INDIA COVID-19 Statistics

13,871,321
Confirmed Cases
Updated on 14/04/2021 1:33 AM
1,366,518
Total active cases
Updated on 14/04/2021 1:33 AM
172,115
Total deaths
Updated on 14/04/2021 1:33 AM
Wednesday, April 14, 2021

INDIA COVID-19 Statistics

13,871,321
Total confirmed cases
Updated on 14/04/2021 1:33 AM
1,366,518
Total active cases
Updated on 14/04/2021 1:33 AM
172,115
Total deaths
Updated on 14/04/2021 1:33 AM
12,332,688
Total recovered
Updated on 14/04/2021 1:33 AM
Home Editorial ಸಂಕ್ರಾಂತಿ ಬಂತು

ಸಂಕ್ರಾಂತಿ ಬಂತು

ಸಂಕ್ರಾಂತಿ ನಾಡಿನ ಪ್ರಮುಖ ಹಬ್ಬ. ಅದನ್ನು ಮಕರ ಸಂಕ್ರಮಣ ಎಂದೂ, ಉತ್ತರಾಯಣ ಪುಣ್ಯಕಾಲ ಎಂದೂ ಕರೆಯುತ್ತಾರೆ. ಸೂರ್ಯ ಅಂದು ತನ್ನ ಪಥ ಬದಲಿಸುವ ದಿನ. ಋತುಮಾನದ ಬದಲಾವಣೆಗೆ ಪ್ರಮುಖ ಹೆಜ್ಜೆ ಆಗುವ ಸಂಚಲನದ ದಿನ. ಅದರಲ್ಲೂ ರೈತರು ತಮ್ಮ ಜಮೀನಲ್ಲಿ ಪಡೆದ ಫಸಲು ಸುಗ್ಗಿ ಮಾಡಿ ಮನೆಗೆ ಹೊಸ ಧಾನ್ಯ ತಂದು ನೈವೇದ್ಯ ಸಮರ್ಪಿಸಿ, ಫಸಲು ಹೆಚ್ಚಲಿ ಎಂದು ಕೋರುವ ಸಂಭ್ರಮ. ಹಾಗೇ ಅಂದು ದನ, ಕರುಗಳಿಗೂ ಸಿಂಗಾರ ಮಾಡಿ ಮೆರೆಸುವ, ಕಿಚ್ಚು ಹಾಯಿಸುವ ದಿನ. ಜಮೀನಿನ ಸಂಪರ್ಕದಿಂದ ದೂರಾದವರು ನದಿಗಳಲ್ಲಿ ಪುಣ್ಯಸ್ನಾನ ಮಾಡುವ ದಿನವೂ ಹೌದು. ಒಟ್ಟಿನಲ್ಲಿ ಒಂದು ಸಂತಸಕರ ಬದಲಾವಣೆಗೆ ಕಾರಣ ಆಗುವ ದಿನವದು.

ಆಂಧ್ರ, ಕರ್ನಾಟಕ, ತಮಿಳುನಾಡಲ್ಲಿ ಬಹಳ ಸಂಭ್ರಮದಿಂದ ಆಚರಿಸುವ ಈ ಹಬ್ಬವನ್ನು ಬಂಗಾಳದಲ್ಲಿ ಹೊಸ ವರ್ಷದ ಮೊದಲ ದಿನ ಎಂದು, ಪಂಜಾಬ ಮುಂತಾದ ಕಡೆಯಲ್ಲಿ ಲೋಹ್ರಿ ಎಂದೂ, ಮತ್ತೆ ಹಲವು ಕಡೆ ಭೋಗಿ ಹಬ್ಬ ಎಂದೂ ಆಚರಿಸುತ್ತಾರೆ. ಈ ಬಾರಿ ಎಲ್ಲ ಕಡೆ ಹಬ್ಬ ಚೆನ್ನಾಗಿಯೇ ಆಚರಿಸಬಹುದು. ಆದರೆ ಮನೆ ಮಾರು ಬಿಟ್ಟು ದೆಹಲಿ ಸುತ್ತ ಸಂಪು ಕುಳಿತ ರೈತರು ಮತ್ತು ಅವರ ಕುಟುಂಬದ ಜನರಿಗೆ ಈ ವರ್ಷ ಈ ಹಬ್ಬ ಹೇಗೆನಿಸಿರಬೇಕು?

