INDIA COVID-19 Statistics

10,543,659
Confirmed Cases
Updated on 16/01/2021 5:31 AM
211,814
Total active cases
Updated on 16/01/2021 5:31 AM
152,130
Total deaths
Updated on 16/01/2021 5:31 AM
Saturday, January 16, 2021

INDIA COVID-19 Statistics

10,543,659
Total confirmed cases
Updated on 16/01/2021 5:31 AM
211,814
Total active cases
Updated on 16/01/2021 5:31 AM
152,130
Total deaths
Updated on 16/01/2021 5:31 AM
10,179,715
Total recovered
Updated on 16/01/2021 5:31 AM
Home Editorial ಹುಲಿ ಸವಾರಿ

ಹುಲಿ ಸವಾರಿ

ಇದೊಳ್ಳೆ ಹುಲಿ ಸವಾರಿ ಪ್ರಕರಣ. ಹೊಸ ಕೃಷಿ ಕಾನೂನು ತಂದಿದ್ದೇನೋ ಆಯಿತು, ಆದರೆ ಅದಕ್ಕೆ ಬಂದಿರುವ ಭಾರಿ ವಿರೋಧ ಹೇಗೆ ಎದುರಿಸುವುದು ಎಂದು ಕೇಂದ್ರ ಸರ್ಕಾರಕ್ಕೆ ತಿಳಿಯುತ್ತಿಲ್ಲ. ಇದುವರೆಗೆ ಅನುಸರಿಸುತ್ತ ಬಂದಿದ್ದ ತಂತ್ರ ಈಗ ಫಲ ನೀಡುತ್ತಿಲ್ಲ. ಪ್ರತಿ ಬಾರಿ ಏನಾದರೊಂದು ಅನಾಹುತಕಾರಿ ನಿರ್ಣಯ ಕೈಗೊಂಡಾಗೆಲ್ಲ, ಅದೆಲ್ಲ ದೇಶದ ಹಿತಕ್ಕೆ ಎಂದು ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿತ್ತು. ವಿರೋಧಿಸಿದವರನ್ನು ದೇಶದ್ರೋಹಿಗಳು, ಭಯೋತ್ಪಾದಕರು, ನಕ್ಸಲರು, ಅಜ್ಞಾನಿಗಳು ಎಂದೆಲ್ಲ ಪ್ರಚಾರ ಮಾಡಿ ಹೇಗೋ ಪಾರಾಗುತ್ತ ಬಂದಿದ್ದರು. ಆದರೀಗ ಇಡೀ ದೇಶದ ರೈತ ಸಮುದಾಯ ಕೇಂದ್ರದ ವಿರುದ್ಧ ತಿರುಗಿ ಬಿದ್ದಿರುವುದಕ್ಕೆ ಪ್ರತಿಯಾಗಿ ಏನು ಮಾಡಬೇಕು ಎಂದು ತೋಚುತ್ತಿಲ್ಲ. ಹಳೆಯ ಪ್ರಯೋಗಗಳು ಪ್ರಯೋಜನಕ್ಕೆ ಬರುತ್ತಿಲ್ಲ.

