This is the title of the web page

ರಾಜ್ಯದಲ್ಲಿ 10 ದಿನ ರಾತ್ರಿ ಕರ್ಫ್ಯು; ಹೊಸ ವರ್ಷಾಚರಣೆ ನಿಷೇಧ

ಬೆಂಗಳೂರು, 26- ಡಿಸೆಂಬರ್‌ 28ರಿಂದ ರಾಜ್ಯದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗುವುದು.

ಕೊರೋನಾ ಸೋಂಕು ತಡೆಗೆ ತೆಗೆದುಕೊಂಡಿರುವ ಕ್ರಮಗಳು ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರವಿವಾರ ಬೆಳಿಗ್ಗೆ ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾದಲ್ಲಿ ಬಸವರಾಜ ಬೊಮ್ಮಾಯಿ ಉನ್ನತ ಮಟ್ಟದ ಸಭೆ ನಡೆಸಿದ್ದು ಡಿಸೆಂಬರ್‌ 28ರಿಂದ ಹತ್ತು ದಿನಗಳು ರಾತ್ರಿ ಕರ್ಫ್ಯೂ ಜಾರಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ಇರಲಿದೆ.

ರೆಸ್ಟೊರೆಂಟ್‌, ಬಾರ್‌, ಕ್ಲಬ್‌ ಹಾಗೂ ಪಬ್‌ಗಳಲ್ಲಿ ಒಟ್ಟು ಆಸನಗಳ ಪೈಕಿ ಶೇಕಡ 50 ಜನರ ಪ್ರವೇಶದ ಮಿತಿ ವಿಧಿಸಲಾಗಿದ್ದು ಹೊಸ ವರ್ಷಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ನಡೆಸುವ ಸಂಭ್ರಮಾಚರಣೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ‌ ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ‌, ಕಂದಾಯ ಸಚಿವ ಆರ್‌.ಅಶೋಕ, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

You might also like
Leave a comment