This is the title of the web page

ದಾಂಡೇಲಿಯಲ್ಲಿ ಮತ್ತೊಬ್ಬ ಯುವಕನನ್ನು ಎಳೆದೊಯ್ದ ಮೊಸಳೆ

ದಾಂಡೇಲಿ, 7- ದಾಂಡೇಲಿಯಲ್ಲಿ ಸೋಮವಾರ ಸಂಜೆ ಮತ್ತೊಬ್ಬ ಯುವಕನನ್ನು ಮೊಸಳೆ ಬಲಿ ತೆಗೆದುಕೊಂಡಿದೆ.

ನಗರದ ಪಟೇಲ ನಗರದ ನಿವಾಸಿ ಎನ್ನಲಾದ ಅರ್ಶದ ಖಾನ್ ಎಂಬ ಯುವಕ ಮೊಸಳೆಗಳೇ ತುಂಬಿರುವ ಕಾಳಿ ನದಿಯಲ್ಲಿ ಸಂಜೆ ಕೈ ಕಾಲು ತೊಳೆಯುತ್ತಿದ್ದಾಗ ಮೊಸಳೆಯೊಂದು ದಾಳಿ ಮಾಡಿ ಅರ್ಶದನನ್ನು ನೀರಿನೊಳಗೆ ಎಳೆದುಕೊಂಡು ಹೋಯಿತು.

ನದಿಯಲ್ಲಿ ಈಗ ಯುವಕನ ಹುಡುಕಾಟ ನಡೆಸಲಾಗುತ್ತಿದೆ.

ಕೆಲ ದಿನಗಳ ಹಿಂದೆಯಷ್ಟೇ ಓರ್ವ ಬಾಲಕನನ್ನು ದಾಂಡೇಲಿಯಲ್ಲೇ ಮೊಸಳೆ ಕೊಂದು ಹಾಕಿತ್ತು.

 

You might also like
Leave a comment