ದೇಶದಲ್ಲಿ ರೈತರ ಸಂಖ್ಯೆ ಮತ್ತು ಅವರ ಕೊಡುಗೆ ದೊಡ್ಡದು. ಇಷ್ಟೇ ಅಲ್ಲ, ಅವರೆಲ್ಲ ಹಳ್ಳಿಗಾಡಲ್ಲಿ ಇರುವವರು. ಮೊದಲೆಲ್ಲ ಅಕ್ಷರ ಜ್ಞಾನ ಪಡೆದವರು ಕಡಿಮೆ ಇದ್ದರು. ಈಗ ಆ ಪರಿಸ್ಥಿತಿ ಬದಲಾಗಿದೆ. ರೈತರ ಮಕ್ಕಳು ದೊಡ್ಡ ದೊಡ್ಡ ಸ್ಥಾನದಲ್ಲಿ ಇದ್ದಾರೆ. ಅತ್ಯುತ್ತಮ ಪದವಿ ಪಡೆದವರೂ ಇದ್ದಾರೆ. ಬಹಳ ಮುಖ್ಯ ಎಂದರೆ ಅನಕ್ಷರಸ್ಥರಾದರೂ ಅವರೊಳಗೆ ಅನುಭವ ಮತ್ತು ಪರಂಪರೆಯಿಂದ ಪಡೆದ ವಿಶಿಷ್ಠ ಜ್ಞಾನ ಇರುತ್ತದೆ. ಹಾಗಾಗಿಯೇ ಅವರು ಮುಂದೆ ಬರುವ ಅಪಾಯಗಳನ್ನು ಮೊದಲೇ ಗ್ರಹಿಸಿ ಅದಕ್ಕೆ ತಯಾರಿ ಮಾಡಿಕೊಳ್ಳಬಲ್ಲ ಸಾಮಥ್ರ್ಯ ಉಳ್ಳವರಾಗಿದ್ದಾರೆ. ಹೊಸ ಕೃಷಿ ಕಾನೂನು ಬಂದ ಕೂಡಲೇ ಅವರು ಮೊದಲು ಸರ್ಕಾರದ ಜೊತೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಯತ್ನಿಸಿದರು. ಸರ್ಕಾರ ನಿರಾಸಕ್ತಿ ತೋರಿದಾಗ ಸಣ್ಣ ಪ್ರಮಾಣದಲ್ಲಿ ಆಂದೋಲನ ಹಮ್ಮಿಕೊಂಡರು. ರೈಲು, ರಸ್ತೆ ತಡೆದರು. ಆಗಲೂ ಸರ್ಕಾರ ತನ್ನ ಬಲದಿಂದ ರೈತರನ್ನು ಮಣಿಸಲು ಯತ್ನಿಸಿತೇ ಹೊರತು, ಮಾರ್ಗವೊಂದನ್ನು ಹುಡುಕೋಣ ಎಂದು ಚಿಂತಿಸಲೇ ಇಲ್ಲ. ಇವರೇನು ಮಾಡಬಲ್ಲರು ಎಂಬ ಉಡಾಫೆ ಅವರಲ್ಲಿ ಇತ್ತು, ಈಗಲೂ ಇದೆ.

ಯಾವಾಗ ರೈತರು ದೆಹಲಿಯತ್ತ ಹೊರಟರೋ, ಅವರು ದೆಹಲಿಯೊಳಗೆ ಬರದಂತೆ ಮಾಡಲು ಸರ್ಕಾರೀ ಯಂತ್ರದ ಬಳಕೆ ಮಾಡಲಾಯಿತು. ತಮ್ಮದೇ ಪಕ್ಷ ಅಧಿಕಾರದಲ್ಲಿ ಇರುವ ಹರಿಯಾಣಾದಲ್ಲಿ ರೈತರು ನಡೆದು ಬರುವಾಗ ಅವರನ್ನು ಹತ್ತಿಕ್ಕಲು ಏನೆಲ್ಲ ಉಪಾಯ ಮಾಡಲಾಯಿತು. ಕೊನೆಗೆ ರೈತರ ಟ್ರ್ಯಾಕ್ಟರುಗಳು ಮುಂದೆ ಸರಿಯದಂತೆ ಮಾಡಲು ಹೆದ್ದಾರಿಯನ್ನೇ ಅಗೆದು ಕಂದಕ ನಿರ್ಮಿಸಲಾಯಿತು. ಆದರೆ ರೈತರು ಅದೇ ಟ್ರ್ಯಾಕ್ಟರುಗಳನ್ನು ಬಳಸಿ ನೋಡು ನೋಡುತ್ತಿದ್ದಂತೆ ಗುಂಡಿ ಮುಚ್ಚಿ ಅದರ ಮೇಲೆ ತಮ್ಮ ವಾಹನಗಳನ್ನು ನಡೆಸಿಕೊಂಡು ಬಂದರು.

