ಬೆಂಗಳೂರು, ಜ 15 – ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮದಂದು ವಿನೋದ ಪ್ರಭಾಕರ ಹಾಗೂ ಲೂಸ್ ಮಾದ ಅಭಿನಯದ ‘ಲಂಕಾಸುರ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ.
ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ ‘ಲಂಕಾಸುರ’ ಚಿತ್ರದ ಮುಹೂರ್ತ ಸಮಾರಂಭ ದೊಡ್ಡಬಸ್ತಿಯ ಶ್ರೀ ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ನೆರವೇರಿತು.
ನಿರ್ಮಾಪಕರ ಮಕ್ಕಳಾದ ಮಾಸ್ಟರ್ ಮಾನಸ ಪ್ರಜ್ವಲ ಹಾಗೂ ಶ್ರೇಯಸ್ ಪ್ರಜ್ವಲ ಕ್ಯಾಮೆರಾ ಚಾಲನೆ ಮಾಡಿದರು. ನಿರ್ದೇಶಕರ ಪುತ್ರ ಮಾಸ್ಟರ್ ಯೋಜಿತ ಆರಂಭ ಫಲಕ ತೋರಿದರು.
ಸಂಕ್ರಾಂತಿ ದಿನದಂದ ಚಿತ್ರೀಕರಣ ಆರಂಭವಾಗಿದ್ದು, ಫೆಬ್ರವರಿ 15 ರವರೆಗೂ ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.
ವಿನೋದ ಪ್ರಭಾಕರ, ಲೂಸ್ ಮಾದ ಯೋಗಿ, ನಾಯಕಿ ಪಾರ್ವತಿ ಅರುಣ, ಸಹಾನಾ ಗೌಡ ಹಾಗೂ ಅನೇಕ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ದುನಿಯಾ ಚಿತ್ರದ ನಿರ್ಮಾಪಕರಾದ ಸಿದ್ದರಾಜು, ವಿನೋದ ಮಾಸ್ಟರ್ ಮುಂತಾದ ಗಣ್ಯರು ಆಗಮಿಸಿ ಶುಭ ಕೋರಿದರು.
ಈ ಹಿಂದೆ ಮೂರ್ಕಲ್ ಎಸ್ಟೇಟ್ ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ ಕುಮಾರ ಲಂಕಾಸುರ ಚಿತ್ರದ ನಿರ್ದೇಶಕರು. ವಿಜೇಯತ ಕೃಷ್ಣ ಸಂಗೀತ ನೀಡಿರುವ ಈ ಚಿತ್ರಕ್ಕೆ ಸುಜ್ಞಾನ ಅವರ ಛಾಯಾಗ್ರಹಣವಿದೆ. ಚೇತನ ಡಿಸೋಜ, ದೀಪು ಎಸ್ ಕುಮಾರ ಸಂಕಲನ ಹಾಗೂ ಮೋಹನ ಅವರ ನೃತ್ಯ ನಿರ್ದೇಶನ ‘ಲಂಕಾಸುರ’ನಿಗಿದೆ.