ಕೇಂದ್ರದಲ್ಲಿ ಅಧಿಕಾರ ಹಿಡಿದು ಕುಳಿತ ಜನ ಮತ್ತೊಂದು ಗಾಳ ಉರುಳಿಸಿದ್ದಾರೆ. ಸುಪ್ರೀಮ ಕೋರ್ಟಿನ ಮೂಲಕ ಸಮಸ್ಯೆ ಪರಿಹಾರದ ಬಾಗಿಲು ತಾನಾಗಿಯೇ ತೆರೆದುಕೊಂಡಿದೆ. ಕೇಂದ್ರ ಸರ್ಕಾರ ಅಧ್ಯಾದೇಶದ ಮೂಲಕ ಜಾರಿಗೊಳಿಸುವ ಮೂರು ಕೃಷಿ ಕಾನೂನುಗಳ ಸಂವೈಧಾನಿಕತೆ ಪ್ರಶ್ನಿಸಿ ಸಲ್ಲಿಸಿರುವ ಹಲವು ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸಿದ ಸುಪ್ರೀಮ ಕೋರ್ಟ, ತನ್ನ ಮಧ್ಯಂತರ ತೀರ್ಪು ನೀಡಿದೆ. ಸದ್ಯಕ್ಕೆ ಮೂರು ಕಾನೂನುಗಳನ್ನು ಜಾರಿ ಮಾಡಬಾರದು ಎನ್ನುವುದು ಒಂದು ಆದೇಶ. ಅದರಂತೆ ರೈತರ ಬಳಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಮಿತಿಯೊಂದನ್ನು ರಚಿಸಲಾಗಿದೆ.

ಮೊದಲಿಗೆ ಈ ಅರ್ಜಿ ಸಲ್ಲಿಸಿದವರು ಮುಷ್ಕರ ಹೂಡಿರುವ ರೈತರಲ್ಲ. ಅವರಿಗೆ ನ್ಯಾಯ ಬೇಕಿರುವುದು ಕಾನೂನು ರಚಿಸಿರುವ ಕೇಂದ್ರ ಸರ್ಕಾರದಿಂದ. ಆದರೆ ಅರ್ಜಿಯೇ ಸಲ್ಲಿಸದ ಮತ್ತು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪಾಲ್ಗೊಳ್ಳದ ರೈತ ಸಮೂಹವು ತಾನು ರಚಿಸಿರುವ ಸಮಿತಿ ಮುಂದೆ ಹಾಜರಾಗಿ ಅಹವಾಲು ಹೇಳಿಕೊಳ್ಳಬೇಕೆಂದು ಸುಪ್ರೀಮ ಕೋರ್ಟ ತಿಳಿಸಿದೆ. ಇದೆಲ್ಲಿಯ ನ್ಯಾಯ? ಹೋಗಲಿ, ಸಮಿತಿಯ ಸದಸ್ಯರು ಮುಕ್ತ ಮನಸ್ಸಿನವರು, ಅವರ ಮುಂದೆ ಅಹವಾಲು ಹೇಳಿಕೊಂಡರೆ, ಸಮಸ್ಯೆಗೆ ಏನಾದರೂ ದಾರಿ ಹುಡುಕಬಹುದು ಎಂದರೆ, ಸಮಿತಿಯ ಎಲ್ಲ ಸದಸ್ಯರೂ ಕೇಂದ್ರದ ಕೃಷಿ ಕಾನೂನು ಪರ ಇರುವಂಥವರು. ಈ ಬಗ್ಗೆ ಪತ್ರಿಕೆಗಳಲ್ಲಿ ಬರೆದವರು ಮತ್ತು ಹೇಳಿಕೆ ಕೊಟ್ಟವರು. ಈ ಮುಂಚೆ ಪತ್ರಕರ್ತ ಪಿ.ಸಾಯಿನಾಥ ಅವರಂಥವರ ನೇತೃತ್ವದಲ್ಲಿ ಸಮಿತಿ ರಚಿಸಿದರೆ ಸೂಕ್ತ ಪರಿಹಾರ ದೊರೆಯಬಹುದು ಎಂದು ಹೇಳಿದ್ದ ಕೋರ್ಟ, ಅದೇಕೆ ಈ ಸಮಿತಿಯನ್ನು ರಚಿಸಿತೋ ತಿಳಿಯದು. ಅಕಸ್ಮಾತ್ ಸಾಯಿನಾಥ ಒಪ್ಪದೇ ಇದ್ದರೆ, ರೈತರು ಭರವಸೆಯಿಂದ ಕಾಣಬಹುದಾಗಿದ್ದವರು ದೇಶದಲ್ಲಿ ಯಾರೂ ಇಲ್ಲವೇ? ಕೇಂದ್ರ ಸರ್ಕಾರಕ್ಕೆ ಮಾತ್ರ ‘ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯರು ಹೇಳಿದ್ದೂ ಹಾಲು ಅನ್ನ’ ಎಂಬಂತೆ ಆಗಿದೆ.