ದೆಹಲಿ ಅಂಚಿಗೆ ಬರುತ್ತಿದ್ದಂತೆ ಅವರ ಮೇಲೆ ಜಲಫಿರಂಗಿ ಬಳಸಲಾಯಿತು. ದೆಹಲಿಯೊಳಗೆ ಬಂದರೆ ಅವರನ್ನೆಲ್ಲ ಒಂದು ಮೈದಾನದಲ್ಲಿ ಕೂಡಿ ಹಾಕಿ ಬಂಧಿಸುವ ನಿರ್ಧಾರ ಮಾಡಲಾಯಿತು. ಆದರೆ ರೈತರು ಸರ್ಕಾರದ ಯಾವ ದುಷ್ಟ ಸಂಚಿಗೂ ಬಲಿ ಬೀಳದೇ ದೆಹಲಿ ಹೊರ ವಲಯದಲ್ಲಿ ಬೀಡು ಬಿಟ್ಟರು. ಈಗ ತಿಂಗಳಿಗೂ ಅಧಿಕ ಸಮಯ ಕಳೆದಿದೆ, ಎಂಟು ಸುತ್ತಿನ ಮಾತುಕತೆ ವಿಫಲ ಆಗಿವೆ. ಹಿಂದೆ ಸಿಎಎ ವಿರುದ್ಧ ಜನ ಸಂಪು ಹೂಡಿದಾಗ ಕೂಡ ಇದೇ ಸರ್ಕಾರ ನಿರ್ಲಕ್ಷ್ಯ ಮಾಡಿ, ಸಂಪು ಮಾಡುವವರ ವಿರುದ್ಧ ಭಾರಿ ಅಪಪ್ರಚಾರದಲ್ಲಿ ತೊಡಗಿತ್ತು. ಆದರೆ ಕೊರೋನಾ ಕಂಟಕದಿಂದಾಗಿ ಆ ಸಂಪು ಅನಿರೀಕ್ಷಿತ ಮುಕ್ತಾಯ ಕಂಡಿತು. ರೈತರ ಮುಷ್ಕರ ಕೂಡ ಹಾಗೆ ಏನಾದರೊಂದು ಕಾರಣಕ್ಕೆ ಮುಕ್ತಾಯ ಆಗಲಿ ಎಂದು ಸರ್ಕಾರ ಬಯಸುತ್ತಾ ಇರಬಹುದು.

ಕೊರೋನಾ ಭೀತಿ ಬಿತ್ತಲು ಸರ್ಕಾರ ಮುಂದಾದರೂ ಅಲ್ಲಿ ತಿಂಗಳಿಗೂ ಹೆಚ್ಚು ಕಾಲ ಬೀಡು ಬಿಟ್ಟಿರುವ ರೈತರಿಗೆ ಏನೂ ಆಗಿಲ್ಲ. ಬದಲಿಗೆ ಅತ್ಯಂತ ಸುರಕ್ಷಿತ ಎಂದು ಭಾವಿಸಿದ್ದ ದೆಹಲಿಯಲ್ಲಿ ಈಗ ಹಕ್ಕಿಜ್ವರ ಕಾಣಿಸಿಕೊಂಡಿದೆ. ಕೊರೋನಾಕ್ಕೆ ಲಸಿಕೆ ಕಂಡುಕೊಂಡ ಹೊತ್ತಿನಲ್ಲಿ ಹಕ್ಕಿ ಜ್ವರ ಪೀಡಿಸುತ್ತಿದೆ. ಏನೇ ಆಗಲಿ ಕೇಂದ್ರ್ರ ಸರ್ಕಾರ ಈ ಬಾರಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು, ಅದರಲ್ಲೂ ಕೆಲವೇ ಉದ್ಯಮಿಗಳ ಹಿತಕ್ಕಾಗಿ ನಿಯಮಗಳನ್ನು ರೂಪಿಸುತ್ತಾ ಇರುವುದು ಜಗಜ್ಜಾಹೀರಾದ ಹೊತ್ತಿನಲ್ಲಿ ಮುಖ ಮುಚ್ಚಿಕೊಳ್ಳಲು ಅವಕಾಶ ಕಡಿಮೆ.

