This is the title of the web page

ಅಂತ್ಯಸಂಸ್ಕಾರದ ವೇಳೆ ಜೀವಂತವಾದ ಸತ್ತ ಮಗು!

ರಾಯಚೂರು, ೧೬- ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಗುವೊಂದು ಅಂತ್ಯಸಂಸ್ಕಾರದ ವೇಳೆ ಜೀವಂತವಾದ ವಿಸ್ಮಯಕರ ಘಟನೆ ರಾಯಚೂರು ಜಿಲ್ಲೆಯ ತುರ್ವಿಹಾಳ ಪಟ್ಟಣದಲ್ಲಿ ನಡೆದಿದೆ.

ತುರ್ವಿಹಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಮೇ ೭ ರಂದು ಈರಪ್ಪ ಎಂಬವರ ಪತ್ನಿ ಅಮರಮ್ಮ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನವಜಾತ ಶಿಶು ರಕ್ತಹೀನತೆಯಿಂದ ಬಳಲುತ್ತಿತ್ತು. ಆಸ್ಪತ್ರೆಯಲ್ಲಿ ಸೌಲಭ್ಯದ ಕೊರತೆಯಿರುವ ಹಿನ್ನೆಲೆಯಲ್ಲಿ ವೈದ್ಯರು ದಂಪತಿಗೆ ಮಗುವನ್ನು ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು.

ಆದರೆ ಅವರು ಮೇ 10ರಂದು ನವಜಾತ ಶಿಶುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮೇ 14ರವರೆಗೆ ಮಗುವಿಗೆ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದರು.

ವೈದ್ಯರು ಹೇಳಿದಂತೆ ಸ್ವಗ್ರಾಮ ತುರ್ವಿಹಾಳಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡುವಾಗ ಮಗು ಬದುಕಿರುವುದು ಗೊತ್ತಾಗಿ, ದಂಪತಿಗಳಲ್ಲಿ ಸಂತಸ ತಂದಿದೆ.

ಮಗು ಬದುಕಿರುವುದು ತಿಳಿಯುತ್ತಿದ್ದಂತೆಯೇ ಸ್ಥಳೀಯ ಆಸ್ಪತ್ರೆಗೆ ದಂಪತಿಗಳು ಕರೆದುಕೊಂಡು ಹೋದಾಗ ಮಗು ಬದುಕಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ನಂತರ ಸಿಂಧನೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಶಿಶು ಮೃತಪಟ್ಟಿದೆ ಎಂದು ಘೋಷಿಸಿದ ವೈದ್ಯರ ಬಗ್ಗೆ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

You might also like
Leave a comment