INDIA COVID-19 Statistics

10,543,659
Confirmed Cases
Updated on 16/01/2021 5:31 AM
211,814
Total active cases
Updated on 16/01/2021 5:31 AM
152,130
Total deaths
Updated on 16/01/2021 5:31 AM
Saturday, January 16, 2021

INDIA COVID-19 Statistics

10,543,659
Total confirmed cases
Updated on 16/01/2021 5:31 AM
211,814
Total active cases
Updated on 16/01/2021 5:31 AM
152,130
Total deaths
Updated on 16/01/2021 5:31 AM
10,179,715
Total recovered
Updated on 16/01/2021 5:31 AM
Home National New Delhi ನೂತನ ಕೃಷಿ ಕಾಯ್ದೆ ಜಾರಿಗೆ ಸುಪ್ರೀಮ ಕೋರ್ಟ ತಡೆಯಾಜ್ಞೆ

ನೂತನ ಕೃಷಿ ಕಾಯ್ದೆ ಜಾರಿಗೆ ಸುಪ್ರೀಮ ಕೋರ್ಟ ತಡೆಯಾಜ್ಞೆ

ನವದೆಹಲಿ, ಜ 12- ಹೊಸ ಕೃಷಿ ಕಾನೂನುಗಳ ಜಾರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.

ಮುಂದಿನ ಆದೇಶ ನೀಡುವವರೆಗೆ ತಡೆಯಾಜ್ಞೆ ಮುಂದುವರಿಯಲಿದೆ ಎಂದು ನ್ಯಾಯಪೀಠ ಹೇಳಿದೆ. ಬಿಕ್ಕಟ್ಟು ಪರಿಹಾರಕ್ಕಾಗಿ ಸಮಿತಿಯೊಂದನ್ನು ರಚಿಸುವುದಾಗಿ ಪ್ರಕಟಿಸಿದೆ.

ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಮಂಗಳವಾರ ಮಧ್ಯಾಹ್ನ ಸುಪ್ರೀಮ ಕೋರ್ಟ ವಿಚಾರಣೆ ನಡೆಸಿತು. ಮುಖ್ಯ ನ್ಯಾಯ ಮೂರ್ತಿ ಶರದ ಅರವಿಂದ ಬೋಬ್ಡೆ ನೇತೃತ್ವದ ನ್ಯಾಯಪೀಠ, ತಮಗಿರುವ ಹಕ್ಕುಗಳನ್ನು ಚಲಾಯಿಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ, ಕಾಯ್ದೆಗಳನ್ನು ಅಮಾನತುಗೊಳಿಸಿ, ಸಮಿತಿ ರಚಿಸುವುದು ತನಗಿರುವ ಅಧಿಕಾರಗಳಲ್ಲಿ ಒಂದಾಗಿದೆ ಎಂದು ಮುಖ್ಯನ್ಯಾಯಮೂರ್ತಿ ಹೇಳಿದ್ದಾರೆ.

ಕೃಷಿ ಕಾನೂನುಗಳ ಕ್ರಮ ಬದ್ದತೆ, ಪ್ರತಿಭಟನೆಗಳಿಂದಾಗಿ ಜನರ ಜೀವ ಹಾಗೂ ಆಸ್ತಿ ರಕ್ಷಣೆಯಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡು ತಮಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದರು.

‘ ಈ ಸಂಬಂಧ ಸಮಿತಿಯನ್ನು ರಚಿಸಿದರೆ ಸ್ಪಷ್ಟತೆ ಮೂಡಲಿದೆ ಎಂದು ಹೇಳಿದರು. ರೈತರು ಸಮಿತಿಯ ಬಳಿಗೆ ಹೋಗುವುದಿಲ್ಲ ಎಂಬ ವಾದಗಳನ್ನು ನಾವು ಆಲಿಸಲು ಬಯಸುವುದಿಲ್ಲ, ನೀವು (ರೈತರು) ಅನಿರ್ದಿಷ್ಟ ಪ್ರತಿಭಟನೆ ಮುಂದುವರಿಸಲು ಬಯಸಿದರೆ ಅದನ್ನು ಮಾಡಬಹುದು ಎಂದು ಅವರು ಹೇಳಿದರು.