ಒಟ್ಟಿನಲ್ಲಿ ಇನ್ನಷ್ಟು ದಿನ ಸಮಯ ಪಡೆದುಕೊಳ್ಳಲು ಮತ್ತು ತಾನು ಏನೂ ಮಾಡದೇ ಆಟ ನೋಡುತ್ತ ಕುಳಿತಿರಲು ಕೇಂದ್ರಕ್ಕೆ ಅನುಕೂಲ ಆಯಿತು. ಈ ನಡುವೆ ಕೋರ್ಟಿನ ವಿಚಾರಣೆ ವೇಳೆ ಅಡ್ವೋಕೇಟ ಜನರಲ್ ಅವರು, ಮುಷ್ಕರ ನಡೆಸುತ್ತ ಇರುವವರಲ್ಲಿ ಖಲಿಸ್ತಾನವಾದಿಗಳೂ ನುಸುಳಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅದು ಅನ್ನದಾತರ ಮೇಲೆ ಗೂಬೆ ಕೂರಿಸುವ ಯತ್ನ. ಅಂಥವರು ಇದ್ದಲ್ಲಿ, ಅವರು ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ತಡೆಯಬಹುದಿತ್ತು, ಬಂಧಿಸಿ ಇಡಬಹುದಿತ್ತು. ಸರ್ಕಾರದ ವ್ಯವಸ್ಥೆ ಗಬ್ಬೆದ್ದು ಹೋಗಿರುವಾಗ, ಇಷ್ಟು ಸಣ್ಣ ಸಂಗತಿಯನ್ನೂ ಪಾಲಿಸಲೂ ಸಾಧ್ಯ ಆಗದೇ ಶಾಲೆಯ ಮಕ್ಕಳ ಹಾಗೆ ಅವನು ಚಿವುಟುತ್ತಾನೆ ನೋಡು ಎಂಬಂತೆ ಕೋರ್ಟಿನಲ್ಲಿ ದೂರು ಹೇಳುವ ಈ ಸಣ್ಣತನಗಳು ಅಸಹ್ಯ ಹುಟ್ಟಿಸುತ್ತವೆ.

ಒಟ್ಟಿನಲ್ಲಿ ಈಗ ನಡೆಯುತ್ತಿರುವ ವಿದ್ಯಮಾನ ನೋಡಿದರೆ, ರೈತರು ಹೇಳುತ್ತಾ ಬಂದಿರುವ ಅನುಮಾನ ನಿಜ ಎಂದು ದೃಢ ಆಗುತ್ತಿದೆ. ಕೇಂದ್ರದೊಡನೆ ನಿಕಟ ಸಂಪರ್ಕ ಹೊಂದಿರುವ ಉದ್ಯಮಿಗಳು ಈಗಾಗಲೇ ರೈತರಿಂದ ದವಸ ಖರೀದಿಗೆ ಮುಂದಾಗಿದ್ದು, ಕೆಲವರು ಕೃಷಿ ಗುತ್ತಿಗೆ ತೆಗೆದುಕೊಂಡಿದ್ದಾರೆ. ಮತ್ತೊಂದು ಸಮೂಹ ಆಹಾರ ಧಾನ್ಯಗಳ ದಾಸ್ತಾನಿಗೆ ಭಾರಿ ವ್ಯವಸ್ಥೆ ಮಾಡುತ್ತಿದೆ. ಇದರಿಂದ ಆರಂಭದಲ್ಲಿ ರೈತ ಲಾಭ ಕಾಣಬಹುದೇನೋ. ಆದರೆ ನಿಜವಾಗಿ ಅರ್ಥ ಮಾಡಿಕೊಳ್ಳಬೇಕಾದ್ದು, ಗ್ರಾಹಕರ ಸ್ಥಿತಿ ಏನಾಗಲಿದೆ ಎಂಬುದು. ಈಗ ಹತ್ತು ರೂಪಾಯಿಗೆ ಖರೀದಿಸಿದ ದವಸವನ್ನು ಆತ ಎರಡು ಮೂರು ವರ್ಷ ಕಾಯ್ದಿಟ್ಟು, ಕೃತಕ ಅಭಾವ ಸೃಷ್ಟಿಸಿ, ಹತ್ತು ರೂಪಾಯಿಯ ಮಾಲನ್ನು ಗ್ರಾಹಕರಿಗೆ ನೂರು ರೂಪಾಯಿಗೆ ಮಾರುವುದಿಲ್ಲ ಎನ್ನುವ ಖಾತರಿ ಏನು?.