ಇದೇ ಸಮಯಕ್ಕೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿಯೂ ಒತ್ತಡ ಹೆಚ್ಚಿದೆ. ಬ್ರಿಟನ್ನಿನ ನೂರಕ್ಕೂ ಹೆಚ್ಚು ಸಂಸದರು ತಮ್ಮ ಪ್ರಧಾನಿ ಬೋರಿಸ್ ಜಾನ್ಸನ್‍ಗೆ ಪತ್ರ ಬರೆದು, ಭಾರತದ ಪ್ರಧಾನಿಯನ್ನು ಸಂಪರ್ಕಿಸಿ ಆದಷ್ಟು ಬೇಗ ರೈತ ಆಂದೋಲನ ಮುಕ್ತಾಯಗೊಳಿಸುವಂತೆ ಒತ್ತಾಯಿಸಲು ಬೇಡಿಕೆ ಇಟ್ಟಿದ್ದಾರೆ. ಬರುವ 20ರಂದು ಅಮೇರಿಕದಲ್ಲಿ ಸರ್ಕಾರ ಬದಲಾಗಲಿದೆ. ಅಲ್ಲಿ ಬೈಡನ್ ನೇತೃತ್ವದ ಸರ್ಕಾರ ಬಂದಾಗ ಬಿಜೆಪಿ ಸರ್ಕಾರದ ಬಗ್ಗೆ ಮೃದು ಧೋರಣೆ ತಳೆಯುವುದು ಅಸಾಧ್ಯ ಎಂದು ಈಗಾಗಲೇ ಸಾಬೀತಾಗಿದೆ. ಒಳಗೆ ಮಾತ್ರ ಅಲ್ಲದೇ ಹೊರಗಿನ ವಿರೋಧವನ್ನೂ ಎದುರಿಸಿ ಕೇಂದ್ರ ಸರ್ಕಾರ ನೆಮ್ಮದಿಯಿಂದ ಇರಲು ಸಾಧ್ಯ ಆಗಲಾರದು.