ರೈತರ ಪರವಾದ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ವಕೀಲ ಎಂ.ಎಲ್.ಶರ್ಮಾ. ತಮ್ಮ ವಾದ ಮಂಡಿಸಿ ನ್ಯಾಯಾಲಯ ರಚಿಸಿದ ಯಾವುದೇ ಸಮಿತಿಯ ಮುಂದೆ ತಾವು ಹಾಜರಾಗಲು ಬಯಸುವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸಾಕಷ್ಟು ಮಾತುಕತೆ ನಡೆದರೂ ಮುಖ್ಯ ವ್ಯಕ್ತಿಯಾಗಿರುವ ಪ್ರಧಾನ ಮಂತ್ರಿ ಮುಂದೆ ಬರುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ ಎಂದು ನ್ಯಾಯಾಲಯ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಬೋಬ್ಡೆ, ಮಾತುಕತೆಗೆ ಹೋಗುವಂತೆ ಪ್ರಧಾನಿಗೆ ನ್ಯಾಯಾಲಯ ಸೂಚಿಸಲು ಸಾಧ್ಯವಿಲ್ಲ, ಈ ಪ್ರಕರಣದಲ್ಲಿ ಅವರು ಪಾರ್ಟಿಯಲ್ಲ ಎಂದರು. ನ್ಯಾಯಾಲಯ ತನಗಿರುವ ಅಧಿಕಾರ ವ್ಯಾಪ್ತಿಯೊಳಗೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬಹುದು, ಸಮಿತಿಯು ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿದೆ. ಒಳ್ಳೆಯ ಉದ್ದೇಶದಿಂದ ಪರಿಹಾರ ಬಯಸುವ ರೈತರು ಸಮಿತಿಯ ಮುಂದೆ ಹೋಗಬಹುದು ಎಂದು ಸಿಜೆಐ ಹೇಳಿದರು.

ರೈತರ ಪ್ರತಿಭಟನೆಗೆ ನಿಷೇಧಿತ ಸಂಸ್ಥೆಯೊಂದು ಸಹಕರಿಸುತ್ತಿದೆ ಎಂದು ಆರೋಪಿಸಿರುವ ಅರ್ಜಿ ತಮ್ಮ ಮುಂದಿದೆ ಎಂದು ಮುಖ್ಯನ್ಯಾಯಮೂರ್ತಿಗಳು ಹೇಳಿದಾಗ, ಅಟಾರ್ನಿ ಜನರಲ್‌ ಪ್ರತಿಕ್ರಿಯಿಸಿ, ಖಲಿಸ್ತಾನಿಗಳು ಪ್ರತಿಭಟನೆಯಲ್ಲಿ ನುಸುಳಿದ್ದಾರೆಂದು ಮಾತ್ರ ತಾವು ಹೇಳಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

LEAVE A REPLY

Please enter your comment!
Please enter your name here

State

ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲಾತಿ: ಕಾಗಿನೆಲೆಯಿಂದ ಪಾದಯಾತ್ರೆ

ಹಾವೇರಿ, ಜ 15- ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಹಾವೇರಿ ಜಿಲ್ಲೆ ಕಾಗಿನೆಲೆಯಿಂದ ಬೆಂಗಳೂರಿಗೆ ಹಮ್ಮಿಕೊಳ್ಳಲಾದ ಪಾದಯಾತ್ರೆ ಆರಂಭವಾಗಿದೆ. ಕಾಗಿನೆಲೆಯಲ್ಲಿ ಶಂಖ ಊದುವ ಮೂಲಕ ಕನಕ ಗುರುಪೀಠದ ಶ್ರೀನಿರಂಜನಾನಂದ ಪುರಿ...

