ ಸಿ- ಸರ್ಟಿಫಿಕೇಟ್ ಪರೀಕ್ಷೆ ಗೆ ಐದು ದಿನಗಳ ಶಿಬಿರ ‌ನಡೆಸುವುದಕ್ಕೂ ಅವಕಾಶ ನೀಡಲಾಗಿದೆ ಎಂದು ಡಿಸಿಎಂ ಹೇಳಿದರು.

ಪೂರ್ಣ ಪ್ರಮಾಣದಲ್ಲಿ ಹಾಸ್ಟೆಲ್‌ಗಳನ್ನು ತೆರೆಯಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ (ಎಸ್‌ಒಪಿ) ಸಿದ್ಧಪಡಿಸುವಂತೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳನ್ನು ಕೋರಲಾಗಿದೆ. ಕಾಲೇಜುಗಳಲ್ಲಿ ಗ್ರಂಥಾಲಯ, ಕ್ಯಾಂಟೀನ್‌, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾಕೂಟ ಆಯೋಜನೆಗೂ ಎಸ್‌ಒಪಿಯನ್ನು ಸಿದ್ಧಪಡಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.

ಅಂತಿಮವಾಗಿ, ಏಕಕಾಲಕ್ಕೆ ಎಲ್ಲೆಡೆ ಆಫ್‌ಲೈನ್‌ನಲ್ಲಿಯೇ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಈಗಾಗಲೇ ರಾಜ್ಯದ ಎಲ್ಲ ಸರಕಾರಿ-ಖಾಸಗಿ ವಲಯದ ವಿವಿಗಳ ಕುಲಪತಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ಆದಷ್ಟು ಬೇಗ ಪರೀಕ್ಷೆ ದಿನದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಪದವಿ ಮತ್ತು ಸ್ನಾತಕೋತ್ತರ ತರಗತಿಗಳನ್ನು ಆರಂಭಿಸುವ ಕುರಿತ ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ, ಹಿಂದುಳಿದ ವರ್ಗಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರವಿಕುಮಾರ ಸುರಪುರ್, ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತ ವಸಂತ ಕುಮಾರ್ ಮುಂತಾದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here

State

ಬಸ್ ಈಗ ಪ್ರಯಾಣಿಕರ ಟಾಯ್ಲೆಟ್

ಬೆಂಗಳೂರು, 22- ಹಳೆಯ ಬಸ್ ಗಳನ್ನು ಗುಜರಿಗೆ ಹಾಕದೇ ಅವುಗಳನ್ನು ಪ್ರಯಾಣಿಕರ ಟಾಯ್ಲೆಟ್ ಗಳನ್ನಾಗಿ ಪರಿವರ್ತಸಲು ಸರಕಾರ ಚಿಂತನೆ ನಡೆಸಿದೆ. ಹಳೆ ಬಸೊಂದನ್ನು ಈ ಥರ ಟಾಯ್ಲೆಟ್ ಆಗಿ ಪರಿವರ್ತಸಿ ಬೆಂಗಳೂರಿನ ಮೆಜೆಸ್ಟಿಕ್...

ವಿಧಾನ ಪರಿಷತ್ ಘಟನೆ: ಸದನ ಸಮಿತಿಯಿಂದ 84 ಪುಟಗಳ ಮಧ್ಯಂತರ ವರದಿ ಸಲ್ಲಿಕೆ

ಬೆಂಗಳೂರು, ಜ 22- ವಿಧಾನ ಪರಿಷತ್ ಅಧಿವೇಶನದ ಸಮಯದಲ್ಲಿ ಡಿಸೆಂಬರ್ 15 ರಂದು ನಡೆದ ಅಹಿತಕರ ಘಟನೆಯ ವಿಚಾರಣೆ ನಡೆಸಿ ವರದಿ ಸಲ್ಲಿಸಲು ರಚಿಸಲಾಗಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯ ಸದನ...

ರ್ಯಾಗಿಂಗ‌; 7 ಕಾಲೇಜು ವಿದ್ಯಾರ್ಥಿಗಳ ಬಂಧನ

ಮಂಗಳೂರು, ಜ 22- ಮೊದಲ ವರ್ಷದ ವಿದ್ಯಾರ್ಥಿಗಳನ್ನು ರ್ಯಾಗಿಂಗ‌ ಮಾಡಿದ ಆರೋಪದ ಮೇಲೆ ಮಂಗಳೂರಿನ ಖಾಸಗಿ ಕಾಲೇಜೊಂದರ ಎಂಟು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಮೊದಲ ವರ್ಷದ ಬಿಫಾರ್ಮಾ ವಿದ್ಯಾರ್ಥಿಗೆ ತನ್ನ ತಲೆ...

