ವಿಜಯಪುರ: ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಘಟನೆ ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ನಡೆದಿದೆ.
ವಯೋಸಹಜವಾಗಿ ದೇವೇಂದ್ರ ಶ್ಯಾಮರಾಯ ವಳಸಂಗ (105) ಸಾವನ್ನಪ್ಪಿದ್ದಾರೆ. ಪತಿಯ ಸಾವಿನಿಂದ ಆಘಾತಕ್ಕೆ ಒಳಗಾಗಿ ದೇವೇಂದ್ರ ಅವರ ಪತ್ನಿ ದುಂಡವ್ವ (87) ಅವರೂ ಸಹ ಕೊನೆಯುಸಿರೆಳೆದಿದ್ದಾರೆ.
ಇಬ್ಬರೂ ಹಿರಿಯನ್ನು ಕಳೆದುಕೊಂಡ ಕುಟುಂಬದಲ್ಲಿ ಇದೀಗ ದುಃಖ ಮನೆ ಮಾಡಿದೆ. ಒಂದೇ ದಿನ ಗಂಡ ಹೆಂಡತಿ ಮೃತಪಟ್ಟಿದ್ದಕ್ಕೆ ಗ್ರಾಮಸ್ಥರಿಂದಲೂ ಸಂತಾಪ ವ್ಯಕ್ತವಾಗಿದೆ.