ಅಮಿತ ಶಾ ಆಗಮನ ಹಿನ್ನೆಲೆ: ಅರ್ಧ ದಿನ ರಜೆ

ಬೆಂಗಳೂರು, ಜ 15- ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಪೊಲೀಸ್ ಗೃಹ-2025 ಯೋಜನೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಈ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಅರ್ಧ ದಿನ ರಜೆ ಘೋಷಿಸಲಾಗಿದೆ. ಸದರಿ...

ರಾಜ್ಯದ ಬಾಕಿ ಯೋಜನೆ ಪೂರ್ಣಗೊಳಿಸಲು 4 ಸಾವಿರ ಕೋಟಿ ರೂ ಸಾಲ ಮಾಡಿ : ಗಡಕರಿ

ಹುಬ್ಬಳ್ಳಿ, ಜ 15 - ರಾಜ್ಯದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ವಿವಿಧ ಬ್ಯಾಂಕುಗಳಿಂದ 3 ರಿಂದ 4 ಸಾವಿರ ಕೋಟಿ ರೂಪಾಯಿಗಳ ಸಾಲ ಪಡೆಯುವುದು ಸೂಕ್ತ ಎಂದು ಕೇಂದ್ರ...

‘ಅದೇ ಮುಖ’

ಬೆಂಗಳೂರು, ಜ 15- ವರನಟ ಡಾ ರಾಜಕುಮಾರ ಅಭಿನಯದ ಅದೇ ಕಣ್ಣು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅಣ್ಣಾವ್ರ ನಟನೆಗೆ ಜನರು ಫಿದಾ ಆಗಿದ್ದರು. ಚಿತ್ರವೂ ಹಿಟ್ ಆಗಿತ್ತು. ಸಸ್ಪೆನ್ಸ್ ಹೊಂದಿದ್ದ ಈ...

National

ರೈತರ 9ನೇ ಸುತ್ತಿನ ಮಾತುಕತೆ ಕೂಡ ವಿಫಲ

ನವದೆಹಲಿ, ಜ 15- ಅನ್ನದಾತರ ತೀವ್ರ ಪ್ರತಿಭಟನೆಗಳಿಗೆ ಸರಕಾರ ಹಿಂದೆ ಸರಿಯುವ ಲಕ್ಷಣ ಕಂಡು ಬರುತ್ತಿಲ್ಲ. ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದತಿ ಕೋರಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಸರ್ಕಾರದ ನಡುವಿನ 9ನೇ...

ವಾಟ್ಸ್‌ ಆ್ಯಪ್‌ ಹೊಸ ಗೌಪ್ಯತೆ ನೀತಿ : ಪಿಐಎಲ್‌ ಆಗಿ ಪರಿಗಣಿಸಲು ಹೈಕೋರ್ಟ ಸೂಚನೆ

  ನವದೆಹಲಿ, ಜನವರಿ 15 - ವಾಟ್ಸ್‌ಆ್ಯಪ್ - ಫೇಸ್‌ಬುಕ್ ಒಡೆತನದ ತ್ವರಿತ ಸಂದೇಶ ಸೇವೆ - ಅದರ ನವೀಕರಿಸಿದ ಗೌಪ್ಯತೆ ನೀತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠ...

ಕಳೆದ ವರ್ಷ ಪಾಕಿಸ್ತಾನದಿಂದ 5 ಸಾವಿರ ಸಲ ಕದನ ವಿರಾಮ ಉಲ್ಲಂಘನೆ!

ಜಮ್ಮು, ಜ 15- ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಪಡೆಗಳು 2020 ರಲ್ಲಿ ಗಡಿಯುದ್ದಕ್ಕೂ 5 ಸಾವಿರಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿವೆ ಎಂದು ಸೇನಾದಿನದಂದು ಭಾರತೀಯ ಸೇನೆ ತಿಳಿಸಿದೆ. ಅಧಿಕೃತ...