ಶಿವಮೊಗ್ಗ ದುರಂತದ ಉನ್ನತ ಮಟ್ಟದ ತನಿಖೆ

ಬೆಂಗಳೂರು, ಜ.22 - ಶಿವಮೊಗ್ಗದ ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರಿ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿರುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದೊಂದು...

National

ಜೂನ್ ವೇಳೆಗೆ ಕಾಂಗ್ರೆಸಗೆ ನೂತನ ಅಧ್ಯಕ್ಷ

ನವದೆಹಲಿ, ಜ 22 - ಕಾಂಗ್ರೆಸ್ ಪಕ್ಷವು ಮುಂದಿನ ಐದು ತಿಂಗಳಲ್ಲಿ ನೂತನ ಅಧ್ಯಕ್ಷರನ್ನು ಹೊಂದಲಿದೆ. ಸಾಂಸ್ಥಿಕ ಚುನಾವಣೆಯ ಪ್ರಕ್ರಿಯೆಯು ಮೇ 29 ರಿಂದ ಪ್ರಾರಂಭವಾಗಲಿದ್ದು, ಈ ವರ್ಷದ ಜೂನ್ ವೇಳೆಗೆ ಕಾಂಗ್ರೆಸ್ ಚುನಾಯಿತ...

ಹೊಸ ಕೃಷಿ ಕಾನೂನು ಒಂದೂವರೆ ವರ್ಷ ಜಾರಿಗೆ ತರದಿರಲು ಚಿಂತನೆ

ನವದೆಹಲಿ, ಜ 20- ಸರ್ಕಾರ ಮತ್ತು ರೈತ ಸಂಘಗಳ ನಡುವಿನ ಹತ್ತನೇ ಸುತ್ತಿನ ಮಾತುಕತೆ ಬುಧವಾರ ಸಂಜೆ ಮುಕ್ತಾಯಗೊಂಡಿದ್ದು, ಕೃಷಿ ಕಾನೂನುಗಳನ್ನು ಒಂದೂವರೆ ವರ್ಷಗಳ ಕಾಲ ಜಾರಿಗೊಳಿಸದಿರಲು ಸರ್ಕಾರ ಪ್ರಸ್ತಾಪ ಇಟ್ಟಿದೆ. ಜ...

ಸ್ವಯಂ ಘೋಷಿತ ಆಧ್ಯಾತ್ಮಿಕ ನಾಯಕರ ಆಶ್ರಮಗಳ ವಿರುದ್ದದ ಪಿಐಎಲ್ ತಿರಸ್ಕೃತ

ನವದೆಹಲಿ, ಜ 20- ಸ್ವಯಂ ಘೋಷಿತ ಆಧ್ಯಾತ್ಮಿಕ ಗುರುಗಳು ನಡೆಸುತ್ತಿರುವ ಆಶ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಖಟ್ಲೆಯನ್ನು ಸುಪ್ರೀಮ ಕೋರ್ಟ ತಿರಸ್ಕರಿಸಿದೆ. ಕೆಲವು ಆಶ್ರಮಗಳಲ್ಲಿ ಕೆಲವರನ್ನು, ವಿಶೇಷವಾಗಿ ಮಹಿಳೆಯರನ್ನು...

ಅಮೇರಿಕದ ಉಪಾಧ್ಯಕ್ಷೆಯಾಗಲಿರುವ ಕಮಲಾ ಹ್ಯಾರಿಸ್; ತಮಿಳುನಾಡಿನಲ್ಲಿ ಸಂಭ್ರಮ

ಚೆನ್ನೈ, ಜನವರಿ 20- ಅಮೆರಿಕದಲ್ಲಿ ಜೋ ಬೈಡನ್ ನೇತೃತ್ವದ ಡೆಮಾಕ್ರಟಿಕ್ ಪಕ್ಷದ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದು, ತಮಿಳುನಾಡಿನಲ್ಲಿ ಎಲ್ಲಿಲ್ಲದ ಸಡಗರ, ಸಂಭ್ರಮ ಮೇರೆ ಮಿರಿದೆ. ಭಾರತ ಮೂಲದ, ಅದರಲ್ಲೂ ವಿಶೇಷವಾಗಿ ತಮಿಳುನಾಡು ಮೂಲದ...