ಕೊರೋನಾ ಪ್ರಭಾವದಿಂದ ಬೇರೆಲ್ಲ ಕ್ಷೇತ್ರಗಳಲ್ಲಿ ವಹಿವಾಟು ಹಿಂದೆ ಬಿದ್ದಿದ್ದರೂ ಕೃಷಿ ಮಾತ್ರ ಈ ವರ್ಷ ಭರ್ಜರಿಯಾಗಿದೆ. ಆದರೂ ಆಹಾರ ಧಾನ್ಯಗಳ ಬೆಲೆ ನಿತ್ಯ ಎಂಬಂತೆ ಏರುತ್ತಿದೆ. ಅದಕ್ಕೆ ಸದ್ಯಕ್ಕೆ ನಾನಾ ಕಾರಣ ಇರಬಹುದು. ಆದರೆ ಈಗ ಏರುತ್ತಿರುವ ಬೆಲೆ ಕುರಿತು ಯಾರೂ ದನಿ ಎತ್ತುತ್ತಿಲ್ಲ. ಮುಂದೆ ಹತ್ತು ರೂಪಾಯಿಗೆ ಮಾರುಕಟ್ಟೆಯಲ್ಲಿ ದೊರೆಯಬೇಕಾದ ವಸ್ತು ನೂರು ರೂಪಾಯಿ ಆದರೆ ಕೇಳುವವರು ಯಾರು? ಅಷ್ಟೇಕೆ ಕೆಲವೇ ತಿಂಗಳ ಹಿಂದೆ ಇಪ್ಪತ್ತು ರೂಪಾಯಿಗೆ ಕೆಜಿಯಂತೆ ದೊರಕುತ್ತಿದ್ದ ಈರುಳ್ಳಿ ಇನ್ನೂರು ರೂಪಾಯಿ ಆಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಿ. ಇಲ್ಲಿ ಕೇವಲ ರೈತರು ಮಾತ್ರ ಅಲ್ಲ, ನಿತ್ಯ ಆಹಾರ ಕೊಳ್ಳುವ ನಾವೆಲ್ಲ ಬಕರಾಗಳಾಗಿ, ಶ್ರೀಮಂತರ ಲೂಟಿಗೆ ಬಲಿಪಶು ಆಗಬೇಕಾದೀತು. ಸಾಮಾನ್ಯವಾಗಿ ಸಂಕ್ರಾಂತಿ ಒಳಿತನ್ನು ತರುತ್ತದೆ ಎಂಬ ನಂಬಿಕೆ ಇದೆ. ಅದೇಕೋ ಈ ಬಾರಿ ರೈತರ ಪಾಲಿಗೆ ಅದು ಸುಳ್ಳಾದಂತೆ ಕಾಣುತ್ತದೆ.

LEAVE A REPLY

Please enter your comment!
Please enter your name here

State

ರಮಜಾನ‌ ; ಸರ್ಕಾರದಿಂದ ಹೊಸ ಮಾರ್ಗಸೂಚಿ

ಬೆಂಗಳೂರು, ಏ 13- ಮುಸ್ಲಿಮರ ಪವಿತ್ರ ರಮಜಾನ ಉಪವಾಸ ಮಾಸ ಇಂದಿನಿಂದ ಆರಂಭವಾಗಲಿದ್ದು ಒಂದು ತಿಂಗಳ ಕಾಲ ಈ ಆಚರಣೆ ಇರಲಿದೆ. ಇದಕ್ಕಾಗಿ ಕೊರೊನಾ ಕಾರಣದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಕಂಟೈನ್...