ಹಾಗಂತ ರೈತರ ಬೇಡಿಕೆ ಒಪ್ಪಿದಲ್ಲಿ ತಾವು ಇಟ್ಟ ಹೆಜ್ಜೆಯಿಂದ ಹಿಂದೆ ಸರಿದ ಅವಮಾನ ಆಗುತ್ತದೆ ಎಂದು ಭಾವಿಸಿದಂತಿದೆ. ಅದಕ್ಕಿಂತ ಮುಖ್ಯವಾಗಿ ಯಾರಿಗಾಗಿ ಈ ಕಾನೂನು ತಂದರೋ, ಅವರ ನಿಷ್ಠುರಕ್ಕೆ ಗುರಿ ಆಗಬೇಕಾಗಿದೆ. ಸರ್ಕಾರ ತಾನು ಯಾರ ಹಂಗಿಗೂ ಒಳಗಾಗಿಲ್ಲ ಎಂದು ಹೇಳುವಂತಿಲ್ಲ. ಈಗಾಗಲೇ ಒಂದು ಉದ್ಯಮ ಸಂಸ್ಥೆ ದಾಸ್ತಾನು ಮಳಿಗೆ ನಿರ್ಮಾಣಕ್ಕೆ ನೂರಾರು ಎಕರೆ ಜಮೀನು ಹಲವೆಡೆ ಖರೀದಿಸಿದೆ. ಇದೇ ಸಂಸ್ಥೆ ಗುಜರಾತ್‍ನಲ್ಲಿ ಈಗಾಗಲೇ ರೈತರ ಜೊತೆ ಗುತ್ತಿಗೆ ಕೃಷಿ ಒಪ್ಪಂದ ಮಾಡಿಕೊಂಡಿದ್ದು, ಕೃಷಿ ಉತ್ಪನ್ನಗಳ ಬೆಲೆ ಕುರಿತ ವಿವಾದವೊಂದು ನ್ಯಾಯಾಲಯದ ಮೆಟ್ಟಿಲೇರಿದೆ. ಆ ಹಿನ್ನೆಲೆಯಲ್ಲಿಯೇ ಹೊಸ ಕೃಷಿ ಕಾನೂನಿನಲ್ಲಿ ವಿವಾದ ಉದ್ಭವಿಸಿದಾಗ ನ್ಯಾಯಾಲಯಕ್ಕೆ ತೆರಳುವುದಕ್ಕೆ ನಿಷೇಧ ಹೇರಲಾಗಿತ್ತು, ಬದಲಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳೇ ವಿವಾದ ಪರಿಹಾರ ಮಾಡುತ್ತಾರೆ ಎಂದು ಹೇಳಲಾಗಿತ್ತು. ಇದೇ ಸಂದರ್ಭದಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಯೊಂದು ಭಾರಿ ಪ್ರಮಾಣದಲ್ಲಿ ಸಾವಿರಾರು ಕ್ವಿಂಟಲ್ ಸೋನಾ ಮಸೂರಿ ಅಕ್ಕಿಯನ್ನು ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆಗಿಂತ ಅಧಿಕ ದರ ತೆತ್ತು ಖರೀದಿಸಿದೆ. ಅದಕ್ಕಾಗಿ ಸ್ಥಳೀಯ ಸಂಸ್ಥೆಗಳನ್ನು ಬಳಸಿಕೊಂಡಿದೆ. ಹೀಗೆ ಒಂದೊಂದಾಗಿ ಸರ್ಕಾರದ ಮುಖವಾಡ ಕಳಚಿ ಬೀಳುತ್ತ ಇರುವ ಹೊತ್ತಿನಲ್ಲಿ ಹುಲಿ ಸವಾರಿ ಮಾಡಲು ಹೊರಟು ಅದನ್ನು ನಿಯಂತ್ರಿಸಲಾಗದೇ ಅದರ ಬೆನ್ನಿಂದ ಇಳಿದು ಬರಲಾಗದೇ ಒದ್ದಾಡುವ ಸ್ಥಿತಿಯಲ್ಲಿ ಸರ್ಕಾರ ಇದೆ. ಬೆನ್ನ ಮೇಲೆ ಇದ್ದರೂ ಕಷ್ಟ, ಕೆಳಗಿಳಿದರೂ ಕಷ್ಟ.

LEAVE A REPLY

Please enter your comment!
Please enter your name here

State

ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲಾತಿ: ಕಾಗಿನೆಲೆಯಿಂದ ಪಾದಯಾತ್ರೆ

ಹಾವೇರಿ, ಜ 15- ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಹಾವೇರಿ ಜಿಲ್ಲೆ ಕಾಗಿನೆಲೆಯಿಂದ ಬೆಂಗಳೂರಿಗೆ ಹಮ್ಮಿಕೊಳ್ಳಲಾದ ಪಾದಯಾತ್ರೆ ಆರಂಭವಾಗಿದೆ. ಕಾಗಿನೆಲೆಯಲ್ಲಿ ಶಂಖ ಊದುವ ಮೂಲಕ ಕನಕ ಗುರುಪೀಠದ ಶ್ರೀನಿರಂಜನಾನಂದ ಪುರಿ...