18 ವರ್ಷ ಕೆಳಗಿನವರು, ಗರ್ಭಿಣಿ, ಹಾಲುಣಿಸುವವರಿಗಿಲ್ಲ ಲಸಿಕೆ

ನವದೆಹಲಿ, ಜ 15 - ಕೊರೋನಾ ಲಸಿಕೆ ಅಭಿಯಾನವು ಶನಿವಾರದಿಂದ ಆರಂಭವಾಗಲಿದ್ದು ಕೊರೋನಾ ಲಸಿಕೆ ನೀಡಿಕೆ ಕುರಿತ ಸಮಗ್ರ ಕೈಪಿಡಿಯನ್ನು ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

International

ಇಂಡೋನೇಷ್ಯಾದಲ್ಲಿ ಭೂಕಂಪ : 26 ಸಾವು

ಜಕಾರ್ತ, ಜ 15- ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪದಿಂದ ಇದು ವರೆಗೆ 26 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ಏಜೆನ್ಸಿಯನ್ನು ಉಲ್ಲೇಖಿಸಿ ಅಜೆನ್ಸ್ ಫ್ರಾನ್ಸ್-ಪ್ರೆಸ್ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ. ರಿಕ್ಟರ್...

ಕೊರೋನಾ ವೈರಸ್ ಮೂಲದ ತನಿಖೆಗೆ ಚೀನಾ ತಲುಪಿದ ವಿಶ್ವ ಆರೋಗ್ಯ ಸಂಸ್ಥೆ ತಂಡ

ಬೀಜಿಂಗ್, ಜ 14- ಕೊವಿಡ್‍-19 ಸಾಂಕ್ರಾಮಿಕ ಮೂಲದ ಬಗ್ಗೆ ತನಿಖೆ ಆರಂಭಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಂಡ ಗುರುವಾರ ಚೀನಾದ ನಗರವಾದ ವುಹಾನ್‌ ತಲುಪಿದೆ. ಡಬ್ಲ್ಯುಎಚ್‌ಒ ಮತ್ತು ಚೀನಾ ಸರ್ಕಾರದ ನಡುವಿನ ವಾಗ್ವಾದ...

ಬಾಂಗ್ಲಾದೇಶಕ್ಕೆ ಕೊರೋನಾ ಲಸಿಕೆ ಮಾರಾಟ ಮಾಡಲಿರುವ ಸೀರಮ್‌ ಇನ್‌ಸ್ಟಿಟ್ಯೂಟ್‌

ಢಾಕಾ, ಜನವರಿ 12 - ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಮ್ಮ ಅಸ್ಟ್ರಾಜೆನೆಕಾ ಕೊರೊನಾವೈರಸ್ ಲಸಿಕೆಯನ್ನು ಬಾಂಗ್ಲಾದೇಶಕ್ಕೆ ಒಂದು ಡೋಸ್‌ಗೆ ನಾಲ್ಕು ಡಾಲರ್‌ನಂತೆ ಮಾರಾಟ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಇದು ಭಾರತ ತನ್ನ...

ಇಂಡೋನೇಷ್ಯಾದಲ್ಲಿ ಭೂಕುಸಿತ: 13 ಸಾವು, 27 ಮಂದಿ ನಾಪತ್ತೆ

ಜಕಾರ್ತಾ, ಜ 11- ಇಂಡೋನೇಷ್ಯಾದ ಜಾವಾ ದ್ವೀಪದ ಪಶ್ಚಿಮ ಭಾಗದಲ್ಲಿ ಕಳೆದ ವಾರ ಸಂಭವಿಸಿದ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 13 ಕ್ಕೆ ಏರಿದ್ದು, ಇನ್ನೂ 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರಿ ನಿಯಂತ್ರಣದ...