ಕೋವಿಡ್ ಕುರಿತು ಸರ್ವಪಕ್ಷ ಸಭೆ- ಮುಖ್ಯಮಂತ್ರಿ

ಬೀದರ, ಏಪ್ರಿಲ್ 13 - ಕೋವಿಡ್ ಪರಿಸ್ಥಿತಿ ಮತ್ತು ಲಾಕ್‌ಡೌನ್ ಹೇರುವ ಕುರಿತು ಚರ್ಚಿಸಲು ಈ ತಿಂಗಳ 18 ರಂದು ಸರ್ವಪಕ್ಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ...

ಗೋಕಾಕ ತಾಲೂಕಿನಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರ

ಬೆಳಗಾವಿ, 11- ಕಳೆದ ಕೆಲ ದಿನಗಳಿಂದ ಕೆಲಸದ ಒತ್ತಡದ ನಿಮಿತ ಚುನಾವಣೆ ಪ್ರಚಾರ ಮಾಡಲು ಆಗಿರಲಿಲ್ಲ, ನಾಳೆಯಿಂದಲೇ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಪ್ರಚಾರ ಆರಂಭಿಸುವದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ...

ಅಂಗಡಿ ಸಂಸದರಾಗಿ ಅನುದಾನ ತಂದದೆಷ್ಟು, ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಕೊಪ್ಪಳ, 11-ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅನನುಭವಸ್ಥರು, ಸಂಸತ್ ನಲ್ಲಿ ಅವರು ಹೇಗೆ ವಿಷಯ ಪ್ರಸ್ತಾಪಿಸುತ್ತಾರರೆಂದಿದ್ದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ದಿ. ಸುರೇಶ ಅಂಗಡಿ ನಾಲ್ಕು ಅವಧಿಗೆ ಸಂಸದರಾಗಿ ಎಷ್ಟು ಅನುಧಾನ ರಾಜ್ಯಕ್ಕೆ...

National

ಗುಜರಾತ‌ ಹಿಂಸಾಚಾರ; ಮೋದಿಗೆ ಕ್ಲೀನ‌ಚಿಟ್‌ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ, ಏ 13- ಗುಜರಾತ್ ಗಲಭೆ ಪ್ರಕರಣದಲ್ಲಿ 2002ರಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ, ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್‌ ಚಿಟ್‌ ಪ್ರಶ್ನಿಸಿ...

24 ಗಂಟೆಯಲ್ಲಿ 1.61 ಲಕ್ಷ ಜನರಿಗೆ ಕೊರೋನಾ; 879 ಸಾವು

ನವದೆಹಲಿ, ಏ 13 - ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿದ್ದು. ಕಳೆದ 24 ಗಂಟೆಯಲ್ಲಿ 1,61,ಲಕ್ಷ ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಈಗ ಸೋಂಕಿತರ ಸಂಖ್ಯೆ...

ಸತ್ಯಮಂಗಲಂ ಅರಣ್ಯದಲ್ಲಿ ಭಾರಿ ನಿಧಿ; ವೀರಪ್ಪನ್ ಪುತ್ರಿಯ ಹೇಳಿಕೆ

ಚೆನ್ನೈ, ಏ 11- ದಂತ ಚೋರ, ಕಾಡು ಕಳ್ಳ ವೀರಪ್ಪನ್ ನೆಲೆಸಿದ್ದ ಸತ್ಯಮಂಗಲಂ ಅರಣ್ಯ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಹಣ ಅಡಗಿಸಿಟ್ಟಿದ್ದಾನೆ ಎಂದು ಆತನ ಪುತ್ರಿ ವಿಜಯಲಕ್ಷ್ಮಿ ಹೇಳಿರುವುದು ಸಂಚಲನ ಸೃಷ್ಟಿಸಿದೆ. ವಾಲ್ಮುರಿಮಾಯಿ ಕಚ್ಚಿಯಲ್ಲಿ...

ನಟ ಸತೀಶ ಕೌಲ್ ಕೊರೋನಾಗೆ ಬಲಿ

ಚಂಡಿಗಡ, ಏಪ್ರಿಲ್ 10- ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ನಟ ಸತೀಶ ಕೌಲ್ ಶನಿವಾರ ಲುಧಿಯಾನದಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಸೋಂಕು ಪತ್ತೆಯ ನಂತರ ಸತೀಶ ಕೌಲ್ ರನ್ನು ಲುಧಿಯಾನಾದ ಖಾಸಗಿ...