ಅಮಿತ ಶಾ ಆಗಮನ ಹಿನ್ನೆಲೆ: ಅರ್ಧ ದಿನ ರಜೆ

ಬೆಂಗಳೂರು, ಜ 15- ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಪೊಲೀಸ್ ಗೃಹ-2025 ಯೋಜನೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಈ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಅರ್ಧ ದಿನ ರಜೆ ಘೋಷಿಸಲಾಗಿದೆ. ಸದರಿ...

ರಾಜ್ಯದ ಬಾಕಿ ಯೋಜನೆ ಪೂರ್ಣಗೊಳಿಸಲು 4 ಸಾವಿರ ಕೋಟಿ ರೂ ಸಾಲ ಮಾಡಿ : ಗಡಕರಿ

ಹುಬ್ಬಳ್ಳಿ, ಜ 15 - ರಾಜ್ಯದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ವಿವಿಧ ಬ್ಯಾಂಕುಗಳಿಂದ 3 ರಿಂದ 4 ಸಾವಿರ ಕೋಟಿ ರೂಪಾಯಿಗಳ ಸಾಲ ಪಡೆಯುವುದು ಸೂಕ್ತ ಎಂದು ಕೇಂದ್ರ...

‘ಅದೇ ಮುಖ’

ಬೆಂಗಳೂರು, ಜ 15- ವರನಟ ಡಾ ರಾಜಕುಮಾರ ಅಭಿನಯದ ಅದೇ ಕಣ್ಣು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅಣ್ಣಾವ್ರ ನಟನೆಗೆ ಜನರು ಫಿದಾ ಆಗಿದ್ದರು. ಚಿತ್ರವೂ ಹಿಟ್ ಆಗಿತ್ತು. ಸಸ್ಪೆನ್ಸ್ ಹೊಂದಿದ್ದ ಈ...

National

ರೈತರ 9ನೇ ಸುತ್ತಿನ ಮಾತುಕತೆ ಕೂಡ ವಿಫಲ

ನವದೆಹಲಿ, ಜ 15- ಅನ್ನದಾತರ ತೀವ್ರ ಪ್ರತಿಭಟನೆಗಳಿಗೆ ಸರಕಾರ ಹಿಂದೆ ಸರಿಯುವ ಲಕ್ಷಣ ಕಂಡು ಬರುತ್ತಿಲ್ಲ. ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದತಿ ಕೋರಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಸರ್ಕಾರದ ನಡುವಿನ 9ನೇ...

ವಾಟ್ಸ್‌ ಆ್ಯಪ್‌ ಹೊಸ ಗೌಪ್ಯತೆ ನೀತಿ : ಪಿಐಎಲ್‌ ಆಗಿ ಪರಿಗಣಿಸಲು ಹೈಕೋರ್ಟ ಸೂಚನೆ

  ನವದೆಹಲಿ, ಜನವರಿ 15 - ವಾಟ್ಸ್‌ಆ್ಯಪ್ - ಫೇಸ್‌ಬುಕ್ ಒಡೆತನದ ತ್ವರಿತ ಸಂದೇಶ ಸೇವೆ - ಅದರ ನವೀಕರಿಸಿದ ಗೌಪ್ಯತೆ ನೀತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠ...

ಕಳೆದ ವರ್ಷ ಪಾಕಿಸ್ತಾನದಿಂದ 5 ಸಾವಿರ ಸಲ ಕದನ ವಿರಾಮ ಉಲ್ಲಂಘನೆ!

ಜಮ್ಮು, ಜ 15- ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಪಡೆಗಳು 2020 ರಲ್ಲಿ ಗಡಿಯುದ್ದಕ್ಕೂ 5 ಸಾವಿರಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿವೆ ಎಂದು ಸೇನಾದಿನದಂದು ಭಾರತೀಯ ಸೇನೆ ತಿಳಿಸಿದೆ. ಅಧಿಕೃತ...