Entertainment

ಜ. 24ರಂದು ವರುಣ ಧವನ್-ನತಾಶಾ ಮದುವೆ

ಮುಂಬೈ, ಜ 15 - ಖ್ಯಾತ ನಿರ್ಮಾಪಕ, ನಿರ್ದೇಶಕ ಡೇವಿಡ್ ಧವನ ಪುತ್ರ ನಟ ವರುಣ ಧವನ್ ಅವರು ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ...

‘ಲಂಕಾಸುರ’ ಚಿತ್ರಕ್ಕೆ ಚಾಲನೆ

ಬೆಂಗಳೂರು, ಜ 15 - ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮದಂದು ವಿನೋದ ಪ್ರಭಾಕರ ಹಾಗೂ ಲೂಸ್ ಮಾದ ಅಭಿನಯದ ‘ಲಂಕಾಸುರ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ...

“ಕಬ್ಜ” ಭಾರ್ಗವ ಭಕ್ಷಿಯಾಗಿ ಕಿಚ್ಚನ ಅಬ್ಬರ

ಬೆಂಗಳೂರು, ಜ 14- ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಟಿಸುತ್ತಿದ್ದು, ಭಾರ್ಗವ ಭಕ್ಷಿ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಸಂಕ್ರಾತಿಯಂದು ವಿಶೇಷ ಪೋಸ್ಟರ ಬಿಡುಗಡೆಗೊಳಿಸುವ...

“ಸಲಾರ್” ನಾಳೆ ಮುಹೂರ್ತ

ಬೆಂಗಳೂರು, ಜ 14- ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಸಿದ್ಧವಾಗಲಿರುವ ಸಲಾರ್ ಸಿನಿಮಾ ಸೆಟ್ಟೇರುವುದಕ್ಕೂ ಮೊದಲೇ ಫಸ್ಟ್ ಲುಕ್ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿದೆ. ಇದೀಗ ಚಿತ್ರತಂಡ ಸಂಕ್ರಾಂತಿ ಹಬ್ಬದ...

Sports

ಹೆಣ್ಣು ಮಗುವಿಗೆ ತಂದೆಯಾದ ವಿರಾಟ ಕೊಯ್ಲಿ

ಮುಂಬೈ, ಜ 11- ಭಾರತ ಕ್ರಿಕೆಟ ತಂಡದ ನಾಯಕ ವಿರಾಟ ಕೊಯ್ಲಿ ತಂದೆಯಾಗಿದ್ದಾರೆ. ವಿರಾಟ ಪತ್ನಿ ನಟಿ ಅನುಷ್ಕ ಶರ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಿಹಿ ಸುದ್ದಿಯನ್ನು ಸ್ವತಃ ವಿರಾಟ ಕೊಯ್ಲಿ...

ಭಾರತೀಯರ ಕೆಚ್ಚೆದೆಯ ಹೋರಾಟ; ಮೂರನೇ ಟೆಸ್ಟ್ ಡ್ರಾ

ಸಿಡ್ನಿ, ಜ.11 - ಸಿಡ್ನಿ ಅಂಗಳದಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಮೂರನೇ ಟೆಸ್ಟ್ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಗಿದೆ. ಈ ಮೂಲಕ ಆಸ್ಟ್ರೇಲಿಯಾದ ಗೆಲುವಿನ ಕನಸು...

ಮೊದಲಾವಧಿಯನ್ನು ಎಚ್ಚರಿಕೆಯಿಂದ ಆಡಬೇಕಿದೆ: ಅಶ್ವಿನ್

ಸಿಡ್ನಿ, ಜ.10- ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಐದನೇ ಮೊದಲಾವಧಿಯ ಆಟವನ್ನು ಎಚ್ಚರಿಕೆಯಿಂದ ಆಡ ಬೇಕಿದೆ ಎಂದು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾನುವಾರ ಹೇಳಿದ್ದಾರೆ. ಪಂದ್ಯವನ್ನು ಗೆಲ್ಲಲು ಭಾರತಕ್ಕೆ 407...