International

30 ವರ್ಷದಿಂದ ಬೆಳೆಸಿದ್ದ ಉಗುರಿಗೆ ಕತ್ತರಿ

ಟೆಕ್ಸಾಸ್, 9- ದಾಖಲೆಗಾಗಿಯೋ ಶೋಕಿಗಾಗಿಯೋ 30 ವರುಷಗಳಿಂದ ಬೆಳೆಸಿಕೊಂಡು ಬಂದಿದ್ದ ತಮ್ಮ ಕೈ ಉಗುರುಗಳನ್ನು ಅಮೆರಿಕಾದ ಅಯನ್ನಾ ವಿಲಿಯಮ್ಸ ಎಂಬವರು‌ ಕತ್ತರಿಸಿಕೊಂಡು ಜಗತ್ತಿನ ಗಮನ ಸೆಳೆದಿದ್ದಾರೆ. ಅಯನ್ನಾ ಅವರು ಕಳೆದ ಮೂವತ್ತು ವರ್ಷಗಳಿಂದ ತಮ್ಮ...

ಕೋವಿಡ್ ಲಸಿಕೆ ನಂತರವೂ 63 ಜನರ ಸಾವು

ವಿಯೆನ್ನಾ ಏಪ್ರಿಲ್ 8 - ಆಸ್ಟ್ರಿಯಾದಲ್ಲಿ ಕರೋನ ಸೋಂಕಿನ ಲಸಿಕೆ ಪಡೆದ ನಂತರವೂ 63 ಜನರು ಮೃತಪಟ್ಟಿದ್ದಾರೆ ಎಂದು ಆಸ್ಟ್ರಿಯನ್ ಸರ್ಕಾರಿ ವಕ್ತಾರರು ಹೇಳಿದ್ದಾರೆ. ಕಳೆದ ವಾರ ಕರೋನ ಸೋಂಕಿನ ವಿರುದ್ಧ ಲಸಿಕೆ ಹಾಕಿದ...

ವಾರದಲ್ಲಿ ಕೋವಿಡ್ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆ

ಮಾಸ್ಕೋ, ಏಪ್ರಿಲ್ 7- ಕಳೆದೊಂದು ವಾರದಲ್ಲಿ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ವಾರದ ವರದಿ ತಿಳಿಸಿದೆ. ‘ಜಾಗತಿಕವಾಗಿ...

ನಾವಿನ್ನೂ ಸಾವು ಬದುಕಿನ ಹೋರಾಟದಲ್ಲಿದ್ದೇವೆ

ವಾಷಿಂಗ್ಟನ್, ಏ 7- ಕೊರೊನಾ ಸಾಂಕ್ರಾಮಿಕ ವಿಷಯದಲ್ಲಿ ಅಮೆರಿಕಾ ಈಗಲೂ ಸಾವು ಬದುಕಿನ ನಡುವಿನ ಸ್ಪರ್ಧೆಯಲ್ಲಿದೆ ಎಂದು ಅಮೇರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಹಾಗಾಗಿ ಕೊರೊನಾ ಸಾಂಕ್ರಾಮಿಕ ಪ್ರಸರಣ ತಡೆಗಟ್ಟಲು ಜನರು ಕಟ್ಟುನಿಟ್ಟಿನ...

Entertainment

ರಜನಿಕಾಂತಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ

ನವದೆಹಲಿ, ಎ 1- ಹೆಸರಾಂತ ಚಿತ್ರನಟ ರಜನಿಕಾಂತ ಅವರಿಗೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ ಈ ಬಗ್ಗೆ ಟ್ವೀಟ್ ಮಾಡಿ...

“90 ಹೊಡಿ ಮನೀಗ್ ನಡಿ” ಚಿತ್ರೀಕರಣ ಮುಕ್ತಾಯ

ಬೆಂಗಳೂರು, ಮಾರ್ಚ 31- ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ ಹಾಸ್ಯ ಪ್ರಧಾನ "90 ಹೊಡಿ ಮನೀಗ್ ನಡಿ" ಚಿತ್ರ ಇತ್ತೀಚೆಗೆ ಚಿತ್ರೀಕರಣ ಮುಕ್ತಾಯಗೊಳಿಸಿ ಕುಂಬಳಕಾಯಿ ಒಡೆಯುವ ಶಾಸ್ತ್ರ ಮುಗಿಸಿಕೊಂಡಿದೆ. "ಅಮ್ಮ ಟಾಕೀಸ ಬಾಗಲಕೋಟ"...