18 ವರ್ಷ ಕೆಳಗಿನವರು, ಗರ್ಭಿಣಿ, ಹಾಲುಣಿಸುವವರಿಗಿಲ್ಲ ಲಸಿಕೆ

ನವದೆಹಲಿ, ಜ 15 - ಕೊರೋನಾ ಲಸಿಕೆ ಅಭಿಯಾನವು ಶನಿವಾರದಿಂದ ಆರಂಭವಾಗಲಿದ್ದು ಕೊರೋನಾ ಲಸಿಕೆ ನೀಡಿಕೆ ಕುರಿತ ಸಮಗ್ರ ಕೈಪಿಡಿಯನ್ನು ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

International

ಇಂಡೋನೇಷ್ಯಾದಲ್ಲಿ ಭೂಕಂಪ : 26 ಸಾವು

ಜಕಾರ್ತ, ಜ 15- ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪದಿಂದ ಇದು ವರೆಗೆ 26 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ಏಜೆನ್ಸಿಯನ್ನು ಉಲ್ಲೇಖಿಸಿ ಅಜೆನ್ಸ್ ಫ್ರಾನ್ಸ್-ಪ್ರೆಸ್ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ. ರಿಕ್ಟರ್...

ಕೊರೋನಾ ವೈರಸ್ ಮೂಲದ ತನಿಖೆಗೆ ಚೀನಾ ತಲುಪಿದ ವಿಶ್ವ ಆರೋಗ್ಯ ಸಂಸ್ಥೆ ತಂಡ

ಬೀಜಿಂಗ್, ಜ 14- ಕೊವಿಡ್‍-19 ಸಾಂಕ್ರಾಮಿಕ ಮೂಲದ ಬಗ್ಗೆ ತನಿಖೆ ಆರಂಭಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಂಡ ಗುರುವಾರ ಚೀನಾದ ನಗರವಾದ ವುಹಾನ್‌ ತಲುಪಿದೆ. ಡಬ್ಲ್ಯುಎಚ್‌ಒ ಮತ್ತು ಚೀನಾ ಸರ್ಕಾರದ ನಡುವಿನ ವಾಗ್ವಾದ...

ಬಾಂಗ್ಲಾದೇಶಕ್ಕೆ ಕೊರೋನಾ ಲಸಿಕೆ ಮಾರಾಟ ಮಾಡಲಿರುವ ಸೀರಮ್‌ ಇನ್‌ಸ್ಟಿಟ್ಯೂಟ್‌

ಢಾಕಾ, ಜನವರಿ 12 - ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಮ್ಮ ಅಸ್ಟ್ರಾಜೆನೆಕಾ ಕೊರೊನಾವೈರಸ್ ಲಸಿಕೆಯನ್ನು ಬಾಂಗ್ಲಾದೇಶಕ್ಕೆ ಒಂದು ಡೋಸ್‌ಗೆ ನಾಲ್ಕು ಡಾಲರ್‌ನಂತೆ ಮಾರಾಟ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಇದು ಭಾರತ ತನ್ನ...

ಇಂಡೋನೇಷ್ಯಾದಲ್ಲಿ ಭೂಕುಸಿತ: 13 ಸಾವು, 27 ಮಂದಿ ನಾಪತ್ತೆ

ಜಕಾರ್ತಾ, ಜ 11- ಇಂಡೋನೇಷ್ಯಾದ ಜಾವಾ ದ್ವೀಪದ ಪಶ್ಚಿಮ ಭಾಗದಲ್ಲಿ ಕಳೆದ ವಾರ ಸಂಭವಿಸಿದ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 13 ಕ್ಕೆ ಏರಿದ್ದು, ಇನ್ನೂ 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರಿ ನಿಯಂತ್ರಣದ...

