This is the title of the web page

ಕಾರಿನ ಮೇಲೆ ಮೂತ್ರ ವಿಸರ್ಜಿಸಿದ ನಾಯಿ ಒಡೆಯನ ಹಲ್ಲು ಮುರಿದು ಪರಾರಿ

ಬೆಂಗಳೂರು, 23-ತನ್ನ ಐಷಾರಾಮಿ ಕಾರಿನ ಮೇಲೆ ಎದುರು ಮನೆಯ ನಾಯಿ ಮೂತ್ರ ವಿಸರ್ಜನೆ ಮಾಡಿದಕ್ಕೆ ಕಾರಿನ ಮಾಲೀಕ ನಾಯಿಯ ಒಡೆಯನ ಹಲನ್ನೇ ಮುರಿದು ಕಾರಿನ ಸಮೇತ ಪರಾರಿಯಾಗಿರುವ ಪ್ರಕರಣ ಬೆಂಗಳೂರಿನ ಬಾಣಸವಾಡಿಯಲ್ಲಿ ಸಂಭವಿಸಿದೆ.

ಬಾಣಸವಾಡಿಯ ಚಿನ್ನಪ್ಪ ಲೇಔಟ್ ನಿವಾಸಿ, 71 ವರ್ಷದ ಗೇರಿ ರೋಜಾರಿಯೊ ದಂಪತಿಗಳು ನಾಯಿಯೊಂದನ್ನು ಸಾಕಿದಾರೆ. ಅದು ಎದುರು ಮನೆಯ ಚಾರ್ಲ್ಸ ಎಂಬುವವರ ಐಷಾರಾಮಿ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದೆ.
ಇದರಿಂದ ರೊಚ್ಚಿಗೆದ್ದ ಚಾರ್ಲ್ಸ್, ವೃದ್ದನ ಜೊತೆ ಜಗಳಕ್ಕಿಳಿದಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದು ವೃದ್ಧನ ಮೇಲೆ ಚಾರ್ಲ್ಸ್ ಕಲ್ಲೆಸೆದಿದ್ದಾನೆ. ಕಲ್ಲೇಟಿನ ರಭಸಕ್ಕೆ ರೊಜಾರಿಯಾ ಅವರ ಹಲ್ಲು ಮುರಿದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಚಾರ್ಲ್ಸ್ ತನ್ನ ಐಷಾರಾಮಿ ಕಾರು ಸಮೇತ ಪರಾರಿಯಾಗಿದ್ದಾನೆ.

You might also like
Leave a comment