“ದಂಡಿ” ಚಿತ್ರಕ್ಕೆ ಚಾಲನೆ

ಕಾರವಾರ: ಮಾರ್ಚ 23 -ಸ್ವತಂತ್ರ ಪೂರ್ವದಲ್ಲಿ ನಡೆದ‌ ದಂಡಿ-ಉಪ್ಪಿನ ಸತ್ಯಾಗ್ರಹದ ಬಗ್ಗೆ ಸಿನಿಮಾವೊಂದು ಮೂಡಿ‌ಬರುತ್ತಿದೆ. ತಾರಾ, ಸುಚೇಂದ್ರ ಪ್ರಸಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ವಿಶಾಲ ರಾಜ್ ನಿರ್ದೇಶನವಿದ್ದು, ಹೊನ್ನಾವರದಲ್ಲಿ ಚಾಲನೆ...

“ತಾಜಮಹಲ್-2” ಚಿತ್ರೀಕರಣ ಮುಕ್ತಾಯ

ಬೆಂಗಳೂರು: ಮಾರ್ಚ 23- ಈ ಹಿಂದೆ ಡೇಂಜರ್‌ಜೋನ್, ನಿಶ್ಯಬ್ದ 2, ಅನುಷ್ಕದಂಥ ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜಕುಮಾರ ಅವರ ಸಾರಥ್ಯದ "ತಾಜ್‌ಮಹಲ್-2" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನ ಎಚ್‌ಎಂಟಿ ಏರಿಯಾದಲ್ಲಿ ಸೆಟ್ ಹಾಕಿ ಜೀವ ಬಿಡುವೆ...

Sports

ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೃನಾಲ್, ಕನ್ನಡಿಗ ಪ್ರಸಿದ್ಧ

ಪುಣೆ, ಮಾ.23 - ಆಲ್‌ರೌಂಡರ್ ಕೃನಾಲ್ ಪಾಂಡ್ಯ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಮಂಗಳವಾರ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಭಾರತಕ್ಕಾಗಿ 18...

ಸ್ಪಿನ್ ದಾಳಿಗೆ ಇಂಗ್ಲೆಂಡ ಪತನ; ಐಸಿಸಿ ಫೈನಲ್ ಗೆ ಭಾರತ

ಅಹಮದಾಬಾದ್, ಮಾ.6 - ಅನುಭವಿ ಸ್ಪಿನ್ ಬೌಲರ್ ಆರ್.ಅಶ್ವಿನ್ ಹಾಗೂ ಅಕ್ಷರ ಪಟೇಲ್ ಅವರ ಕರಾರುವಾಕ್ ದಾಳಿಗೆ ನಲುಗಿದ ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 25 ರನ್ ಗಳಿಂದ ಸೋಲು...

ರಿಷಭ ಪಂತ್ ಶತಕ; ಭಾರತದ ಮುನ್ನಡೆ

ಅಹಮದಾಬಾದ್, ಮಾ.5- ರಿಷಭ ಪಂತ್ (101) ಬಾರಿಸಿದ ಶತಕ ಹಾಗೂ ಆಲ್ ರೌಂಡರ್ ವಾಶಿಂಗ್ಟನ್ ಸುಂದರ್ (ಅಜೇಯ 60) ಅವರ ಅರ್ಧಶತಕದ ಬಲದಿಂದ ಭಾರತ ಕ್ರಿಕೆಟ್ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್...

ಭಾರತದ ಸ್ಪಿನ್ ಬಲೆಗೆ ಬಿದ್ದ ಇಂಗ್ಲೆಂಡ್

ಅಹಮದಾಬಾದ್, ಮಾ.4 - ಸ್ಪಿನ್ ಬೌಲರ್ ಗಳಾದ ಅಕ್ಷರ ಪಟೇಲ (68ಕ್ಕೆ 4) ಹಾಗೂ ಆರ್.ಅಶ್ವಿನ್ (47ಕ್ಕೆ 3) ಅವರ ಬಿಗುವಿನ ದಾಳಿಗೆ ಪ್ರವಾಸಿ ಇಂಗ್ಲೆಂಡ್ ತಂಡ ನಲುಗಿದ್ದು, ಭಾರತ ನಾಲ್ಕನೇ ಟೆಸ್ಟ್...