Entertainment

ಜ. 24ರಂದು ವರುಣ ಧವನ್-ನತಾಶಾ ಮದುವೆ

ಮುಂಬೈ, ಜ 15 - ಖ್ಯಾತ ನಿರ್ಮಾಪಕ, ನಿರ್ದೇಶಕ ಡೇವಿಡ್ ಧವನ ಪುತ್ರ ನಟ ವರುಣ ಧವನ್ ಅವರು ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ...

‘ಲಂಕಾಸುರ’ ಚಿತ್ರಕ್ಕೆ ಚಾಲನೆ

ಬೆಂಗಳೂರು, ಜ 15 - ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮದಂದು ವಿನೋದ ಪ್ರಭಾಕರ ಹಾಗೂ ಲೂಸ್ ಮಾದ ಅಭಿನಯದ ‘ಲಂಕಾಸುರ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ...

“ಕಬ್ಜ” ಭಾರ್ಗವ ಭಕ್ಷಿಯಾಗಿ ಕಿಚ್ಚನ ಅಬ್ಬರ

ಬೆಂಗಳೂರು, ಜ 14- ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಟಿಸುತ್ತಿದ್ದು, ಭಾರ್ಗವ ಭಕ್ಷಿ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಸಂಕ್ರಾತಿಯಂದು ವಿಶೇಷ ಪೋಸ್ಟರ ಬಿಡುಗಡೆಗೊಳಿಸುವ...

“ಸಲಾರ್” ನಾಳೆ ಮುಹೂರ್ತ

ಬೆಂಗಳೂರು, ಜ 14- ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಸಿದ್ಧವಾಗಲಿರುವ ಸಲಾರ್ ಸಿನಿಮಾ ಸೆಟ್ಟೇರುವುದಕ್ಕೂ ಮೊದಲೇ ಫಸ್ಟ್ ಲುಕ್ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿದೆ. ಇದೀಗ ಚಿತ್ರತಂಡ ಸಂಕ್ರಾಂತಿ ಹಬ್ಬದ...

Sports

ಹೆಣ್ಣು ಮಗುವಿಗೆ ತಂದೆಯಾದ ವಿರಾಟ ಕೊಯ್ಲಿ

ಮುಂಬೈ, ಜ 11- ಭಾರತ ಕ್ರಿಕೆಟ ತಂಡದ ನಾಯಕ ವಿರಾಟ ಕೊಯ್ಲಿ ತಂದೆಯಾಗಿದ್ದಾರೆ. ವಿರಾಟ ಪತ್ನಿ ನಟಿ ಅನುಷ್ಕ ಶರ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಿಹಿ ಸುದ್ದಿಯನ್ನು ಸ್ವತಃ ವಿರಾಟ ಕೊಯ್ಲಿ...

ಭಾರತೀಯರ ಕೆಚ್ಚೆದೆಯ ಹೋರಾಟ; ಮೂರನೇ ಟೆಸ್ಟ್ ಡ್ರಾ

ಸಿಡ್ನಿ, ಜ.11 - ಸಿಡ್ನಿ ಅಂಗಳದಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಮೂರನೇ ಟೆಸ್ಟ್ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಗಿದೆ. ಈ ಮೂಲಕ ಆಸ್ಟ್ರೇಲಿಯಾದ ಗೆಲುವಿನ ಕನಸು...

ಮೊದಲಾವಧಿಯನ್ನು ಎಚ್ಚರಿಕೆಯಿಂದ ಆಡಬೇಕಿದೆ: ಅಶ್ವಿನ್

ಸಿಡ್ನಿ, ಜ.10- ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಐದನೇ ಮೊದಲಾವಧಿಯ ಆಟವನ್ನು ಎಚ್ಚರಿಕೆಯಿಂದ ಆಡ ಬೇಕಿದೆ ಎಂದು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾನುವಾರ ಹೇಳಿದ್ದಾರೆ. ಪಂದ್ಯವನ್ನು ಗೆಲ್ಲಲು ಭಾರತಕ್ಕೆ 407...