International

ಕೊರೋನಾ ಪೀಡಿತ ಮಹಿಳೆಗೆ ಚಿಕಿತ್ಸೆ ನೀಡದ್ದಕ್ಕೆ ಜನರ ಆಕ್ರೋಷ:. ಪ್ರಧಾನಿ ರಾಜೀನಾಮೆ!

ಉಲಾನ್ ಬಾಟರ್, ಜ 21- ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದ ಕೊರೋನಾ ವೈರಸ್ ಸೋಂಕು ತಗುಲಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಲ್ಲವೆಂದು ಸಾರ್ವಜನಿಕರಿಂದ ಭುಗಿಲೆದ್ದ ಆಕ್ರೋಶದ ಹಿನ್ನೆಲೆಯಲ್ಲಿ ಮಂಗೋಲಿಯಾ ಪ್ರಧಾನಿ ಉಖ್ನಾ ಖುರೆಲ್...

ಕೋವಿಡ್ ಲಸಿಕೆ ಪಡೆದುಕೊಂಡ 23 ವೃದ್ದರ ಸಾವು

ಓಸ್ಲೋ, ಜ 16- ನಾರ್ವೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ 23 ಮಂದಿ ವೃದ್ಧರು ಮೃತಪಟ್ಟಿದ್ದಾರೆ. ಇದರಿಂದ ನಾರ್ವೆ ಸರ್ಕಾರ ವಯೋ ವೃದ್ದರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡದಂತೆ ಸೂಚಿಸಿದೆ. ಫೈಝರ್ ಎನ್ ಬಯೋಟೆಕ್ ಅಭಿವೃದ್ಧಿಪಡಿಸಿದ...

ದಕ್ಷಿಣ ಇರಾನ್ ನಲ್ಲಿ ಭೂಕಂಪ

ತೆಹರಾನ್, ಜನವರಿ 16 - ದಕ್ಷಿಣ ಇರಾನ್‌ನ ಪ್ರಾಂತ್ಯದ ಹಾರ್ಮೋಜ್‌ಗನ್‌ಲ್ಲಿ ಭೂಕಂಪನ ಸಂಭವಿಸಿದ್ದು, ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.5 ಎಂದು ದಾಖಲಾಗಿರುವುದಾಗಿ ರಾಷ್ಟ್ರೀಯ ಭೂಕಂಪನ ಕೇಂದ್ರ ಶನಿವಾರ ತಿಳಿಸಿದೆ. ಇರಾನಿನ ಭೂಕಂಪಶಾಸ್ತ್ರಜ್ಞರ ಪ್ರಕಾರ,...

ಇಂಡೋನೇಷ್ಯಾದಲ್ಲಿ ಭೂಕಂಪ : 26 ಸಾವು

ಜಕಾರ್ತ, ಜ 15- ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪದಿಂದ ಇದು ವರೆಗೆ 26 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ಏಜೆನ್ಸಿಯನ್ನು ಉಲ್ಲೇಖಿಸಿ ಅಜೆನ್ಸ್ ಫ್ರಾನ್ಸ್-ಪ್ರೆಸ್ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ. ರಿಕ್ಟರ್...

Entertainment

ಜ. 24ರಂದು ವರುಣ ಧವನ್-ನತಾಶಾ ಮದುವೆ

ಮುಂಬೈ, ಜ 15 - ಖ್ಯಾತ ನಿರ್ಮಾಪಕ, ನಿರ್ದೇಶಕ ಡೇವಿಡ್ ಧವನ ಪುತ್ರ ನಟ ವರುಣ ಧವನ್ ಅವರು ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ...

‘ಲಂಕಾಸುರ’ ಚಿತ್ರಕ್ಕೆ ಚಾಲನೆ

ಬೆಂಗಳೂರು, ಜ 15 - ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮದಂದು ವಿನೋದ ಪ್ರಭಾಕರ ಹಾಗೂ ಲೂಸ್ ಮಾದ ಅಭಿನಯದ ‘ಲಂಕಾಸುರ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ...

“ಕಬ್ಜ” ಭಾರ್ಗವ ಭಕ್ಷಿಯಾಗಿ ಕಿಚ್ಚನ ಅಬ್ಬರ

ಬೆಂಗಳೂರು, ಜ 14- ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಟಿಸುತ್ತಿದ್ದು, ಭಾರ್ಗವ ಭಕ್ಷಿ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಸಂಕ್ರಾತಿಯಂದು ವಿಶೇಷ ಪೋಸ್ಟರ ಬಿಡುಗಡೆಗೊಳಿಸುವ...

“ಸಲಾರ್” ನಾಳೆ ಮುಹೂರ್ತ

ಬೆಂಗಳೂರು, ಜ 14- ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಸಿದ್ಧವಾಗಲಿರುವ ಸಲಾರ್ ಸಿನಿಮಾ ಸೆಟ್ಟೇರುವುದಕ್ಕೂ ಮೊದಲೇ ಫಸ್ಟ್ ಲುಕ್ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿದೆ. ಇದೀಗ ಚಿತ್ರತಂಡ ಸಂಕ್ರಾಂತಿ ಹಬ್ಬದ...

Sports

ರಹಾನೆ ಮತ್ತು ಇತರ ಆಟಗಾರರಿಗೆ ಕ್ವಾರಂಟೈನ್ ವಿನಾಯಿತಿ

ನವದೆಹಲಿ, ಜ.21- ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಗೆದ್ದು ಗುರುವಾರ ಬೆಳಿಗ್ಗೆ ಮುಂಬೈಗೆ ಮರಳಿದ ನಾಯಕ ಅಜಿಂಕ್ಯ ರಹಾನೆ ಮತ್ತು ಇತರ ನಾಲ್ಕು ಭಾರತೀಯ ಆಟಗಾರರಿಗೆ ಮಹಾರಾಷ್ಟ್ರ ಸರ್ಕಾರ ಕ್ವಾರಂಟೈನ್ ನಿಂದ ವಿನಾಯಿತಿ...

ಭಾರತ ತಂಡಕ್ಕೆ 5 ಕೋಟಿ ಬೋನಸ್ ನೀಡಿದ ಬಿಸಿಸಿಐ

ಬ್ರಿಸ್ಬೇನ್‍, ಜ.19- ಆಸ್ಟ್ರೇಲಿಯಾದಲ್ಲಿ ಕಾಂಗರೂಗಳನ್ನ ಬಗ್ಗುಬಡಿದು ಐಸಿಹಾಸಿಕ ಟೆಸ್ಟ್ ಸರಣಿ ಗೆದ್ದಿರುವ ಭಾರತ ಕ್ರಿಕೆಟ್ ತಂಡದ ಬಗ್ಗೆ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಯಂಗ್ ಸ್ಟಾರ್ ಗಳ ಆಟಕ್ಕೆ ಕ್ರಿಕೆಟ್ ಸೂಪರ್ ಸ್ಟಾರ್ ಗಳು...

ಬ್ರಿಸ್ಬೇನ್ ನಲ್ಲಿ ಇತಿಹಾಸ ನಿರ್ಮಿಸಿದ ಭಾರತ ಕ್ರಿಕೆಟ್ ತಂಡ

ಬ್ರಿಸ್ಬೇನ್, ಜ.19- ಬಹುನಿರೀಕ್ಷಿತ ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡ ಭರ್ಜರಿ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ತಂಡವನ್ನು ತವರಿನಲ್ಲೇ ಬಗ್ಗು ಬಡೆಯುವ ಮೂಲಕ ನಾಲ್ಕು ಪಂದ್ಯಗಳ ಸರಣಿಯನ್ನು 2-1 ರಿಂದ ತೆಕ್ಕೆಗೆ...

ಹೆಣ್ಣು ಮಗುವಿಗೆ ತಂದೆಯಾದ ವಿರಾಟ ಕೊಯ್ಲಿ

ಮುಂಬೈ, ಜ 11- ಭಾರತ ಕ್ರಿಕೆಟ ತಂಡದ ನಾಯಕ ವಿರಾಟ ಕೊಯ್ಲಿ ತಂದೆಯಾಗಿದ್ದಾರೆ. ವಿರಾಟ ಪತ್ನಿ ನಟಿ ಅನುಷ್ಕ ಶರ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಿಹಿ ಸುದ್ದಿಯನ್ನು ಸ್ವತಃ ವಿರಾಟ ಕೊಯ್ಲಿ...